ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಾನಾ ಶೇಡ್ಸ್‌ನ ಟ್ವೀಡ್ ಬ್ಲೇಝರ್ಸ್ ಕಾರ್ಪೋರೇಟ್ ಕ್ಷೇತ್ರದವರನ್ನು ಸವಾರಿ ಮಾಡತೊಡಗಿವೆ. ಈ ಚಳಿಗಾಲದ ಸೀಸನ್‌ನಲ್ಲಿ ಧರಿಸಿದಾಗ ದೇಹವನ್ನು ಬೆಚ್ಚಗಿಡುವ ವೂಲ್‌ನಿಂದ ಸಿದ್ಧಪಡಿಸಿರುವ ನಾನಾ ವಿನ್ಯಾಸದ ಟ್ವೀಡ್ ಬ್ಲೇಝರ್ಗಳು (Winter Blazer Fashion) ಸೀಸನ್‌ನ ಟಾಪ್ ಲೇಯರ್ ಲುಕ್‌ನಲ್ಲಿವೆ.
ಏನಿದು ಟ್ವೀಡ್ ಬ್ಲೇಝರ್ಸ್
ಮೂಲತಃ ಸ್ಕಾಟ್‌ಲ್ಯಾಂಡ್ ಹಾಗೂ ಐರೀಶ್ ಜನರ ಲೈಫ್‌ಸ್ಟೈಲ್‌ನ ಭಾಗವಾಗಿದ್ದ ಈ ಟ್ವೀಡ್ ಬ್ಲೇಝರ್‌ಗಳು ಅಲ್ಲಿನ ವಾತಾವರಣಕ್ಕೆ ತಕ್ಕಂತೆ ರೂಪುಗಳ್ಳುತ್ತಿದ್ದವು. ಮೊದಲೆಲ್ಲಾ ಉಣ್ಣೆಯಿಂದ ಸಿದ್ಧಗೊಳ್ಳುತ್ತಿದ್ದವು. ಇತ್ತೀಚೆಗೆ ಇದರ ಜೊತೆಗೆ ರಯಾನ್, ಕಾಟನ್ ಮಿಶ್ರಣದಲ್ಲಿ ತಯಾರಾಗುತ್ತಿವೆ. ಅಲ್ಲದೇ ಕೋಟ್ ಹಾಗೂ ಜಾಕೆಟ್ ರೂಪದಲ್ಲಿ ಬೆಚ್ಚಗಿಡುತ್ತಿದ್ದ ಇವು ಇದೀಗ ಗಡಿ ದಾಟಿ ಪ್ರಪಂಚದೆಲ್ಲೆಡೆ ಟ್ವೀಡ್ ಬ್ಲೇಝರ್ ರೂಪದಲ್ಲಿ ಪ್ರಚಲಿತದಲ್ಲಿವೆ. ಧರಿಸಿದಾಗ ದೇಹವನ್ನು ಬೆಚ್ಚಗಿಡುವುದರೊಂದಿಗೆ ಸ್ಟೈಲಿಶ್ ಆಗಿ ಕಾಣಿಸುತ್ತವೆ. ನಾನಾ ಪ್ರತ್ರಿಷ್ಠಿತ ಬ್ರಾಂಡ್‌ಗಳಲ್ಲಿ ಲಭ್ಯವಿರುವ ಇವು ಶುದ್ಧ ಉಣ್ಣೆಯಿಂದ ಮಾಡಿದ್ದಾದಲ್ಲಿ ಕೊಂಚ ದುಬಾರಿ ಎನ್ನಬಹುದು. ಇದೀಗ ಇತರೇ ಫ್ಯಾಬ್ರಿಕ್ ಮಿಕ್ಸ್ ಜೊತೆಗೂ ಲಭ್ಯವಿದ್ದು, ಇಂದಿನ ಜನರೇಷನ್‌ಗೆ ಹೊಂದುವಂತಹ ಡಿಸೈನ್‌ಗಳಲ್ಲಿ ಲಭ್ಯವಿದೆ ಎನ್ನುತ್ತಾರ ಸ್ಟೈಲಿಸ್ಟ್ ರಾಘವ್. ಅವರ ಪ್ರಕಾರ, ವಿದೇಶಗಳಲ್ಲಿ ಈ ಶೈಲಿ ಬ್ಲೇಝರ್ ಧರಿಸುವುದು ತೀರಾ ಕಾಮನ್ ಎನ್ನುತ್ತಾರೆ.
