ರಿಯಲ್ ಎಸ್ಟೇಟ್
Vastu Tips : ಮನೆಯಲ್ಲಿ ಅಟ್ಯಾಚ್ ಬಾತ್‌ರೂಮ್ ಇದ್ದರೆ ಆರ್ಥಿಕ ನಷ್ಟ ತಪ್ಪಿಸಲು ಹೀಗೆ ಮಾಡಿ!
ಮನೆಯಲ್ಲಿನ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳೂ ವಾಸ್ತು ಪ್ರಕಾರ ಇರುವುದು ಅತ್ಯವಶ್ಯಕ. ಇದಕ್ಕೆ ಸಂಬಂಧಿಸಿದಂತೆ ವಾಸ್ತು ನಿಯಮಗಳು ಏನೇನಿವೆ (Vastu Tips) ಎಂಬುದನ್ನು ತಿಳಿಯೋಣ.
ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮನೆಯ ಹೊರಭಾಗದಲ್ಲಿ , ಅದೂ ಮನೆಯಿಂದ ದೂರದಲ್ಲಿ ಸ್ನಾನದ ಮನೆಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಹೀಗೆ ಮಾಡಲು ಸ್ಥಳಾವಕಾಶದ ಕೊರತೆ ಇರುವುದರಿಂದ ಮನೆಯ ಒಳಗೇ ಬಚ್ಚಲು ಮನೆಯನ್ನು (ಬಾತ್‌ರೂಮ್) (Vastu Tips) ನಿರ್ಮಿಸಲಾಗುತ್ತದೆ.
ನಮ್ಮ ಪೂರ್ವಜರು ಈ ರೀತಿ ಬಾತ್‌ರೂಮ್ ಮತ್ತು ಟಾಯ್ಲೆಟ್ ಅನ್ನು ಮನೆಯಿಂದ ಹೊರಗೆ ಕಟ್ಟಲು ಕಾರಣವಿತ್ತು. ಏಕೆಂದರೆ ಇವುಗಳಿಂದ ನಕಾರಾತ್ಮಕತೆ ಹೆಚ್ಚುತ್ತದೆ. ಆದರೆ ಈಗ ಮನೆಯಲ್ಲಿ ಎಷ್ಟು ಕೋಣೆಗಳಿರುತ್ತವೆಯೋ ಅದಕ್ಕಿಂತ ಹೆಚ್ಚು ಬಾತ್‌ರೂಮ್‌ಗಳನ್ನು ನಿರ್ಮಿಸಲಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬಾತ್‌ರೂಮ್‌ಗಳಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿರುತ್ತದೆ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಹಾಗಾಗಿ ಬಾತ್‌ರೂಮ್ ವಾಸ್ತುವಿನ ಬಗ್ಗೆ ಸಹ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ಮನೆಯ ಸದಸ್ಯರ ಆರೋಗ್ಯ ಮತ್ತು ಆರ್ಥಿಕತೆ ಮೇಲೆ ಪರಿಣಾಮಗಳಾಗಬಹುದು.
ಬಾತ್‌ರೂಮ್ ವಾಸ್ತು ಸರಿ ಇಲ್ಲದೇ ಇದ್ದಲ್ಲಿ ನಕರಾತ್ಮಕ ಶಕ್ತಿಯ ಹರಿವಿನಿಂದ ಮನೆಯಲ್ಲಿ ಕೆಡುಕು ಉಂಟಾಗುತ್ತದೆ. ಹಾಗಾಗಿ ಮನೆಯಲ್ಲಿ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳನ್ನು ನಿರ್ಮಿಸಲು ಕೆಲವು ವಿಶೇಷವಾದ ನಿಯಮಗಳಿವೆ (vastu tips for bathroom). ಅವುಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯೊಳಗೆ ಹಾಗೂ ಮನೆಗೇ ಹೊಂದಿಕೊಂಡಿರುವ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳ ವಾಸ್ತುವಿನ ಬಗ್ಗೆ ಗಮನ ಕೊಡುವುದು ಅತ್ಯಂತ ಅವಶ್ಯಕ. ಹಾಗಾದರೆ ವಾಸ್ತು ಪ್ರಕಾರ ಮನೆಯ ಒಳಗೆ ಕೋಣೆಗೆ ಹೊಂದಿಕೊಂಡಿರುವ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳ ವಾಸ್ತು ಹೇಗಿರಬೇಕು? ಒಂದೊಮ್ಮೆ ವಾಸ್ತು ಪ್ರಕಾರ ಇಲ್ಲದೇ ಇದ್ದರೆ ಉಂಟಾಗುವ ವಾಸ್ತು ದೋಷವನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು? ಎಂಬುದನ್ನು ತಿಳಿಯೋಣ.
ಬಾತ್‌ರೂಮ್ ಈ ದಿಕ್ಕಿನಲ್ಲಿರಲಿ
ಬಾತ್‌ರೂಮ್ ಅನ್ನು ಮನೆಯ ಉತ್ತರ ಅಥವಾ ವಾಯವ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ಒಳ್ಳೆಯದು. ದಕ್ಷಿಣ, ಈಶಾನ್ಯ ಅಥವಾ ನೈಋತ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡುವುದು ವಾಸ್ತು ಪ್ರಕಾರ ಸರಿಯಲ್ಲವೆಂದು ಹೇಳಲಾಗುತ್ತದೆ. ಸ್ನಾನಗೃಹವನ್ನು ಅಡುಗೆ ಮನೆಯ ಎದುರಿಗೆ ಅಥವಾ ಅದಕ್ಕೆ ಹೊಂದಿಕೊಂಡಂತೆ ನಿರ್ಮಿಸುವುದು ಒಳ್ಳೆಯದಲ್ಲ.
ಮನೆಯಲ್ಲಿ ಕೋಣೆಗೇ ಅಟ್ಯಾಚ್ ಆಗಿರುವ ಬಾತ್‌ರೂಮ್‌ನಿಂದ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ. ಇದು ಪತಿ ಮತ್ತು ಪತ್ನಿಯ ಸಂಬಂಧದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ವಾಸ್ತು ಪ್ರಕಾರ ಮಲಗುವ ಸಂದರ್ಭದಲ್ಲಿ ಕಾಲನ್ನು ಬಾತ್‌ರೂಮ್ ಕಡೇ ಮಾಡಿ ಮಲಗಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದರಿಂದ ಪತಿ ಪತ್ನಿಯರ ನಡುವಿನ ಜಗಳ ಮತ್ತಷ್ಟು ಹೆಚ್ಚುತ್ತದೆ.
ಬಾತ್‌ರೂಮ್ ಬಾಗಿಲು ಹಾಕಿಡಬೇಕು
ಮಲಗುವ ಕೋಣೆಗೆ (ಬೆಡ್‌ರೂಮ್) ಹೊಂದಿಕೊಂಡಿರುವ ಬಾತ್‌ರೂಮ್‌ಗಳಿದ್ದಾಗ ಯಾವಾಗಲೂ ಅದರ ಬಾಗಿಲು ಹಾಕಿಯೇ ಇರಬೇಕು. ಬಾತ್‌ರೂಮ್ ಬಳಸಿದ ನಂತರ ಬಾಗಿಲು ಹಾಗೆಯೇ ತೆರೆದಿಟ್ಟುಕೊಂಡಿರಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ಮುಖ್ಯವಾಗಿ ಮಲಗುವ ಸಂದರ್ಭದಲ್ಲಿ ಬಾತ್‌ರೂಮ್ ಬಾಗಿಲು ಹಾಕಿಡಬೇಕು. ಇಲ್ಲದೇ ಇದ್ದರೆ ದಾಂಪತ್ಯ ಜೀವನದಲ್ಲಿ ಮನಸ್ತಾಪಗಳು ಉಂಟಾಗುತ್ತವೆ. ಇದೇ ಮುಂದುವರಿದು ವಿಚ್ಛೇದನದ ವರೆಗೂ ಹೋಗುವ ಸಾಧ್ಯತೆ ಇರುತ್ತದೆ. ಜೊತೆ ಜೊತೆಗೆ ಮನೆಯಲ್ಲಿ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುತ್ತಾ ಬರುತ್ತದೆ.
