Site icon Vistara News

Vastu Tips : ಮನೆಯಲ್ಲಿ ಅಟ್ಯಾಚ್ ಬಾತ್‌ರೂಮ್ ಇದ್ದರೆ ಆರ್ಥಿಕ ನಷ್ಟ ತಪ್ಪಿಸಲು ಹೀಗೆ ಮಾಡಿ!

Vastu Tips vastu shastra rules for Attached Bathroom and Toilet in kannada

#image_title

ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮನೆಯ ಹೊರಭಾಗದಲ್ಲಿ , ಅದೂ ಮನೆಯಿಂದ ದೂರದಲ್ಲಿ ಸ್ನಾನದ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಹೀಗೆ ಮಾಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಮನೆಯ ಒಳಗೇ ಬಚ್ಚಲು ಮನೆಯನ್ನು (ಬಾತ್‌ರೂಮ್) (Vastu Tips) ನಿರ್ಮಿಸಲಾಗುತ್ತದೆ.

ನಮ್ಮ ಪೂರ್ವಜರು ಈ ರೀತಿ ಬಾತ್‌ರೂಮ್ ಮತ್ತು ಟಾಯ್ಲೆಟ್‌ ಅನ್ನು ಮನೆಯಿಂದ ಹೊರಗೆ ಕಟ್ಟಲು ಕಾರಣವಿತ್ತು. ಏಕೆಂದರೆ ಇವುಗಳಿಂದ ನಕಾರಾತ್ಮಕತೆ ಹೆಚ್ಚುತ್ತದೆ. ಆದರೆ ಈಗ ಮನೆಯಲ್ಲಿ ಎಷ್ಟು ಕೋಣೆಗಳಿರುತ್ತವೆಯೋ ಅದಕ್ಕಿಂತ ಹೆಚ್ಚು ಬಾತ್‌ರೂಮ್‌ಗಳನ್ನು ನಿರ್ಮಿಸಲಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬಾತ್‌ರೂಮ್‌ಗಳಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿರುತ್ತದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಹಾಗಾಗಿ ಬಾತ್‌ರೂಮ್ ವಾಸ್ತುವಿನ ಬಗ್ಗೆ ಸಹ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಮನೆಯ ಸದಸ್ಯರ ಆರೋಗ್ಯ ಮತ್ತು ಆರ್ಥಿಕತೆ ಮೇಲೆ ಪರಿಣಾಮಗಳಾಗಬಹುದು.

ಬಾತ್‌ರೂಮ್ ವಾಸ್ತು ಸರಿ ಇಲ್ಲದೇ ಇದ್ದಲ್ಲಿ ನಕರಾತ್ಮಕ ಶಕ್ತಿಯ ಹರಿವಿನಿಂದ ಮನೆಯಲ್ಲಿ ಕೆಡುಕು ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳನ್ನು ನಿರ್ಮಿಸಲು ಕೆಲವು ವಿಶೇಷವಾದ ನಿಯಮಗಳಿವೆ (vastu tips for bathroom). ಅವುಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯೊಳಗೆ ಹಾಗೂ ಮನೆಗೇ ಹೊಂದಿಕೊಂಡಿರುವ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳ ವಾಸ್ತುವಿನ ಬಗ್ಗೆ ಗಮನ ಕೊಡುವುದು ಅತ್ಯಂತ ಅವಶ್ಯಕ. ಹಾಗಾದರೆ ವಾಸ್ತು ಪ್ರಕಾರ ಮನೆಯ ಒಳಗೆ ಕೋಣೆಗೆ ಹೊಂದಿಕೊಂಡಿರುವ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳ ವಾಸ್ತು ಹೇಗಿರಬೇಕು? ಒಂದೊಮ್ಮೆ ವಾಸ್ತು ಪ್ರಕಾರ ಇಲ್ಲದೇ ಇದ್ದರೆ ಉಂಟಾಗುವ ವಾಸ್ತು ದೋಷವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು? ಎಂಬುದನ್ನು ತಿಳಿಯೋಣ.

ಬಾತ್‌ರೂಮ್ ಈ ದಿಕ್ಕಿನಲ್ಲಿರಲಿ

ಬಾತ್‌ರೂಮ್ ಅನ್ನು ಮನೆಯ ಉತ್ತರ ಅಥವಾ ವಾಯವ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ಒಳ್ಳೆಯದು. ದಕ್ಷಿಣ, ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ವಾಸ್ತು ಪ್ರಕಾರ ಸರಿಯಲ್ಲವೆಂದು ಹೇಳಲಾಗುತ್ತದೆ. ಸ್ನಾನಗೃಹವನ್ನು ಅಡುಗೆ ಮನೆಯ ಎದುರಿಗೆ ಅಥವಾ ಅದಕ್ಕೆ ಹೊಂದಿಕೊಂಡಂತೆ ನಿರ್ಮಿಸುವುದು ಒಳ್ಳೆಯದಲ್ಲ.