ಕಾರ್ಪೋರೇಟ್ ಕ್ಷೇತ್ರದವರ ಚಾಯ್ಸ್
ಸಾಮಾನ್ಯರಿಗಿಂತ ಹೆಚ್ಚಾಗಿ ಕಾರ್ಪೋರೇಟ್ ಕ್ಷೇತ್ರದಲ್ಲಿ ಈ ಟ್ವೀಡ್ ಬ್ಲೇಝರ್ಸ್ ಧರಿಸುವವರು ಹೆಚ್ಚು. ಇವುಗಳಲ್ಲಿ ಯೂನಿಸೆಕ್ಸ್ ಡಿಸೈನ್ ದೊರೆಯುತ್ತಾದರೂ, ಹೆಚ್ಚಿನ ಜನರು ಫಿಟ್ಟಿಂಗ್ ವಿಚಾರದಿಂದಾಗಿ ಆಯ್ಕೆ ಮಾಡಿಕೊಳ್ಳುವವರು ಕಡಿಮೆ. ಹಾಗಾಗಿ ಮೆನ್ಸ್ ಹಾಗೂ ಮಹಿಳೆಯರ ಪ್ರತ್ಯೇಕ ಬ್ಲೇಝರ್‌ಗಳಿಗೆ ಪ್ರಾಮುಖ್ಯತೆ ಹೆಚ್ಚು. ಒಂದು ಟ್ವೀಡ್ ಬ್ಲೇಝರ್ ಕೊಂಡಲ್ಲಿ ಕನಿಷ್ಠ ನಾಲ್ಕೈದು ಫಾರ್ಮಲ್ ಶರ್ಟ್ ಪ್ಯಾಂಟ್‌ಗಳಿಗೆ ಮ್ಯಾಚ್ ಆಗುತ್ತವೆ. ಯಾಕೆಂದರೇ, ಇವು ಚೆಕ್ಸ್ ವಿನ್ಯಾಸದಲ್ಲಿ ಎರಡ್ಮೂರಕ್ಕಿಂತ ಶೇಡ್‌ಗಳಲ್ಲಿ ದೊರೆಯುತ್ತವೆ.
ಟ್ವೀಡ್ ಬ್ಲೇಝರ್ ಆಯ್ಕೆ ಹೇಗೆ?
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡಿ.
- ಆದಷ್ಟೂ ಲೈಟ್ವೈಟ್ ಬ್ಲೇಝರ್ ಕೊಳ್ಳಿ.
- ವಿಂಟರ್ ಸೀಸನ್ಗೆ ಮಾತ್ರ ಇದು ಸೂಕ್ತ ಎಂಬುದು ನೆನಪಿರಲಿ.
- ಯೂನಿಸೆಕ್ಸ್ ಟ್ವೀಡ್ ಬ್ಲೇಝರ್ ಆಯ್ಕೆ ಬೇಡ.
- ಕಲರ್ ಶೇಡ್ನವು ಸೀಸನ್ ಟ್ರೆಂಡ್ನಲ್ಲಿವೆ.
- ಸೂಕ್ತ ಬಣ್ಣದ ಆಯ್ಕೆ ಕ್ಲಾಸಿಕ್ ಲುಕ್ ನೀಡುತ್ತದೆ.
- ಸ್ಲಿಮ್ ಫಿಟ್ ಬ್ಲೇಝರ್ ಆಯ್ಕೆ ಮಾಡಿ.
- ಮೆನ್ಸ್ ಟ್ವೀಡ್ ಬ್ಲೇಝರ್ ಆದಲ್ಲಿ ಕಾಮನ್ ಶೇಡ್ ಆಯ್ಕೆ ಮಾಡಿ.
- ಲೇಡಿಸ್ಗೆ ಆಯ್ಕೆಗೆ ಹೆಚ್ಚು ಅಪ್ಷನ್ಗಳು ಸಿಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಹಾಫ್ & ಹಾಫ್ ಸೀರೆಯ ರಿ ಎಂಟ್ರಿಗೆ ನಾಂದಿ ಹಾಡಿದ ಸಾರಾ ಅಲಿ ಖಾನ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