ಯಾವುದೇ ಬಾತ್‌ರೂಮ್ ಆಗಿರಲಿ ಅದರ ಟಾಯ್ಲೆಟ್ ಸೀಟ್ ಅನ್ನು ಮುಚ್ಚಿಡಬೇಕು. ಇಲ್ಲದಿದ್ದರೆ ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.
ದೋಷಕ್ಕೆ ಇಲ್ಲಿದೆ ಪರಿಹಾರ!
ಮನೆಯ ಮಲಗುವ ಕೋಣೆಗೆ (ಬೆಡ್‌ರೂಮ್) ಹೊಂದಿಕೊಂಡೇ ಇರುವ ಅಂದರೆ ಅಟ್ಯಾಚ್ ಬಾತ್‌ರೂಮ್ ಮುಖ್ಯವಾಗಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಸರಳ ಪರಿಹಾರವೆಂದರೆ ಗ್ಲಾಸ್ ಬಾಟಲಿಯಲ್ಲಿ ಸೈಂದಾ ಲವಣವನ್ನು ತುಂಬಬೇಕು. ಇದನ್ನು ಬಾತ್‌ರೂಮ್ ಒಳಗಡೆ ಇಡಬೇಕು. ಒಂದು ವಾರದವರೆಗೂ ಆ ಉಪ್ಪು ಹಾಗೇ ಇರುವಂತೆ ನೋಡಿಕೊಳ್ಳಬೇಕು. ಒಂದು ವಾರದ ನಂತರ ಆ ಬಾಟಲಿಯಲ್ಲಿರುವ ಉಪ್ಪನ್ನು ಚೆಲ್ಲಬೇಕು. ಮತ್ತೆ ಅದೇ ರೀತಿ ಬಾಟಲಿಯಲ್ಲಿ ಸೈಂದಾ ಉಪ್ಪನ್ನು ತುಂಬಿಡಬೇಕು. ಇದರಿಂದ ಬಾತ್‌ರೂಮ್‌ನಿಂದ ಉಂಟಾಗುವ ವಾಸ್ತು ದೋಷ ನಿವಾರಣೆಯಾಗುತ್ತದೆ.
ಇದನ್ನೂ ಓದಿ : Vastu Tips: ಈ ಅಭ್ಯಾಸಗಳು ದಾರಿದ್ರ್ಯಕ್ಕೆ ದಾರಿ, ಇವುಗಳಿಂದ ದೂರವಿರಿ!
ಧಾರ್ಮಿಕ
Vastu Tips : ಹೊಸ ಮನೆ ಪ್ರವೇಶಿಸುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ
ನೀವು ಕಟ್ಟಿಸಿದ, ಕೊಂಡ ಮನೆಯಿರಲಿ ಅಥವಾ ಬಾಡಿಗೆಯ ಮನೆಯಿರಲಿ ಒಟ್ಟಾರೆ ಹೊಸ ಮನೆಯ ಗೃಹ ಪ್ರವೇಶ ಮಾಡುವಾಗ ಗಮನಿಸಬೇಕಾದ ವಿಷಯಗಳನ್ನು (Vastu Tips) ಇಲ್ಲಿ ನೀಡಲಾಗಿದೆ.
ಮನೆಯ ವಾಸ್ತು (Vastu Tips) ಸರಿಯಾಗಿ ಇದ್ದಾಗ ಮಾತ್ರ ಮನೆಯ ಸದಸ್ಯರು ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಹೊಸ ಮನೆಗೆ ಹೋಗುವಾಗ ವಾಸ್ತುವಿಗೆ ಸಂಬಂಧಿಸ ವಿಚಾರಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗುತ್ತದೆ.
ಸ್ವಂತ ಮನೆಯೇ ಆಗಲಿ ಅಥವಾ ಬಾಡಿಗೆ ಮನೆಯೇ ಆಗಲಿ ಹೋಗುವ ಮುನ್ನ ಹಲವು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಮನೆಯ ದಿಕ್ಕು, ಅಡುಗೆ ಕೋಣೆ, ನೀರು, ದೇವರ ಮನೆ ಹೀಗೆ ವಾಸ್ತು ಪ್ರಕಾರ ಎಲ್ಲವೂ ಸರಿಯಾಗಿದೆಯೇ ಅಥವಾ ಸರಿ ಇಲ್ಲದಿದ್ದರೆ ಅದಕ್ಕೆ ಪರಿಹಾರ ಇದೆಯೇ ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ಮನೆಯ ಯಜಮಾನರ ರಾಶಿ, ನಕ್ಷತ್ರದ ಮೇಲೂ ಮನೆ ಆಗಿ ಬರುತ್ತದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಹಾಗಾಗಿ ಹೊಸ ಮನೆಯ ಗೃಹ ಪ್ರವೇಶಕ್ಕೂ ಮೊದಲು ಅಥವಾ ಬಾಡಿಗೆ ಮನೆಗೆ ಹೋಗುವ ಮೊದಲು ತಿಳಿದುಕೊಳ್ಳ ಬೇಕಾದ ಕೆಲವು ಅಂಶಗಳು ಹೀಗಿವೆ;
ಶುಭ ಮುಹೂರ್ತ ನೋಡಿ
ಮನೆಯಲ್ಲಿ ನೆಮ್ಮದಿ, ಸದಸ್ಯರಲ್ಲಿ ಸಾಮರಸ್ಯ, ಸುಖ ಶಾಂತಿ ನೆಲೆಸಿರಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು. ಹಾಗಾಗಿ ಹೊಸ ಮನೆಗೆ ಹೋಗುವ ಮೊದಲು ವಾರ, ತಿಥಿ, ನಕ್ಷತ್ರ ಮತ್ತು ದಿನ ಚೆನ್ನಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಒಳ್ಳೆ ಮುಹೂರ್ತವನ್ನು ನೋಡಿಯೇ ಮನೆಗೆ ಪ್ರವೇಶಿಸಬೇಕು. ಮನೆಗೆ ಮೊದಲು ಕಾಲಿಡುವ ಘಳಿಗೆ ಉತ್ತಮವಾಗಿರಬೇಕು.
ಈ ಮಾಸಗಳು ಗೃಹ ಪ್ರವೇಶಕ್ಕೆ ಶುಭ
ಶಾಸ್ತ್ರದ ಪ್ರಕಾರ ಹೊಸ ಮನೆಗೆ ಹೋಗಲು ಕೆಲವು ಮಾಸಗಳು ಶುಭ ಮತ್ತು ಕೆಲವು ಮಾಸಗಳು ಅಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಆದಷ್ಟು ಗೃಹ ಪ್ರವೇಶಕ್ಕೆ ಯಾವ ಮಾಸಗಳು ಶುಭವೋ ಆ ಮಾಸಗಳಲ್ಲಿಯೇ ಹೊಸ ಮನೆ ಪ್ರವೇಶಿಸುವುದು ಒಳಿತು.
ಮಾಘ, ಫಾಲ್ಗುಣ, ವೈಶಾಖ ಮತ್ತು ಜ್ಯೇಷ್ಠ ಮಾಸಗಳು ಹೊಸ ಮನೆಯನ್ನು ಪ್ರವೇಶಿಸಲು ಉತ್ತಮ ಮಾಸಗಳೆಂದು ಹೇಳಲಾಗುತ್ತದೆ. ಅದೇ ಆಷಾಢ, ಶ್ರಾವಣ, ಭಾದ್ರಪದ, ಅಶ್ವಿನಿ ಮತ್ತು ಪುಷ್ಯ ಮಾಸಗಳು ಗೃಹ ಪ್ರವೇಶಕ್ಕೆ ಶುಭವಾದ ಮಾಸಗಳಲ್ಲ ಎಂದು ಹೇಳಲಾಗುತ್ತದೆ.
