Site icon Vistara News

Wedding Bridal Fashion : ಮದುವೆಯಲ್ಲಿ ಸೆಲೆಬ್ರೆಟಿ ಬ್ರೈಡ್‌ನಂತೆ ಕಾಣಿಸಬೇಕೆ? ಇಲ್ಲಿದೆ 5 ಐಡಿಯಾ

Wedding Bridal Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಿಮ್ಮ ಮದುವೆಯಲ್ಲಿ ನೀವು ಸೆಲೆಬ್ರೆಟಿ ಇಲ್ಲವೇ ಸ್ಟಾರ್‌ ಬ್ರೈಡ್‌ನಂತೆ ಕಾಣಿಸಿಕೊಳ್ಳಬೇಕೆ? ಖಂಡಿತ ಸಾಧ್ಯ! ಹಾಗಾದಲ್ಲಿ ಈ ಕೆಳಗಿನ ೫ ಸೂತ್ರಗಳನ್ನು (5 things a bride needs) ಪಾಲಿಸಿ ನೋಡಿ. ನಿಮ್ಮ ಈ ಕನಸು ನನಸಾಗುವುದು ಎನ್ನುತ್ತಾರೆ ವೆಡ್ಡಿಂಗ್‌ ಸ್ಪೆಷಲ್‌ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ನೀವು ಮಾಡಬೇಕಾದ್ದೀಷ್ಟೇ! ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳನ್ನು ಕರಾರುವಕ್ಕಾಗಿ ಪಾಲಿಸಬೇಕು ಎನ್ನುತ್ತಾರೆ.

1. ಡಿಸೈನರ್‌ ಟ್ರೆಡಿಷನಲ್‌ ಔಟ್‌ಫಿಟ್ಸ್‌ ಆಯ್ಕೆ

ಮದುವೆಯಲ್ಲಿ ಧರಿಸಲು ಸಿಂಪಲ್‌ ಲುಕ್‌ ನೀಡುವ ಟ್ರೆಡಿಷನಲ್‌ ಔಟ್‌ಫಿಟ್‌ಗಳ ಬದಲು ಗ್ರ್ಯಾಂಡ್‌ ಲುಕ್‌ (grand look dresses) ನೀಡುವಂತಹ ಟ್ರೆಂಡಿ ಕಲರ್‌ ಹಾಗೂ ಡಿಸೈನ್‌ ಇರುವಂಥದ್ದನ್ನು ಆಯ್ಕೆ ಮಾಡಿ. ಮದುವೆಯ ಸೀರೆ ಕೂಡ ಗ್ರ್ಯಾಂಡ್‌ ಲುಕ್‌ ನೀಡುವಂಥದ್ದಾಗಿರಬೇಕು. ಸಾದಾ ಸೀರೆ ಅವಾಯ್ಡ್‌ ಮಾಡಿ. ಮಿನುಗುವ ಸೀರೆಗಳನ್ನು (grand look sarees) ಸೆಲೆಕ್ಟ್‌ ಮಾಡಿ.

2. ಸ್ಟೈಲಿಸ್ಟ್‌ಗಳ ಸಹಾಯ ಪಡೆದುಕೊಳ್ಳಿ

ಮದುವೆಯಲ್ಲಿ ಸೆಲೆಬ್ರೆಟಿ ಲುಕ್‌ಗಾಗಿ ಅಗತ್ಯವಿದ್ದಲ್ಲಿ ಸ್ಟೈಲಿಸ್ಟ್‌ಗಳ ಸಹಾಯವನ್ನು (stylist tips for dressing) ಪಡೆದುಕೊಳ್ಳಬಹುದು. ಒಂದೆರೆಡು ಸಿಟ್ಟಿಂಗ್‌ನಲ್ಲಿ ಅಗತ್ಯ ಮಾಹಿತಿ ಪಡೆಯಬಹುದು. ಇಲ್ಲವಾದಲ್ಲಿ ಶಾಪಿಂಗ್‌ ಕೂಡ ಅವರೊಂದಿಗೆ ಮಾಡಬಹುದು. ನಿಮಗೆ ಹೊಂದುವಂತಹ ಔಟ್‌ಫಿಟ್‌, ಸೀರೆಗಳನ್ನು ಮ್ಯಾಚ್‌ ಮಾಡಿ ಕೊಡುವುದರೊಂದಿಗೆ ಮದುವೆ ಮುಗಿಯುವ ತನಕ ಗೈಡ್‌ ಮಾಡುತ್ತಾರೆ.

