ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಪಾಗೆ ಹೋಗದೇ (Sheet Mask beauty trend) ಮನೆಯಲ್ಲೆ ಕುಳಿತು ಬ್ಯೂಟಿ ಹೆಚ್ಚಿಸಿಕೊಳ್ಳುವ ಬಗೆಬಗೆಯ ಇನ್‌ಸ್ಟಂಟ್ ಶೀಟ್ ಮಾಸ್ಕ್‌ಗಳು ಬ್ಯೂಟಿಲೋಕಕ್ಕೆ ಕಾಲಿಟ್ಟಿವೆ. ಹೆಚ್ಚು ತಲೆಬಿಸಿಯಿಲ್ಲದೇ ಹಾಕಿ ತೆಗೆಯಬಹುದಾದ ಇವು ಸದ್ಯಕ್ಕೆ ಬ್ಯೂಟಿ ಟ್ರೆಂಡ್‌ನಲ್ಲಿ ಟಾಪ್‌ನಲ್ಲಿವೆ.
ಚಾಲ್ತಿಯಲ್ಲಿರುವ ಶೀಟ್ ಮಾಸ್ಕ್ಸ್
ಮೊದಲೆಲ್ಲಾ ಕೇವಲ ಸ್ಪಾಗಳಲ್ಲಿ ಲಭ್ಯವಿದ್ದ ಶೀಟ್ ಮಾಸ್ಕ್‌ಗಳು ಇದೀಗ ಕೈಗೆಟಕುವ ಬೆಲೆಯಲ್ಲಿ ಲಭ್ಯ. ಸಾಮಾನ್ಯ ಹುಡುಗಿಯು ಬಳಸುವ ಸ್ಯಾಚೆಟ್‌ಗಳಲ್ಲಿ ದೊರೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಬ್ರೈಟ್ ಸ್ಕಿನ್, ಗ್ಲೋಯಿಂಗ್ ಸ್ಕಿನ್, ಇನ್‌ಸ್ಟಂಟ್ ಬ್ಯೂಟಿ, ಕೊರಿಯನ್ ಶೀಟ್ ಮಾಸ್ಕ್ ಸೇರಿದಂತೆ ನಾನಾ ಸ್ಕಿನ್ ಟೋನ್‌ಗೆ ಸೂಟ್ ಆಗುವಂತಹ ಶೀಟ್ ಮಸ್ಕ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಟಾಪ್ ಬ್ರಾಂಡ್‌ಗಳು ಸೇರಿದಂತೆ ದೇಸಿ ಬ್ರಾಂಡ್‌ಗಳಲ್ಲೂ ಲಭ್ಯವಿರುವ ಇವು ಸದ್ಯಕ್ಕೆ ಹಾಟ್ ಬ್ಯೂಟಿ ಟ್ರೆಂಡ್‌ನಲ್ಲಿದೆ ಎನ್ನುತ್ತಾರೆ ಸೌಂದರ್ಯ ತಜ್ಞೆ ರುಚಿತಾ. ಅವರ ಪ್ರಕಾರ, ಸೆಲ್ಫ್ ಬ್ಯೂಟಿ ಕೇರ್‌ಗೆ ಇದು ಹೇಳಿ ಮಾಡಿಸಿದಂತಿವೆ.
ಶೀಟ್ ಮಾಸ್ಕ್ ಬಳಸುವುದು ಹೇಗೆ?
ಶೀಟ್ ಮಾಸ್ಕ್ ಬಳಸಲು ಒಂದಿಷ್ಟು ಬ್ಯೂಟಿ ರೂಲ್ಸ್ ಇವೆ. ಇನ್ನು ಕೆಲವು ಶೀಟ್ ಮಾಸ್ಕ್‌ಗಳ ವ್ರಾಪರ್ ಮೇಲೆ ಮಾರ್ಗದರ್ಶನ ನೀಡಲಾಗಿರುತ್ತದೆ. ಅದರಂತೆ ಫಾಲೋ ಮಾಡಿದರಾಯಿತು. ಆದರೂ ಒಂದಿಷ್ಟು ಬೇಸಿಕ್ ತಿಳುವಳಿಕೆ ಇದ್ದಲ್ಲಿ ಆರಾಮವಾಗಿ ಬಳಸಬಹುದು. ಶೀಟ್ ಮಾಸ್ಕನ್ನು ಮುಖ ತೊಳೆದ ನಂತರ ಹಾಕಿಕೊಳ್ಳಬೇಕು. ರಿಲ್ಯಾಕ್ಸಿಂಗ್ ಆಗಿದ್ದಾಗ ಸುಮಾರು 15-20 ನಿಮಿಷದವರೆಗೆ ಇದನ್ನು ಹಾಕಿಕೊಳ್ಳಬಹುದು. ತೆಗೆದ ನಂತರ ಯಾವುದೇ ಕಾರಣಕ್ಕೂ ಸೋಪನ್ನು ಬಳಸಬಾರದು. ಬಳಸಿದ ಶೀಟ್ ಮಾಸ್ಕನ್ನು ಮರು ಬಳಕೆ ಮಾಡಬಾರದು ಎಂದು ಸಿಂಪಲ್ ಟಿಪ್ಸ್ ನೀಡುತ್ತಾರೆ ಸೌಂದರ್ಯ ತಜ್ಞರು.
ಕೆಮಿಕಲ್ ರಹಿತ ಶೀಟ್ ಮಾಸ್ಕ್‌ಗೆ ಆದ್ಯತೆ
ಶೀಟ್ ಮಾಸ್ಕ್ ಖರೀದಿಸುವಾಗ ಆದಷ್ಟೂ ಹರ್ಬಲ್ ಬ್ರಾಂಡ್‌ಗೆ ಆದ್ಯತೆ ನೀಡಿ. ಕೆಮಿಕಲ್ ಶೀಟ್ ಮಾಸ್ಕ್ ಆವಾಯ್ಡ್ ಮಾಡಿ. ಪದೇ ಪದೇ ಬ್ರಾಂಡ್ ಬದಲಿಸಬೇಡಿ. ಇದು ತ್ವಚೆಯ ಮೇಲೆ ಪರಿಣಾಮ ಉಂಟು ಮಾಡಬಹುದು.
ಶೀಟ್ ಮಾಸ್ಕ್ ಬಗ್ಗೆ ನೀವು ತಿಳಿದಿರಬೇಕಾದ್ದು
- ಪ್ಯಾಕೆಟ್ ಮೇಲೆ ನಮೂದಿಸಿರುವ ಡಿಟೇಲ್ಸ್ ಓದಿಕೊಳ್ಳಿ.
- ನಿಮ್ಮ ಸ್ಕಿನ್ಟೋನ್ಗೆ ತಕ್ಕಂತೆ ಮ್ಯಾಚ್ ಆಗುವಂತದ್ದನ್ನು ಬಳಸಿ.
- ಅಲರ್ಜಿಯಾದಲ್ಲಿ ಮುಂದುವರಿಸಬೇಡಿ.
- ನಿಗದಿತ ಸಮಯಕ್ಕೆ ರಿಮೂವ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Kids Twinning Fashion: ಮುದ್ದು ಮಕ್ಕಳ ಟ್ವಿನ್ನಿಂಗ್ ಫ್ಯಾಷನ್‌ಗೆ 5 ಸಿಂಪಲ್ ಸ್ಟೈಲಿಂಗ್ ರೂಲ್ಸ್