ಶುಭ ದಿನವನ್ನೇ ಆಯ್ಕೆ ಮಾಡಿಕೊಳ್ಳಿ
ಗೃಹ ಪ್ರವೇಶಕ್ಕೆ ಶುಭ ಮುಹೂರ್ತಗಳನ್ನು ನೋಡುವುದು ವಾಡಿಕೆ. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಬೇಗ ಹೊಸ ಮನೆ ಪ್ರವೇಶ ಮಾಡಬೇಕೆಂದಿದ್ದಾಗ ಶುಭವಾದ ವಾರ ಯಾವುದೆಂದು ತಿಳಿದು ಆ ದಿನಗಳಂದು ಹೊಸ ಮನೆಗೆ ಪ್ರವೇಶಿಸಬಹುದು.
ವಾರದ ಏಳು ದಿನಗಳಲ್ಲಿ ಮಂಗಳವಾರ ಗೃಹ ಪ್ರವೇಶಕ್ಕೆ ಯೋಗ್ಯವಲ್ಲವೆಂದು ಹೇಳುತ್ತಾರೆ. ವಿಶೇಷ ಪರಿಸ್ಥಿತಿಗಳಲ್ಲಿ ಭಾನುವಾರ ಮತ್ತು ಶನಿವಾರವನ್ನು ಸಹ ಗೃಹ ಪ್ರವೇಶಕ್ಕೆ ಉತ್ತಮವೆಂದು ಪರಿಗಣಿಸುತ್ತಾರೆ. ಇದನ್ನು ಹೊರತು ಪಡಿಸಿದರೆ ವಾರದ ಉಳಿದ ಎಲ್ಲ ದಿನಗಳು ಹೊಸ ಮನೆಯನ್ನು ಪ್ರವೇಶಿಸಲು ಯೋಗ್ಯವಾದ ದಿನಗಳಾಗಿವೆ.
ಅಮಾವಾಸ್ಯೆ ಮತ್ತು ಹುಣ್ಣಿಮೆಯನ್ನು ಹೊರತು ಪಡಿಸಿ, ಉಳಿದ 2, 3, 5 7, 10, 11, 12 ಮತ್ತು 13 ಈ ತಿಥಿಗಳು ಪ್ರವೇಶಕ್ಕೆ ಉತ್ತಮವೆಂದು ಹೇಳಲಾಗುತ್ತದೆ.
ಹೊಸ ಮನೆಗೆ ಹೋಗುವಾಗ ಈ ಐದು ವಸ್ತುಗಳಿರಲಿ
ಹೊಸ ಮನೆಗೆ ಅದು ನೀವು ಕಟ್ಟಿಸಿದ ಹೊಸ ಮನೆಯಾಗಿರಲಿ ಅಥವಾ ಬಾಡಿಗೆ ಮನೆಯಾಗಿರಲಿ, ಮಂಗಳ ಕಲಶದ ಜೊತೆಗೇ ಹೊಸ ಮನೆಯನ್ನು ಪ್ರವೇಶಿಸಬೇಕು. ಜೊತೆಗೆ ಐದು ಬಗೆಯ ಮಂಗಳ ವಸ್ತುಗಳಾದ ತೆಂಗಿನಕಾಯಿ, ಅರಿಶಿಣ, ಬೆಲ್ಲ, ಅಕ್ಕಿ ಮತ್ತು ಹಾಲನ್ನು ತೆಗೆದುಕೊಳ್ಳಬೇಕು. ಮನೆಯನ್ನು ತೋರಣ ಮತ್ತು ರಂಗವಲ್ಲಿಯಿಂದ ಅಲಂಕರಿಸಬೇಕು.
ಜತೆಯಲ್ಲಿ ದೇವರ ಫೋಟೊ ಕೂಡ ಇರಲಿ. ವಿಘ್ನ ನಿವಾರಕ ಗಣೇಶನ ಮೂರ್ತಿಯನ್ನು ಹೊಸ ಮನೆಗೆ ತೆಗೆದುಕೊಂಡು ಹೋಗಬೇಕು. ಜೊತೆಗೆ ದಕ್ಷಿಣಾವರ್ತಿ ಶಂಖ ಮತ್ತು ಶ್ರೀ ಯಂತ್ರವನ್ನು ಸಹ ತೆಗೆದುಕೊಂಡು ಹೋಗಬಹುದಾಗಿದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ಮನೆಯ ಯಜಮಾನ ಮೊದಲು ಬಲಗಾಲಿಟ್ಟು ಪ್ರವೇಶಿಸಿದ ನಂತರ ಆತನ ಪತ್ನಿಯು ಮನೆಯನ್ನು ಪ್ರವೇಶಿಸಬೇಕು. ತೆಗೆದುಕೊಂಡು ಬಂದ ಗಣೇಶನ ಮೂರ್ತಿಯನ್ನು ಈಶಾನ್ಯ ಮೂಲೆಯಲ್ಲಿ ಅಥವಾ ದೇವರ ಮನೆಯಲ್ಲಿ ಇಡಬೇಕು. ಅದರ ಜೊತೆಗೇ ಕಲಶವನ್ನು ಸಹ ಇಡಬೇಕು. ದೇವರ ಪೂಜೆಯಾದ ಬಳಿಕ ಅಡುಗೆ ಮಾಡುವ ಸ್ಟಾವ್‌ಗೆ ಪೂಜೆ ಸಲ್ಲಿಸಿ ಹಾಲು ಉಕ್ಕಿಸಬೇಕು.
ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿಗೆ ಕಿಟಕಿ ಇದ್ದರೆ ಆರ್ಥಿಕ ಲಾಭ, ಸಮೃದ್ಧಿ!
ಧಾರ್ಮಿಕ
Vastu Tips : ಕಚೇರಿಯ ವಾಸ್ತು ಹೀಗಿದ್ದರೆ ಯಶಸ್ಸು ಖಚಿತವಂತೆ!
ವ್ಯವಹಾರದಲ್ಲಿ, ವೃತ್ತಿ ಜೀವನದಲ್ಲಿ ಯಶಸ್ಸಿಗೆ ಕಚೇರಿಯ ವಾಸ್ತು ಬಹಳ ಮುಖ್ಯ. ಹಾಗಾಗಿ ಕಚೇರಿ ನಿರ್ಮಾಣದ ವೇಳೆ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿರುವುದು ಅಗತ್ಯ. ಈ ಕುರಿತು ತಜ್ಞರು ನೀಡಿದ ಕೆಲವು ಸಲಹೆಗಳು (Vastu Tips) ಇಲ್ಲಿವೆ.
