ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸೆಸ್ ಫ್ಯಾಷನಿಸ್ಟಾ 2018 ಟೈಟಲ್ ವಿನ್ನರ್ ದಿವ್ಯಾ ಶೆಟ್ಟಿ, ಮೂಲತಃ ಫ್ಯಾಷನ್ ಡಿಸೈನರ್. ಸಾಕಷ್ಟು ಬ್ರಾಂಡ್‌ಗಳೊಂದಿಗೆ ಕೆಲಸ ನಿರ್ವಹಿಸಿರುವ ಇವರು ಈಗಾಗಲೇ ಮಲಯಾಳಂ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ಸಿನಿಮಾವೊಂದರಲ್ಲೂ ನಟಿಸಿದ್ದಾರೆ. ಟ್ರಾವೆಲಿಂಗ್, ಕುಕ್ಕಿಂಗ್, ಗಾರ್ಡೆನಿಂಗ್ ಹವ್ಯಾಸ ಹೊಂದಿರುವ ದಿವ್ಯಾಗೆ ರಾಯಲ್ ಎನ್‌ಫಿಲ್ಡ್ ಬುಲೆಟ್ ರೈಡ್ ಮಾಡುವುದು ಇಷ್ಟದ ಸಂಗತಿಗಳಲ್ಲೊಂದಂತೆ. ಈ ಬಾರಿಯ ವಿಸ್ತಾರ ನ್ಯೂಸ್‌ನ ಮಾಡೆಲ್ ಫ್ಯಾಷನ್ ಲೈಫ್ (Model Fashion Life) ಕಾಲಂನಲ್ಲಿ ತಮ್ಮ ಫ್ಯಾಷನ್ ಲೈಫ್ ಹಾಗೂ ವಿಂಟರ್ ಕೇರ್ ಬಗ್ಗೆ ಟಿಪ್ಸ್ ನೀಡಿದ್ದಾರೆ.
ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ನನಗೆ ಯಾವುದೇ ಬ್ರಾಂಡ್ ಹಾಗೂ ಲೆಬೆಲ್ ಬಗ್ಗೆ ಮೋಹವಿಲ್ಲ. ಸರಿಯಾದ ಔಟ್‌ಫಿಟ್ ಧರಿಸುವುದು ನನ್ನ ಚಾಯ್ಸ್ನಲ್ಲಿದೆ. ನಮ್ಮ ಬಾಡಿಗೆ ತಕ್ಕಂತೆ ಸೂಕ್ತವಾದ ಕಂಫರ್ಟಬಲ್ ಡ್ರೆಸ್ ಧರಿಸುತ್ತೇನೆ. ಇನ್ನು ಪರಿಸರ ಸ್ನೇಹಿ ಉಡುಪುಗಳು ನನಗಿಷ್ಟ. ಮರುಬಳಕೆ ಮಾಡಿ ಸಿದ್ಧಪಡಿಸಿದ ಉಡುಗೆಗಳನ್ನು ಪ್ರಿಫರ್ ಮಾಡುತ್ತೇನೆ.
ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ತಿಳಿಸಿ…
ಸದಾ ಮುಖದ ಮೇಲೊಂದು ನಗು ನನ್ನ ಬದಲಾಗದ ಸ್ಟೈಲ್ ಸ್ಟೇಟ್‌ಮೆಂಟ್. ಇದರೊಂದಿಗೆ ಸಂದರ್ಭಕ್ಕೆ ತಕ್ಕಂತೆ ಫ್ಯಾಷನ್‌ವೇರ್ ಧರಿಸುವುದು ನನ್ನ ಸ್ಟೈಲ್ ಸ್ಟೇಟ್‌ಮೆಂಟ್‌ನ ಮುಖ್ಯ ಭಾಗವಾಗಿದೆ.
ಚಳಿಗಾಲದ ಬ್ಯೂಟಿ ಆರೈಕೆಗೆ 3 ಟಿಪ್ಸ್ ನೀಡುತ್ತೀರಾ?
ಈ ಸೀಸನ್‌ನಲ್ಲಿ ಕೂದಲು ಒಣಗಿದಂತಿರುತ್ತದೆ. ಹಾಗಾಗಿ ತಲೆಸ್ನಾನಕ್ಕೆ ಮೊದಲು ತಲೆಕೂದಲಿಗೆ ಎಣ್ಣೆ ಹಚ್ಚಿ. ಇದು ಸುಗುಮ ರಕ್ತ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಕೂದಲು ಮಿರಮಿರ ಮಿಂಚುತ್ತದೆ. ಪ್ರತಿದಿನ ಸ್ನಾನಕ್ಕೆ ಮುನ್ನ, ಮುಖ ಹಾಗೂ ಕೈ ಕಾಲಿಗೆ ಕೊಬ್ಬರಿ ಎಣ್ಣೆಯನ್ನು ಸವರಿ, ಕೊಂಚ ಮಸಾಜ್ ಮಾಡಿ. ಇದು ಶುಷ್ಕ ತ್ವಚೆಯನ್ನು ಸುಕೋಮಲವಾಗಿಸುತ್ತದೆ. ಈ ಸೀಸನ್‌ನಲ್ಲಿ ಮುಖದ ಗ್ಲೋ ಹೆಚ್ಚಿಸಲು ಆದಷ್ಟೂ ನೀರು ಕುಡಿಯುತ್ತಲೇ ಇರಿ. ಇದರೊಂದಿಗೆ ಯೋಗಾಸನದ ಕೆಲವು ಆಸನಗಳನ್ನು ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚಾಗುತ್ತದೆ.
ವಿಂಟರ್ ಫ್ಯಾಷನ್ ಬಗ್ಗೆ ಒಂದಿಷ್ಟು ಸಲಹೆ ನೀಡಿ…
ನನಗಂತೂ ಈ ಸೀಸನ್‌ನಲ್ಲಿ ಫ್ಯೂಷನ್‌ವೇರ್ ಇಷ್ಟ. ಅದೇ ರೀತಿ ಈ ಫ್ಯಾಷನ್ ಮಾಡಲು ಆಸಕ್ತಿ ಇರುವವರು ಹೀಗೆ ಮಾಡಿ ನೋಡಬಹುದು. ಸೀರೆಯೊಂದಿಗೆ ಟ್ರೆಂಚ್ ಕೋಟ್ ಧರಿಸುವುದು, ಲೆಹೆಂಗಾದೊಂದಿಗೆ ಲೆದರ್ ಜಾಕೆಟ್, ಕುರ್ತಿ ಮೇಲೆ ಕ್ರಾಪ್ ಜಾಕೆಟ್ ಪ್ರಯೋಗಿಸಬಹುದು. ಇದು ಡಿಫರೆಂಟ್ ಲುಕ್ ನೀಡುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion News: ಯಶಸ್ವಿಯಾದ ಮಾಯಾ-2023 ಪಿಇಎಸ್ ಅಂತರ್ ಕಾಲೇಜು ಫ್ಯಾಷನ್ ಶೋ