Site icon Vistara News

Rose day Fashion: ವ್ಯಾಲೆಂಟೈನ್ಸ್ ವೀಕ್‌ನ ಆರಂಭದಲ್ಲೆ ಲಗ್ಗೆಯಿಟ್ಟ ರೋಸ್‌ ಪ್ರಿಂಟೆಡ್‌ ಡಿಸೈನರ್‌ವೇರ್ಸ್

Rose day Fashion

Rose day Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

Rose Day 2023 Date: ವ್ಯಾಲೆಂಟೈನ್ಸ್‌ ವೀಕ್‌ ಆರಂಭಗೊಳ್ಳುತ್ತಿದೆ. ಫೆಬ್ರವರಿ ೭ ರೋಸ್ ಡೇ (Rose Day 2023 Date) ಎಂದೇ ಆಚರಿಸಲಾಗುತ್ತದೆ. ಪ್ರೇಮಿಗಳು ಒಬ್ಬರಿಗೊಬ್ಬರು ಗುಲಾಬಿ ನೀಡಿ ಶುಭಾಶಯ ಹೇಳಿಕೊಂಡರೆ, ಫ್ಯಾಷನ್‌ ಲೋಕದ ಪ್ರೇಮಿಗಳಿಗಾಗಿ ರೋಸ್‌ ಪ್ರಿಂಟ್ಸ್‌ ಇರುವ ಫ್ಯಾಷನ್‌ವೇರ್‌ ಹಾಗೂ ಆಕ್ಸೆಸರೀಸ್‌ಗಳನ್ನು ಬಿಡುಗಡೆಗೊಳಿಸಿದೆ. ಈ ಸೀಸನ್‌ನ ಟ್ರೆಂಡ್‌ ಲಿಸ್ಟ್‌ಗೆ ಸೇರಿರುವ ರೋಸ್‌ ಫ್ಯಾಷನ್‌ ಬಗ್ಗೆ ಇಲ್ಲಿದೆ ವರದಿ.

ಆಕರ್ಷಕ ರೋಸ್‌ ಪ್ರಿಂಟೆಡ್‌ ಡ್ರೆಸ್‌ಗಳು

ನಾನಾ ಬಗೆಯ ಚಿಕ್ಕ-ದೊಡ್ಡ ಗುಲಾಬಿ ಹೂಗಳ ಪ್ರಿಂಟ್ಸ್‌ ಇರುವ ಬಗೆಬಗೆಯ ಮಿಡಿ, ಫ್ರಾಕ್‌, ಮ್ಯಾಕ್ಸಿಗಳು ಈ ಸೀಸನ್‌ಗೆ ಎಂಟ್ರಿ ನೀಡಿವೆ. ನೋಡಲು ಮನಮೋಹಕವೆನಿಸುವಂತಹ ಪ್ರಿಂಟ್ಸ್‌, ವೈಟ್‌ ಅಥವಾ ಬ್ಯಾಕ್‌ ಗ್ರೌಂಡ್‌ ಪ್ರಿಂಟ್ಸ್‌ ಇರುವಂತವು ಹೆಚ್ಚು ಪ್ರಚಲಿತದಲ್ಲಿವೆ. ಮಂಡಿವರೆಗಿನ ಫ್ರಾಕ್‌, ಉದ್ದನೆಯ ಸ್ಕರ್ಟ್, ಮಿಡಿ, ಮಿನಿ, ಶಿಫ್ಟ್‌ ಫ್ರಾಕ್ಸ್, ಕಾಕ್‌ಟೇಲ್‌ ಫ್ರಾಕ್ಸ್‌ ಈಗಾಗಲೇ ಟಿನೇಜ್‌ ಹುಡುಗಿಯರನ್ನು ಸೆಳೆದಿವೆ ಎನ್ನುತ್ತಾರೆ ಡಿಸೈನರ್‌ ರಿಷಿಕೇಶ್‌. ಇನ್ನು ಗೌನ್‌ನಂತೆ ಕಾಣುವ ರೋಸ್‌ ಪ್ರಿಂಟ್‌ನ ಹಾಲ್ಟರ್‌ ನೆಕ್‌ ಹಾಗೂ ಕೋಲ್ಡ್‌ ಶೋಲ್ಡರ್‌, ಫ್ರಿಲ್‌ ನೆಕ್‌ಲೈನ್‌ನ ಲಾಂಗ್‌ ಮ್ಯಾಕ್ಸಿ ವ್ಯಾಲೆಂಟೇನ್ಸ್‌ ವೀಕ್‌ನ ಲಂಚ್‌-ಬ್ರಂಚ್‌, ಬೀಚ್‌ ಪಾರ್ಟಿಗೆ ಸೂಟ್‌ ಆಗುತ್ತವೆ ಎನ್ನುತ್ತಾರೆ.