ವಾಸ್ತು ಶಾಸ್ತ್ರ ಕೇವಲ ಮನೆಗಷ್ಟೇ ಸೀಮಿತವಲ್ಲ. ನೀವು ಕೆಲಸ ಮಾಡುವ ಕಚೇರಿ, ಓದುವ ಶಾಲೆ- ಕಾಲೇಜು, ವ್ಯಾಪಾರದ ಸ್ಥಳ ಹೀಗೆ ಎಲ್ಲ ಕಡೆಗಳಲ್ಲೂ ಈ ಶಾಸ್ತ್ರಕ್ಕೆ ಮಹತ್ವವಿದೆ. ನೀವಿರುವ ಕಡೆ ವಾಸ್ತು ಸರಿಯಾಗಿದ್ದರಷ್ಟೇ, ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಾಧಿಸಬಹುದು (Vastu Tips), ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಮನೆಯಲ್ಲಿ ತೊಂದರೆ ತಾಪತ್ರಯಗಳಾದಾಗ ತಕ್ಷಣವೇ ಜ್ಯೋತಿಷ್ಯ ಅಥವಾ ವಾಸ್ತು ತಜ್ಞರನ್ನು ಸಂಪರ್ಕಿಸುತ್ತೇವೆ. ಹಾಗೆಯೇ ವ್ಯವಹಾರಗಳಲ್ಲಿ, ವ್ಯಾಪಾರದಲ್ಲಿ ತೊಂದರೆಗಳಾದರೆ, ಕಚೇರಿಯಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಅದಕ್ಕೆ ವಾಸ್ತು ದೋಷವು ಕಾರಣವಾಗಿರಬಹುದು. ಹಾಗಾಗಿ ಕಚೇರಿ ನಿರ್ಮಾಣದ ವೇಳೆ ವಾಸ್ತು ಪ್ರಕಾರ ನಿರ್ಮಾಣ ಮಾಡಿದರೆ ಉತ್ತಮ.
ಕಚೇರಿಯ ವಾಸ್ತು ಬಗ್ಗೆ ತಿಳಿದುಕೊಂಡಲ್ಲಿ ನಿಮ್ಮ ಕಚೇರಿಯನ್ನು ಅದಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು ಅಥವಾ ಮರು ನಿರ್ಮಿಸಬಹುದು. ಕಚೇರಿಗೆ ಸಂಬಂಧಿಸಿದ ವಾಸ್ತುವಿನ ಕುರಿತು ವಾಸ್ತು ತಜ್ಞರು ಏನು ಹೇಳುತ್ತಾರೆ ನೋಡೋಣ;
ಕಚೇರಿ ಮುಖ್ಯದ್ವಾರ ಯಾವ ದಿಕ್ಕಿನಲ್ಲಿರಬೇಕು?
ವಾಸ್ತು ಶಾಸ್ತ್ರದ ಅನುಸಾರ ಕಚೇರಿಯ ಮುಖ್ಯ ದ್ವಾರ ಪೂರ್ವ ಅಥವಾ ಉತ್ತರ ದಿಕ್ಕಿಗಿದ್ದರೆ ಉತ್ತಮ. ಜೊತೆಗೆ ಕಚೇರಿಯಲ್ಲಿ ಹಣಕಾಸಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರು ಆದಷ್ಟು ಉತ್ತರ ದಿಕ್ಕಿಗೆ ಕುಳಿತುಕೊಂಡರೆ ಉತ್ತಮ. ಉತ್ತರ ದಿಕ್ಕಿಗೆ ಸಂಪತ್ತಿನ ಒಡೆಯ ಕುಬೇರ ದೇವರ ಕೃಪೆ ಇರುತ್ತದೆ.
ಕಚೇರಿಯಲ್ಲಿ ಮುಖ್ಯಸ್ಥರು ಕುಳಿತುಕೊಳ್ಳುವ ಸ್ಥಳದ ಹಿಂದೆ ಕಿಟಕಿ ಇರುವುದು ಒಳ್ಳೆಯದಲ್ಲ. ಗೋಡೆಯಷ್ಟೆ ಇದ್ದು ಎದುರಿಗೆ ಕಿಟಕಿ ಇದ್ದರೆ ಉತ್ತಮ. ಗೋಡೆಗೆ ಹಸಿರಿನಿಂದ ಕಂಗೊಳಿಸುವ ಪೇಂಟಿಂಗ್‌ಗಳನ್ನು ಹಾಕಿಕೊಳ್ಳಬಹುದಾಗಿದೆ.
ಕಂಪ್ಯೂಟರ್ ಈ ದಿಕ್ಕಿನಲ್ಲಿರಲಿ.
ಕಚೇರಿಯಲ್ಲಿ ಕಂಪ್ಯೂಟರ್ ಮತ್ತು ಇತರೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು. ಇದು ಅಗ್ನಿದೇವನ ದಿಕ್ಕಾಗಿರುವುದರಿಂದ ಈ ವಸ್ತುಗಳಿಗೆ ಅಗ್ನಿ ಮೂಲೆ ಸೂಕ್ತವಾಗಿರುತ್ತದೆ.
ವೇಯಿಂಟ್ ಅಥವಾ ಮೀಟಿಂಗ್ ರೂಮ್ ಇದ್ದಲ್ಲಿ ಅದನ್ನು ವಾಯುವ್ಯ ದಿಕ್ಕಿಗೆ ಮಾಡಿದರೆ ಉತ್ತಮ. ವಾಸ್ತು ಪ್ರಕಾರ ವಾಯುವ್ಯ ದಿಕ್ಕು ಶುಭವೆಂದು ಹೇಳಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಒಂದು ಟೇಬಲ್‌ನಲ್ಲಿ ಒಬ್ಬ ಅಧಿಕಾರಿ ಮಾತ್ರ ಕುಳಿತುಕೊಳ್ಳಬೇಕು. ಒಂದಕ್ಕಿಂತ ಹೆಚ್ಚು ಜನರು ಕುಳಿತುಕೊಂಡಲ್ಲಿ ಕೆಲಸದ ಒತ್ತಡ ಹೆಚ್ಚುತ್ತದೆ.
ಕಚೇರಿಯಲ್ಲಿ ಕುಳಿತುಕೊಳ್ಳುವವರು ಮುಖ್ಯ ದ್ವಾರಕ್ಕೆ ಬೆನ್ನು ಹಾಕಿ ಕುಳಿತುಕೊಳ್ಳುವುದು ಅಶುಭ.
ಕಚೇರಿಯ ಅಡುಗೆ ಮನೆ ಅಥವಾ ಕ್ಯಾಂಟೀನ್ ಆಗ್ನೇಯ ದಿಕ್ಕಿಗಿದ್ದರೆ ಶುಭ.
ಕಚೇರಿಯ ಬಾತ್‌ರೂಮ್ ಈಶಾನ್ಯ ಮೂಲೆಯಲ್ಲಿ ಇರುವುದು ಒಳ್ಳೆಯದಲ್ಲ. ವಾಸ್ತುವಿನಲ್ಲಿ ಈ ದಿಕ್ಕನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಕಚೇರಿಯ ಗೋಡೆ, ಕರ್ಟನ್, ಟೇಬಲ್‌ಗಳು ತಿಳಿ ಬಣ್ಣದ್ದಾಗಿದ್ದರೆ ಉತ್ತಮ.
ಕಚೇರಿಯಲ್ಲಿ ಹಿಂಸೆಯನ್ನು ಬಿಂಬಿಸುವ ಪಶು-ಪಕ್ಷಿಗಳು, ಅಳುತ್ತಿರುವ ದೃಶ್ಯ, ಮುಳುಗುತ್ತಿರುವ ಹಡಗು ಇತ್ಯಾದಿ ಪೇಂಟಿಂಗ್‌ಗಳನ್ನು ಇಟ್ಟುಕೊಳ್ಳಬಾರದು. ಇದರಿಂದ ಕಚೇರಿಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ.
ನಗುತ್ತಿರುವ ಮಗು, ಮಹಾ ಪುರುಷರ ಚಿತ್ರಗಳು, ಹರಿಯುತ್ತಿರುವ ನೀರು ಇತ್ಯಾದಿ ಪೇಂಟಿಂಗ್‌ಗಳನ್ನು ಇಟ್ಟುಕೊಳ್ಳುವುದು ಶುಭ. ಇದರಿಂದ ಕಚೇರಿಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ.
