ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ರಿಶಿ ಮತ್ತು ಅವರ ಪತ್ನಿ ಸ್ವಾತಿಯವರ ಸಾಂಪ್ರದಾಯಿಕ ಕಾಂಟ್ರಾಸ್ಟ್ ಟ್ವಿನ್ನಿಂಗ್ ಫ್ಯಾಷನ್ (Star couple fashion) ವಿಮರ್ಶಕರ ಮೆಚ್ಚುಗೆ ಗಳಿಸಿದೆ. ಫ್ಯಾಮಿಲಿ ಪಂಕ್ಷನ್ನಲ್ಲಿ ಇವರಿಬ್ಬರು ಧರಿಸಿದ್ದ, ಕಂಪ್ಲೀಟ್ ದೇಸಿ ಲುಕ್ ನೀಡುವ ಸ್ವಾತಿಯವರ ಟ್ರೆಡಿಷನಲ್ ಮರೂನ್ ರೇಷ್ಮೆ ಸೀರೆ, ಪಿಂಕ್ ಕಾಂಟ್ರಾಸ್ಟ್ ಬ್ಲೌಸ್ ಹಾಗೂ ರಿಶಿಯ ಪಿಂಕ್ ಕುರ್ತಾ ಮ್ಯಾಚಿಂಗ್ ಕಾನ್ಸೆಪ್ಟ್ ಈ ಸೀಸನ್ನ ಮಿಕ್ಸ್ ಮ್ಯಾಚ್ ಕಾಂಟ್ರಾಸ್ಟ್ ಟ್ರೆಂಡ್ ಸೆಟ್ಗೆ ನಾಂದಿಯಾಡಿದೆ.
ಸ್ವಾತಿ ಫ್ಯಾಷನ್ ಟಾಕ್
ಮನೆಯ ಕಾರ್ಯಕ್ರಮವೆಂದಾಗ ಆದಷ್ಟೂ ಟ್ರೆಡಿಷನಲ್ ಔಟ್ಫಿಟ್ನಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಇನ್ನು ಭಾಗವಹಿಸುವ ಇತರರಿಗೂ ಹೊಂದುವಂತೆ ಕಾನ್ಸೆಪ್ಟ್ ಚೂಸ್ ಮಾಡಬೇಕಾಗುತ್ತದೆ. ಇದಕ್ಕೆ ಪೂರಕ ಎಂಬಂತೆ, ನಾವು ಕೂಡ ಮ್ಯಾಚ್ ಆಗುವಂತಹ ಕಾಂಟ್ರಾಸ್ಟ್ ಟ್ವಿನ್ನಿಂಗ್ ಉಡುಗೆಗಳನ್ನು ಪ್ಲಾನ್ ಮಾಡಿದೆವು ಎನ್ನುತ್ತಾರೆ ರಿಶಿಯವರ ಪತ್ನಿ ಸ್ವಾತಿ.
ರಿಶಿಗೆ ಸಿಂಪಲ್ ಫ್ಯಾಷನ್ ಇಷ್ಟ
ನಟ ರಿಶಿಗೆ ಸದಾ ಸಿಂಪಲ್ ಫ್ಯಾಷನ್ ಇಷ್ಟ. ಪ್ರಯೋಗ ಮಾಡುವುದರಲ್ಲಿ ಹೆಚ್ಚು ಆಸಕ್ತಿಯಿಲ್ಲ. ಹಾಗಾಗಿ ಪ್ರತಿಬಾರಿಯೂ ನಾನೇ ಅವರ ಔಟ್ಫಿಟ್ಗೆ ಮ್ಯಾಚ್ ಆಗುವಂತಹ ಡಿಸೈನರ್ವೇರ್ ಸೆಲೆಕ್ಟ್ ಮಾಡುತ್ತೇನೆ ಎನ್ನುತ್ತಾರೆ ಸ್ವಾತಿ. ಅಂದಹಾಗೆ, ಸ್ವಾತಿಯವರು ಮಾತ್ರ ಸಖತ್ ಫ್ಯಾಷೆನಬಲ್! ಅಲ್ಲದೇ ನಾನಾ ಪ್ರಯೋಗಾತ್ಮಕ ಫ್ಯಾಷನ್ಗಳನ್ನು ಟ್ರೈ ಮಾಡುತ್ತಿರುತ್ತಾರೆ.
ರಿಶಿ ಅಮ್ಮನೇ ಡಿಸೈನರ್
ಇನ್ನು, ನಾವು ಧರಿಸಿರುವ ಕಾಂಟ್ರಸ್ಟ್ ಟ್ವಿನ್ನಿಂಗ್ ದೇಸಿ ಔಟ್ಫಿಟ್ ಕ್ರೆಡಿಟ್ ರಿಶಿ ಅಮ್ಮನಿಗೆ ಸಲ್ಲಬೇಕು. ಇದನ್ನು ಪ್ಲಾನ್ ಮಾಡಿದವರೂ ಅವರೇ, ವಿಶೇಷವೆಂದರೇ, ಅವರು ನಾನು ಧರಿಸಲು ಸೆಲೆಕ್ಟ್ ಮಾಡಿದ ಸೀರೆಯ ಒಡಲಿಗೆ ಮ್ಯಾಚ್ ಆಗುವಂತಹ ಕಲರ್ ಆಯ್ಕೆ ಮಾಡುವ ಬದಲು, ಸೀರೆಯ ಬ್ಲೌಸ್ನ ಕಾಂಟ್ರಾಸ್ಟ್ ಕಲರ್ ಪಿಂಕ್ಗೆ ಸೂಟ್ ಆಗುವಂತೆ, ರಿಶಿಯ ಕುರ್ತಾ ಸೆಲೆಕ್ಟ್ ಮಾಡಿದರು. ಇದು ಸಖತ್ ಆಗಿ ಕಾಣಿಸಿತು ಕೂಡ. ನಾವು ಆದಷ್ಟೂ ಫ್ಯಾಮಿಲಿ ಫಂಕ್ಷನ್ಗಳಲ್ಲಿ ಸೆಲ್ಫ್ ಡಿಸೈನ್ಗೆ ಆದ್ಯತೆ ನೀಡುತ್ತೇವೆ. ಹೊರಗಿನ ಡಿಸೈನರ್ಗಳ ಸಹಾಯ ತೆಗೆದುಕೊಳ್ಳುವುದಿಲ್ಲ. ಕುಟುಂಬದವರ ಕ್ರಿಯೇಟಿವಿಟಿಗೆ ಆದ್ಯತೆ ನೀಡುತ್ತೇವೆ ಎನ್ನುತ್ತಾರೆ ಸ್ವಾತಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಏರ್ ಟ್ರಾಫಿಕ್ ಕಂಟ್ರೊಲರ್ ನಮ್ರತಾ ಜೈನ್ ವಿಂಟರ್ ಫ್ಯಾಷನ್ ಟಿಪ್ಸ್!