3. ಬೋಟಿಕ್‌ಗಳಲ್ಲಿ ಪ್ಯಾಕೇಜ್‌ ಸೌಲಭ್ಯ

ಬೋಟಿಕ್‌ಗಳಲ್ಲೂ ಮದುಮಗಳ (bridal boutique) ಡಿಸೈನರ್‌ವೇರ್‌ ಹಾಗೂ ಮದುವೆ ಸೀರೆ-ಬ್ಲೌಸ್‌ ಡಿಸೈನ್‌ ಮಾಡುವ ತಲುಪಿಸುವ ಪ್ಯಾಕೇಜ್‌ಗಳನ್ನು ತೆಗೆದುಕೊಳ್ಳುತ್ತಾರೆ. ಮೆಹಂದಿ ಕಾರ್ಯಕ್ರಮದಿಂದಿಡಿದು ಮದುವೆಯ ದಿನದವರೆಗೂ ಹುಡುಗಿ ಯಾವ ಬಗೆಯ ಉಡುಪು ಹಾಗೂ ಸೀರೆ ಧರಿಸಬೇಕೆಂಬುದರ ಬಗ್ಗೆ ಪಕ್ಕಾ ಪ್ಲಾನ್‌ ಮಾಡಿ ಎಲ್ಲವನ್ನೂ ಪ್ಯಾಕೇಜ್‌ನಲ್ಲಿ ಒದಗಿಸುತ್ತಾರೆ. ಸಮಯದ ಅಭಾವವಿರುವವರು ಬೋಟಿಕ್‌ಗಳಿಗೆ ತಮ್ಮ ಕಂಪ್ಲೀಟ್‌ ಬ್ರೈಡಲ್‌ ಔಟ್‌ಫಿಟ್ಸ್‌ ಪ್ಯಾಕೇಜ್‌ ಕೊಟ್ಟುಬಿಡಬಹುದು. ಎಲ್ಲವೂ ಸರಿಯಾದ ಸಮಯಕ್ಕೆ ದೊರೆಯುತ್ತದೆ.

4. ಉತ್ತಮ ಮೇಕಪ್‌ ತಜ್ಞರನ್ನು ನೇಮಿಸಿಕೊಳ್ಳಿ

ನಿಮ್ಮ ಮದುವೆಯಲ್ಲಿ ಟ್ರೆಂಡಿ ಹಾಗೂ ಸೆಲೆಬ್ರೆಟಿ ಲುಕ್‌ ನೀಡುವಂತಹ ಎಕ್ಸ್‌ಪರ್ಟ್ ಮೇಕಪ್‌ ತಜ್ಞರನ್ನು (bridal makeup experts) ಆಯ್ಕೆ ಮಾಡಿ. ಉಡುಪು ಹಾಗೂ ಸೀರೆಯ ಲುಕ್‌ಗೆ ಸಾಥ್‌ ನೀಡುವಂತಹ ಮೇಕಪ್‌ ಸೆಲೆಬ್ರಿಟಿ ಲುಕ್‌ಗೆ ಕಾರಣವಾಗಬಲ್ಲದು. ಇಡೀ ಲುಕ್ಕನ್ನೇ ಬದಲಿಸಬಲ್ಲದು. ಅಂತಹ ಜಾದೂ ಮೇಕಪ್‌ನಲ್ಲಿದೆ.

5. ಸ್ಟೇಟ್‌ಮೆಂಟ್‌ ಜ್ಯುವೆಲರಿ ಸೆಟ್ ಧರಿಸಿ

ಟ್ರೆಡಿಷನಲ್‌ ಸೀರೆ ಹಾಗೂ ಔಟ್‌ಫಿಟ್ಸ್‌ ಜೊತೆಗೆ ಆಯಾ ದಿರಸಿನೊಂದಿಗೆ ಮ್ಯಾಚ್‌ ಆಗುವಂತಹ ಸ್ಟೇಟ್‌ಮೆಂಟ್‌ ಜ್ಯುವೆಲರಿಗಳನ್ನು (statement jewellery) ಧರಿಸುವುದು ಅಗತ್ಯ. ಎಲ್ಲಾ ಉಡುಪು ಹಾಗೂ ಸೀರೆಗೆ ಒಂದೇ ಬಗೆಯ ಆಭರಣಗಳನ್ನು ಧರಿಸುವುದು ಸೆಲೆಬ್ರಿಟಿ ಲುಕ್‌ಗೆ ಸಾಥ್‌ ನೀಡುವುದಿಲ್ಲ. ಸ್ಟೇಟ್‌ಮೆಂಟ್‌ ಜ್ಯುವೆಲರಿಗಳು ಬಂಗಾರದ್ದೇ ಆಗಬೇಕೆಂದಿಲ್ಲ. ನಿಮ್ಮ ಸ್ಟೈಲಿಸ್ಟ್‌ಗಳು ನೀವು ಧರಿಸುವ ಉಡುಪುಗಳೊಂದಿಗೆ ಇವನ್ನು ಮ್ಯಾಚ್‌ ಮಾಡಿ ಕೊಡಬಲ್ಲರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Stars Fashion | ಮೂಗುತಿ ಸುಂದರಿ ಅನು ಪ್ರಭಾಕರ್‌ ಮುಖರ್ಜಿ ಸೀರೆಯ ಮನಮೋಹಕ ಲುಕ್‌

Exit mobile version