Site icon Vistara News

Wedding Fashion: ವೆಡ್ಡಿಂಗ್‌ ಫ್ಯಾಷನ್‌ ಫೋಟೋ ಶೂಟ್‌ನಲ್ಲಿ ಟ್ರೆಂಡಿಯಾದ ದೇಸಿ ಲುಕ್‌

Wedding Fashion

Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ವೆಡ್ಡಿಂಗ್‌ ಸೀಸನ್‌ನ (wedding fashion) ಫೋಟೋ ಶೂಟ್‌ಗಳಲ್ಲಿ ಮದುಮಗ-ಮದುಮಗಳ ಟ್ರೆಡಿಷನಲ್‌ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ. ಮದುವೆಯ ಶೂಟ್‌ಗಾಗಿ ಧರಿಸುವ ಗೌನ್‌, ಲೆಹೆಂಗಾ ಹಾಗೂ ಇತರೇ ಮಿಕ್ಸ್‌ ಮ್ಯಾಚ್‌ ಔಟ್‌ಫಿಟ್‌ಗಳು ಸೈಡಿಗೆ ಸರಿದಿವೆ. ನೋಡಲು ಮನಮೋಹಕವಾಗಿರುವ ಸೀರೆಗಳು, ಹಾಫ್‌ ಸೀರೆಗಳು, ದಾವಣಿ-ಲಂಗದಂತಹ ಸಾಂಪ್ರದಾಯಿಕ ಉಡುಗೆ-ತೊಡುಗೆಗಳು ಮದುಮಗಳ ಲಿಸ್ಟ್‌ ಸೇರಿದ್ದರೇ, ಮೆನ್ಸ್‌ವೇರ್‌ನಲ್ಲಿ ರೇಷ್ಮೆಯ ಪಂಚೆ-ಶಲ್ಯ, ಜುಬ್ಬಾ ಪೈಜಾಮ, ಡಿಸೈನರ್‌ ಕುರ್ತಾ, ಬ್ರೋಕೆಡ್‌ ಶೆರ್ವಾನಿಗಳು ಬಂದಿವೆ.

ಸೈಡಿಗೆ ಸರಿದ ಗೌನ್‌ ಫೋಟೋ ಶೂಟ್‌

ಮದುವೆಯ ಆರತಕ್ಷತೆ ಇಲ್ಲವೇ ಪ್ರೀ ವೆಡ್ಡಿಂಗ್‌ನಲ್ಲಿ ಗೌನ್‌ ಫ್ಯಾಷನ್‌ನ ಫೋಟೋ ಶೂಟ್‌ಗಳಿಗೆಂದೇ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಇದೀಗ ಈ ಕಾನ್ಸೆಪ್ಟ್‌ ಬದಲಾಗಿದೆ. ಅದರ ಬದಲು ದಾವಣಿ-ಲಂಗ, ಸಲ್ವಾರ್‌ ಕಮೀಝ್‌, ಲಾಂಗ್‌ ಅನಾರ್ಕಲಿ, ಉದ್ದ-ಲಂಗ, ಲೆಹೆಂಗಾಗಳು ಆಕ್ರಮಿಸಿಕೊಂಡಿವೆ. ಕಳೆದ ಸಾಲಿನಲ್ಲಿ ನಾನಾ ವರ್ಣದ ಡಿಸೈನರ್‌ ಗೌನ್‌ಗಳು, ಎಥ್ನಿಕ್ ಗೌನ್‌ಗಳು, ಕ್ರಾಪ್‌ ಲೆಹೆಂಗಾಗಳು ಮೊದಲ ಸ್ಥಾನ ಪಡೆದಿದ್ದವು. ನೋಡಲು ವೆಸ್ಟರ್ನ್ ಲುಕ್‌ ನೀಡುತ್ತಿದ್ದ ಈ ಗೌನ್‌ಗಳು ವೆಡ್ಡಿಂಗ್‌ ಫೋಟೋ ಶೂಟ್‌ ಫ್ಯಾಷನ್‌ನ ಭಾಗವಾಗಿ ಹೋಗಿದ್ದವು. ಇದೀಗ ಕೆಲವು ಮದುವೆಯ ಫೋಟೋ ಶೂಟ್‌ಗಳಲ್ಲಿ ಇವುಗಳ ಛಾಯೆ ಕೂಡ ಕಾಣುವುದಿಲ್ಲ. ಕಾರಣ, ಇತ್ತೀಚೆಗೆ ಮದುವೆಯಾಗುತ್ತಿರುವ ಬಹಳಷ್ಟು ಮಂದಿ ಟ್ರೆಡಿಷನಲ್‌ ಔಟ್‌ಫಿಟ್‌ಗಳಲ್ಲಿ ಫೋಟೋಶೂಟ್‌ ಮಾಡಲು ಬಯಸುತ್ತಿರುವುದು. ಮದುವೆಯ ಪೋಸ್ಟರ್‌ಗಳಲ್ಲೂ ಕೂಡ ಸಾಂಪ್ರದಾಯಿಕ ಲುಕ್‌ ಬಯಸುತ್ತಿರುವುದು ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು.

