ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಡಿಸೈನರ್ ಬ್ರೈಡಲ್ ವೆಲ್ವೆಟ್ ಲೆಹೆಂಗಾಗಳು (Velvet Lehenga Fashion) ಟ್ರೆಂಡಿಯಾಗಿವೆ. ಈ ಸೀಸನ್‌ನ ಚುಮು ಚುಮು ಚಳಿಗೆ ಬೆಚ್ಚಗಿಡುವ ಈ ವೆಲ್ವೆಟ್ ಫ್ಯಾಬ್ರಿಕ್‌ನ ಡಿಸೈನರ್ ಲೆಹೆಂಗಾಗಳು ಮದುಮಗಳ ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುತ್ತಿವೆ.
ಬಗೆಬಗೆಯ ವೆಲ್ವೆಟ್ ಲೆಹೆಂಗಾ
ಸಿಲ್ಕ್ ವೆಲ್ವೆಟ್, ರಯಾನ್ ವೆಲ್ವೆಟ್, ಲೆನಿನ್ ವೆಲ್ವೆಟ್, ಸಿಂಥೆಟಿಕ್, ಕ್ರಶ್ಡ್ ವೆಲ್ವೆಟ್ ಹಾಗೂ ಮೊಹೈರ್ ವೆಲ್ವೆಟ್ ಫ್ಯಾಬ್ರಿಕ್‌ನ ಲೆಹೆಂಗಾಗಳು ಹೆವ್ವಿ ವರ್ಕ್ ಹಾಗೂ ಡಿಸೈನ್‌ನಲ್ಲಿ ಆಗಮಿಸಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸಾಫ್ಟ್ ಸಿಲ್ಕ್ ಫ್ಯಾಬ್ರಿಕ್‌ನವು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಇದಕ್ಕೆ ಕಾರಣ, ಲೈಟ್‌ವೈಟ್ ಹಾಗೂ ಧರಿಸಿದಾಗ ಫ್ಲೋ ಆಗುವ ಗುಣ. ಇನ್ನು, ಸಾಕಷ್ಟು ಲೆಹೆಂಗಾಗಳು ಸೆಮಿ ಸ್ಟಿಚ್‌ನಲ್ಲಿ ದೊರಕುತ್ತಿದ್ದು, ಆಯಾ ಮದುಮಗಳ ಅಭಿಲಾಷೆಗೆ ತಕ್ಕಂತೆ ಹೊಲೆಸಿಕೊಳ್ಳಬಹುದು. ಇದನ್ನು ಆಯಾ ಶಾಪಿಂಗ್ ಸೆಂಟರ್ ಹಾಗೂ ಬೋಟಿಕ್‌ನವರೇ ಖುದ್ದು ಆಸಕ್ತಿವಹಿಸಿ ಮಾಡಿಕೊಡುತ್ತಾರೆ.
