ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಮದುವೆಯಾಗುವ ಮದುಮಗನು ಕೂಡ ಗ್ರ್ಯಾಂಡ್ ಡಿಸೈನರ್‌ವೇರ್‌ಗೆ ತಕ್ಕಂತೆ ಜ್ಯುವೆಲರಿಗಳನ್ನು ಧರಿಸುವುದು ಟ್ರೆಂಡಿಯಾಗಿದೆ. ಇದಕ್ಕೆ ಪೂರಕ ಎಂಬಂತೆ, ಈ ವೆಡ್ಡಿಂಗ್ ಸೀಸನ್‌ನಲ್ಲಿ ಮೆನ್ಸ್ ಡಿಸೈನರ್‌ವೇರ್‌ಗೆ ತಕ್ಕಂತೆ ನಾನಾ ಬಗೆಯ ಗ್ರ್ಯಾಂಡ್ ಹಾರಗಳು ಹಾಗೂ ಫ್ಯಾಷನ್ ಜ್ಯುವೆಲರಿಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ.
ಗ್ರ್ಯಾಂಡ್ ಲುಕ್ ನೀಡುವ ಆಭರಣಗಳು
ಮೊದಲೆಲ್ಲಾ ಮದುವೆ ದಿನ ಮನೆಯವರ ಯಾವುದಾದರೂ ಒಂದು ದೊಡ್ಡ ಪದಕ ಅಥವಾ ಪೆಂಡೆಂಟ್ ಇರುವಂತಹ ಬಂಗಾರದ ಹಾರವನ್ನು ಹಿರಿಯರು ಮದುವೆಯಾಗುವ ಹುಡುಗನ ಕೊರಳಿಗೆ ಹಾಕುತ್ತಿದ್ದರು. ಮದುವೆ ಮುಗಿಯುವ ತನಕ ಮದುಮಗ ಧರಿಸಿರುತ್ತಿದ್ದನು. ಆದರೆ, ಇದೀಗ ಈ ರಿವಾಜು ಕೊಂಚ ಬದಲಾಗಿದೆ. ಇಂದು ಮದುಮಗನ ಮದುವೆಯ ಉಡುಪಿಗೆ ತಕ್ಕಂತೆ ಆಭರಣಗಳನ್ನು ಧರಿಸುವುದು ಫ್ಯಾಷನ್ ಆಗಿ ಬದಲಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್‌ವೀರ್. ಅವರ ಪ್ರಕಾರ, ಇಂದು ಗ್ರ್ಯಾಂಡ್ ಡಿಸೈನರ್‌ವೇರ್‌ಗಳು ಯಾವುದೇ ಆಕ್ಸೆಸರೀಸ್ ಇಲ್ಲದೇ ಧರಿಸಿದಲ್ಲಿ ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ರಾಯಲ್ ಲುಕ್ ಉಡುಪುಗಳಿಗೆ ತಕ್ಕಂತೆ ಆಭರಣಗಳನ್ನು ಧರಿಸುವುದು ಇಂದು ಟ್ರೆಂಡಿಯಾಗಿದೆ.
ಲೇಯರ್ ಹಾರಗಳಿಗೆ ಡಿಮ್ಯಾಂಡ್
ಲೇಯರ್ ಲುಕ್ ನೀಡುವ ಹಾರಗಳಿಗೆ ವೆಡ್ಡಿಂಗ್ ಸೀಸನ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಶೆರ್ವಾನಿ, ಬಂದ್‌ಗಾಲ ಹಾಗೂ ರಾಯಲ್ ಲುಕ್ ನೀಡುವ ಸೂಟ್‌ಗಳ ಮೇಲೆ ರಾಜ-ಮಹಾರಾಜರು ಧರಿಸುತ್ತಿದ್ದ ಕ್ವೀನ್ಸ್-ಕಿಂಗ್ ಹಾರಗಳನ್ನು ಧರಿಸುವುದು ಕಾಮನ್ ಆಗಿದೆ. ಅದರಲ್ಲೂ ಮುತ್ತಿನ ಹಾರಗಳಿಗೆ ಹೆಚ್ಚು ಬೇಡಿಕೆ ಇದೆ. ಅದರೊಂದಿಗೆ ಬಂಗಾರದ್ದು ಮಾತ್ರವಲ್ಲ, ಪ್ರಿಶಿಯಸ್ ಸ್ಟೋನ್ಸ್, ಎಮಾರಾಲ್ಡ್, ರೂಬಿ ಸೇರಿದಂತೆ ನಾನಾ ಬಗೆಯ ಹಾರಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು ಬಂಗಾರೇತರ ಕೃತಕ ಹಾರಗಳು ಸಾಮಾನ್ಯ ಜನರಿಗೆ ಪ್ರಿಯವಾಗಿವೆ.
ಇವು ಮದುವೆಯಲ್ಲಿ ಮಾತ್ರವಲ್ಲ, ಫೋಟೋಗಳಲ್ಲೂ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ಯೂನಿಸೆಕ್ಸ್ ಹಾರಗಳು ಎನ್ನಬಹುದು. ಮದುವೆಯ ನಂತರ ಮನೆಯ ಹೆಣ್ಣುಮಕ್ಕಳು ಇವನ್ನು ಧರಿಸಬಹುದು ಎನ್ನುತ್ತಾರೆ ಆಭರಣ ವಿನ್ಯಾಸಕಾರರು. ಈ ಆಭರಣಗಳೊಂದಿಗೆ ಕೋಟ್ ಅಥವಾ ಬಂದ್‌ಗಾಲ ಮೇಲೆ ಹಾಕಬಹುದಾದ ಬ್ರೋಚ್ ಹಾಗೂ ಕೈಗಳಿಗೆ ಧರಿಸುವ ಬ್ರೆಸ್‌ಲೆಟ್ ಕೂಡ ಟ್ರೆಂಡಿಯಾಗಿವೆ.
ಮದುಮಗನ ಜ್ಯುವೆಲರಿ ಹೀಗಿರಲಿ
ವ್ಯಕ್ತಿತ್ವಕ್ಕೆ ಹೊಂದುವಂತಿರಬೇಕು.
ಪರ್ಲ್ ಹಾಗೂ ಬಂಗಾರ ಎಲ್ಲದಕ್ಕೂ ಮ್ಯಾಚ್ ಆಗುತ್ತದೆ.
ಡಿಸೈನರ್‌ವೇರ್‌ಗೆ ಮ್ಯಾಚ್ ಆಗುವುದು ಅಗತ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ Bollywood Winter Fashion | ವೈವಿಧ್ಯಮಯ ವಿಂಟರ್ ಫ್ಯಾಷನ್‌ಗೆ ಸೈ ಎಂದ ಬಾಲಿವುಡ್ ತಾರೆಯರು|