ಟ್ರೆಡಿಷನಲ್‌ ಸಿಂಗಾರಕ್ಕೂ ಮಾನ್ಯತೆ

ನೋಡಲು ಅಪ್ಪಟ ದೇಸಿ ಲುಕ್‌ ನೀಡುವ ಫೋಟೋ ಶೂಟ್‌ಗಳ ಸಂಖ್ಯೆ ಇದೀಗ ಮೊದಲಿಗಿಂತ ಹೆಚ್ಚಾಗಿದೆ. ದೇಸಿ ಲುಕ್‌ ನೀಡುವ ಟ್ರೆಡಿಷನಲ್‌ ಮೇಕಪ್‌ಗೆ (traditional makeup for wedding) ಮಾನ್ಯತೆ ಹೆಚ್ಚಾಗಿದೆ. ಹುಡುಗಿಯ ಲಿಸ್ಟ್‌ನಲ್ಲಿ ಕಾಜಲ್‌, ರೆಡ್‌ಲಿಪ್‌ಸ್ಟಿಕ್‌, ಹಣೆಗೆ ಕುಂಕುಮ, ಬಿಂದಿಗೆ ಆದ್ಯತೆ ಹೆಚ್ಚಾಗಿದೆ. ಸಾಂಪ್ರದಾಯಿಕ ಆಭರಣಗಳು ಸವಾರಿ ಮಾಡಿವೆ. ಇನ್ನು ಹುಡುಗರ ಲಿಸ್ಟ್‌ನಲ್ಲಿ ಬಂಗಾರದ ಜ್ಯುವೆಲರಿ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಮೆನ್ಸ್‌ ಟ್ರೆಡಿಷನಲ್‌ ಲುಕ್‌ಗಾಗಿ ದೇಸಿ ಸ್ಟೈಲಿಂಗ್‌

ಮದುವೆಯಾಗುವ ಮದುಮಗನು ಕೂಡ ಮದುಮಗಳ ಉಡುಗೆಗೆ ಮ್ಯಾಚ್‌ ಆಗುವ ರೀತಿಯಲ್ಲಿ ಡಿಸೈನರ್‌ವೇರ್‌ ಧರಿಸುವುದು ಸಾಮಾನ್ಯವಾಗಿದೆ. ಅಂದಹಾಗೆ, ಕಪಲ್‌ಗಳ ಇಡೀ ಸ್ಟೈಲಿಂಗ್‌ ನಿರ್ಧಾರವಾಗುವುದೇ ದೇಸಿ ಸ್ಟೈಲಿಂಗ್‌ನಲ್ಲಿ. ಅಪ್ಪಟ ಪ್ರಾದೇಶಿಕ ಫ್ಯಾಷನ್‌ಗೆ (mens traditional wear for wedding) ಆದ್ಯತೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಯೂಟ್ಯೂಬ್‌ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ದೇಸಿ ಲುಕ್‌ಗೆ ಹೆಚ್ಚು ಫಾಲೋವರ್ಸ್‌ ಸಿಗುತ್ತಿರುವುದು ಇದಕ್ಕೆ ಕಾರಣವಾಗುತ್ತಿದೆ. ಲೋಕಲ್‌ ದೇಸಿ ಫ್ಯಾಷನ್‌ ಎಲ್ಲರ ಮನ ಗೆಲ್ಲುತ್ತಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ದೇಸಿ ಲುಕ್‌ ಪ್ರಿಯರು ಫಾಲೋ ಮಾಡಬೇಕಾದದ್ದೇನು?

ನಿಮ್ಮ ಕುಟುಂಬದ ರಿವಾಜಿಗೆ ತಕ್ಕಂತೆ ಸಿಂಗರಿಸಿಕೊಳ್ಳಿ.

ವೆಸ್ಟರ್ನ್ ಫಂಕಿ ಲುಕ್‌ಗೆ ಇತಿ ಶ್ರೀ ಹಾಕಿ.

ಸ್ಟೈಲಿಸ್ಟ್‌ಗಳೊಂದಿಗೆ ಪ್ಲಾನ್‌ ಮಾಡಿ, ಸ್ಟೈಲಿಂಗ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mrs universe Fashion News: ಮಿಸೆಸ್‌ ಯೂನಿವರ್ಸ್ ಪೇಜೆಂಟ್‌ಗೆ ತೆರಳಿದ ಮೈಸೂರಿನ ಅಪೂರ್ವ ರೈ

Exit mobile version