ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮ್ಮ ಬಳಿ ಹಳೆಯ ಡೆನೀಮ್ ಜಾಕೆಟ್‌ಗಳಿವೆಯೇ! (Winter Denim Jacket) ವಾರ್ಡ್ರೋಬ್‌ನಲ್ಲಿ ಮೂಲೆ ಸೇರಿವೆಯೇ! ಹಾಗಾದಲ್ಲಿ ತಕ್ಷಣ ಹೊರಗೆ ತೆಗೆದು, ಮರುಬಳಕೆ ಮಾಡಿ. ಈ ಚಳಿಗಾಲದಲ್ಲಿ ಹೊಸ ರೂಪದಲ್ಲಿ ಸ್ಟೈಲಿಂಗ್ ಮಾಡಿ, ಧರಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ಅವರು ಒಂದಿಷ್ಟು ಸಿಂಪಲ್ ಸ್ಟೈಲಿಂಗ್ ಐಡಿಯಾಗಳನ್ನು ನೀಡಿದ್ದಾರೆ. ಟ್ರೈ ಮಾಡಿ ನೋಡಿ ಎನ್ನುತ್ತಾರೆ.
ಡೆನೀಮ್ ಕ್ರಾಪ್ ಜಾಕೆಟ್
ಡೆನೀಮ್ ಕ್ರಾಪ್ ಜಾಕೆಟ್‌ಗಳು ಹುಡುಗಿಯರ ಚಾಯ್ಸ್. ಇವುಗಳನ್ನು ಲಾಂಗ್ ಕ್ಲೋಸ್ಡ್ ನೆಕ್ ಇರುವಂತಹ ಟಾಪ್ ಅಥವಾ ಫುಲ್ ಸ್ಲೀವ್ ಟೀ ಶರ್ಟ್ ಮೇಲೆ ಧರಿಸಬಹುದು. ಇದು ಹುಡುಗಿಯರಿಗೆ ಟಾಮ್ ಬಾಯ್ ಲುಕ್ ನೀಡುತ್ತದೆ.
ಲಾಂಗ್ ಡೆನೀಮ್ ಜಾಕೆಟ್
ಲಾಂಗ್ ಡೆನೀಮ್ ಜಾಕೆಟ್‌ಗಳನ್ನು ಆದಷ್ಟೂ ಕ್ರಾಪ್ ಟಾಪ್ ಅಥವಾ ಶಾರ್ಟ್ ಲೆಂತ್ ಟೀ ಶರ್ಟ್‌ಗಳಿಗೆ ಧರಿಸಿ. ಇವು ನೋಡಲು ಕೋಟ್‌ನಂತೆ ಕಾಣುತ್ತವೆ. ಹಾಗಾಗಿ ಆದಷ್ಟೂ ಇನ್ನರ್ ಟಾಪ್‌ಗಳು ಕೊಂಚ ಲೂಸಾಗಿರಲಿ.
ಮಲ್ಟಿ ಪಾಕೆಟ್ ಡೆನೀಮ್ ಜಾಕೆಟ್
ಮಲ್ಟಿ ಪಾಕೆಟ್‌ಗಳಿರುವ ಡೆನೀಮ್ ಜಾಕೆಟ್‌ಗಳನ್ನು ಧರಿಸಿದಾಗ ಹೆಚ್ಚು ಆಕ್ಸೆಸರೀಸ್ ಧರಿಸಬೇಡಿ. ನೋಡಲು ಮೆಸ್ಸಿಯಾಗಿ ಕಾಣುತ್ತವೆ. ಇವಕ್ಕೆ ಸಿಂಪಲ್ ಸಾದಾ ಟಾಪ್ ಅಥವಾ ಟೀ ಶರ್ಟ್ –ಪ್ಯಾಂಟ್ ಧರಿಸಿ.
ಡೆನೀಮ್ ಕೋ ಆರ್ಡ್ ಸೆಟ್ ಮಾಡುವುದು ಹೀಗೆ
ಯಾವುದೇ ಡೆನೀಮ್ ಜಾಕೆಟ್‌ಗೂ ಸರಿಯಾದ ಮ್ಯಾಚಿಂಗ್ ಜೀನ್ಸ್ ಪ್ಯಾಂಟ್ ಧರಿಸಿದಲ್ಲಿ ಡೆನೀಮ್ ಕೋ ಆರ್ಡ್ ಸೆಟ್ ಲುಕ್ ನೀಡಬಹುದು. ಅದು ಯಾವುದೇ ಶೈಲಿಯ ಡೆನೀಮ್ ಆದರೂ ಓಕೆ. ಇದು ಹೊಸ ಲುಕ್ ನೀಡುತ್ತದೆ. ಟ್ರೆಂಡಿಯಾಗಿ ಕಾಣಿಸುತ್ತದೆ.
ಕಲರ್ ಡೆನೀಮ್ ಜಾಕೆಟ್ ಮಿಕ್ಸ್ ಮ್ಯಾಚ್
ಬ್ಲಾಕ್, ವೈಟ್, ಗ್ರೀನ್ ಹೀಗೆ ಇದೀಗ ಕಲರ್‌ಫುಲ್ ಡೆನೀಮ್ ಜಾಕೆಟ್‌ಗಳು ಬಹಳಷ್ಟು ಮಂದಿಯ ಬಳಿಯಿರುತ್ತವೆ. ಅವುಗಳನ್ನು ಮಿಕ್ಸ್ ಮ್ಯಾಚ್ ಮಾಡುವಾಗ ಆದಷ್ಟೂ ಕಾಂಟ್ರಸ್ಟ್ ವರ್ಣದ ಪ್ಯಾಂಟ್ ಧರಿಸಿ.
ಡೆನೀಮ್ ಪ್ರಿಯ ಹುಡುಗಿಯರು ಗಮನಿಸಬೇಕಾದ್ದು
- ಜಾಗರ್ ಶೈಲಿಯ ಡೆನೀಮ್ಗೆ ಕ್ರಾಪ್ ಡೆನೀಮ್ ಜಾಕೆಟ್ ಧರಿಸುವುದು ಬೇಡ.
- ಗಿಡ್ಡಗಿರುವವರು ಆದಷ್ಟೂ ಲಾಂಗ್ ಡೆನೀಮ್ ಜಾಕೆಟ್ ಧರಿಸಿ.
- ಪ್ಲಂಪಿಯಾಗಿರುವವರು ಕ್ರಾಪ್ ಡೆನೀಮ್ ಜಾಕೆಟ್ ಮ್ಯಾಚ್ ಆಗುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Velvet Lehenga Fashion: ವಿಂಟರ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ ವೆಲ್ವೆಟ್ ಲೆಹೆಂಗಾ ಜಾದೂ