ಮನೆಯಲ್ಲಿ ಕೋಣೆಗೇ ಅಟ್ಯಾಚ್ ಆಗಿರುವ ಬಾತ್‌ರೂಮ್‌ನಿಂದ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಇದು ಪತಿ ಮತ್ತು ಪತ್ನಿಯ ಸಂಬಂಧದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಾಸ್ತು ಪ್ರಕಾರ ಮಲಗುವ ಸಂದರ್ಭದಲ್ಲಿ ಕಾಲನ್ನು ಬಾತ್‌ರೂಮ್ ಕಡೇ ಮಾಡಿ ಮಲಗಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಪತಿ ಪತ್ನಿಯರ ನಡುವಿನ ಜಗಳ ಮತ್ತಷ್ಟು ಹೆಚ್ಚುತ್ತದೆ.

ಬಾತ್‌ರೂಮ್ ಬಾಗಿಲು ಹಾಕಿಡಬೇಕು

ಮಲಗುವ ಕೋಣೆಗೆ (ಬೆಡ್‌ರೂಮ್‌) ಹೊಂದಿಕೊಂಡಿರುವ ಬಾತ್‌ರೂಮ್‌ಗಳಿದ್ದಾಗ ಯಾವಾಗಲೂ ಅದರ ಬಾಗಿಲು ಹಾಕಿಯೇ ಇರಬೇಕು. ಬಾತ್‌ರೂಮ್ ಬಳಸಿದ ನಂತರ ಬಾಗಿಲು ಹಾಗೆಯೇ ತೆರೆದಿಟ್ಟುಕೊಂಡಿರಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ಮುಖ್ಯವಾಗಿ ಮಲಗುವ ಸಂದರ್ಭದಲ್ಲಿ ಬಾತ್‌ರೂಮ್ ಬಾಗಿಲು ಹಾಕಿಡಬೇಕು. ಇಲ್ಲದೇ ಇದ್ದರೆ ದಾಂಪತ್ಯ ಜೀವನದಲ್ಲಿ ಮನಸ್ತಾಪಗಳು ಉಂಟಾಗುತ್ತವೆ. ಇದೇ ಮುಂದುವರಿದು ವಿಚ್ಛೇದನದ ವರೆಗೂ ಹೋಗುವ ಸಾಧ್ಯತೆ ಇರುತ್ತದೆ. ಜೊತೆ ಜೊತೆಗೆ ಮನೆಯಲ್ಲಿ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುತ್ತಾ ಬರುತ್ತದೆ.

ಯಾವುದೇ ಬಾತ್‌ರೂಮ್ ಆಗಿರಲಿ ಅದರ ಟಾಯ್ಲೆಟ್ ಸೀಟ್ ಅನ್ನು ಮುಚ್ಚಿಡಬೇಕು. ಇಲ್ಲದಿದ್ದರೆ ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

ದೋಷಕ್ಕೆ ಇಲ್ಲಿದೆ ಪರಿಹಾರ!

ಮನೆಯ ಮಲಗುವ ಕೋಣೆಗೆ (ಬೆಡ್‌ರೂಮ್‌) ಹೊಂದಿಕೊಂಡೇ ಇರುವ ಅಂದರೆ ಅಟ್ಯಾಚ್ ಬಾತ್‌ರೂಮ್ ಮುಖ್ಯವಾಗಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಸರಳ ಪರಿಹಾರವೆಂದರೆ ಗ್ಲಾಸ್ ಬಾಟಲಿಯಲ್ಲಿ ಸೈಂದಾ ಲವಣವನ್ನು ತುಂಬಬೇಕು. ಇದನ್ನು ಬಾತ್‌ರೂಮ್ ಒಳಗಡೆ ಇಡಬೇಕು. ಒಂದು ವಾರದವರೆಗೂ ಆ ಉಪ್ಪು ಹಾಗೇ ಇರುವಂತೆ ನೋಡಿಕೊಳ್ಳಬೇಕು. ಒಂದು ವಾರದ ನಂತರ ಆ ಬಾಟಲಿಯಲ್ಲಿರುವ ಉಪ್ಪನ್ನು ಚೆಲ್ಲಬೇಕು. ಮತ್ತೆ ಅದೇ ರೀತಿ ಬಾಟಲಿಯಲ್ಲಿ ಸೈಂದಾ ಉಪ್ಪನ್ನು ತುಂಬಿಡಬೇಕು. ಇದರಿಂದ ಬಾತ್‌ರೂಮ್‌ನಿಂದ ಉಂಟಾಗುವ ವಾಸ್ತು ದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ : Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!

Exit mobile version