ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿ ಹಬ್ಬದ ಗ್ರ್ಯಾಂಡ್ ದೇಸಿ ಲುಕ್ ನಿಮ್ಮದಾಗಬೇಕೇ! ಹಾಗಾದಲ್ಲಿ, ಮಿಕ್ಸ್ ಮ್ಯಾಚ್ ಆಭರಣಗಳನ್ನು ಧರಿಸಿ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು. ಹೌದು. ಈ ಫೆಸ್ಟೀವ್ ಸೀಸನ್‌ನಲ್ಲಿ ಎಥ್ನಿಕ್‌ವೇರ್‌ನೊಂದಿಗೆ ಬಗೆಬಗೆಯ ದೇಸಿ ಲುಕ್ ನೀಡುವ ಮಿಕ್ಸ್ ಮ್ಯಾಚ್ ಜ್ಯುವೆಲರಿಗಳನ್ನು (Ugadi Jewel Fashion) ಧರಿಸುವುದು ಟ್ರೆಂಡಿಯಾಗಿದೆ. ಹಬ್ಬದ ಉಡುಗೆಗಳಿಗೆ ಹಾಗೂ ಸೀರೆಗೆ ಮ್ಯಾಚ್ ಆಗುವಂತಹ ನಾನಾ ಶೈಲಿಯ ಆಭರಣಗಳ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ ಬಂದಿದೆ.
ಜ್ಯುವೆಲ್ ಸ್ಟೈಲಿಸ್ಟ್‌ಗಳು ಹೇಳುವುದೇನು?
ಹೌದು. ಈ ಮೊದಲು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಬ್ಬಕ್ಕೆ ಟ್ರೆಡಿಷನಲ್ ಉಡುಪು ಅಥವಾ ಸೀರೆ ಧರಿಸಿದಾಗ ಅದಕ್ಕೆ ಮ್ಯಾಚ್ ಆಗುವ ಟ್ರೆಡಿಷನಲ್ ವಿನ್ಯಾಸದ ಅಥವಾ ಹಳೆಯ ಕಾಲದ ಆಭರಣಗಳನ್ನು ಧರಿಸುವುದು ಟ್ರೆಂಡ್ ಆಗಿತ್ತು. ಇದೀಗ ಹಾಗಿಲ್ಲ, ಆಕರ್ಷಕವಾಗಿ ಕಾಣುವಂತಹ ಯಾವುದೇ ಮಿಕ್ಸ್ ಮ್ಯಾಚ್ ಆಭರಣಗಳನ್ನು ಧರಿಸಬಹುದು. ಇದು ಯುಗಾದಿ ಹಬ್ಬದ ಜ್ಯುವೆಲ್ ಟ್ರೆಂಡ್ ಆಗಿದೆ. ಅದು ಬಂಗಾರದ್ದಾಗಿರಬಹುದು, ಇಲ್ಲವೇ ಇತರೇ ಲೋಹದ್ದಾಗಬಹುದು. ಉಡುಗೆಗೆ ಅಥವಾ ಧರಿಸುವ ಸೀರೆಗೆ ಮ್ಯಾಚ್ ಆಗುವುದು ಮುಖ್ಯ ಹಾಗಾಗಿ ಆಭರಣಗಳನ್ನು ಮಿಕ್ಸ್ ಮ್ಯಾಚ್ ಮಾಡುವಾಗ ಈ ಕೆಳಗಿನ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಮಾಡೆಲ್ ಚಂದನಾ ಗೌಡ ಮಿಕ್ಸ್ ಮ್ಯಾಚ್ ಸಲಹೆ
ರೇಷ್ಮೆ ಸೀರೆ ಅಥವಾ ರೇಷ್ಮೆ ಲಂಗ-ದಾವಣಿಗಾದಲ್ಲಿ ಆದಷ್ಟೂ ನಿಮ್ಮ ಬಳಿ ಇರುವ ಭಾರಿ ಡಿಸೈನ್‌ನ ಹಾರ ಧರಿಸಿ. ಹಾರ ಧರಿಸಿದಾಗ ನೆಕ್ಲೇಸ್ ಅದರೊಳಗೆ ಕಾಣುವಂತಿರಲಿ. ದೊಡ್ಡ ಜುಮಕಿ ಧರಿಸಿ. ಇನ್ನು ಕೈಗಳಿಗೆ ಮ್ಯಾಚಿಂಗ್ ಬಳೆ ಜೊತೆಗೆ ಸೈಡ್ ಗ್ರ್ಯಾಂಡ್ ಬಳೆ ಅಥವಾ ಕಂಗನ್ ಇರಲಿ. ಇವ್ಯಾವುದು ಇಲ್ಲದಿದ್ದಲ್ಲಿ, ಕಾಸಿನ ಸರ ಇದ್ದಲ್ಲಿ ಅದನ್ನು ಧರಿಸಬಹುದು. ಮೋಹನಮಾಲೆ ಕೂಡ ಚೆನ್ನಾಗಿ ಮ್ಯಾಚ್ ಆಗುತ್ತದೆ. ಗಣೇಶ, ಗಂಡುಭೇರುಂಡ ಹಾಗೂ ಲಕ್ಷ್ಮಿ ಪೆಂಡೆಂಟ್ ಇರುವಂತಹ ಹಾರವೂ ಸೂಪರ್ಬ್ ಕಾಂಬಿನೇಷನ್. ಇನ್ನು ಬಾರ್ಡರ್ ಹೊಂದಿದ ಪ್ಲೇನ್ ಸೀರೆಗಳಿಗೆ ಪರ್ಲ್, ಜೇಡ್, ಕೋರಲ್ ಚೈನ್ ಆಯ್ಕೆ ಉತ್ತಮ ಎಂದು ಸಲಹೆ ನೀಡುತ್ತಾರೆ ಮಾಡೆಲ್ ನಟಿ ಚಂದನಾ ಗೌಡ.
