Site icon Vistara News

Tiranga Nail Art: ಸೀಸನ್‌ ಟ್ರೆಂಡ್‌ಗೆ ಎಂಟ್ರಿ ನೀಡಿದ ಆಕರ್ಷಕ ತಿರಂಗಾ ನೇಲ್‌ ಆರ್ಟ್

Tiranga Nail Art

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ವಾತಂತ್ರ್ಯ ದಿನಾಚಾರಣೆ ಸಂಭ್ರಮಕ್ಕೆ ಇದೀಗ ನಾನಾ ಬಗೆಯ ತಿರಂಗಾ ವರ್ಣದ ಬಗೆಬಗೆಯ ನೇಲ್‌ ಆರ್ಟ್ (Tiranga Nail Art) ಡಿಸೈನ್‌ಗಳು ಬ್ಯೂಟಿ ಲೋಕದಲ್ಲಿ ಬಿಡುಗಡೆಗೊಂಡಿವೆ. ನೇಲ್‌ ಆರ್ಟ್ ಪ್ರಿಯರು ಈಗಾಗಲೇ ಈ ಡಿಸೈನ್‌ಗಳಿಗೆ ಮಾರು ಹೋಗಿದ್ದು, ಜೊತೆಗೆ ರಾಷ್ಟ್ರ ಪ್ರೇಮ ಮೆರೆಯಲು ತಿರಂಗಾ ಶೇಡ್ಸ್‌ ವಿನ್ಯಾಸಗಳಿಗೆ ಶರಣಾಗಿದ್ದಾರೆ.

ಟ್ರೆಂಡಿಯಾಗಿರುವ ತಿರಂಗಾ ಶೇಡ್ಸ್

ತಿರಂಗಾ ಶೇಡ್ಸ್‌ ಇರುವಂತಹ ಪೋಲ್ಕಾ ಡಾಟ್ಸ್‌, ಪಟ್ಟೆ ಪಟ್ಟೆ ಬಿಡಿಸಬಹುದಾದ ಸ್ಟ್ರೈಪ್ಸ್ ವಿನ್ಯಾಸದವು, ಕೋಲಾಜ್‌ ಶೇಡ್ಸ್‌, ಅಬ್‌ಸ್ಟ್ರಾಕ್ಟ್ ಪೇಂಟಿಂಗ್‌ನಂತವು, ಸಿಂಪಲ್‌ ಜೈ ಹಿಂದ್‌, ಐ ಲವ್‌ ಇಂಡಿಯಾದಂತಹ ಅಕ್ಷರಗಳನ್ನು ಬರೆದಿರುವಂತಹ ಡಿಸೈನ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ನೇಲ್‌ ಪ್ರಿಯರನ್ನು ಸೆಳೆದಿವೆ. ಇನ್ನು ಕಲಾತ್ಮಕ ಮನಸ್ಸಿರುವವರು ಮತ್ತಷ್ಟು ಕ್ರಿಯಾತ್ಮಕ ಡಿಸೈನ್‌ಗಳನ್ನು ಪ್ರದರ್ಶಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದ ಬ್ಯೂಟಿ ಬ್ಲಾಗ್‌ಗಳು ಇದಕ್ಕೆ ವೇದಿಕೆ ಕಲ್ಪಿಸಿದ್ದು, ಸದ್ಯಕ್ಕೆ ತಿರಂಗಾ ನೇಲ್‌ ಆರ್ಟ್ ವಿನ್ಯಾಸ ಟ್ರೆಂಡ್‌ನ ಟಾಪ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ನೇಲ್‌ ಡಿಸೈನರ್‌ ಜಾಸ್ಮಿನ್‌. ಅವರ ಪ್ರಕಾರ, ಆಯಾ ಸೀಸನ್‌ ಹಾಗೂ ಸಂದರ್ಭಕ್ಕೆ ತಕ್ಕಂತೆ ನೇಲ್‌ ಆರ್ಟ್ ಬಿಡುಗಡೆಗೊಳ್ಳುತ್ತವೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ತಿರಂಗಾ ಡಿಸೈನ್‌ಗಳು ಅನಾವರಣಗೊಂಡಿವೆ ಎನ್ನುತ್ತಾರೆ ಅವರು.

ಮನೆಯಲ್ಲೆ ನೀವೂ ಚಿತ್ರಿಸಿ

ಹೌದು. ನೇಲ್‌ ಆರ್ಟ್ ಬಾರ್‌ ಅಥವಾ ಸಲೂನ್‌ಗೆ ಹೋಗಿ ಹಣ ಖರ್ಚು ಮಾಡಿ ತಿರಂಗಾ ನೇಲ್‌ ಆರ್ಟ್ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಮನೆಯಲ್ಲೂ ಈ ಚಿತ್ತಾರ ಮೂಡಿಸಿಕೊಳ್ಳಬಹುದು. ಇದಕ್ಕಾಗಿ ಒಂದಿಷ್ಟು ತಾಳ್ಮೆ ಬೇಕಷ್ಟೇ! ಕ್ರಿಯಾತ್ಮಕ ಮನಸ್ಸಿರಬೇಕಷ್ಟೇ ಎನ್ನುತ್ತಾರೆ ನೇಲ್‌ ಡಿಸೈನರ್‌ ರಿಚಾ. ಅವರು ಇದಕ್ಕಾಗಿ ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Desi Fashion: ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮಕ್ಕೆ ಸಾಥ್ ನೀಡುವ 3 ದೇಸಿ ಲುಕ್ ನೀಡುವ ಔಟ್ಫಿಟ್‌ಗಳು

Exit mobile version