ರೋಸ್‌ ಪ್ರಿಂಟೆಡ್‌ ಕ್ಯಾಶುವಲ್‌ವೇರ್ಸ್

ಒಂದಕ್ಕಿಂತ ಒಂದು ವಿಭಿನ್ನ ರೀತಿಯ ಪ್ಯಾಂಟ್‌ ಹಾಗೂ ಸ್ಕರ್ಟ್ ಟಾಪ್‌ಗಳಲ್ಲಿ ಕ್ಯಾನ್‌ವಾಸ್‌ ಚಿತ್ರದಂತೆ ಮೂಡಿರುವ ಡಿಸೈನ್‌ಗಳು ಕಾಲೇಜು ಹುಡುಗಿಯರಿಗೆ ಪ್ರಿಯವಾಗಿವೆ. ಕೊಂಚ ಹಸಿರು ಗಿಡ ಹಾಗೂ ಎಲೆಗಳ ಮಧ್ಯೆ ಇತರೇ ಹೂವುಗಳನ್ನು ಅಲಂಕಾರಕ್ಕೆ ಜೋಡಿಸಿದಂತಿರುವ ರೋಸ್‌ ಬೊಕ್ಕೆಯಂತಹ ಪ್ರಿಂಟ್ಸ್‌ನಂತವು ಕಾರ್ಪೋರೇಟ್‌ ಕ್ಷೇತ್ರದ ಮಾನನಿಯರ ವಾರ್ಡ್ರೋಬ್‌ ಸೇರುತ್ತಿವೆ. ಇವುಗಳಲ್ಲಿ ಕ್ಯಾಶುವಲ್‌ ಲುಕ್‌ಗೆ ಸಾಥ್‌ ನೀಡುವ ಕ್ರಾಪ್‌ ಟಾಪ್‌ಗಳು ತೀರಾ ಕಾಮನ್‌ ಆಗಿದ್ದು, ಸ್ಟೈಲಿಶ್‌ ವೀಕೆಂಡ್‌ ಡ್ರೆಸ್‌ಕೋಡ್‌ ಲಿಸ್ಟ್‌ಗೆ ಸೇರಿವೆ. ಟ್ರಾವೆಲ್‌, ಪಿಕ್‌ನಿಕ್‌ನಂತಹ ಸಂದರ್ಭಗಳಿಗೂ ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್.

ಮೆನ್ಸ್‌ ರೋಸ್‌ವೇರ್ಸ್

ಅಂದಹಾಗೆ, ಮೆನ್ಸ್‌ ಫ್ಯಾಷನ್‌ನಲ್ಲಿ ಹೆಚ್ಚು ರೋಸ್‌ ಪ್ರಿಂಟ್ಸ್‌ ಫ್ಯಾಷನ್‌ಗೆ ಅವಕಾಶವಿಲ್ಲದಿದ್ದರೂ ಒಂದಿಷ್ಟು ಪ್ರಿಂಟ್ಸ್‌ ಇರುವ ಟೀ ಶರ್ಟ್ ಹಾಗೂ ಫಂಕಿ ಲುಕ್‌ ನೀಡುವ ಶರ್ಟ್‌ಗಳು ಎಂಟ್ರಿ ನೀಡಿವೆ. ಆದರೆ, ಹೆಚ್ಚು ಅಪ್ಷನ್‌ಗಳಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ರೋಸ್‌ ಆ್ಯಕ್ಸೆಸರೀಸ್‌

