Site icon Vistara News

Vastu Tips: ನಿಮ್ಮ ಮನೆಯಲ್ಲಿ ಸಂತೋಷ ವೃದ್ಧಿಸಬೇಕೆ? ಈ ಸಲಹೆಗಳನ್ನು ಪಾಲಿಸಿ

Vastu Tips

ಮನೆ (home) ಎಂದರೆ ಎಲ್ಲರಿಗೂ ಪ್ರೀತಿ (love) ಇದ್ದೇ ಇರುತ್ತದೆ. ದಿನವಿಡೀ ಎಷ್ಟೇ ಸುತ್ತಿದರೂ ಅಲ್ಲಿ ಇಲ್ಲಿ ಎಂದು ವರ್ಷವಿಡೀ ಅಲೆದಾಡಿದರೂ ಮನಸ್ಸಿಗೆ ಸಂಪೂರ್ಣ ನೆಮ್ಮದಿ ಕೊಡುವ ತಾಣವೆಂದರೆ ಅದು ನಮ್ಮ ಮನೆ. ಪ್ರೀತಿ, ಸ್ನೇಹ (friendship), ಗೌರವ (respect) ಮನೆಯಲ್ಲಿ ನಮಗೆ ಸಿಗುವಷ್ಟು ಬೇರೆಲ್ಲೂ ಸಿಗುವುದಿಲ್ಲ. ಅಂತಹ ಮನೆಯಲ್ಲಿ ಸಂತೋಷದ ವಾತಾವರಣ ತುಂಬಿ ತುಳುಕಬೇಕಾದರೆ ಕೆಲವು ಸಲಹೆಗಳನ್ನು ನಾವು ಪಾಲಿಸಬೇಕು.

ಹೊಸದಾಗಿ ಮದುವೆಯಾದ ಅಥವಾ 50 ನೇ ವಾರ್ಷಿಕೋತ್ಸವವನ್ನು ಆಚರಿಸಲಿರುವ ದಂಪತಿಯ (couple) ನಡುವೆ ಪ್ರೀತಿ, ಹೊಂದಾಣಿಕೆ, ಗೌರವ ಇದ್ದರೆ ಮಾತ್ರ ಮನೆ ಶಾಂತಿ, ನೆಮ್ಮದಿಯ ತಾಣವಾಗುತ್ತದೆ. ಇದಕ್ಕಾಗಿ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬೇಕು. ಇದಕ್ಕಾಗಿ ವಾಸ್ತುವಿನಲ್ಲಿ ಹೇಳಿರುವ ಕೆಲವು ಸಲಹೆಗಳು ಇಂತಿವೆ.

ಗಾಳಿ ಬೆಳಕು

ಹೆಚ್ಚಿನ ಸಮಯ ಕಳೆಯುವ ಕೋಣೆ ಶಾಂತಿಯುತವಾಗಿರಬೇಕು. ಪೂರ್ವ, ಉತ್ತರ ಅಥವಾ ಈಶಾನ್ಯ ಮುಖದ ಕೋಣೆಯಲ್ಲಿ ಚೆನ್ನಾಗಿ ಬೆಳಕು ಬೀಳುವಂತಿರಬೇಕು. ದಕ್ಷಿಣ ಅಥವಾ ನೈಋತ್ಯ ಮೂಲೆಗಳಲ್ಲಿ ಮಂಚದಂತಹ ಭಾರವಾದ ಪೀಠೋಪಕರಣಗಳನ್ನು ಇರಿಸಿ. ಹಳದಿ, ಗುಲಾಬಿ ಬಣ್ಣ ಕೋಣೆಗೆ ಸೂಕ್ತ. ಪ್ರಕಾಶಮಾನವಾದ ಮತ್ತು ಸರಿಯಾಗಿ ಗಾಳಿಯಾಡುವ ಬಣ್ಣಗಳನ್ನೇ ಆಯ್ಕೆ ಮಾಡಿ. ಕೋಣೆಯ ಈಶಾನ್ಯ ಮೂಲೆಯಲ್ಲಿ ಸಣ್ಣ ಕಾರಂಜಿಯಂತಹ ನೀರನ್ನು ಇರಿಸಿ. ಇದು ಮನೆಯ ವಾಸ್ತುವಿಗೆ ಉತ್ತಮ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

Vastu Tips


ಚಿತ್ರಗಳು

ಮನಸ್ಸಿಗೆ ಶಾಂತಿ ನೀಡುವ ಚಿತ್ರಗಳನ್ನು ಆಯ್ದುಕೊಳ್ಳಿ. ಮಣ್ಣಿನ ಅಥವಾ ತಟಸ್ಥ ಛಾಯೆಗಳು ಗೋಡೆಯ ಬಣ್ಣಗಳಿಗೆ ಪರಿಪೂರ್ಣ ಆಯ್ಕೆಯಾಗಿರುತ್ತದೆ. ಅವು ಸಕಾರಾತ್ಮಕತೆಯನ್ನು ಹೊರಸೂಸುತ್ತವೆ. ನೈಋತ್ಯದಲ್ಲಿ ಮಲಗುವ ಕೋಣೆಗಳಿದ್ದರೆ ಇದು ಸೂಕ್ತ ಆಯ್ಕೆಯಾಗಿರುತ್ತದೆ.


