ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನ ಎರಡನೇ ದಿನವಾದ ಪ್ರಪೋಸ್ ಡೇಯಂದು (propose day 2023) ಸ್ಟೈಲಿಸ್ಟ್‌ಗಳು ಪ್ರೇಮಿಗಳಿಗಾಗಿ ಹೊಸ ಡ್ರೆಸ್‌ಕೋಡ್ ರೂಲ್ಸ್ ಪರಿಚಯಿಸಿದ್ದಾರೆ. ಯಾವುದೇ ಯುವಕ/ಯುವತಿ ಪ್ರಪೋಸ್ ಮಾಡುವಾಗ ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಹಾಗೂ ಹಾಗೂ ಕಾರ್ಯನಿರ್ವಹಿಸುವ ಕ್ಷೇತ್ರಕ್ಕೆ ತಕ್ಕಂತೆ ಡ್ರೆಸ್‌ಕೋಡ್ ರೂಲ್ಸ್ ಫಾಲೋ ಮಾಡಬೇಕು. ಆಗಷ್ಟೇ ಅದಕ್ಕೆ ಒಂದು ಬೆಲೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರು ಪ್ರಪೋಸ್ ಮಾಡುವ ಹಾಗೂ ಮಾಡಲು ಬಯಸಿರುವ ಪ್ರೇಮಿಗಳಿಗಾಗಿ ಒಂದಿಷ್ಟು ಸಿಂಪಲ್ ಡ್ರೆಸ್‌ಕೋಡ್ ರೂಲ್ಸ್ ನೀಡಿದ್ದಾರೆ.
ವ್ಯಕ್ತಿತ್ವಕ್ಕೆ ತಕ್ಕಂತಿರಲಿ ಡ್ರೆಸ್‌ಕೋಡ್
ಯುವಕ/ಯುವತಿಯಾಗಲಿ ಅವರವರ ವ್ಯಕ್ತಿತ್ವಕ್ಕೆ ಡ್ರೆಸ್‌ಕೋಡ್ ಮ್ಯಾಚ್ ಆಗಬೇಕು. ಉದಾಹರಣೆಗೆ., ಕಾಲೇಜು ಹುಡುಗರಾದಲ್ಲಿ, ಫಂಕಿ ಲುಕ್ ಓಕೆ. ಅದೇ ಕಾರ್ಪೋರೇಟ್ ಕಂಪನಿಯ ಮ್ಯಾನೇಜರ್ ಪ್ರಪೋಸ್ ಡೇ ಲುಕ್ ಆದಲ್ಲಿ, ಅದು ಅವರ ಪ್ರೊಫೆಷನ್‌ಗೆ ಹೊಂದುವಂತಿರಬೇಕು. ಫಾರ್ಮಲ್ಸ್ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ಇದು ಅವರವರ ಐಡೆಂಟಿಟಿಗೆ ಮ್ಯಾಚ್ ಆಗುವಂತಿರಬೇಕು. ತೋರಿಕೆಗಾಗಿ ಲುಕ್ ಬದಲಿಸಬಾರದು.
ಸಂದರ್ಭಕ್ಕೆ ಮ್ಯಾಚ್ ಆಗುವಂತಿರಲಿ
ಪ್ರಪೋಸ್ ಮಾಡುವ ಸ್ಥಳಕ್ಕೂ ನಿಮ್ಮ ಡ್ರೆಸ್‌ಕೋಡ್ ಮ್ಯಾಚ್ ಆಗುವಂತಿರಬೇಕು. ಉದಾಹರಣೆಗೆ., ದೊಡ್ಡ ಹೋಟೆಲ್‌ನಲ್ಲಿ ನಡೆಯುವ ಪಾರ್ಟಿಯಲ್ಲಾದಲ್ಲಿ ಅಲ್ಲಿನ ನಿಬಂಧನೆಗೆ ಒಳಪಟ್ಟ ಡ್ರೆಸ್‌ಕೋಡ್ ಧರಿಸಬೇಕಾಗುತ್ತದೆ. ಇನ್ನು ಬೀಚ್ ಸೈಡ್‌ಗಾದಲ್ಲಿ ಫಂಕಿ ಲುಕ್ ಓಕೆ. ಇನ್ನು ಸಾರ್ವಜನಿಕ ಸ್ಥಳವಾದಲ್ಲಿ ಡೀಸೆಂಟ್ ಉಡುಪು ನಿಮ್ಮದಾಗಿರಬೇಕು. ಸುತ್ತಮುತ್ತಲಿನವರಿಗೆ ಅಭಾಸ ಉಂಟು ಮಾಡುವಂತಿರಬಾರದು.
