ಶೀಲಾ ಸಿ. ಶೆಟ್ಟಿ ಬೆಂಗಳೂರು
ಯುಗಾದಿ ಹಬ್ಬಕ್ಕೆ ನಾನಾ ಬಗೆಯ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿದ್ದು, ಅವುಗಳಲ್ಲಿ 3 ಶೈಲಿಯ ಎಥ್ನಿಕ್ ಲುಕ್ ನೀಡುವ ಟ್ರೆಡಿಷನಲ್‌ವೇರ್‌ಗಳು ಟ್ರೆಂಡಿಯಾಗಿದ್ದು (Ugadi Fashion) ಬೇಡಿಕೆ ಹೆಚ್ಚಿಸಿಕೊಂಡಿವೆ. ಹುಡುಗಿಯರಿಂದಿಡಿದು ವಿವಾಹಿತರು ಕೂಡ ಟ್ರೆಡಿಷನಲ್ ಅಟೈರ್‌ನತ್ತ ಆಕರ್ಷಿತರಾಗತೊಡಗಿದ್ದಾರೆ. ಅವುಗಳಲ್ಲಿ ಎಥ್ನಿಕ್ ಲುಕ್ ನೀಡುವ ಹೊಸ ಬಗೆಯ ರೇಷ್ಮೆಯ ಲಂಗ ದಾವಣಿ, ಸೌತ್ ಇಂಡಿಯನ್ ರಿಪ್ಲಿಕಾ ಲೆಹಂಗಾ ಹಾಗೂ ಸೀರೆ ಸ್ಟೈಲ್ ಲಂಗ-ದಾವಣಿ ಮಾದರಿಯವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ರೇಷ್ಮೆಯ ಕಾಂಟ್ರಸ್ಟ್ ವರ್ಣದ ಲಂಗ ದಾವಣಿ
ಇದೀಗ ಮಾನೋಕ್ರೋಮ್ ವರ್ಣದ ದಾವಣಿ-ಲಂಗದ ಫ್ಯಾಷನ್ ಮರೆಯಾಗಿದೆ. ಕಾಂಟ್ರಸ್ಟ್ ವರ್ಣದ ದಾವಣಿ-ಲಂಗದ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ. ನೋಡಲು ಕಲರ್‌ಫುಲ್ ಆಗಿ ಕಾಣಿಸುವ ಇವು ಹಬ್ಬದ ರಂಗನ್ನು ಹೆಚ್ಚಿಸುತ್ತಿವೆ.
ಬ್ಲೌಸ್ ಒಂದು ವರ್ಣ, ಲಂಗ ಇನ್ನೊಂದು ವರ್ಣ ಇದಕ್ಕೆ ಧರಿಸುವ ದಾವಣಿ ಮತ್ತೊಂದು ವರ್ಣ ಹೊಂದಿರುವಂತಹ ದಾವಣಿ-ಲಂಗ ಇಂದು ಬೇಡಿಕೆ ಹೆಚ್ಚು ಪಡೆದುಕೊಂಡಿರುವುದರೊಂದಿಗೆ ಟ್ರೆಂಡಿಯಾಗಿದೆ ಎನ್ನುತ್ತಾರೆ ನಟಿ ಸುಷ್ಮಾ ಶೇಖರ್.
ಸೌತ್ ಇಂಡಿಯನ್ ಲೆಹೆಂಗಾ ರಿಪ್ಲಿಕಾ
ನಾರ್ತ್ ಇಂಡಿಯನ್ ಧರಿಸುವ ಲೆಹೆಂಗಾಗಳು ಇದೀಗ ಸೌತ್ ಇಂಡಿಯನ್ ಮಾನಿನಿಯರಿಗೂ ಸೂಟ್ ಆಗುವಂತಹ ಡಿಸೈನ್‌ನಲ್ಲಿ ಬಂದಿವೆ. ಇಲ್ಲಿನ ಸ್ಥಳೀಯ ಫ್ಯಾಷನ್ ಪ್ರೇಮಿಗಳು ಇಲ್ಲಿನ ಹಬ್ಬಗಳಿಗೆ ಧರಿಸಿದಲ್ಲಿ ಆಕರ್ಷಕವಾಗಿ ಕಾಣುವಂತಹ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಸ್ಟಿಚ್ ಹಾಗೂ ಸೆಮಿ ಸ್ಟಿಚ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕಲರ್‌ಗಳು ಕೂಡ ಅಷ್ಟೇ ಇಲ್ಲಿನ ಮಹಿಳೆಯರ ಸ್ಕಿನ್ ಟೋನ್‌ಗೆ ಹೊಂದುವಂತಹ ಬಣ್ಣಗಳಲ್ಲಿ ಆಗಮಿಸಿವೆ. ಅದರಲ್ಲೂ ಬ್ಲೌಸ್ ಹಾಗೂ ಲಂಗದ ವಿನ್ಯಾಸಗಳು ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಇದರೊಂದಿಗೆ ಲಾಂಗ್ ದುಪಟ್ಟ ದಾವಣಿಯಂತೆ ಕಂಗೊಳಿಸುತ್ತಿದೆ.
ಸೀರೆ ಸ್ಟೈಲ್ ದಾವಣಿ-ಲಂಗ
ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುವ ನೋಡಲು ದಾವಣಿ-ಲಂಗದಂತೆ ಉಡಬಹುದಾದ ರೇಷ್ಮೆ ಸೀರೆ ಇಲ್ಲವೇ ಡಿಸೈನರ್‌ವೇರ್‌ಗಳು ಇಂದು ಬೋಟಿಕ್‌ಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಇವು ಕೊಂಚ ದುಬಾರಿಯಾದರೂ ನೋಡಲು ಮನಮೋಹಕವಾಗಿ ಕಾಣುತ್ತವೆ. ಕೆಲವು ರೆಡಿಮೇಡ್ ಸೀರೆಯಂತೆ ಕಂಡರೂ ಇದು ಅದಲ್ಲ! ನೆರಿಗೆ ಹೊಂದಿರುವ ಲಂಗ ಹಾಗೂ ಬ್ಲೌಸ್‌ಗೆ ಹೊಂದುವಂತೆ ವಿನ್ಯಾಸ ಮಾಡಲಾಗಿರುತ್ತದೆ.
ಟ್ರೆಡಿಷನಲ್ ಅಟೈರ್ ಆಯ್ಕೆ ಪ್ರಿಯರು ಗಮನಿಸಬೇಕಾದ್ದು
- ರೇಷ್ಮೆಯ ಫ್ಯಾಬ್ರಿಕ್ನ ಟ್ರೆಡಿಷನಲ್ ಅಟೈರ್ ಹಬ್ಬಕ್ಕೆ ಹೊಂದುತ್ತದೆ.
- ಟ್ರೆಡಿಷನಲ್ ಉಡುಗೆಗೆ ತಕ್ಕಂತೆ ಮೇಕಪ್, ಆಕ್ಸೆಸರೀಸ್ ಧರಿಸಿ.
- ಟ್ರೆಡಿಷನಲ್ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi Mens Fashion: ಯುವಕರ ಯುಗಾದಿ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಆಕರ್ಷಕ ಸ್ಲಿಮ್‌ಫಿಟ್ ಕುರ್ತಾಗಳು