ಕಚೇರಿಯಲ್ಲಿ ಕೆಲಸಕ್ಕೆ ಉಪಯೋಗವಾಗುವ ಫ್ಯಾಕ್ಸ್, ಕಂಪ್ಯೂಟರ್, ಗಡಿಯಾರ, ಸ್ಕ್ಯಾನರ್, ಪ್ರಿಂಟರ್ ಇತ್ಯಾದಿ ಉಪಕರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
ಕಚೇರಿಯ ಸ್ವಚ್ಛತೆಯು ಮುಖ್ಯ
ಕಚೇರಿಯು ಸ್ವಚ್ಛವಾಗಿದ್ದರೆ ಪಾಸಿಟಿವ್ ಎನರ್ಜಿ ಇರುತ್ತದೆ. ಇದರಿಂದ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತದೆ. ಕಚೇರಿಯ ಟೇಬಲ್ ಅಥವಾ ಕಬೋರ್ಡ್‌ಗಳಲ್ಲಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಬೇಕು. ಅದನ್ನು ಕೂಡಾ ಸ್ವಚ್ಛವಾಗಿಟ್ಟುಕೊಳ್ಳಬೇಕು.
ಕಚೇರಿಯ ಗಡಿಯಾರ ಸದಾ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬೇಕು. ಇದು ಸಕಾರಾತ್ಮಕತೆಯ ಸ್ಥಾನವಾದ್ದರಿಂದ ಸಮಯವನ್ನು ತೋರಿಸುವ ಗಡಿಯಾರ ಇದೇ ದಿಕ್ಕಿನಲ್ಲಿರಬೇಕು. ಕಚೇರಿಯ ಈಶಾನ್ಯ ಕೋಣೆಯಲ್ಲಿ ದೇವರ ಮೂರ್ತಿಗಳನ್ನು ಇಟ್ಟುಕೊಳ್ಳಬಹುದು.
ಇದನ್ನೂ ಓದಿ : Vastu Tips : ಆರ್ಥಿಕ ಲಾಭ ಪಡೆಯಲು ಮನೆಯ ಉತ್ತರ ದಿಕ್ಕಿನಲ್ಲಿ ಹೀಗೆ ಮಾಡಿ!
ಧಾರ್ಮಿಕ
Vastu Tips | ಹಣಕಾಸಿನ ತೊಂದರೆಯೇ?; ಇವುಗಳಿಂದ ಪಾರಾಗಲು ಮನೆಯಲ್ಲಿ ಈ ವಾಸ್ತು ನಿಯಮ ಪಾಲಿಸಿ
ಸಂಪಾದನೆ ಮಾಡಿದ ಹಣ ಕೈಗೆ ಬರುತ್ತಿದ್ದಂತೆಯೇ ಖರ್ಚಾಗುತ್ತಿದೆಯೇ, ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲವೇ? ಇದಕ್ಕೆ ವಾಸ್ತು ಶಾಸ್ತ್ರದಲ್ಲಿ (Vastu Tips ) ಪರಿಹಾರವಿದೆ. ಹಾಗಾದರೆ ಆ ವಾಸ್ತು ಉಪಾಯಗಳು ಯಾವುವು ತಿಳಿಯೋಣ.
ನಾವು ಪಡುವ ಶ್ರಮಕ್ಕೆ ತಕ್ಕ ಫಲ ಸಿಗಬೇಕೆಂದು ಎಲ್ಲರೂ ಬಯಸುತ್ತಾರೆ. ಎಷ್ಟೇ ದುಡಿದರೂ ಕೆಲವೊಮ್ಮೆ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಸಂಪಾದನೆ ಚೆನ್ನಾಗಿಯೇ ಇದ್ದರೂ, ಗಳಿಸಿದ ಹಣ ಯಾವುದೋ ಕಾರಣಕ್ಕೆ ಖರ್ಚಾಗಿ ಹೋಗಿರುತ್ತದೆ. ಈ ರೀತಿಯ ಆರ್ಥಿಕ ತೊಂದರೆಗೆ ವಾಸ್ತು ದೋಷ ಸಹ ಕಾರಣವಾಗಿರಬಹುದು.
ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ವಾಸ್ತುವಿಗೆ ಸಂಬಂಧಿಸಿದ ಕೆಲವು ದೋಷಗಳು ಅಥವಾ ವಸ್ತುಗಳಿಂದ ಹಣದ ತೊಂದರೆ ಉಂಟಾಗುತ್ತದೆ. ಈ ರೀತಿಯ ವಾಸ್ತು ಸಮಸ್ಯೆ ಇದ್ದಾಗ ಹಣ ಉಳಿಸುವುದು ಕನಸಿನ ಮಾತಾಗುತ್ತದೆ. ಹಾಗಾಗಿ ಮನೆಯಲ್ಲಿ ಧನಲಕ್ಷ್ಮೀಯು ಸದಾ ನೆಲೆಸಿರುವಂತೆ ಮಾಡಲು ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲ ಸರಳ ಪರಿಹಾರದ (Vastu Tips) ಬಗ್ಗೆ ತಿಳಿಯೋಣ.
ನೈಋತ್ಯ ದಿಕ್ಕು ಕುಬೇರ ಸ್ಥಾನ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ಭಾಗವನ್ನು ಕುಬೇರನ ಸ್ಥಾನವೆಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಹಣ ಇರಿಸುವ ಲಾಕರ್‌ಗಳನ್ನು ಇಡಬಹುದು. ಇದು ಸಾಧ್ಯವಾಗದೇ ಇದ್ದರೆ ದಕ್ಷಿಣದ ಗೋಡೆಯಲ್ಲಿ ಉತ್ತರಕ್ಕೆ ಎದುರಾಗಿ ಲಾಕರ್ ಅನ್ನು ಇರಿಸುವುದು ಸಹ ಅದೃಷ್ಟವನ್ನು ತರುತ್ತದೆ. ಲಾಕರ್‌ನ ಬಾಗಿಲು ಉತ್ತರಕ್ಕೆ ತೆರೆಯಬೇಕು, ಇದು ವಾಸ್ತು ಪ್ರಕಾರ ಕುಬೇರನ (ಸಂಪತ್ತಿನ ದೇವರು) ದಿಕ್ಕು. ಹಣವನ್ನು ತಿಜೋರಿಯ ಮಧ್ಯ ಭಾಗದಲ್ಲಿ ಅಥವಾ ಮೇಲಿನ ಭಾಗದಲ್ಲಿ ಇಡಬೇಕೆಂದು ಮತ್ತು ತಿಜೋರಿಯ ಕೆಳಭಾಗದಲ್ಲಿ ಹಣ ಇಡಬಾರದೆಂದು ಶಾಸ್ತ್ರ ಹೇಳುತ್ತದೆ.
ಈ ವಸ್ತುಗಳನ್ನು ತಿಜೋರಿಯಲ್ಲಿಡಿ
ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿಯಲ್ಲಿ ಶುಭವನ್ನು ನೀಡುವಂತಹ ಯಂತ್ರಗಳಾದ ವೃದ್ಧಿ ಯಂತ್ರ, ಮಹಾಲಕ್ಷ್ಮೀ ಯಂತ್ರ ಇತ್ಯಾದಿ ಲಕ್ಷ್ಮೀಗೆ ಸಂಬಂಧಿಸಿದ ಯಂತ್ರಗಳನ್ನು ಇಡಬೇಕೆಂದು, ಇದರಿಂದ ಖಜಾನೆ ಬರಿದಾಗುವುದಿಲ್ಲ ವೆಂದು ಶಾಸ್ತ್ರ ಹೇಳುತ್ತದೆ.