ಯುವಕರ ಡ್ರೆಸ್‌ಕೋಡ್
ವ್ಯಾಲೆಂಟೈನ್ ವೀಕ್‌ನಲ್ಲಿ ಪ್ರಪೋಸ್ ಮಾಡಲು ಬಯಸುವ ಯುವಕರಿಗಾಗಿ ಸಾಕಷ್ಟು ಟ್ರೆಂಡಿ ಔಟ್‌ಫಿಟ್‌ಗಳು ಕಾಲಿಟ್ಟಿವೆ. ಇವುಗಳಲ್ಲಿ ಫಾರ್ಮಲ್ಸ್ ಕೂಡ ಸೇರಿದೆ. ಇನ್ನು ಬಿಂದಾಸ್ ಕಾಲೇಜು ಹುಡುಗರಾದಲ್ಲಿ ಎಂದಿನಂತೆ ಟೀ-ಶಟ್ರ್ಸ್ ಹಾಗೂ ಟೋರ್ನ್ ಜೀನ್ಸ್‌ನಲ್ಲೆ ನಾನಾ ಶೈಲಿಯವು ಬಿಡುಗಡೆಗೊಂಡಿವೆ. ಉದ್ಯೋಗಸ್ಥ ಪುರುಷರಿಗೆಂದೇ ಲೆಕ್ಕವಿಲ್ಲದಷ್ಟು ಬಗೆಯ ಫಾರ್ಮಲ್ ಉಡುಪುಗಳು ಆಗಮಿಸಿವೆ. ಇವನ್ನು ಆಯ್ಕೆ ಮಾಡಬಹುದು. ಮುಂಚಿನಂತೆ ಪ್ರಪೋಸ್ ಮಾಡುವವರು ಆರೆಂಜ್ ವರ್ಣವನ್ನೇ ಧರಿಸಬೇಕೆಂಬ ನಿಯಮವೇನೂ ಇಲ್ಲ! ಬೇಕಿದ್ದಲ್ಲಿ ಧರಿಸಬಹುದು ಎನ್ನುತ್ತಾರೆ ಮಾಡೆಲ್ ಹರ್ಷ್.
ಯುವತಿಯರ ಡ್ರೆಸ್‌ಕೋಡ್
ಇನ್ನು ಯುವತಿಯರಿಗೆ ವ್ಯಾಲೆಂಟೈನ್ ಡ್ರೆಸ್‌ಕೋಡ್‌ನಲ್ಲಿ ಸಾಕಷ್ಟು ಆಪ್ಷನ್‌ಗಳಿವೆ. ವೆಸ್ಟರ್ನ್ವೇರ್‌ನಲ್ಲಿ ಈ ಸೀಸನ್‌ಗೆಂದೇ ಬಗೆಬಗೆಯವು ಕಾಲಿಟ್ಟಿವೆ. ಆದರೆ, ಒಂದು ನೆನಪಿರಲಿ ನೀವು ಪ್ರಪೋಸ್ ಮಾಡಬೇಕೆಂದಿರುವ ಅಥವಾ ನಿಮ್ಮ ಪ್ರೇಮಿಗೆ ಇಷ್ಟವಾಗುವಂತಹ ಔಟ್‌ಫಿಟ್ ಚೂಸ್ ಮಾಡುವುದು ಉತ್ತಮ.
ಡ್ರೆಸ್‌ಕೋಡ್ ಆಯ್ಕೆಗೂ ಮುನ್ನ ಗಮನದಲ್ಲಿರಲಿ
ಆದಷ್ಟೂ ಇಬ್ಬರದು ಒಂದೇ ಅಭಿರುಚಿವುಳ್ಳ ಡ್ರೆಸ್‌ಕೋಡ್ ಆದಲ್ಲಿ ಉತ್ತಮ.
ತೀರಾ ಟ್ರೆಡಿಷನಲ್‌ವೇರ್ ಈ ಸಂದರ್ಭಕ್ಕೆ ಮ್ಯಾಚ್ ಆಗದು.
ಗ್ಲಾಮರ್ ಹೆಸರಲ್ಲಿ ಎಕ್ಸ್ಪೋಸ್ ಮಾಡುವಂತಿರಬಾರದು.
ನಿಮ್ಮ ಸಭ್ಯ ಉಡುಪು ಕೂಡ ಪ್ರೇಮ ನಿವೇದನೆ ಒಪ್ಪಿಕೊಳ್ಳಲು ಸಹಾಯವಾಗಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Rose day Fashion: ವ್ಯಾಲೆಂಟೈನ್ಸ್ ವೀಕ್‌ನ ಆರಂಭದಲ್ಲೆ ಲಗ್ಗೆಯಿಟ್ಟ ರೋಸ್ ಪ್ರಿಂಟೆಡ್ ಡಿಸೈನರ್‌ವೇರ್ಸ್
FAQʼs
1. ಪ್ರಪೋಸ್ ಡೇಗೆ ಯಾವ ದಿನ ಉತ್ತಮ?
Ans: 8 ಫೆಬ್ರವರಿ
2. ಪ್ರಪೋಸ್ ದಿನದಂದು ಹುಡುಗಿ ಏನು ಮಾಡಬೇಕು?
Ans: ಬೆಚ್ಚಗಿನ ಮಣ್ಣಿನ ಸ್ನಾನ ಮತ್ತು ಬಿಸಿ ಕಲ್ಲಿನ ಮಸಾಜ್‌ನಂತಹ ಹಿತವಾದ ಚಿಕಿತ್ಸೆಗಳಲ್ಲಿ ತೊಡಗಿಸಿಕೊಂಡು ದಿನವನ್ನು ಒಟ್ಟಿಗೆ ಕಳೆಯಿರಿ.
3. ಪ್ರಪೋಸ್ ಡೇ ಪ್ರಾಮುಖ್ಯತೆ ಏನು?
Ans: ಪ್ರಪೋಸ್ ಡೇ ದಿನದಂದು, ನಿಮ್ಮ ಭಾವನೆಗಳನ್ನು ಯಾರಿಗಾದರೂ ವ್ಯಕ್ತಪಡಿಸಬೇಕು ಮತ್ತು ಅವರ ಒಪ್ಪಿಗೆಯನ್ನು ಕೇಳಬೇಕು. ಪ್ರಪೋಸ್ ಡೇ 2023 ರಂದು ನಿಮ್ಮ ಸಂಗಾತಿಗೆ ವಿಶೇಷ ಮತ್ತು ಮೌಲ್ಯಯುತ ಭಾವನೆ ಮೂಡಿಸಬೇಕು.