Site icon Vistara News

Traditional Look: ಎವರ್ ಗ್ರೀನ್ ಫ್ಯಾಷನ್ ನಲ್ಲಿ ಕಲರ್ ಫುಲ್ ಬಿಂದಿ

ಶಿವಾಂಗಿ ಜೋಷಿ, ನಟಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎವರ್ ಗ್ರೀನ್ ಬಿಂದಿ ಫ್ಯಾಷನ್ ಇಂದಿಗೂ ಟ್ರೆಡಿಷನಲ್ ಲುಕ್ ನ ಟಾಪ್ ಲಿಸ್ಟ್ ನಲ್ಲಿಯೇ ಇದೆ.
ಹೌದು, ಇಂಡಿಯನ್ ಬ್ಯೂಟಿ ಅಕಾಡೆಮಿಯೊಂದು ನಡೆಸಿದ ಸಮೀಕ್ಷೆ ಪ್ರಕಾರ, ಹಣೆಯನ್ನು ಸಿಂಗರಿಸುವ ಬಿಂದಿಗಳು ಇಂದಿಗೂ ಮಾನಿನಿಯರ ಮೇಕಪ್ ಕಿಟ್ ನಿಂದ ಹೊರಬಿದ್ದಿಲ್ಲ! ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಬಿಂದಿಗಳು ಇಂದಿಗೂ ತಮ್ಮ ಸ್ಥಾನದಿಂದ ಕೆಳಗಿಳಿದಿಲ್ಲ. ಬದಲಿಗೆ ಹೊಸತನಕ್ಕೆ ಒಗ್ಗುತ್ತಾ ನಾನಾ ರೂಪ ಪಡೆದುಕೊಂಡಿವೆ. ಆಗಾಗ ಸಾದಾ ವರ್ಣದಲ್ಲಿ ಮಾತ್ರವಲ್ಲ, ಉಡುಪಿಗೂ ಮ್ಯಾಚ್ ಆಗುವಂತೆ ಡಿಸೈನರ್ ಬಿಂದಿಗಳಾಗಿ ಬದಲಾಗುತ್ತಿವೆ. ಕುಂದನ್, ಮುತ್ತು, ಹರಳು ಹೀಗೆ ಬಗೆ ಬಗೆಯ ಡಿಸೈನರ್ಸ್ ವಿನ್ಯಾಸದಲ್ಲಿ ಮಾನಿನಿಯರ ಹಣೆಯನ್ನು ಸಿಂಗರಿಸುತ್ತಿವೆ.

ಬಿಂದಿಯ ನಾನಾ ರೂಪ

ಕಣ್ಣಿಗೆ ಕಾಣಿಸದ ಮೈಕ್ರೋ ಬಿಂದಿಯಿಂದ ಹಿಡಿದು, ಹಣೆಯಗಲದ ಬಿಂದಿ, ಸಮಾರಂಭಗಳಿಗೆ ಧರಿಸುವ ಕಲರ್ ಫುಲ್ ಬಿಂದಿ, ಡಿಸೈನರ್ ಬಿಂದಿ ಇಂದಿಗೂ ಹೆಚ್ಚು ಬೇಡಿಕೆಯಲ್ಲಿವೆ.
10 ರೂ.ಗಳಿಂದ ಆರಂಭವಾಗುವ ಬಿಂದಿಯ ಪ್ಯಾಕೆಟ್ ಬೆಲೆ ಇದೀಗ ಸಿಂಗಲ್ ಬಿಂದಿಗೆ ಅಂದರೆ, ಡಿಸೈನರ್ ಬಿಂದಿಗೆ ಸರಿ ಸುಮಾರು ನೂರರಿಂದ ನೂರೈವತ್ತು ರೂ.ಗಳವರೆಗೂ ಇದೆ. ಇನ್ನು ಕಸ್ಟಮೈಸ್ಡ್ ಬಿಂದಿಗಳು ಕೂಡ ದೊರೆಯಲಾರಂಭಿಸಿವೆ. ಚಿನ್ನ, ಬೆಳ್ಳಿ, ಮುತ್ತು ಒಳಗೊಂಡ ಡಿಸೈನರ್ ಬಿಂದಿಗಳು ಈ ಎಥ್ನಿಕ್ ಫ್ಯಾಷನ್ ಗೆ ಕಾಲಿಟ್ಟಿವೆ. ಇವುಗಳ ಬೆಲೆ ಅವುಗಳ ಡಿಸೈನ್ ಗೆ ತಕ್ಕಂತಿರುತ್ತದೆ. ಯಾವುದೇ ಎಥ್ನಿಕ್ ಫ್ಯಾಷನ್ ಕೂಡ ಬಿಂದಿ ಇಲ್ಲದೇ ಕಂಪ್ಲೀಟ್ ಆಗದು. ಹಾಗಾಗಿ ಬಿಂದಿಗಳು ಎವರ್ ಗ್ರೀನ್ ಎಥ್ನಿಕ್ ಫ್ಯಾಷನ್ ಆಕ್ಸೆಸರೀಸ್ ಲಿಸ್ಟ್ ಗೆ ಸೇರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಗಾ.