ಮಹಾಲಕ್ಷ್ಮೀ ಮತ್ತು ಕುಬೇರ ಮೂರ್ತಿ
ಹಣ ಮನೆಗೆ ಬರುತ್ತಿದ್ದಂತೆಯೇ ಖಾಲಿಯಾಗುತ್ತಿದೆ ಎಂದಾದರೆ, ಇಲ್ಲವೇ ಎಷ್ಟೇ ಪ್ರಯತ್ನಿಸಿದರೂ ಹಣ ಉಳಿತಾಯ ಮಾಡಲು ಆಗುತ್ತಿಲ್ಲವೆಂದಾದರೆ, ಮನೆಯ ದೇವರ ಕೋಣೆಯಲ್ಲಿ ಸಂಪತ್ತಿನ ಅಧಿ ದೇವತೆಯಾಗಿರುವ ಲಕ್ಷ್ಮೀಯನ್ನು ಮತ್ತು ಸಂಪತ್ತಿಗೆ ಒಡೆಯನಾಗಿರುವ ಕುಬೇರ ದೇವರ ಪ್ರತಿಮೆಯನ್ನು ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಜೊತೆಗೆ ಅದಕ್ಕೆ ಪ್ರತಿನಿತ್ಯ ಪೂಜೆ ಮಾಡಬೇಕು. ಇದರಿಂದ ಆರ್ಥಿಕ ಲಾಭ ಉಂಟಾಗುತ್ತದೆ.
ಪಾತ್ರೆ ತೊಳೆಯದೇ ಇಡುವುದು ಅಶುಭ
ಮನೆಯಲ್ಲಿ ರಾತ್ರಿ ಸಮಯದಲ್ಲಿ ಊಟ ಮಾಡಿದ ತಟ್ಟೆ, ಅಡುಗೆ ಮಾಡಿದ ಪಾತ್ರೆಗಳನ್ನು ತೊಳೆಯದೇ ಹಾಗೇಯೇ ಬಿಟ್ಟು ಮಲಗುವುದು ಅಶುಭವೆಂದು ಶಾಸ್ತ್ರ ಹೇಳುತ್ತದೆ. ಎಂಜಲು ಪಾತ್ರೆಗಳನ್ನು ತಕ್ಷಣಕ್ಕೆ ತೊಳೆದಿಡುವುದು ಶುಭ ಮತ್ತು ಇದರಿಂದ ವಾಸ್ತು ದೋಷ ಉಂಟಾಗುವುದಿಲ್ಲ. ಎಂಜಲು ಪಾತ್ರೆಗಳನ್ನು ಹಾಗೇಯೇ ಬಿಟ್ಟು ಮಲಗಿದರೆ ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ, ಹಾಗಾಗಿ ಪಾತ್ರೆಗಳನ್ನು ಶುಚಿಗೊಳಿಸಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ನೆಲೆಸುತ್ತದೆ.
ಮನೆ ಸ್ವಚ್ಛವಾಗಿರಲಿ
ಸ್ವಚ್ಛತೆ ಇದ್ದರೆ ಮಾತ್ರ ಲಕ್ಷ್ಮೀ ವಾಸ ಮಾಡುತ್ತಾಳೆ. ಎಲ್ಲಿ ಕೊಳಕು, ಕೆಟ್ಟದ್ದು ಇರುತ್ತದೆಯೋ ಅಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಹಾಗಾಗಿ ಮನೆಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಂಡಿರಬೇಕು. ಮನೆಯ ಈಶಾನ್ಯ ಭಾಗದಲ್ಲಿ ಯಾವುದೇ ಕಸ ಮತ್ತು ಬೇಡದ ವಸ್ತುಗಳನ್ನು ಇಡಬಾರದು. ಇದು ದೇವರ ಕೋಣೆಯ ಸ್ಥಾನವೆಂದು ಹೇಳಲಾಗುತ್ತದೆ.
ದಕ್ಷಿಣಾವರ್ತಿ ಶಂಖ ಮನೆಯಲ್ಲಿರಲಿ
ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತಿದ್ದರೆ, ದೇವರ ಕೋಣೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಇಟ್ಟುಕೊಳ್ಳಬೇಕು. ಅಷ್ಟೇ ಅಲ್ಲದೆ ಅದಕ್ಕೆ ಪೂಜೆಯನ್ನು ಮಾಡಿ ಅದನ್ನು ಊದಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
ಒಣಗಿದ ಹೂವು ತೆಗೆಯಿರಿ
ವಾಸ್ತು ಶಾಸ್ತ್ರದ ಪ್ರಕಾರ ದೇವರ ಕೋಣೆಯಲ್ಲಿ ಒಣಗಿದ ಹೂವು ಅಥವಾ ಹೂವಿನ ಮಾಲೆಯನ್ನು ಇಡಬಾರದು. ಒಣಗಿದ ಅಥವಾ ಕೊಳೆತ ಹೂಗಳನ್ನು ಆ ಕೂಡಲೇ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಅವುಗಳನ್ನು ಹಾಗೆಯೇ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದಾರಿದ್ರ್ಯ ಬರುತ್ತದೆ.
ಚಪ್ಪಲಿಯನ್ನು ಸರಿಯಾಗಿಡಿ
ಮನೆಯ ಮುಂಬಾಗಿಲಿನಲ್ಲಿ ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಬಿಡುವುದು, ಮನೆಯವರ ಚಪ್ಪಲಿಗಳ ರಾಶಿ ಹಾಕುವುದು ಕೂಡ ದಾರಿದ್ರ್ಯಕ್ಕೆ ಕಾರಣವಾಗಬಹುದು. ಹೀಗಾಗಿನ ಮನೆಯ ಮುಂಭಾಗದಲ್ಲಿ ಚಪ್ಪಲಿಗಳನ್ನು ಸರಿಯಾ ದ ರೀತಿಯಲ್ಲಿ ಜೋಡಿಸಿಡುವುದು ಕೂಡ ಅವಶ್ಯಕ.
ಇದನ್ನೂ ಓದಿ | Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?
ಕರ್ನಾಟಕ
ಕನಸಿನ ಮನೆ ನಿರ್ಮಾಣಕ್ಕೆ ಮೋಸವಿಲ್ಲದ ಆಯ್ಕೆ ನೈರುತಿ; ಒಂದೇ ಸೂರಲ್ಲಿ ಶಿಕ್ಷಣ, ಕ್ರೀಡೆ, ಧ್ಯಾನಕೇಂದ್ರ, ಈಜುಕೊಳ ಲಭ್ಯ
ಬಳ್ಳಾರಿಯಲ್ಲಿಯೇ ಬೆಂಗಳೂರು ಜೀವನ ಶೈಲಿಯ ಮನೆ, ವಿಲ್ಲಾಗಳನ್ನು ನೈರುತಿ ಡೆವಲಪರ್ಸ್ ವಿನ್ಯಾಸಗೊಳಿಸುತ್ತಿದ್ದು, ಕನಸಿನ ಸೂರು ಮಾಡಿಕೊಳ್ಳುವ ಕನಸನ್ನು ಹೊತ್ತುಕೊಂಡವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಬಳ್ಳಾರಿ: ಇಲ್ಲಿದೆ ಬೆಂಗಳೂರು ಮಾದರಿ ಮನೆಗಳು, ವಿಲ್ಲಾಗಳು. ಈಗಿನ ಟ್ರೆಂಡ್‌ಗೆ ತಕ್ಕಂತೆ ವಿನ್ಯಾಸ, ವಿಶಾಲ ಸ್ಪೇಸ್ ಹೀಗೆ ಈ ಎಲ್ಲ ಅಂಶಗಳನ್ನು ಹೊಂದಿರುವ, ಕಳೆದ ಒಂದು ದಶಕದಿಂದಲೂ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅನುಭವ ಹೊಂದಿರುವ ನೈರುತಿ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಜನರ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
ಗಣಿನಾಡಿನಲ್ಲಿ ಸುಸಜ್ಜಿತ ಬಡಾವಣೆ ಅಭಿವೃದ್ಧಿ ಪಡಿಸುತ್ತಿರುವ ನೈರುತಿ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ 2015ರಿಂದ ಚಾಲ್ತಿಯಲ್ಲಿದೆ. ಸಿ. ಹರಿಪ್ರಸಾದ್ ರೆಡ್ಡಿ ಅವರು ಈ ಸಂಸ್ಥೆಯನ್ನು ಹುಟ್ಟಿಹಾಕಿದ್ದು, ವಿಶ್ವಾಸಾರ್ಹತೆ, ನಂಬಿಕೆಯ ತಳಹದಿ ಮೇಲೆ ಕಾರ್ಯಾರಂಭ ಮಾಡಿದರು. ಆ ನಿಟ್ಟಿನಲ್ಲಿ ಇಂದಿನವರೆಗೂ ಗಟ್ಟಿತನವನ್ನು ಉಳಿಸಿಕೊಂಡಿದೆ.
