ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ದಿನ ನೀವು ಧರಿಸುವ ಉಡುಪಿನ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಇದಕ್ಕೆ ಪೂರಕ ಎಂಬಂತೆ, ಪ್ರತಿ ವರ್ಣಕ್ಕೂ ಮ್ಯಾಚ್ ಆಗುವಂತೆ ನಾನಾ ಟ್ರೆಂಡಿ ಫ್ಯಾಷನ್‌ವೇರ್‌ಗಳು ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಯಾವ್ಯಾವ ವರ್ಣದಲ್ಲಿ ಯಾವ ಬಗೆಯ ಫ್ಯಾಷೆನಬಲ್ ಉಡುಪುಗಳನ್ನು ಪ್ರೇಮಿಗಳು ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಮಾಹಿತಿ ನೀಡಿದ್ದಾರೆ.
ನೀಲಿಯ ನಾನಾ ಡಿಸೈನರ್‌ವೇರ್ಸ್
ವ್ಯಾಲೆಂಟೈನ್ಸ್ ಡೇಯಂದು ನೀಲಿ ಶೇಡ್ಸ್‌ನ ಉಡುಪು ನೀವು ಧರಿಸುವ ಮುನ್ನ ಯೋಚಿಸಿ. ಯಾಕೆಂದರೆ, ಈ ವರ್ಣದ ಉಡುಪು ಧರಿಸಿದ್ದಲ್ಲಿ, ನೋಡುಗರಿಗೆ ನೀವು ಯಾವುದೇ ರಿಲೇಷನ್‌ಶಿಪ್‌ಗೂ ರೆಡಿ ಇದ್ದೀರಿ ಎಂದರ್ಥ. ಈ ಉಡುಪನ್ನು ಧರಿಸಲು ಬಯಸುವ ಫ್ಯಾಷನ್ ಪ್ರೇಮಿಗಳಿಗೆಂದೇ ಈಗಾಗಲೇ ತಿಳಿ ನೀಲಿ, ಆಕಾಶ ನೀಲಿ, ರಾಯಲ್ ನೀಲಿಯ ಜಂಪ್‌ಸೂಟ್ಸ್, ಲಾಂಗ್ ಸ್ಕಟ್ರ್ಸ್, ಮಾನೋಕ್ರೋಮ್ ಫ್ರಾಕ್‌ಗಳು ಎಂಟ್ರಿ ನೀಡಿವೆ.
ಗ್ರೀನ್ ಸಿಗ್ನಲ್ ನೀಡುವ ಹಸಿರು ಬಣ್ಣದ ಔಟ್‌ಫಿಟ್ಸ್
ನಿಮಗೆ ಗೊತ್ತೇ! ನಿಮ್ಮ ಗ್ರೀನ್ ಉಡುಪು ನೇರವಾಗಿ ಗ್ರೀನ್ ಸಿಗ್ನಲ್ ತೋರಿಸಿದಂತೆ. ನಿಮ್ಮನ್ನು ಪ್ರಪೋಸ್ ಮಾಡಬೇಕೆಂದುಕೊಂಡಿದ್ದವರಿಗೆ ಗ್ರೀನ್ ಸಿಗ್ನಲ್ ನೀಡಿದಂತೆ. ಇದಕ್ಕೆ ಸಾಥ್ ನೀಡಲು ಈಗಾಗಲೇ ಗ್ರೀನ್ ಕುರ್ತಾ, ಗ್ರೀನ್ ಕೋಲ್ಡ್ ಶೋಲ್ಡರ್ ಟಾಪ್ ಹಾಗೂ ಫ್ರಾಕ್, ಮಾನೋಕ್ರೋಮ್ ಜಂಪ್‌ಸೂಟ್, ಪಲ್ಹಾಜೊ, ಹಾಲ್ಟರ್ ನೆಕ್ ಟಾಪ್‌ಗಳು ಬಿಡುಗಡೆಗೊಂಡಿವೆ.
ವೈಬ್ರೆಂಟ್ ಕೇಸರಿ ವರ್ಣದ ಡಿಸೈನರ್‌ವೇರ್ಸ್
ವ್ಯಾಲೆಂಟೈನ್ಸ್ ಡೇ ಡ್ರೆಸ್‌ಕೋಡ್ ಕಲರ್ ಎಕ್ಸ್ಪರ್ಟ್ ಪ್ರಕಾರ, ಕೇಸರಿ ಬಣ್ಣ,ನೀವು ಪ್ರಪೋಸ್ ಮಾಡಲು ಹೋಗುತ್ತಿದ್ದೀರಾ ಎಂಬುದನ್ನು ಸೂಚಿಸುತ್ತವಂತೆ. ಕೇಸರಿಯಲ್ಲಿ ಈ ಮೊದಲು ಕೇವಲ ಟ್ರೆಡಿಷನಲ್‌ವೇರ್‌ಗಳು ಮಾತ್ರ ಬಿಡುಗಡೆಗೊಳ್ಳುತ್ತಿದ್ದವು. ಇದೀಗ ಈ ವರ್ಣದಲ್ಲಿ ಲೈಟ್ ಕಲರ್ ಹಾಗೂ ಮಿಕ್ಸ್ ಕಾಂಬಿನೇಷನ್ ವರ್ಣದಲ್ಲಿ ಸಾಕಷ್ಟು ವೆಸ್ಟರ್ನ್ವೇರ್‌ಗಳು ಲಭ್ಯ. ಪ್ಯಾಂಟ್ ಟಾಪ್‌ಗಳು ಹಾಗೂ ಪ್ಯಾಂಟ್‌ಸೂಟ್‌ಗಳು ಪ್ರಚಲಿತದಲ್ಲಿವೆ.