ಬೆಂಕಿ

ಆಗ್ನೇಯ ದಿಕ್ಕು ಅಗ್ನಿ ಅಥವಾ ಬೆಂಕಿಗೆ ಸೂಕ್ತ. ಹೃದಯವನ್ನು ಗೆಲ್ಲಲ್ಲು ಸರಳ ಮಾರ್ಗವೆಂದರೆ ರುಚಿರುಚಿಯಾದ ಆಹಾರ. ಈ ದಿಕ್ಕಿನಲ್ಲಿ ಅಡುಗೆಮನೆ ಇದ್ದರೆ ಸಂತೋಷದ ದಾಂಪತ್ಯ ಜೀವನಕ್ಕೆ ಸೂಕ್ತ. ಅಡುಗೆಮನೆಯಲ್ಲಿ ಕೆಂಪು ಮತ್ತು ಕಿತ್ತಳೆ ಬಣ್ಣ ಉತ್ತಮ ವಾಸ್ತು. ಟಿನ್, ಕಂಟೈನರ್ ಗಳು, ಸಣ್ಣ ಅಲಂಕಾರಿಕ ವಸ್ತುಗಳನ್ನು ಕೆಂಪು ಬಣದಿಂದ ಅಲಂಕರಿಸಿ. ಇದು ಮನಸ್ಸಿಗೆ ಪಾಸಿಟಿವ್ ನೆಸ್ ತುಂಬುತ್ತದೆ.

ಊಟದ ಕೋಣೆ

ಸಂತೋಷದ ದಾಂಪತ್ಯ ಜೀವನಕ್ಕೆ ಊಟದ ಕೋಣೆಯಲ್ಲಿ ಸಾಮರಸ್ಯ ಅತ್ಯಗತ್ಯ. ಇಡೀ ಕುಟುಂಬಕ್ಕೆ ಕುಳಿತುಕೊಳ್ಳುವಷ್ಟು ದೊಡ್ಡದಾದ ಡೈನಿಂಗ್ ಟೇಬಲ್ ಅನ್ನು ಹೊಂದಿಸಿ. ಕೆಂಪು ಮತ್ತು ಕಿತ್ತಳೆ ಬಣ್ಣ ಸೂಕ್ತ. ಈ ಬಣ್ಣಗಳು ಮನೆಗಳಿಗೆ ಉತ್ತಮ ವಾಸ್ತು ಮಾತ್ರವಲ್ಲ, ಜನರ ಹಸಿವನ್ನು ಹೆಚ್ಚಿಸುತ್ತದೆ. ಇದಕ್ಕೆ ಪೂರಕವಾಗಿ ಹಸಿರು ಬಳಸಿ.


ಪ್ರಾರ್ಥನಾ ಕೋಣೆ

ಪ್ರಾರ್ಥನೆ ಅಥವಾ ಪೂಜಾ ಕೋಣೆ ಮನೆಗಳಿಗೆ ಧನಾತ್ಮಕ ಶಕ್ತಿ ಮತ್ತು ವಾಸ್ತುವನ್ನು ಖಾತ್ರಿಗೊಳಿಸುತ್ತದೆ. ನಿಮ್ಮ ವಿಗ್ರಹಗಳನ್ನು ಕೋಣೆಯ ಈಶಾನ್ಯ ಮೂಲೆಯಲ್ಲಿ, ಗೋಡೆಯಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ಇರಿಸಿ. ಪೂಜಾ ಕಲಶ, ಹೂವಿನ ನೀರಿನ ಬಟ್ಟಲುಗಳನ್ನು ಉತ್ತರಕ್ಕೆ ಇಡಬೇಕು. ಆದರೆ ದೀಪಗಳು ಆಗ್ನೇಯ ದಿಕ್ಕಿಗೆ ಮುಖ ಮಾಡಬೇಕು. ಧಾರ್ಮಿಕ ಪುಸ್ತಕಗಳು, ದೀಪಗಳು ಮತ್ತು ಇತರ ಪೂಜಾ-ಸಂಬಂಧಿತ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿರುವ ಡ್ರಾಯರ್ ಅಥವಾ ಕ್ಯಾಬಿನೆಟ್‌ನಲ್ಲಿ ಸಂಗ್ರಹಿಸಿ. ಆದರೆ ವಿಗ್ರಹಗಳ ಮೇಲೆ ಏನನ್ನೂ ಸಂಗ್ರಹಿಸಬಾರದು.

ಉದ್ಯಾನ

ಉದ್ಯಾನಗಳು ಮನೆಗಳಿಗೆ ಕೇವಲ ಧನಾತ್ಮಕ ವಾಸ್ತು ಅಲ್ಲ. ಹಸಿರು ಮನಸ್ಸಿಗೆ ಶಾಂತಿಯನ್ನು ಕೊಡುತ್ತದೆ. ಬೃಹತ್ ಮರಗಳು ಮನೆಯ ಪ್ರವೇಶದ್ವಾರದ ಮಾರ್ಗವನ್ನು ನಿರ್ಬಂಧಿಸದಿರಲಿ. ಉದ್ಯಾನದ ಗೋಡೆಯ ಪಕ್ಕದಲ್ಲಿ ಮರಗಳನ್ನು ನೆಡಬೇಕು. ದಕ್ಷಿಣ ಅಥವಾ ಆಗ್ನೇಯದಲ್ಲಿ ಸಣ್ಣ ಸಸ್ಯಗಳು, ಪೊದೆಗಳನ್ನು ಇರಿಸಿ. ಪವಿತ್ರ ತುಳಸಿ ಗಿಡವನ್ನು ಉದ್ಯಾನದ ಉತ್ತರ, ಈಶಾನ್ಯ ಅಥವಾ ಪೂರ್ವ ಭಾಗದಲ್ಲಿ ಮಾತ್ರ ಇರಿಸಬೇಕು.

ಮನೆಯ ಹೊರಾಂಗಣ ,ಮತ್ತು ಒಳಾಂಗಣ ವಿನ್ಯಾಸ, ರಚನೆಗಳಲ್ಲಿ ವಾಸ್ತು ವಿಧಾನಗಳನ್ನು ಅನುಸರಿಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ತುಂಬಿ ತುಳುಕುವುದು.

Exit mobile version