ಈ ಮೂಲಕ ಗಣಿನಾಡಿನಲ್ಲಿ ಉತ್ತಮ ಡೆವಲಪರ್ಸ್ ಎಂಬ ಹೆಸರು ಪಡೆದಿದೆ. ಜಿಲ್ಲಾದ್ಯಂತ ಸುಮಾರು 12ಕ್ಕೂ ಹೆಚ್ಚು ಬಡಾವಣೆಗಳನ್ನು ಅಭಿವೃದ್ಧಿಪಡಿಸಿ, ಇದೀಗ ಬೆಂಗಳೂರು ಮಾದರಿಯಲ್ಲಿಯೇ ಕಪ್ಪಗಲ್ ರಸ್ತೆಯಲ್ಲಿ ವಿಲ್ಲಾ ಪ್ರಾಜೆಕ್ಟ್ ವಿಥ್ ಗೇಟೆಡ್ ಕಮ್ಯುನಿಟಿ ಡ್ರೀಮ್ ಪ್ರಾಜೆಕ್ಟ್‌ಗೆ ಕೈ ಹಾಕಿ ಯಶಸ್ವಿಯಾಗುತ್ತಿದ್ದಾರೆ.
ಅಭಿವೃದ್ಧಿ ಪಡಿಸುತ್ತಿರುವಾಗಲೇ ಸೋಲ್ಡೌಡ್
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಗಳನ್ನು ಚಾಚುತಪ್ಪದೇ ಪಾಲನೆ ಮಾಡುತ್ತಾ, ಕಳೆದ 8 ವರ್ಷಗಳಿಂದ ಹಲವಾರು ಬಡಾವಣೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಬಡಾವಣೆಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಹಂತದಲ್ಲಿಯೇ ಮಾರಾಟವಾಗುತ್ತಿರುವುದು ಸಂಸ್ಥೆಯ ವಿಶ್ವಾಸಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಇದರಿಂದಾಗಿ ನೈರುತಿ ಡವಲಪರ್ಸ್‌ನೊಂದಿಗೆ ಬಡಾವಣೆಗೆ ಅಭಿವೃದ್ಧಿಗೆ ಇಲ್ಲಿನ ಇತರ ಉದ್ಯಮಿಗಳು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಕೇವಲ 8 ವರ್ಷಗಳ ಅವಧಿಯಲ್ಲಿ ಸುಮಾರು 12ಕ್ಕೂ ಹೆಚ್ಚು ಬಡಾವಣೆ ಅಭಿವೃದ್ಧಿ ಪಡಿಸಿದೆ.
ಸಾವಿರಾರು ನಿವೇಶನಗಳ ಮಾರಾಟ
ಬಳ್ಳಾರಿ ಜಿಲ್ಲೆಯ ಪ್ರಮುಖ ಬಡಾವಣೆಗಳ ಅಭಿವೃದ್ಧಿಯಲ್ಲಿ ನೈರುತಿ ಡೆವಲಪರ್ಸ್ ಪಾತ್ರ ಪ್ರಮುಖ. ಬಳ್ಳಾರಿ ಸಂಗನಕಲ್ ರಸ್ತೆ, ಕಪ್ಪಗಲ್, ತಾಳೂರು, ಸಿರುಗುಪ್ಪ, ಹೊಸಪೇಟೆ ಸೇರಿ ಅನಂತಪುರ ರಸ್ತೆಯಲ್ಲಿ ವಿವಿಧ ಬಡಾವಣೆ ಅಭಿವೃದ್ಧಿ ಪಡಿಸುವ ಜತೆಗೆ ಜಿಲ್ಲೆಯ ಕುರುಗೋಡು, ಎಮ್ಮಿಗನೂರು ಮತ್ತು ಕುಡಿತಿನಿಯಲ್ಲಿ ಅಭಿವೃದ್ಧಿ ಪಡಿಸಿ, ಆ ಭಾಗದಲ್ಲಿ ಜನಜನಿತವಾಗಿದೆ.
ಬಡಾವಣೆಯಲ್ಲಿ ವಿದ್ಯುತ್ತಿನ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆ, ಸುಸಜ್ಜಿತವಾದ ಡಾಂಬರ್ ರಸ್ತೆ, ಬಡಾವಣೆಯ ರಸ್ತೆಯ ಬದಿಗಳಲ್ಲಿ ಮತ್ತು ನಿವೇಶನಗಳ ಮುಂದುಗಡೆ ಪ್ಲಾಂಟೇಷನ್, ನಿರೀಕ್ಷೆಗಿಂತ ಉತ್ತಮವಾಗಿ ಉದ್ಯಾನವನಗಳ ಅಭಿವೃದ್ಧಿ, ಅದರಲ್ಲೂ ಬಡಾವಣೆಗಳ ನಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸೂಕ್ತ ನಿರ್ವಹಣೆಯೇ ನೈರುತಿ ಡೆವಲಪರ್ಸ್ ವಿಶ್ವಾಸಾರ್ಹತೆಯನ್ನು ಹೊಂದಲು ಸಾಧ್ಯವಾಗಿದೆ.
ಬೆಂಗಳೂರು ಮಾದರಿಯ ಡ್ರೀಮ್ ಪ್ರಾಜೆಕ್ಟ್
ಕಪ್ಪಗಲ್ ರಸ್ತೆಯಲ್ಲಿ 13.64 ಎಕರೆ ಪ್ರದೇಶದಲ್ಲಿ ಸಿಎಲ್ಆರ್ ಸ್ಮಾಟಿ ಸಿಟಿ ಹೆಸರಿನಲ್ಲಿ ವಿಲ್ಲಾ ಪ್ರಾಜೆಕ್ಟ್ ವಿಥ್ ಗೇಟೆಡ್ ಕಮ್ಯುನಿಟಿ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಅತ್ಯಂತ ಉತ್ಕೃಷ್ಟವಾಗಿ ಅಭಿವೃದ್ಧಿ ಪಡಿಸಿರುವ ಬಡಾವಣೆಗಳ ಮಾದರಿಯನ್ನು ನೋಡಿರುವ ಹರಿಪ್ರಸಾದ್ ರೆಡ್ಡಿಯವರು ಬಳ್ಳಾರಿಯಲ್ಲೂ ಅಂತಹದ್ದೊಂದು ಪ್ರಾಜೆಕ್ಟ್ ಅಭಿವೃದ್ಧಿ ಪಡಿಸಬೇಕೆಂಬ ಮಹಾದಾಸೆಯಿಂದ ಮುನ್ನುಗಿ, ಈಗಾಗಲೇ ಯಶಸ್ಸು ಕಂಡಿದ್ದಾರೆ.
