ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೂಪಾಂತರಗೊಂಡಿರುವ ಫ್ಯಾಷೆನಬಲ್ ಟೊಟ್ ಬ್ಯಾಗ್‌ಗಳು (Tote Bags Fashion) ಇಂದು ಟ್ರೆಂಡಿಯಾಗಿವೆ. ಹೌದು. ಇದೀಗ ಈ ಬ್ಯಾಗ್‌ಗಳು ನಾನಾ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದ್ದು, ಮಹಿಳೆಯರು ಮಾತ್ರವಲ್ಲ, ಹುಡುಗ- ಹುಡುಗಿಯರೂ ಕೂಡ ಬಳಸಲಾರಂಭಿಸಿದ್ದಾರೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯ ಯೂನಿಸೆಕ್ಸ್ ಡಿಸೈನ್‌ನ ಟೊಟ್ ಡಿಸೈನರ್ ಬ್ಯಾಗ್‌ಗಳು ಬಿಡುಗಡೆಗೊಂಡಿವೆ.
ಫ್ಯಾಷೆನಬಲ್ ಆಯ್ತು ಟೊಟ್ ಬ್ಯಾಗ್
ಅಂದಹಾಗೆ, ಟೊಟ್ ಬ್ಯಾಗ್ ಹೊಸ ಕಾನ್ಸೆಪ್ಟ್ ಏನಲ್ಲ! ಹಳೆಯ ಬ್ಯಾಗ್ ಶೈಲಿಯಿದು. ಆದರೆ, ಮೊದಲೆಲ್ಲ ಇದನ್ನು ಶಾಪಿಂಗ್ ಬ್ಯಾಗ್ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು. ಅಲ್ಲದೆ, ಮಾರುಕಟ್ಟೆಯಿಂದ ಹೆಚ್ಚಿನ ಸಾಮಗ್ರಿಗಳನ್ನು ತರಲು ಬಳಸಲಾಗುತ್ತಿತ್ತು. ಅದರಲ್ಲೂ ಮಹಿಳೆಯರು ಹಾಗೂ ವಯಸ್ಸಾದವರು ಅತಿ ಹೆಚ್ಚಾಗಿ ಬಳಸುತ್ತಿದ್ದರು. ಇದೀಗ ಈ ಕಾನ್ಸೆಪ್ಟ್ ಕಂಪ್ಲೀಟ್ ಬದಲಾಗಿದೆ. ಅದರಲ್ಲೂ ಕೋವಿಡ್ ನಂತರದ ದಿನಗಳಲ್ಲಿ ಹೊರಗೆ ಹೋಗುವ ಬಹುತೇಕರು ತಮ್ಮ ಜೊತೆಗೆ ನೀರಿನ ಬಾಟಲ್, ಮಾಸ್ಕ್ ಹಾಗೂ ಇನ್ನಿತರೇ ಸಾಮಗ್ರಿಗಳನ್ನು ಬ್ಯಾಗ್‌ಗನಲ್ಲಿ ಕೊಂಡೊಯ್ಯುವುದು ಚಾಲ್ತಿಗೆ ಬಂದ ಮೇಲೆ ಈ ಶೈಲಿಯ ಬ್ಯಾಗ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಯಿತು. ಪರಿಣಾಮ, ಬಿಗ್ ಬ್ಯಾಗ್‌ಗಳು ಅದರಲ್ಲೂ ಟೊಟ್ ಶೈಲಿಯ ಬ್ಯಾಗ್‌ಗಳು ಅತಿ ಹೆಚ್ಚು ಮಾರುಕಟ್ಟೆಯಲ್ಲಿ ಎಂಟ್ರಿ ನೀಡಿದವು ಎನ್ನುತ್ತಾರೆ ಬ್ಯಾಗ್ ಎಕ್ಸ್‌ಪಟ್ರ್ಸ್. ಅವರ ಪ್ರಕಾರ, ಇಂದು ಫ್ಯಾಷೆನಬಲ್ ಬ್ಯಾಗ್‌ಗಳ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ.
ವೈವಿಧ್ಯಮಯ ಟೊಟ್ ಬ್ಯಾಗ್ಸ್
ಪರಿಸರ ಸ್ನೇಹಿ ಗೋಣಿಚೀಲದಂತೆ ಕಾಣುವ ಜ್ಯೂಟ್, ಕಾಟನ್, ಲೆನಿನ್ ಟೊಟ್ ಬ್ಯಾಗ್‌ಗಳು ಸಖತ್ ಟ್ರೆಂಡ್‌ನಲ್ಲಿವೆ. ಇವು ಪರಿಸರ ಸ್ನೇಹಿ ಫ್ಯಾಷನ್ ಪ್ರಿಯರ ಹೆಗಲೇರಿವೆ. ಇನ್ನು ಲೆದರ್ ಹಾಗೂ ಸಿಲಿಕಾನ್ ಸೇರಿದಂತೆ ನಾನಾ ಮೆಟಿರಿಯಲ್‌ನಲ್ಲೂ ದೊರೆಯುತ್ತಿವೆ. ಅದರಲ್ಲೂ ಓವರ್‌ಸೈಝ್ ಟೊಟ್ ಬ್ಯಾಗ್, ಕ್ಯಾನ್ವಾಸ್ ಟೊಟ್ ಬ್ಯಾಗ್ ಯುವತಿಯರನ್ನು ಆಕರ್ಷಿಸಿವೆ. ಔಟಿಂಗ್ ಹಾಗೂ ಟ್ರಾವೆಲಿಂಗ್‌ಗೆ ಇವು ಹೇಳಿಮಾಡಿಸಿದಂತಿರುತ್ತವೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
ಟೊಟ್ ಬ್ಯಾಗ್ ಪ್ರಿಯರ ಆಯ್ಕೆ ಹೀಗಿರಲಿ
- ಇದೀಗ ಟೊಟ್ ಬ್ಯಾಗ್‌ಗಳು ನಾನಾ ಆಕಾರದಲ್ಲಿ ದೊರೆಯುತ್ತವೆ.
- ಕೆಲವು ಬ್ರಾಂಡ್ಗಳಲ್ಲಿ ಲೈಟ್ವೈಟ್ ಟೊಟ್ ಬ್ಯಾಗ್‌ಗಳು ಲಭ್ಯ.
- ಲ್ಯಾಪ್ಟಾಪ್ ಇರಿಸಬಹುದಾದ ಟೊಟ್ಬ್ಯಾಗ್ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.
- ಮಿನಿ ಟೊಟ್ ಬ್ಯಾಗ್‌ಗಳು ಲಭ್ಯ.
- ಯೂನಿಸೆಕ್ಸ್ ಟೊಟ್ ಬ್ಯಾಗ್ಗಳನ್ನು ಹುಡುಗ-ಹುಡುಗಿಯರು ಇಬ್ಬರು ಕ್ಯಾರಿ ಮಾಡಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Kids Sling Bag Fashion: ಮಕ್ಕಳ ಹೆಗಲೇರಿದೆ ಆಕರ್ಷಕ ಕ್ಯೂಟ್ ಸ್ಲಿಂಗ್ ಬ್ಯಾಗ್ಸ್!