ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಮೆನ್ಸ್ ಫ್ಯಾಷನ್‌ನಲ್ಲಿ ನಟ ವಿಜಯ್ ವರ್ಮಾ ಧರಿಸಿದ್ದ ವೆಲ್ವೆಟ್ ಪ್ಯಾಂಟ್ ಸೂಟ್ (Mens Velvet Pant Suit) ಈಗ ಟ್ರೆಂಡಿಯಾಗಿದೆ. ಪುರುಷರೂ ಕೂಡ ವೆಲ್ವೆಟ್ ಸೂಟ್ ಧರಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ಫಾರ್ಮಲ್ಸ್ ಸೂಟ್‌ನಲ್ಲಿದ್ದ ಈ ಸ್ಟೈಲಿಂಗ್ ಇದೀಗ ನಮ್ಮಲ್ಲೂ ಸಾಮಾನ್ಯವಾಗತೊಡಗಿದೆ. ಸ್ಟಾರ್‌ಗಳಿಗೆ ಸೀಮಿತವಾಗಿದ್ದ ವೆಲ್ವೆಟ್ ಪ್ಯಾಂಟ್ ಸೂಟ್ ಇದೀಗ ಸಾಮಾನ್ಯರನ್ನು ಆವರಿಸಿಕೊಳ್ಳತೊಡಗಿದೆ. ಇನ್ನು ಮನೀಶ್ ಮಲ್ಹೋತ್ರಾ ಲೆಬೆಲ್‌ನ ವೆಲ್ವೆಟ್ ಪ್ಯಾಂಟ್ ಸೂಟನ್ನು ನಟ ವಿಜಯ್ ವರ್ಮಾ ಧರಿಸಿದ ನಂತರ, ಈ ಔಟ್‌ಫಿಟ್ ಫ್ಯಾಷನ್ ಪ್ರಿಯ ಯುವಕರನ್ನು ಆಕರ್ಷಿಸಿದೆ.
ಫ್ಯಾಷನ್ ವಿಮರ್ಶಕರು ಹೇಳುವುದೇನು?
ಬಾಲಿವುಡ್ ನಟ ವಿಜಯ್ ವರ್ಮಾ ಅವಾರ್ಡ್ ಸಮಾರಂಭಕ್ಕೆಂದು ಧರಿಸಿದ್ದ ಇಂಕ್ ಬ್ಲ್ಯೂ ವೆಲ್ವೆಟ್ ಪ್ಯಾಂಟ್ ಸೂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದೇ ತಡ, ಫ್ಯಾಷನ್ ಲೋಕವು ಮತ್ತಷ್ಟು ಇಂತಹ ಸೂಟ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಪ್ರತಿಷ್ಠಿತ ಬ್ರಾಂಡ್‌ಗಳಲ್ಲಿ ಮಾತ್ರ ಲಭ್ಯವಿದ್ದ ಈ ಶೈಲಿಯ ವೆಲ್ವೆಟ್ ಸೂಟ್‌ಗಳನ್ನು ಇದೀಗ ಲೋಕಲ್ ಮೆನ್ಸ್ವೇರ್ ಬೋಟಿಕ್‌ಗಳು ಹಾಗೂ ಫ್ಯಾಷನ್‌ವೇರ್ ಬ್ರಾಂಡ್‌ಗಳು ರಿಪ್ಲಿಕಾ ಸೂಟ್‌ಗಳನ್ನು ಸಿದ್ಧಪಡಿಸಲು ಮುಂದಾಗಿವೆ. ಒಟ್ಟಿನಲ್ಲಿ, ಈ ವಿಂಟರ್ ಸೀಸನ್‌ಗೆ ಮ್ಯಾಚ್ ಆಗುವ ಹಾಗೂ ಬೆಚ್ಚಗಿಡುವ ಈ ವೆಲ್ವೆಟ್ ಪ್ಯಾಂಟ್ ಸೂಟ್‌ಗಳು ಸದ್ಯ ಟ್ರೆಂಡ್ ಲಿಸ್ಟ್‌ನಲ್ಲಿವೆ.
ಸಿಲ್ಕ್ ವೆಲ್ವೆಟ್ ಪ್ಯಾಂಟ್ ಸೂಟ್
ಅಂದಹಾಗೆ, ಅತ್ಯುತ್ತಮ ವೆಲ್ವೆಟ್ ಸಿಲ್ಕ್ ಫ್ಯಾಬ್ರಿಕ್ ಕೊಂಚ ದುಬಾರಿ. ಇನ್ನು ಇಂಟರ್‌ನ್ಯಾಷನಲ್ ಬ್ರಾಂಡ್‌ಗಳು ತಮ್ಮ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ವೆಲ್ವೆಟ್ ಪ್ಯಾಂಟ್ ಸೂಟ್‌ಗಳು ಲಕ್ಷಗಟ್ಟಲೆ ಬೆಲೆಬಾಳುತ್ತವೆ. ಇನ್ನು ಇದಕ್ಕೆ ತದ್ವಿರುದ್ಧ ಎಂಬಂತೆ, ಸಾಮಾನ್ಯ ಟೈಲರ್ ಹಾಗೂ ನುರಿತ ಮಾಸ್ಟರ್‌ಗಳು ಇವನ್ನು ವೆಡ್ಡಿಂಗ್ ರಿಸಪ್ಷನ್‌ಗಳಲ್ಲಿ ಮದುಮಗ ಧರಿಸಲು ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿದ್ಧಪಡಿಸಿಕೊಡುತ್ತಾರೆ. ಬ್ರಾಂಡ್ ಹೆಸರಿರುವುದಿಲ್ಲ ಅಷ್ಟೇ ವ್ಯತ್ಯಾಸ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಮೆನ್ಸ್ ವೆಲ್ವೆಟ್ ಪ್ಯಾಂಟ್ ಸೂಟ್ ಬಗ್ಗೆ ತಿಳಿದಿರಬೇಕಾದದ್ದು
- ಶೇಡ್ಸ್ ಹೊಂದುವಂಥದ್ದನ್ನು ಮಾತ್ರ ಆಯ್ಕೆ ಮಾಡಿ.
- ಸ್ಲಿಮ್ ಫಿಟ್ ಆದಲ್ಲಿ ಪರ್ಫೆಕ್ಟ್ ಫಿಟ್ ಆಗಿ ಕೂರುತ್ತದೆ.
- ಮದುವೆಗಾದಲ್ಲಿ ಎಕ್ಸ್ಟ್ರಾ ವರ್ಕ್ ಇರುವಂತದ್ದನ್ನು ಚೂಸ್ ಮಾಡಿ.
- ಈ ಸೂಟ್ ಕಚೇರಿಗೆ ಧರಿಸಲು ಹೊಂದದು.
- ಯಾವುದೇ ಸಮಾರಂಭಗಳಲ್ಲೂ ಸೂಟ್ ಆಗುತ್ತದೆ.
- ಡಿಸೈನರ್ ಬಟನ್ ಇರುವಂತವು ಮತ್ತಷ್ಟು ಮೆರಗು ನೀಡುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Jewel Fashion: ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಡಿಸೈನ್‌ನ ಮುತ್ತಿನ ಮೂಗುತಿಗಳಿವು