Site icon Vistara News

Udupi Saree: ಅಡಿಕೆ ಚೊಗರಿನಿಂದ ತಯಾರಾದ ಪರಿಸರ ಸ್ನೇಹಿ ಉಡುಪಿ ಸೀರೆ

Udupi Saree

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉಡುಪಿ ಸೀರೆಗಳಿಗೆ (Udupi Saree) ನ್ಯಾಚುರಲ್‌ ಬಣ್ಣ ಸಿಕ್ಕಿದೆ. ಅಡಿಕೆ ಚೊಗರಿನಿಂದ ತಯಾರಾದ ಈ ಸೀರೆಗಳು ಹೊಸ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿದ್ದು, ಸೀರೆ ಪ್ರಿಯರ ಕುತೂಹಲವನ್ನು ಹೆಚ್ಚಿಸಿವೆ. ಕೈ ಮಗ್ಗದ ಉಡುಪಿ ಸೀರೆ ಗುಡಿ ಕೈಗಾರಿಕೆಗೆ ಪುನಶ್ಚೇತನ ನೀಡಿರುವ ಕದಿಕೆ ಟ್ರಸ್ಟ್‌ ,ತಾಳಿಪಾಡಿ ನೇಕಾರರ ಸಹಕಾರ ಸಂಘದ ಸಹಯೋಗದೊಂದಿಗೆ ಈ ನೈಜ ಬಣ್ಣದ ಉಡುಪಿ ಸೀರೆಗಳನ್ನು ಬಿಡುಗಡೆಗೊಳಿಸಿದೆ.

ಪರಿಸರ ಸ್ನೇಹಿ ಉಡುಪಿ ಸೀರೆ

ಈ ಉಡುಪಿ ಸೀರೆಗಳ (Udupi Saree) ಪುನಶ್ಚೇತನದ ಹಿಂದೆ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಅವರ ಪರಿಶ್ರಮವಿದೆ. ಅವರೇ ಹೇಳುವಂತೆ, ಸಂಪೂರ್ಣ ಸಹಜ ಬಣ್ಣದಿಂದ ಸಿದ್ಧಪಡಿಸಲಾದ ಈ ಉಡುಪಿ ಸೀರೆಗಳನ್ನು ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆಯವರ ಸಹಕಾರದಿಂದ ತಯಾರಿಸಲಾಗಿದೆ. ಹಿಂದೊಮ್ಮೆ 2018ರಲ್ಲಿ ಚರಕ ಸಂಸ್ಥೆಯ ನೆರವಿನೊಂದಿಗೆ ತಾಳಿಪಾಡಿ ನೇಕಾರರ ಸಂಘದ ಸಹಯೋಗದೊಂದಿಗೆ ಸಹಜ ಬಣ್ಣದ ಸೀರೆಗಳನ್ನು ಸಿದ್ಧಪಡಿಸಲಾಗಿತ್ತು. ಇದೀಗ ಸೆಲ್ಕೋ ನೆರವಿನಿಂದ ದೊರಕಿದ ಉಪಕರಣಗಳಿಂದ ಹಾಗೂ ಮಾಮಿ ಸ್ಕೂಲ್‌ ಆಫ್‌ ನ್ಯಾಚುರಲ್‌ ಡೈಯಿಂಗ್‌ ಸ್ಲಾಲರ್‌ಶಿಪ್‌ ಗೈಡ್‌ಲೈನ್ಸ್‌ನಲ್ಲಿ ನೇಕಾರರು ಅಡಿಕೆ ಚೊಗರಿನಿಂದ ಪರಿಸರ ಸ್ನೇಹಿ ಉಡುಪಿ ಸೀರೆಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳುತ್ತಾರೆ.

ಆರೋಗ್ಯಕ್ಕೆ ಸಾಥ್‌ ನೀಡುವ ಸೀರೆ

ಕೆಮಿಕಲ್‌ ಬಣ್ಣಗಳಿಂದ ಸಿದ್ಧಪಡಿಸಿದ ಇತರೆ ಸೀರೆಗಳಿಗಿಂತ ಈ ರೀತಿಯ ನ್ಯಾಚುರಲ್‌ ಬಣ್ಣಗಳಿಂದ ತಯಾರಾದ ಸೀರೆಗಳು ಆರೋಗ್ಯಕ್ಕೆ ಸಾಥ್‌ ನೀಡುತ್ತವೆ. ಇದನ್ನು ಮಹಿಳೆಯರು ಅರಿಯಬೇಕು. ಉಡುಪಿ ಸೀರೆಗಳನ್ನು ಪ್ರೋತ್ಸಾಹಿಸಬೇಕು ಎನ್ನುತ್ತಾರೆ ಮಮತಾ ರೈ . ಮುಂದಿನ ದಿನಗಳಲ್ಲಿ ಕಾಡು ಬಾದಾಮಿ ಎಲೆ, ದಾಳಿಂಬೆ ಸಿಪ್ಪೆ, ಮಂಜಿಷ್ಟ, ನೀಲಿ ಗೊಂಡೆ ಹೂ ಮುಂತಾದ ಸಸ್ಯ ಮೂಲದ ಬಣ್ಣಗಳಿಂದ ನೈಜ ಬಣ್ಣದ ಉಡುಪಿ ಸೀರೆಗಳನ್ನು ಸಿದ್ಧಪಡಿಸುವ ಗುರಿಯಿದೆ. ಈಗಾಗಲೇ ಸಾಧನಾ ಎಂಬುವವರು ತರಬೇತಿ ಪಡೆದು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಶ್ರದ್ಧಾ ಸೇರಿದಂತೆ ತಂಡದ ಸದಸ್ಯರೆಲ್ಲರೂ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಪ್ರಶಂಸನೀಯ ಎನ್ನುತ್ತಾರೆ ಮಮತಾ ರೈ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Colour torn jeans Fashion: ಕಾಲೇಜ್‌ ಹುಡುಗಿಯರ ಫಂಕಿ ಲಿಸ್ಟ್‌ ಗೆ ಸೇರಿದ ಕಲರ್‌ ಟೊರ್ನ್ ಜೀನ್ಸ್

Exit mobile version