Site icon Vistara News

Ways To Stay Young: ಸಮುದ್ರದಾಳದಲ್ಲಿ ದಿನ ಕಳೆದರೆ ಇಳಿ ವಯಸ್ಸಲ್ಲೂ ಯೌವನ ಮರಳಿ ಬರುತ್ತದೆ!

Ways To Stay Young

56 ವರ್ಷದ ನಿವೃತ್ತ ನೌಕಾದಳದ ಅಧಿಕಾರಿ ಜೋಸೆಫ್‌ ಡಿಟೂರಿ ಇತ್ತೀಚೆಗೆ 93 ದಿನಗಳ ಕಾಲ ಅಟ್ಲಾಂಟಿಕ್‌ ಸಮುದ್ರದಾಳದಲ್ಲಿ ವಾಸಿಸುವ ಮೂಲಕ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ. ಅಷ್ಟೇ ಅಲ್ಲ, ಸಾಗರದಾಳದಲ್ಲಿ ಜೀವಿಸುವುದರಿಂದ ತಮ್ಮ ವಯಸ್ಸನ್ನೂ ಕಡಿಮೆಗೊಳಿಸಿರುವುದು ಇಲ್ಲಿ ಅಚ್ಚರಿಯ ವಿಷಯ.
ಹೌದು. ಒತ್ತಡದ ಪಾಡ್‌ ಒಂದರೊಳಗೆ 93 ದಿನಗಳ ಕಾಲ ಸಮುದ್ರದಾಳದಲ್ಲಿ ವಾಸಿಸಿದ್ದರಿಂದ ಸುಮಾರು ಹತ್ತು ವರ್ಷಗಳಷ್ಟು ವಯಸ್ಸಿನಲ್ಲಿ ಇವರು ಹಿಂದೆ ಹೋಗಿದ್ದಾರಂತೆ. ಅಂದರೆ, ಹತ್ತು ವರ್ಷಗಳಷ್ಟು ಹಿಂದಿನ ದೈಹಿಕ ಆರೋಗ್ಯ ಇವರಿಗೆ ಮರುಕಳಿಸಿದ್ದು, ಇದರಿಂದ ಸಾಗರದಾಳದಲ್ಲಿ ವಾಸಿಸುವ ಮೂಲಕ ಯೌವನವನ್ನು ಮರಳಿ ಪಡೆಯಬಹುದು ಎಂದು (Ways To Stay Young) ಇವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ.

ದಾಖಲೆ ಅಷ್ಟೇ ಅಲ್ಲ

ಸಮುದ್ರದಾಳದಲ್ಲಿ 93 ದಿನಗಳ ಕಾಲ ಜೀವಿಸುವ ಮೂಲಕ ದಾಖಲೆ ಬರೆಯುವುದಷ್ಟೇ ಅಲ್ಲ, ಮಾನಸಿಕವಾಗಿ, ದೈಹಿಕವಾಗಿ, ಮತ್ತಷ್ಟು ಆರೋಗ್ಯವಂತರಾಗಿ, ಉಲ್ಲಾಸದಾಯಕ ವ್ಯಕ್ತಿಯಾಗಿ ಹೊರ ಜಗತ್ತಿಗೆ ಮರಳಿದ್ದಾರೆ. ಒತ್ತಡದ ಪಾಡ್‌ ಒಂದರಲ್ಲಿ ಸಮುದ್ರದಾಳದಲ್ಲಿ ಜೀವಿಸಿದ ಕಾರಣ, ಮನುಷ್ಯನ ದೇಹದ ಮೇಲೆ ಇದು ಬೀರುವ ಪರಿಣಾಮ ಇತ್ಯಾದಿಗಳನ್ನು ಡಿಟೂರಿ ಅವರು ಜಗತ್ತಿಗೆ ಸಾಬೀತುಪಡಿಸಿ ತೋರಿಸಿದ್ದಾರೆ. ಹೊರ ಬಂದ ಮೇಲೆ ಅವರ ಮೇಲೆ ನಡೆದ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳು, ಈತ ಸಾಬೀತುಪಡಿಸಿದ ವಿಚಾರಗಳನ್ನು ಅಧಿಕೃತಗೊಳಿಸಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಚಾರದಲ್ಲಿ 93 ದಿನಗಳಲ್ಲಿ ಡಿಟೂರಿ ಅವರು 10 ವರ್ಷಗಳಷ್ಟು ಯೌವನವನ್ನು ಮರಳಿ ಪಡೆದಿದ್ದಾರೆ ಎಂದು ದೃಢಪಡಿಸಿವೆ. ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಡಿಟೂರಿ ಅವರ ಸ್ಟೆಮ್‌ ಸೆಲ್‌ (ಕಾಂಡ ಕೋಶ)ಗಳು ಗಣನೀಯವಾಗಿ ಏರಿದ್ದು, ಕೊಲೆಸ್ಟೆರಾಲ್‌ ಮಟ್ಟವು 72 ಪಾಯಿಂಟ್‌ಗಳಷ್ಟು ಕೆಳಗಿಳಿದಿವೆ. ದೇಹದಲ್ಲಿದ್ದ ಇತರ ಯುರಿಯೂತದ ಲಕ್ಷಣಗಳೂ ಕಡಿಮೆಯಾಗಿವೆ. ನಿದ್ದೆಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದ್ದು, ಮುಖ್ಯವಾಗಿ ರಾತ್ರಿಯ ಗಾಢ ನಿದ್ದೆಯ ಗುಣಮಟ್ಟ ಶೇ.೬೦ರಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ಪ್ರತಿ ವ್ಯಕ್ತಿಯ ವರ್ಣತಂತುಗಳು ವಯಸ್ಸಾದ ಹಾಗೆ ಚಿಕ್ಕದಾಗುತ್ತಾ ಬರುವುದರಿಂದ, ಇಲ್ಲಿ, ಡಿಟೂರಿ ಅವರ ವರ್ಣತಂತು ಶೇ.೨೦ರಷ್ಟು ಉದ್ದವಾಗಿದ್ದು, ಇದು ಯೌವನವನ್ನು 10 ವರ್ಷಗಳಷ್ಟು ಮರಳಿಸಿದೆ ಎಂದು ವೈದ್ಯಕೀಯ ಪರೀಕ್ಷೆಗಳಿಂದ ತಿಳಿದುಬಂದಿದೆ.

