Site icon Vistara News

Ugadi Makeup Trend: ಸ್ತ್ರೀಯರ ಯುಗಾದಿ ಸಂಭ್ರಮಕ್ಕೆ ಸ್ಪೆಷಲ್‌ ಫೆಸ್ಟಿವ್ ಮೇಕಪ್‌ ಮಂತ್ರ

Ugadi Makeup Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುಗಾದಿ ಹಬ್ಬದ ಸಂಭ್ರಮಕ್ಕೆ ನಾನಾ ಬಗೆಯ ಫೆಸ್ಟಿವ್ ಮೇಕಪ್‌ ಕಾನ್ಸೆಪ್ಟ್‌ಗಳು ಕಾಲಿಟ್ಟಿವೆ. ಟ್ರೆಡಿಷನಲ್‌ ಸೀರೆ ಹಾಗೂ ಉಡುಗೆಯೊಂದಿಗೆ ಸುಂದರವಾಗಿ ಕಾಣಿಸಲು ಈ ಮೇಕಪ್‌ಗಳು (Ugadi Makeup Trend) ಸಹಕಾರಿಯಾಗಲಿವೆ. ಇದೀಗ ಟ್ರೆಂಡಿ ಮೇಕಪ್‌ ಲಿಸ್ಟ್‌ನಲ್ಲೂ ಇವು ಸೇರಿಕೊಂಡಿವೆ. ಫೆಸ್ಟಿವ್ ಮೇಕಪ್‌ ಪ್ರಿಯರು ಇದಕ್ಕಾಗಿ ಮೇಕಪ್‌ ಹಾಗೂ ಡ್ರೆಸ್‌ ಮಾಡಿಕೊಳ್ಳುವ ಮುನ್ನ ಒಂದಿಷ್ಟು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಮೇಕಪ್‌ ಎಜುಕೇಟರ್‌ ರಾಶಿ ಸೃಜನ್‌. ಈ ಬಗ್ಗೆ ಒಂದಿಷ್ಟು ಸಿಂಪಲ್‌ ಮಾಹಿತಿ ಕೂಡ ನೀಡಿದ್ದಾರೆ. ಅವರ ಪ್ರಕಾರ, ಹಬ್ಬಗಳಲ್ಲಿ ಆದಷ್ಟೂ ಆಕರ್ಷಕವಾಗಿ ಕಾಣುವಂತಹ ಮೇಕಪ್‌ಗೆ ಮೊರೆ ಹೋಗಬೇಕು ಎನ್ನುತ್ತಾರೆ.

ಹಬ್ಬದ ಲುಕ್‌ಗೆ ಹೀಗಿರಲಿ ಮೇಕಪ್‌

ಸೀರೆ, ಲಂಗ-ದಾವಣಿ, ಉದ್ದ ಲಂಗ ಹಾಗೂ ನಾರ್ತ್ ಇಂಡಿಯನ್‌ ಶೈಲಿಯ ಗಾಗ್ರ, ಲೆಹೆಂಗಾಗಳಿಗೆ ತಕ್ಕಂತೆ ಮೇಕಪ್‌ ಆಯ್ಕೆ ಮಾಡಿ. ಕೆಲವೊಮ್ಮೆ ಸೀಸನ್‌ವೈಸ್‌ ಮೇಕಪ್‌ ಮಾಡಿದರೂ ಅದು ನೀವು ಧರಿಸುವ ಉಡುಪುಗಳಿಗೆ ಮ್ಯಾಚ್‌ ಆಗದು. ಹಾಗಾಗಿ ನಿಮ್ಮ ತ್ವಚೆಗೆ ಹೊಂದುವಂತಹ ಮೇಕಪ್‌ ಪ್ರಾಡಕ್ಟ್‌ಗಳ ಆಯ್ಕೆಯಲ್ಲಿ ಜಾಣತನ ತೋರಬೇಕು. ಸೀರೆಗಾದಲ್ಲಿ ಆದಷ್ಟು ಟ್ರೆಡಿಷನಲ್‌ ಲುಕ್‌ ನೀಡುವ ಬಣ್ಣಗಳ ಬಳಕೆ ಮಾಡುವುದು ಉತ್ತಮ. ಅದು ಲಿಪ್‌ಸ್ಟಿಕ್‌ ಆಗಬಹುದು, ಇಲ್ಲವೇ ಐ ಶ್ಯಾಡೋ ಆಗಿರಬಹುದು. ಚೀಕ್ಸ್‌ ರೋಸ್‌ ಆಗಿರಬಹುದು.

ಫೆಸ್ಟಿವ್ ಮೇಕಪ್‌ಗೂ ಮುನ್ನ ತಿಳಿದಿರಬೇಕಾದ್ದು

ಇನ್ನು ಫೆಸ್ಟಿವ್ ಮೇಕಪ್‌ ವಿಷಯಕ್ಕೆ ಬಂದಲ್ಲಿ, ಹೈಡೆಫನೇಷನ್‌ ವಾಟರ್‌ ಪ್ರೂಫ್‌ ಮೇಕಪ್‌ ಸೌಂದರ್ಯವರ್ಧಕ ಬಳಸಿ. ಇದರಲ್ಲೂ ಸಾಮಾನ್ಯ, ಜಿಡ್ಡಿನಾಂಶ ಹಾಗೂ ಒಣ ಚರ್ಮಕ್ಕೆ ತಕ್ಕಂತೆ ಫೌಂಡೇಷನ್‌ಗಳನ್ನು ಬಳಸಿ.