ತಾಪ್ಸಿ ಪನ್ನು , ನಟಿ

ವೆರೈಟಿ ಬಿಂದಿ

ಇಂದು ಹೆಚ್ಚು ಪ್ರಚಲಿತದಲ್ಲಿರುವ ಬಿಂದಿಗಳಲ್ಲಿ ಟ್ರೆಡಿಷನಲ್ ರೌಂಡ್ ಆಕಾರದ ಬಿಂದಿ ಸೇರಿದೆ. ಇನ್ನು ಬಂಗಾಳದ ದೊಡ್ಡ ಬಿಂದಿ, ಮಹಾರಾಷ್ಟ್ರದ ಚಂದ್ರಚಕೋರ್ ಬಿಂದಿ, ಹರಳುಗಳಿರುವ ಬಿಂದಿ, ಮುತ್ತು ಜೋಡಿಸಿರುವ ಬಿಂದಿ, ಜೆಮೆಟ್ರಿಕಲ್ ಡಿಸೈನ್ ಬಿಂದಿ, ಉದ್ದನೆಯ ತಿಲಕದಂತಹ ಬಿಂದಿಗಳು ಆಯಾ ಪ್ರದೇಶಗಳಲ್ಲಿ ಚಾಲ್ತಿಯಲ್ಲಿವೆ.

ಎಥ್ನಿಕ್ ಲುಕ್ ಗೆ ಬಿಂದಿ ಸಾಥ್

ಗಾಗ್ರ, ಲೆಹೆಂಗಾ, ಸಲ್ವಾರ್ ಕಮೀಜ್, ದಾವಣಿ-ಲಂಗ, ಸೀರೆ ಹೀಗೆ ನಾನಾ ಬಗೆಯ ಟ್ರೆಡಿಷನಲ್ ಉಡುಪುಗಳೊಂದಿಗೆ ಬಿಂದಿಯ ಸ್ಟಿಕ್ಕರ್ ಹಚ್ಚಿಕೊಳ್ಳುವುದು ಸರ್ವೆಸಾಮಾನ್ಯ. ಬಿಂದಿ ಇಲ್ಲದೇ ಟ್ರೆಡಿಷನಲ್ ಲುಕ್ ಕಂಪ್ಲೀಟ್ ಆಗದು. ಇಂಡಿಯನ್ ಲುಕ್ ಗಾಗಿ ಬಿಂದಿ ಧರಿಸುವುದು ಮಸ್ಟ್ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಅವರ ಪ್ರಕಾರ; ಇತ್ತೀಚೆಗೆ ಬಿಂದಿಯಲ್ಲೂ ಹಲವು ಬದಲಾವಣೆಗಳಾಗಿವೆ. ಟ್ರೆಡಿಷನಲ್ ಸೀರೆಗೆ ಆಯಾ ವರ್ಣದ ಬೆಂಗಾಲಿ ಬಿಂದಿಗಳನ್ನು ಧರಿಸುವುದು ಕಾಮನ್ ಆಗಿದೆ. ಇನ್ನು ಪಾರ್ಟಿವೇರ್ ಸೀರೆಗಳಿಗೆ ವಿವಿಧ ಆಕಾರದ ಜೆಮೆಟ್ರಿಕಲ್ ಬಿಂದಿಗಳನ್ನು ಆಯ್ಕೆ ಮಾಡಿಕೊಳ್ಳುವವರು ಅಧಿಕಗೊಂಡಿದ್ದಾರೆ. ಸದ್ಯಕ್ಕೆ ಜುವೆಲ್ ಬಿಂದಿಗಳು ಗ್ರ್ಯಾಂಡ್ ಉಡುಪುಗಳಿಗೆ ಮೀಸಲಾಗಿವೆ.

ಬ್ರೈಡಲ್ ಬಿಂದಿಗಳು

ಲೆಕ್ಕವಿಲ್ಲದಷ್ಟು ಬಗೆಯ ಬಿಂದಿಗಳು ಇಂದು ಮಾರುಕಟ್ಟೆಗೆ ಕಾಲಿಟ್ಟಿವೆ. ಧರಿಸುವ ಡಿಸೈನರ್ ವೇರ್ ಗೆ ತಕ್ಕಂತೆ ಇವು ದೊರಕುತ್ತಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣುವ ಕುಂದನ್ ಹಾಗೂ ಹರಳಿನ ಬ್ರೈಡಲ್ ಬಿಂದಿಗಳು ಇಂದು ಟ್ರೆಂಡ್ನಲ್ಲಿವೆ.

ಬಿಂದಿ ಆಯ್ಕೆ ಹೀಗಿರಲಿ…

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Weekend Fashion: ಔಟಿಂಗ್‌ಗೆ ಸ್ಟ್ರಾಪ್‌ ಡ್ರೆಸ್‌ ಬೆಸ್ಟ್

Exit mobile version