ಆರೋಗ್ಯ ಸುಧಾರಣೆ

ಡಿಟೂರಿ ಅವರ ಮಿದುಳಿನ ಆರೋಗ್ಯ ಕೂಡಾ ಸಾಕಷ್ಟು ಸುಧಾರಿಸಿದ್ದು, ಅವರು ಮತತೆ ಲವಲವಿಕೆಯಿಂದ ಜೀವನೋತ್ಸಾಹದಿಂದ ಮರಳಿ ಬಂದಿರುವುದು ವಿಶೇಷ. ಸಮುದ್ರದಾಳದಲ್ಲಿ ಹೈಪರ್‌ಬಾರಿಕ್‌ ಚೇಂಬರ್‌ ಒಳಗೆ ಅವರು 93 ದಿನಗಳ ಕಾಲ ಉಳಿದುಕೊಂಡಿದ್ದು, ಇದು ಅವರ ಒಟ್ಟಾರೆ ಆರೋಗ್ಯಕ್ಕೆ ಭಾರೀ ಸಕಾರಾತ್ಮಕ ಪರಿಣಾಮ ಬೀರಿದೆ. ಡಿಟೂರಿ ಅವರೇ ಹೇಳುವಂತೆ, 100 ಚದರ ಅಡಿಯ ಚೇಂಬರ್‌ ಒಳಗೆ ಸಮುದ್ರದಾಳದಲ್ಲಿ ಜೀವಿಸುವ ಸಂದರ್ಭದಲ್ಲಿ ವಾರಕ್ಕೆ ಐದು ದಿನಗಳ ಕಾಲ ಪ್ರತಿ ನಿತ್ಯವೂ ಒಂದು ಗಂಟೆಗಳ ಕಾಲ ವ್ಯಾಯಾಮ ಇತ್ಯಾದಿಗಳನ್ನು ಅವರು ಮಾಡಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯ ಸದೃಢವಾಗಿರಲು ಹೊರಗೆ ನೆಲದ ಮೇಲಿದ್ದಾಗ ಮಾಡುವ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ಶಿಸ್ತನ್ನು ಪಾಲಿಸಿದ್ದೂ ಕೂಡಾ ಈ ಆರೋಗ್ಯ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ICMR Guidelines: ಶಿಶು ಆಹಾರ ಹೇಗಿರಬೇಕು? ಐಸಿಎಂಆರ್‌ ಮಾರ್ಗಸೂಚಿ ಹೀಗಿದೆ

ಸಕಾರಾತ್ಮಕ ಪರಿಣಾಮ

ಜನರು ಪ್ರವಾಸಕ್ಕಾಗಿ ಆಗಾಗ ಹೊರಗೆ ತಿರುಗಾಡಿ ಬರುವ ಬದಲು ಹೀಗೆ ಎರಡು ವಾರಗಳ ಕಾಲ ಸಮುದ್ರದಾಳದಲ್ಲಿ ಕಳೆಯಬಹುದು. ಇದು ದೇಹಾರೋಗ್ಯಕ್ಕೆ, ಮಾನಸಿಕ ಆರೋಗ್ಯಕ್ಕೆ ಕೊಡುವ ಸಕಾರಾತ್ಮಕ ಪರಿಣಾಮವನ್ನು ಅನುಭವಿಸಿ ನೋಡಬಹುದು ಎಂದು ಅವರು ಹೇಳಿದ್ದಾರೆ. ಡಿಟೂರಿ ಅವರು ಈ ಹಿಂದೆಯೂ 2023ರಲ್ಲಿ ಸಮುದ್ರದಾಳದಲ್ಲಿ 74 ದಿನಗಳ ಕಾಲ ಕಳೆದಿದ್ದರು. ಇದೇ ಮೊದಲ ಬಾರಿಗೆ ಸಮುದ್ರದಾಳದಲ್ಲಿ 93 ದಿನಗಳನ್ನು ಕಳೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ಹಿಂದೆಯೂ 100 ದಿನಗಳ ಕಾಲ ಸಮುದ್ರದಡಿಯಲ್ಲಿ 30 ಅಡಿ ಆಳದಲ್ಲಿ ಸ್ಟೀಲ್‌ ಹಾಗೂ ಗ್ಲಾಸ್‌ನಿಂದ ಮಾಡಿದ ಹೊಟೇಲ್‌ ಒಂದರಲ್ಲಿ ಇರುವ ಮೂಲಕವೂ ದಾಖಲೆ ಬರೆದಿದ್ದರು.

Exit mobile version