Site icon Vistara News

Travel Bag Fashion: ಟ್ರಾವೆಲ್‌ ಟೈಮ್‌ಗೆ ಸಾಥ್‌ ನೀಡುವ ಟ್ರೆಂಡಿ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌

Travel Bag Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ರಾವೆಲ್‌ ಪ್ರಿಯರಿಗೆ ಸಾಥ್‌ ನೀಡಲು ನಾನಾ ಬಗೆಯ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು (Travel Bag Fashion) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ಯೂನಿಸೆಕ್ಸ್‌ ಡಿಸೈನ್‌ನಲ್ಲಿ ಫ್ಯಾಷನ್‌ ಪ್ರಿಯರ ಮನ ಗೆದ್ದಿವೆ. ಅದರಲ್ಲೂ ಸೆಲೆಬ್ರೆಟಿಗಳ ಕಲೆಕ್ಷನ್‌ನ್ನಲ್ಲಿ ಸ್ಥಾನ ಗಳಿಸಿವೆ. ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ಡಿಸೈನ್‌ಗಳಲ್ಲಿ ಲಭ್ಯವಿರುವ ಇವು ಲೆಕ್ಕವಿಲ್ಲದಷ್ಟು ಕಲರ್‌ ಹಾಗೂ ವಿನ್ಯಾಸಗಳಲ್ಲಿ ಬಿಡುಗಡೆಗೊಂಡಿದ್ದು, ಧರಿಸಿದಾಗ ಪಕ್ಕಾ ಟ್ರಾವೆಲರ್‌ ಲುಕ್‌ ನೀಡುವುದರೊಂದಿಗೆ ಔಟ್‌ಫಿಟ್‌ನೊಂದಿಗೆ ಮ್ಯಾಚ್‌ ಆಗುತ್ತಿವೆ.

ವೆರೈಟಿ ಶೋಲ್ಡರ್‌ ಸ್ಲಿಂಗ್‌ ಟ್ರಾವೆಲ್‌ ಬ್ಯಾಗ್‌ಗಳು

ಚೈನ್‌, ಲೆದರ್‌, ಸ್ಟ್ರಾಪ್‌, ಪೌಚ್‌ ಸ್ಟೈಲ್‌, ಕ್ಲಾತ್‌ ಸ್ಟ್ರಾಪ್‌, ಮಿಕ್ಸ್‌ ಮ್ಯಾಚ್‌ ಚೈನ್‌ ಹಾಗೂ ಸ್ಟ್ರಾಪ್‌, ವ್ಯಾನಿಟಿ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌, ಬೋಟ್‌ ಶೇಪ್‌, ಪರ್ಸ್‌ ಶೇಪ್‌, ಜಿಪ್‌, ಬಟನ್‌, ಹಾಲೋಗ್ರಾಫಿಕ್‌, ವಾಟರ್‌ ಪ್ರೂಫ್‌, ಕಿಟ್‌ ಸ್ಟೈಲ್‌ ಸೇರಿದಂತೆ ನಾನಾ ಬಗೆಯ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಇವುಗಳಲ್ಲಿ ಇದೀಗ ಯೂನಿಸೆಕ್ಸ್‌ ಡಿಸೈನ್‌ ಇರುವಂತಹ ಬ್ಯಾಗ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇತ್ತ ಹುಡುಗರೂ ಹಾಗೂ ಹುಡುಗಿಯರು ಧರಿಸಬಹುದಾದ ಇವು ನೋಡಲು ರಫ್‌ ಹಾಗೂ ಟಫ್‌ ಲುಕ್‌ ನೀಡುತ್ತವೆ. ಟ್ರಾವೆಲ್‌ ಸಮಯದಲ್ಲಿ ಹುಡುಗಿಯರಿಗೆ ಬೇಸರವಾದಲ್ಲಿ ಹುಡುಗರು ಧರಿಸಬಹುದು. ನೋಡಲು ಫೆಮಿನೈನ್‌ ಲುಕ್‌ ನೀಡುವುದಿಲ್ಲ. ಬದಲಿಗೆ ಟ್ರಾವೆಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಬಾಲಿವುಡ್‌ ತಾರೆಯರ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ ಪ್ರೇಮ