ಗುಲಾಬಿ ವರ್ಣದ ಮಾಯೆ
ನೀವು ಗುಲಾಬಿ ಶೇಡ್‌ನ ಉಡುಪಿನಲ್ಲಿದ್ದೀರಾ ಎಂದರೇ, ಈಗಷ್ಟೇ ಲವ್ ಪ್ರಪೋಸನ್ನು ಸ್ವೀಕರಿಸಿದ್ದೀರಿ ಎಂದರ್ಥ ಎಂಬುದುನ್ನು ಸೂಚಿಸುತ್ತದಂತೆ. ಈ ವರ್ಣದಲ್ಲಿ ಊಹೆಗೂ ಮೀರಿದ ಸಾಕಷ್ಟು ವೆಸ್ಟರ್ನ್ ಹಾಗೂ ಸೆಮಿ ಎಥ್ನಿಕ್ ಔಟ್‌ಫಿಟ್‌ಗಳು ದೊರೆಯುತ್ತಿವೆ. ತಿಳಿ ಗುಲಾಬಿ ಎಂದೂ ಔಟ್‌ಡೇಟ್ ಆಗದ ಕಲರ್.
ಬೂದು ಬಣ್ಣದ ಡಿಸೈನರ್‌ವೇರ್ಸ್
ಈ ಗ್ರೇ ಬಣ್ಣವು ನನಗೆ ಆಸಕ್ತಿಯಿಲ್ಲಎಂಬುದನ್ನು ಸೂಚಿಸುತ್ತದಂತೆ. ಬೂದು ಬಣ್ಣದ ಜಾಕೆಟ್ ಹಾಗೂ ಡೆನೀಮ್ ಜಾಕೆಟ್‌ಗಳು ಲಭ್ಯ. ಪ್ಯಾಂಟ್‌ಗಳು ಕೂಡ ಈ ವರ್ಣದಲ್ಲಿ ಆಗಮಿಸಿವೆ. ಇನ್ನುಬೂದು ಬಣ್ಣದ ಕುರ್ತಾಗಳು ಫ್ಲೋರಲ್ ಪ್ರಿಂಟ್‌ನಲ್ಲಿ ಬಂದಿವೆ.
ಆಕರ್ಷಕ ರೆಡ್ ಡಿಸೈನರ್‌ವೇರ್
ನಾನಾ ಬಗೆಯ ರೆಡ್ ಬಣ್ಣ ಈಗಾಗಲೇ ಎಂಗೇಜ್ ಆಗಿದ್ದೇನೆ ಎಂಬುದನ್ನು ಸೂಚಿಸುತ್ತದಂತೆ. ಅಂದಹಾಗೆ, ಈ ವರ್ಣದ ವ್ಯಾಲೆಂಟೈನ್ಸ್ ಡೇ ಕಲರ್ ಕೋಡ್ ಕೂಡ ಇದಾಗಿದೆ. ಇದಕ್ಕೆ ಪೂರಕ ಎಂಬಂತೆ, ಲೆಕ್ಕವಿಲ್ಲದಷ್ಟು ಬಗೆಯ ರೆಡ್ ಗೌನ್, ಫ್ರಾಕ್, ಮ್ಯಾಕ್ಸಿ, ಬಾಡಿಕಾನ್ ಡ್ರೆಸ್ ಸೇರಿದಂತೆ ನಾನಾ ಬಗೆಯ ಡಿಸೈನರ್‌ವೇರ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ.
ಹಾಗಾದಲ್ಲಿ, ನೀವು ಪ್ರೇಮಿಗಳ ದಿನಾಚರಣೆಯ ದಿನ ಧರಿಸುವ ಉಡುಪುಗಳ ಬಣ್ಣ ಹಾಗೂ ಶೇಡ್ಸನ್ನು ಗಮನದಲ್ಲಿಟ್ಟುಕೊಂಡು ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Valentines Week Fashion: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾದ 3 ಥೀಮ್ ಔಟ್‌ಫಿಟ್ಸ್