ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ಡೇಯಂದು ನಿಮ್ಮ ಸಂಗಾತಿಯೊಂದಿಗೆ ಕ್ಯಾಂಡಲ್ ಲೈಟ್ ಡಿನ್ನರ್ ಪಾರ್ಟಿಗೆ ಹೋಗುತ್ತೀದ್ದೀರಾ! ಪ್ರೇಮಿಯೊಂದಿಗೆ ಪಾರ್ಟಿ ಅಟೆಂಡ್ ಮಾಡುತ್ತಿದ್ದೀರಾ! ಹಾಗಾದಲ್ಲಿ ಈ ಸಂದರ್ಭಕ್ಕೆ ಮ್ಯಾಚ್ ಆಗುವಂತೆ ನಿಮ್ಮ ಡ್ರೆಸ್‌ಕೋಡ್ ಹೀಗಿರಲಿ ಎನ್ನುತ್ತಿದ್ದಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ೫ ಸಿಂಪಲ್ ಔಟ್‌ಫಿಟ್ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ.
1. ಥೀಮ್‌ಗೆ ತಕ್ಕ ಪಾರ್ಟಿವೇರ್ಸ್
ಯಾವ ಬಗೆಯ ಪಾರ್ಟಿಗೆ ಹೋಗುತ್ತಿದ್ದೀರಾ! ಅಲ್ಲಿನ ಥೀಮ್ ಯಾವುದು? ಯಾವ ವರ್ಗದ ಜನರು ಆಗಮಿಸುತ್ತಿದ್ದಾರೆ. ಇದಕ್ಕಾಗಿ ನಿಮಗೆ ಸೂಚಿಸಿರುವ ಔಟ್‌ಫಿಟ್ ಯಾವುದು? ಎಂಬುದರ ಬಗ್ಗೆ ಮೊದಲೇ ತಿಳಿದುಕೊಳ್ಳಿ. ಉದಾಹರಣೆಗೆ ರೆಟ್ರೋ ಲುಕ್, ೯೦ರ ದಶಕದ ಲುಕ್, ವೆಸ್ಟರ್ನ್ ಔಟ್‌ಫಿಟ್, ಸೆಮಿ ಎಥ್ನಿಕ್ ಸೇರಿದಂತೆ ನಾನಾ ಬಗೆಯ ಪಾರ್ಟಿ ಥೀಮ್‌ಗಳಿವೆ. ಅದಕ್ಕನುಸಾರವಾಗಿ ಉಡುಗೆ ಧರಿಸಿ. ಲೈಟಿಂಗ್ ಕಡಿಮೆ ಇರುವ ಪಾರ್ಟಿಯಾದಲ್ಲಿ ಶಿಮ್ಮರಿಂಗ್ ಔಟ್‌ಫಿಟ್ ಧರಿಸಿ.
2. ರೊಮ್ಯಾಂಟಿಕ್ ಡಿಸೈನರ್‌ವೇರ್ಸ್
ನೀವು ಹಾಗೂ ನಿಮ್ಮ ಸಂಗಾತಿ ಮಾತ್ರ ರೊಮ್ಯಾಂಟಿಕ್ ಡಿನ್ನರ್ ಪಾರ್ಟಿ ಮಾಡುತ್ತಿದ್ದಲ್ಲಿ, ನಿಮಗಿಷ್ಟವಾದ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ ಇಬ್ಬರೂ ಪ್ಯಾಂಟ್ ಸೂಟ್ ಧರಿಸಬಹುದು. ಟ್ವಿನ್ನಿಂಗ್ ಮಾಡಬಹುದು. ಇಲ್ಲವಾದಲ್ಲಿ ಹುಡುಗರು ಕ್ಯಾಶುವಲ್ ಹುಡುಗಿಯರು ವೆಸ್ಟರ್ನ್ ಔಟ್‌ಫಿಟ್ ಇಲ್ಲವೇ ಸೆಮಿ ಫಾರ್ಮಲ್ ಗೌನ್‌ಗಳನ್ನು ಧರಿಸಬಹುದು.
3. ಕಲರ್‌ಫುಲ್ ಡ್ರೆಸ್
ಪುರುಷರಾಗಲಿ ಅಥವಾ ಮಹಿಳೆಯರಾಗಲಿ ತಾವು ಧರಿಸುವ ಉಡುಪಿನ ಬಣ್ಣದ ಬಗ್ಗೆ ಅರಿವಿರಲಿ. ಒಂದೊಂದು ಬಣ್ಣದ ಔಟ್‌ಫಿಟ್‌ಗೂ ಅರ್ಥವಿರುವುದರಿಂದ ಅರಿತು ನಿಮ್ಮ ಸ್ಟೇಟಸ್‌ಗೆ ಮ್ಯಾಚ್ ಆಗುವಂತಹ ಡಿಸೈನರ್ ಔಟ್‌ಫಿಟ್ ಧರಿಸಿ. ಪ್ರಪೋಸ್ ಮಾಡುತ್ತಿದ್ದೀರಾ? ಮಾಡಿದ್ದೀರಾ, ರೆಡಿಯಿದ್ದೀರಾ?ಈಗಾಗಲೇ ಎಂಗೇಜ್ ಆಗಿದ್ದೀರಾ?ಮೊದಲು ಈ ಬಗ್ಗೆ ಯೋಚಿಸಿ, ಅದಕ್ಕೆ ಮ್ಯಾಚ್ ಆಗುವಂತಹ ಕಲರ್‌ನ ಔಟ್‌ಫಿಟ್ ಆಯ್ಕೆ ಮಾಡಿ.
4. ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಕಪಲ್ ಡ್ರೆಸ್
ಈ ಸನ್ನಿವೇಶಕ್ಕೆ ಆದಷ್ಟೂ ಮನಮೋಹಕ ಉಡುಪನ್ನು ಸೆಲೆಕ್ಟ್ ಮಾಡಿ. ನಿಮ್ಮ ಸಂಗಾತಿಗೆ ಇಷ್ಟವಾಗುವಂತಿರಬೇಕು. ಇದೀಗ ಟ್ರೆಂಡ್‌ನಲ್ಲಿರುವ ಲಾಂಗ್ ಸ್ಕಿಟ್ ಗೌನ್, ಲಾಂಗ್ ಫ್ರಾಕ್, ಅಷ್ಟೇಕೆ? ಸೆಮಿ ಎಥ್ನಿಕ್ ಲುಕ್ ನೀಡುವಂತಹ ಔಟ್‌ಫಿಟ್ಸ್, ಇಂಡೋ-ವೆಸ್ಟರ್ನ್ ಕಾಕ್‌ಟೈಲ್ ಸೀರೆಯನ್ನೂ ಧರಿಸಬಹುದು. ಪುರುಷರಾದಲ್ಲಿ ಪ್ಯಾಂಟ್ ಸೂಟ್, ಬ್ಲೇಝರ್ ಅಥವಾ ಸೆಮಿ ಕ್ಯಾಶುವಲ್ ಔಟ್‌ಫಿಟ್‌ಗೆ ಮೊರೆ ಹೋಗಬಹುದು. ಅಲ್ಲದೇ ಕಪಲ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳಬಹುದು.
5. ಕ್ಲಾಸಿಕ್ ಲುಕ್ ನೀಡುವ ಔಟ್‌ಫಿಟ್ಸ್
ಕ್ಲಾಸಿಕ್ ಲುಕ್ ನೀಡುವಂತಹ ಔಟ್‌ಫಿಟ್‌ಗಳಲ್ಲಿ ಫಂಕಿ ಲುಕ್‌ಗೆ ಜಾಗವಿಲ್ಲ. ಹಾಗಾಗಿ ತೋರಿಕೆಗಿಂತ ಹೆಚ್ಚಾಗಿ ಪುರುಷರಿಗೆ ಡಿಸೆಂಟ್ ಲುಕ್ ನೀಡುವ ಸೆಮಿ ಫಾರ್ಮಲ್ ಪ್ಯಾಂಟ್ ಹಾಗೂ ಸ್ಲಿಮ್ ಫಿಟ್ ಇನ್ಶರ್ಟ್ ಮಾಡಿದ ಶರ್ಟ್ ಎಲಿಗೆಂಟ್ ಲುಕ್ ನೀಡುತ್ತದೆ. ಇನ್ನು ಯುವತಿಯರಿಗೆ ಆದಷ್ಟೂ ಇಂಡೋ –ವೆಸ್ಟರ್ನ್ ವೆಸ್ಟರ್ನ್ ಸ್ಕಟ್ರ್ಸ್, ಮ್ಯಾಕ್ಸಿ ಹಾಗೂ ಲಾಂಗ್ ಸ್ಲಿಟ್ ಗೌನ್‌ಗಳು ಚೆನ್ನಾಗಿ ಕಾಣುತ್ತವೆ.
ಪಾರ್ಟಿ ಡ್ರೆಸ್‌ಕೋಡ್‌ಗೆ ಸಿಂಪಲ್ ಮೇಕೋವರ್ ಟಿಪ್ಸ್
ಡ್ರೆಸ್‌ಕೋಡ್‌ಗೆ ತಕ್ಕಂತೆ ಹೇರ್‌ಸ್ಟೈಲ್ ಕೂಡ ಟ್ರೆಂಡಿಯಾಗಿರಬೇಕು.
ಟ್ರೆಡಿಷನಲ್ ಹಾಗೂ ವೆಸ್ಟರ್ನ್ವೇರ್ ಮಿಕ್ಸ್ ಮಾಡಬೇಡಿ.
ಪಾರ್ಟಿ ರೂಲ್ಸ್ ಬ್ರೇಕ್ ಮಾಡುವಂತಹ ಔಟ್‌ಫಿಟ್ಸ್ ಆಯ್ಕೆ ಬೇಡ.
ಮಿನಿಮಲ್ ಜ್ಯುವೆಲರಿ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Valentines Day Fashion: ವ್ಯಾಲೆಂಟೈನ್ಸ್ ಡೇ ಫ್ಯಾಷನ್‌ಗೆ ಲಗ್ಗೆ ಇಟ್ಟ ಹೃದಯಾಕಾರದ ಆಕ್ಸೆಸರೀಸ್