ಇನ್ನು ವ್ಯಾಲೇಂಟೇನ್ಸ್‌ ಡೇಗೆ ವಿಶೇಷವಾಗಿ ಈಗಾಗಲೇ ನಾನಾ ಬಗೆಯ ಫಂಕಿ ರೋಸ್‌ ಉಂಗುರಗಳು, ಅಂಗೈ ಅಗಲದ ಕೃತಕ ಗುಲಾಬಿ ಹೆಡ್‌ಬ್ಯಾಂಡ್‌ಗಳು, ಫ್ಲೋರಲ್‌ ಚೋಕರ್‌ಗಳು, ಬ್ರೇಸ್‌ಲೆಟ್‌ಗಳು, ಹೇರ್‌ಪಿನ್ಸ್‌, ಇಯರಿಂಗ್ಸ್‌, ಬ್ರೋಚ್‌ಗಳು ಸೇರಿದಂತೆ ನಾನಾ ಆಕ್ಸೆಸರೀಸ್‌ಗಳು ಲಗ್ಗೆ ಇಟ್ಟಿವೆ.

ರೋಸ್‌ ಪ್ರಿಂಟ್ಸ್‌ ಡಿಸೈನರ್‌ವೇರ್ಸ್ ಪ್ರಿಯರಿಗಾಗಿ ಸಲಹೆಗಳು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ಸ್ಟೈಲಿಶ್‌ ಕಿರುತೆರೆ ನಟಿ ದೀಪಿಕಾ ದಾಸ್‌ ಬಿಂದಾಸ್‌ ಫ್ಯಾಷನ್‌ಗೆ ಅಭಿಮಾನಿಗಳು ಫಿದಾ

FAQʼs

1. ರೋಸ್ ಡೇ ಯಾವಾಗ

ans: ಫೆಬ್ರವರಿ 7

2. ರೋಸ್ ಡೇ ಮಹತ್ವವೇನು?

ans: ವ್ಯಾಲೆಂಟೈನ್ಸ್ ವೀಕ್ ವಾರ್ಷಿಕವಾಗಿ ಫೆಬ್ರವರಿ 7 ರಂದು ಮಂಗಳವಾರ “ಗುಲಾಬಿ ದಿನ” (rose day) ದೊಂದಿಗೆ ಪ್ರಾರಂಭವಾಗುತ್ತದೆ. ಈ ದಿನದಂದು, ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರ ಕಡೆಗೆ ತಮ್ಮ ಪ್ರೀತಿ ಮತ್ತು ಮೆಚ್ಚುಗೆಯನ್ನು ವಿವಿಧ ಬಣ್ಣಗಳ ಗುಲಾಬಿಗಳನ್ನು ನೀಡುವ ಮೂಲಕ ವ್ಯಕ್ತಪಡಿಸುತ್ತಾರೆ. ವ್ಯಕ್ತಿಗಳು ತಮ್ಮ ಪ್ರೀತಿಪಾತ್ರರನ್ನು ಅವರು ಎಷ್ಟು ವಿಶೇಷವಾಗಿದ್ದಾರೆ ಎಂಬುದನ್ನು ತೋರಿಸಲು ಇದು ಒಂದು ಪ್ರಮುಖ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.

3. ಗುಲಾಬಿ ದಿನಕ್ಕೆ ಯಾವ ಉಡುಗೊರೆ ಉತ್ತಮವಾಗಿದೆ?

Ans: ಹೂಗಳು, ಮಿಶ್ರ ಹೂವುಗಳು, ಗುಲಾಬಿಗಳು, ಕಾರ್ನೇಷನ್‌ಗಳು.

Exit mobile version