ವಿಂಟರ್ ಡಾರ್ಕ್ ಶೇಡ್ಸ್ ವೆಲ್ವೆಟ್ ಲೆಹೆಂಗಾ
ಈ ಸೀಸನ್‌ನಲ್ಲಿ ಡಾರ್ಕ್ ಶೇಡ್‌ನ ವೆಲ್ವೆಟ್ ಲೆಹೆಂಗಾಗಳು ಚಾಲ್ತಿಯಲ್ಲಿವೆ. ವೈನ್ ಕಲರ್, ಬ್ಲಡ್ ರೆಡ್, ಪರ್ಪಲ್, ಮೆಜೆಂತಾ, ಇಂಕ್ ಬ್ಲ್ಯೂ, ರಾಯಲ್ ಬ್ಲ್ಯೂ, ಚಾಕೋಲೇಟ್ ಶೇಡ್‌ನವು ಹೆಚ್ಚು ಮಾರಾಟವಾಗುತ್ತಿವೆ. ಹಾಗೆಂದು ಇವೆಲ್ಲಾ ಸಾದಾ ಫ್ಯಾಬ್ರಿಕ್‌ನದ್ದಲ್ಲ! ಬದಲಿಗೆ ಹ್ಯಾಂಡ್ ಎಂಬ್ರಾಯ್ಡರಿ, ಮೆಷಿನ್ ಎಂಬ್ರಾಯ್ಡರಿ, ಬೂಟಾ ಹೀಗೆ ನಾನಾ ವಿನ್ಯಾಸಗಳು ಹರಡಿರುತ್ತವೆ. ಆಯಾ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ. ಹ್ಯಾಂಡ್ ಎಂಬ್ರಾಯ್ಡರಿ ವೆಲ್ವೆಟ್ ಲೆಹೆಂಗಾಗಳು ಕೊಂಚ ದುಬಾರಿ. ಎರಡ್ಮೂರು ಸಾವಿರ ರೂ.ಗಳಿಂದ ಹಿಡಿದು ನಾಲ್ಕೈದು ಲಕ್ಷ ರೂ,ಗಳವರೆಗೂ ದೊರೆಯುತ್ತವೆ. ಇನ್ನು ಸೆಲೆಬ್ರೆಟಿ ಡಿಸೈನರ್‌ಗಳಾದ್ದಾದಲ್ಲಿ ಇನ್ನು ಬೆಲೆಬಾಳುವಂತವು ಸಿಗುತ್ತವೆ ಎನ್ನುತ್ತಾರೆ ಲೆಹೆಂಗಾ ಡಿಸೈನರ್ಸ್.
ಡಿಸೈನರ್ಸ್ ಬ್ರಾಂಡ್ ವೆಲ್ವೆಟ್ ಲೆಹೆಂಗಾಗಳ ರಿಪ್ಲಿಕಾ
ಲಕ್ಷಗಟ್ಟಲೇ ಸುರಿದು ಕೊಳ್ಳಲಾಗದಿದ್ದಲ್ಲಿ, ಅವುಗಳ ರಿಪ್ಲಿಕಾ ವೆಲ್ವೆಟ್ ಲೆಹೆಂಗಾಗಳು ಇದೀಗ ಲಭ್ಯ. ಸಾಮಾನ್ಯ ಯುವತಿಯರು ಫೋಟೋ ಶೂಟ್‌ಗಾಗಿ ಹಾಗೂ ಲಕ್ಷುರಿ ಲುಕ್‌ಗಾಗಿ ಇಂತಹವನ್ನೂ ಖರೀದಿಸುತ್ತಾರೆ ಎನ್ನುತ್ತಾರೆ ಡಿಸೈನರ್ಸ್.
ವೆಲ್ವೆಟ್ ಲೆಹೆಂಗಾ ಆಯ್ಕೆ ಹೇಗೆ?
- ಸ್ಲಿಮ್ ಇರುವವರಿಗೆ ವೆಲ್ವೆಟ್ ಲೆಹೆಂಗಾ ಬೆಸ್ಟ್ ಚಾಯ್ಸ್.
- ಸಿಲ್ಕ್ ವೆಲ್ವೆಟ್ ಲೆಹೆಂಗಾ ಎಲ್ಲರಿಗೂ ಆಕರ್ಷಕವಾಗಿ ಕಾಣುತ್ತದೆ.
- ಮದುಮಗಳ ಸ್ಕಿನ್ ಟೊನ್ಗೆ ಮ್ಯಾಚ್ ಆಗುವ ಕಲರ್ ಆಯ್ಕೆ ಮಾಡಿ.
- ರಿಪ್ಲಿಕಾ ಲೆಹೆಂಗಾಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ನೆನಪಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Kundan Jhumka Fashion: ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಡಿಷನಲ್ ಜುಮಕಿ ಕುಂದನ್ ಜುಮ್ಕಾ ಆದ ಕಥೆ!