ಮೇಕಪ್‌ಗೂ ಮೊದಲು ಕ್ಲೆನ್ಸಿಂಗ್‌ ಮಾಡಿರಿ. ನಂತರ ಆಯಿಲ್‌ ಫ್ರೀ ಸನ್‌ಸ್ಕ್ರೀನ್‌ ಹಚ್ಚಿ .ನಂತರ ಫೌಂಡೇಷನ್‌, ತದನಂತರ ಪೌಡರ್‌ ಹಚ್ಚಿ. ಐಬ್ರೊ ಪೆನ್ಸಿಲ್‌ನಿಂದ ಹುಬ್ಬಿಗೆ ಆಕರ ನೀಡಿ. ಮ್ಯಾಚಿಂಗ್‌ ಐ ಶ್ಯಾಡೋ ಲೇಪಿಸಿ. ಇದರಲ್ಲೂ ಪ್ರಯೋಗ ಮಾಡಬಹುದು. ಬೇಕಿದ್ದಲ್ಲಿ ಗ್ಲಿಟರನ್ನು ಲೇಪಿಸಬಹುದು. ನಂತರ ಮಸ್ಕರಾದಿಂದ ನಿಮಗೆ ಬೇಕಾದಂತೆ ಲೈನ್‌ ಎಳೆಯಿರಿ. ಐ ಲೈನರ್‌ ಹಾಗೂ ಕಾಡಿಗೆ ಹಚ್ಚಿ. ಬ್ಲಷರನ್ನು ಕೆನ್ನೆಗಳಿಗೆ ಹಚ್ಚಿ. ನಂತರ ಲಿಪ್‌ ಲೈನರ್‌ ತೀಡಿ. ನಿಮಗೆ ಇಷ್ಟವಾದ ಲಿಪ್‌ಸ್ಟಿಕ್‌ ಲೇಪಿಸಿ. ಉತ್ತಮ ಹೇರ್‌ ಸ್ಟೈಲ್‌ ಮಾಡಿ, ಡಿಸೈನರ್‌ ಬಿಂದಿ ಹಚ್ಚಿ. ಈಗ ನೀವು ಹಬ್ಬದ ಮೇಕಪ್‌ನಲ್ಲಿ ಬ್ರೈಟ್‌ ಆಗಿ ಕಾಣಿಸುತ್ತೀರಿ!

ಹಬ್ಬದ ಉಡುಪಿಗೆ ತಕ್ಕಂತಹ ಲಿಪ್‌ಸ್ಟಿಕ್‌ ಇರಲಿ

ಸ್ಕಿನ್‌ ಟೋನ್‌ಗೆ ತಕ್ಕಂತೆ ಲಿಪ್‌ಸ್ಟಿಕ್‌ ಲೇಪಿಸಿ. ಕೊಂಚ ತಿಳಿ ವರ್ಣದವಾರಾಗಿದ್ದರೇ ಯಾವ ಲಿಪ್‌ಸ್ಟಿಕ್‌ ಆದರೂ ಹೊಂದುತ್ತದೆ. ಡಸ್ಕಿ ಸ್ಕಿನ್‌ ಟೋನ್‌ ಆಗಿದ್ದಲ್ಲಿ ಆದಷ್ಟೂ ರೆಡ್‌ ಹೊರತುಪಡಿಸಿ ಇನ್ನುಳಿದ ವರ್ಣಗಳನ್ನು ಆಯ್ಕೆ ಮಾಡಬಹುದು. ಅದು ಉಡುಪಿನ ಬಣ್ಣಕ್ಕೆ ಹೊಂದುವಂತಿರಬೇಕು. ಮೇಕಪ್‌ ಗ್ರ್ಯಾಂಡ್‌ ಆಗಿದ್ದರೂ ಲೈಟಾಗಿರಲಿ. ನ್ಯಾಚುರಲ್‌ ಲುಕ್‌ ಇದ್ದರಂತೂ ನೋಡಲು ಮನಮೋಹಕವಾಗಿರುತ್ತದೆ ಎನ್ನುತ್ತಾರೆ ರಾಶಿ.

ಫೆಸ್ಟಿವ್ ಮೇಕಪ್‌ ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ugadi Jewel Fashion: ಯುಗಾದಿ ಹಬ್ಬದ ಗ್ರ್ಯಾಂಡ್‌ ಲುಕ್‌ಗೆ ಟ್ರೆಂಡಿಯಾದ ಮಿಕ್ಸ್‌ ಮ್ಯಾಚ್‌ ಆಭರಣಗಳು

Exit mobile version