ಇಲ್ಲಿ ಕ್ಲಬ್ ಹೌಸ್, ಒಳಾಂಗಣ-ಹೊರಾಂಗಣ ಮೈದಾನ, ಓಪನ್ ಥಿಯೇಟರ್, ಮೆಡಿಟೇಷನ್ ಹಟ್ಸ್, ಈಜುಕೋಳ (ಸ್ವಿಮ್ಮಿಂಗ್ ಪೂಲ್), ಮಕ್ಕಳ ಆಟದ ಮೈದಾನ, ಉದ್ಯಾನವನ, ಹಿರಿಯ ನಾಗರಿಕರಿಗೆ ಧ್ಯಾನಕೇಂದ್ರ, ಕೊಕೊನೆಟ್ ಗ್ರೂ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೇ ಇಂಟರ್ ನ್ಯಾಷನಲ್ ದೆಹಲಿ ಪಬ್ಲಿಕ್ ಸ್ಕೂಲ್ ಕೂಡ ಆರಂಭವಾಗಿದೆ. ಇಲ್ಲಿ ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ, ಆದರೆ ನಿವೇಶನ ಮಾರಾಟಕ್ಕೆ ಅವಕಾಶವಿಲ್ಲ. 30×40, 30×50 ಮತ್ತು 40×50 ಅಳತೆಯ ನಿವೇಶನದಲ್ಲಿ ಡುಪ್ಲೆಕ್ಸ್ ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಕೊಡಲಾಗುತ್ತದೆ. ಇಲ್ಲಿ ಮನೆಗಳ ಸುತ್ತಲೂ ಉದ್ಯಾನವನದ ವ್ಯವಸ್ಥೆ ಮಾಡಿರುವುದು ಈ ಲೇಔಟ್‌ನ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ.
ನೈರುತಿ ಡೆವಲಪರ್ಸ್ ಅಭಿವೃದ್ಧಿ ಪಡಿಸಿರುವ ಬಡಾವಣೆಗಳಿವು
ಸಂಗನಕಲ್ ರಸ್ತೆಯಲ್ಲಿ ಡಾಲರ್ ಕಾಲೋನಿಯನ್ನು 3 ಎಕರೆಯಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಎಸ್.ಆರ್. ಕಾಲೋನಿಯನ್ನು 6 ಎಕರೆಯಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಎಸ್ಎಲ್‌ವಿ ಕಾಲೋನಿಯನ್ನು 2 ಎಕರೆಯಲ್ಲಿ, ಕೆಬಿಆರ್ ಲೇಔಟನ್ನು 15 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಕಪ್ಪಗಲ್ ರಸ್ತೆಯಲ್ಲಿ ದೇವಾಸ್ ಕಾಲೋನಿಯನ್ನು 6 ಎಕರೆ ಪ್ರದೇಶದಲ್ಲಿ, ಸಿಎಲ್ಆರ್ (ಸಿ.ಲಕ್ಷ್ಮಿರೆಡ್ಡಿ) ಸ್ಮಾರ್ಟ್ ಸಿಟಿಯನ್ನು 13.64 ಎಕರೆ ಪ್ರದೇಶದಲ್ಲಿ, ಕೃಷ್ಣಾ ಬಡಾವಣೆಯನ್ನು 13 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಾಳೂರು ರಸ್ತೆಯಲ್ಲಿ ಶಿವಲಿಂಗೇಶ್ವರ ನಗರವನ್ನು 12.5 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ, ಹೊಸಪೇಟೆ ರಸ್ತೆಯಲ್ಲಿ ತುಳಸಿ ಎನ್ಕ್ಲೇವ್ ಅನ್ನು 5 ಎಕರೆ ಪ್ರದೇಶದಲ್ಲಿ, ಅನಂತಪುರ ರಸ್ತೆಯಲ್ಲಿ ಶಾಂತಾ ಎನ್ಕ್ಲೇವ್ ಅನ್ನು 4.5 ಎಕರೆ ಪ್ರದೇಶದಲ್ಲಿ, ಬಳ್ಳಾರಿ ಜಿಲ್ಲೆಯ ಕುಡತಿನಿಯಲ್ಲಿ ಗಣೇಶ್ ಎನ್ಕ್ಲೇವ್ ಅನ್ನು 4.5 ಎಕರೆ ಪ್ರದೇಶದಲ್ಲಿ, ಕುರುಗೋಡಿನಲ್ಲಿ ಶ್ರೀ ನಂದಿ ಲೇಔಟ್ ಅನ್ನು 21 ಎಕರೆ ಪ್ರದೇಶದಲ್ಲಿ ಎಮ್ಮಿಗನೂರಿನ ಸಾಯಿಗಣೇಶ್ ಎನ್ಕ್ಲೇವ್ ಅನ್ನು 5 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಇನ್ನು ಹಲವು ಯೋಜನೆಗಳ ಇವರ ಕೈಯಲ್ಲಿವೆ.
ಸಮಾಜ ಸೇವೆಗೆ ಸೈ
ಈಗಾಗಲೇ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದಕ್ಕಾಗಿಯೇ ನೈರುತಿ ಚಾರಿಟೇಬಲ್ ಟ್ರಸ್ಟ್ ಹುಟ್ಟು ಹಾಕಿಕೊಂಡು ಅಧಿಕೃತವಾಗಿ ಸಾಮಾಜಿಕ ಸೇವೆ ಮಾಡಲು ಸಂಕಲ್ಪ ಮಾಡಿದ್ದಾರೆ. ತಂದೆಯ ಹೆಸರಿನಲ್ಲಿಯೇ ಸಿ.ಲಕ್ಷಿರೆಡ್ಡಿ ಅವರ ಹೆಸರಿನಲ್ಲಿ ಡ್ರೀಮ್ ಪ್ರಾಜೆಕ್ಟ್ ಆರಂಭಿಸಿದ್ದಾರೆ. ನೈರುತಿ ಡೆವಲಪರ್ಸ್ ಎಂದು ಹೆಸರಿಡಲು ತಂದೆಯೇ ಪ್ರೇರಣೆ ಎಂದು ಹೇಳುತ್ತಾರೆ ಹರಿಪ್ರಸಾದ ರೆಡ್ಡಿ. ನೈರುತಿ ಎಂದಾಕ್ಷಣ ಯಾವುದೇ ಅನುಮಾನವಿಲ್ಲದೆ ನಿವೇಶನ ಖರೀದಿ ಮಾಡಬಹುದು ಎಂಬ ನಂಬಿಕೆಯನ್ನು ಗಳಿಸಿಕೊಂಡಿದೆ ಎಂದರೆ ಅತಿಶಯೋಕ್ತಿ ಎನಿಸದು, ಇದಕ್ಕೆ ಈವರೆಗೆ ಮಾರಾಟವಾಗಿರುವ ನಿವೇಶನಗಳೇ ಸಾಕ್ಷಿ. ನೀವೊಮ್ಮೆ ಡ್ರಿಮ್ ಪ್ರಾಜೆಕ್ಟ್ ಸ್ಥಳಕ್ಕೆ ಹೋಗಿ ಭೇಟಿ ಕೊಡಿ, ವಾಸ್ತವತೆ ತಮಗೆ ತಿಳಿಯಲಿದೆ ಎಂದೂ ಅವರು ಆಹ್ವಾನ ನೀಡುತ್ತಾರೆ.
ಇವರನ್ನು ಹೀಗೆ ಸಂಪರ್ಕಿಸಿ
ಸಿ.ಹರಿಪ್ರಸಾದ ರೆಡ್ಡಿ, ಎಕ್ಸಿಕ್ಯೂಟಿವ್ ಡೈರೆಕ್ಟರ್
ನೈರುತಿ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಪ್ರವೇಟ್ ಲಿಮಿಟೆಡ್,
ಕಪ್ಪಗಲ್ ರಸ್ತೆ.
ಇ-ಮೇಲ್ [email protected]
ಮೊಬೈಲ್- 98801 34569, 99166 34569
ಇದನ್ನೂ ಓದಿ | ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಹಂಚಿಕೆ ಕೊರತೆ ಭರ್ತಿಗೆ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema23 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema21 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ17 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
South Cinema24 hours ago
Sara Ali Khan: ಶುಭ್ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ
-
ಪ್ರಮುಖ ಸುದ್ದಿ22 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ23 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್