ಸಿನಿ ತಾರೆಯರು ಅದರಲ್ಲೂ ಬಾಲಿವುಡ್‌ ತಾರೆಯರಿಗೆ ಇದೀಗ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳ ಮೇಲೆ ಮೋಹ ಕೊಂಚ ಹೆಚ್ಚಾಗಿಯೇ ಇದೆ. ಏರ್‌ಪೋರ್ಟ್‌ ಲುಕ್‌ನಿಂದಿಡಿದು, ವಿದೇಶ ಪ್ರವಾಸದಲ್ಲಿ ಟ್ರೆಂಡಿಯಾಗಿರುವ ಸ್ಲಿಂಗ್‌ ಬ್ಯಾಗ್‌ಗಳಲ್ಲೆ ಇವರು ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಒಂದೊಂದು ಬಾರಿಯೂ ಒಂದೊಂದು ಬಗೆಯ ಶೋಲ್ಡರ್‌ ಬ್ಯಾಗ್‌ನಲ್ಲಿ ಟ್ರಾವೆಲ್‌ ಲುಕ್‌ ಬದಲಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಈ ರೀತಿಯ ಬ್ಯಾಗ್‌ಗಳು ಮೊದಲು ಚಾಲ್ತಿಗೆ ಬಂದದ್ದು ಹಾಲಿವುಡ್‌ನಲ್ಲಿ, ನಂತರ ಬಾಲಿವುಡ್‌ಗೆ ಕಾಲಿಟ್ಟಿತು. ಇದೀಗ ತಾರೆಯರ ಟ್ರಾವೆಲ್‌ ಟೈಮ್‌ನ ಭಾಗವಾಗಿ ಹೋಗಿದೆ ಎನ್ನುತ್ತಾರೆ.

ಔಟ್‌ಫಿಟ್‌ನೊಂದಿಗೆ ಮಿಕ್ಸ್‌ ಮ್ಯಾಚ್‌

ಬಹುತೇಕ ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳು ಎಲ್ಲಾ ಬಗೆಯ ಔಟ್‌ಫಿಟ್‌ಗಳಿಗೆ ಮ್ಯಾಚ್‌ ಆಗುತ್ತವೆ. ಟ್ರೆಡಿಷನಲ್‌ ಲುಕ್‌ಗೆ ಅಷ್ಟಾಗಿ ಸಾಥ್‌ ನೀಡುವುದಿಲ್ಲ. ಕ್ಯಾಶುವಲ್‌ ಬಿಂದಾಸ್‌ ಲುಕ್‌ಗೆ ಹೊಂದುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಟ್ರಾವೆಲ್‌ ಟೈಮ್‌ಗೆ ಹಾಗೂ ಔಟಿಂಗ್‌ಗೆ ಹೇಳಿ ಮಾಡಿಸಿದ ಬ್ಯಾಗ್‌ಗಳು ಇವು. ಸಾಕಷ್ಟು ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ಗಳಲ್ಲಿ ಮೊಬೈಲ್‌, ಕಾರ್ಡ್‌, ಕ್ಯಾಶ್‌ ಇರಿಸಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಇನ್ನು ವ್ಯಾನಿಟಿ ಬ್ಯಾಗ್‌ ಶೈಲಿಯವಲ್ಲಿ ಮಾತ್ರ ಒಂದಿಷ್ಟು ಹೆಚ್ಚು ಜಾಗವಿರುತ್ತದೆ. ಆದಷ್ಟೂ ಭಾರವಿರದಂತೆ ನೋಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶೋಲ್ಡರ್‌ ಸ್ಲಿಂಗ್‌ ಬ್ಯಾಗ್‌ ಪ್ರಿಯರಿಗೆ 3 ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Jewellery Fashion: ಮದುವೆಯಲ್ಲಿ ಮದುಮಗಳ ಸೌಂದರ್ಯ ಹೆಚ್ಚಿಸುವ ಸೊಂಟಪಟ್ಟಿ

Exit mobile version