ದೇಸಿ ಲುಕ್ ನೀಡುವ ಉಡುಪುಗಳಿಗೆ ಆಭರಣಗಳ ಮಿಕ್ಸ್ ಮ್ಯಾಚ್
ದೇಸಿ ಲುಕ್ ನೀಡುವ ಉಡುಪುಗಳಿಗೆ ಗೋಲ್ಡ್ ಮಣಿ ಸರಗಳು, ಎರಡೆಳೆ ಮೂರೆಳೆ ಚೈನ್, ಚೋಕರ್ ಧರಿಸಬಹುದು. ಇನ್ನು ಟ್ರೆಂಡಿಯಾಗಿರುವ ಗಾಗ್ರಾ, ಲೆಹಂಗಾ, ಸೆಲ್ವಾರ್, ಅನಾರ್ಕಲಿಯಂತಹ ಡ್ರೆಸ್‌ಗಳಿಗೆ ಸ್ವಲ್ಪ ಗ್ರ್ಯಾಂಡ್ ಲುಕ್ ನೀಡುವ ಕ್ರಿಸ್ಟಲ್, ಸ್ಟೇಟ್‌ಮೆಂಟ್ ಜ್ಯುವೆಲರಿಗಳನ್ನು ಆಯ್ಕೆ ಮಾಡಬಹುದು. ಇನ್ನು ಕಿವಿಗೆ ದೊಡ್ಡ ಸ್ಟೋನ್ ಸ್ಟಡ್ಸ್, ಗೋಲ್ಡ್ ಜುಮಕಿ ಎಥ್ನಿಕ್ ಟಚ್ ನೀಡುತ್ತದೆ. ಸ್ಟೋನ್ ಕ್ರಿಸ್ಟಲ್, ಕೋರ್, ಪರ್ಲ್, ಜೇಡ್ ಬಳಸಿ ವಿನ್ಯಾಸಗೊಳಿಸಿದ ಜುಮುಕಿ ಮ್ಯಾಚ್ ಮಾಡಬಹುದು. ಇದು ಎಥ್ನಿಕ್ ಸ್ಟೈಲನ್ನು ನೀಡುತ್ತದೆ.
ಬಳೆ-ಕಂಗನ್ ಮಿಕ್ಸ್ ಮ್ಯಾಚ್
ಕೈಗಳಿಗೆ ನಾಲ್ಕೈದು ಗೋಲ್ಡ್ ಬ್ಯಾಂಗಲ್ಸ್ ಅಥವಾ ಬೀಡ್ಸ್ ಬಳಸಿದ ಡಿಸೈನ್ಡ್ ಬ್ಯಾಂಗಲ್ಸ್ ಅದರ ನಡುವೆ ಗಾಜಿನ ಅಥವಾ ಮೆಟಲ್‌ನ ಡಿಸೈನರ್ ಸೆಟ್ ಬ್ಯಾಂಗಲ್ಸ್ ಧರಿಸಬಹುದು. ಫಂಕಿ ಬ್ಯಾಂಗಲ್ಸ್ ಆಯ್ಕೆ ಬೇಡ. ಕಂಗನ್ ನಡುವೆ ಧರಿಸಬಹುದು.
ಎಥ್ನಿಕ್‌ವೇರ್‌ಗೆ ತಕ್ಕಂತಿರಲಿ ಮಿಕ್ಸ್ ಮ್ಯಾಚ್ ಆಭರಣಗಳು
- ಗ್ರ್ಯಾಂಡ್ ಆಗಿರುವ ಡ್ರೆಸ್‌ಗಳಿಗೆ ತೀರಾ ಹೆಚ್ಚು ಮಿಕ್ಸ್ ಮ್ಯಾಚ್ ಆಭರಣ ಧರಿಸುವುದು ಬೇಡ.
- ನೆಕ್ಡೀಪ್ ಇದ್ದಲ್ಲಿ ಲೇಯರ್ ಆಭರಣದೊಂದಿಗೆ ಸಿಂಪಲ್ ನೆಕ್ಚೈನ್ ಧರಿಸಬಹುದು.
- ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್ಗೆ ಆದಷ್ಟೂ ಭಾರವಿರದ ಆಭರಣಗಳನ್ನು ಸೆಲೆಕ್ಟ್ ಮಾಡಿ, ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ugadi 2023: ಯುಗಾದಿ ಹಬ್ಬದಂದು ಬಾಯಿ ಚಪ್ಪರಿಸುವುದಕ್ಕೆ ಮಾಡಿ ಈ ವಿಶೇಷ ಅಡುಗೆ