-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸೀಸನ್‌ನಲ್ಲಿ ಮದುಮಗಳ ಟ್ರೆಂಡಿ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರು ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ಟ್ರೆಂಡಿಯಾಗಿರುವ ಡಿಸೈನರ್‌ವೇರ್ ಆಯ್ಕೆ ಮಾಡುವುದು ಮಾತ್ರವಲ್ಲ, ಇನ್ನಿತರೇ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಒಂದಿಷ್ಟು ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಆಗಷ್ಟೇ, ಖರೀದಿಸಿದ ಡಿಸೈನರ್‌ವೇರ್ ಎಲ್ಲರ ಪ್ರೀತಿಗೆ ಪಾತ್ರವಾಗುವುದಲ್ಲದೇ, ಮದುವೆಯಲ್ಲಿ ಧರಿಸಿದಾಗ ಖುಷಿಯಾಗುತ್ತದೆ. ಮದುವೆಯ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತಂತೆ ಮದುಮಗಳು ಖರೀದಿಸುವಾಗ (Wedding Fashion) ಪಾಲಿಸಬೇಕಾದ 7 ಬ್ರೈಡಲ್‌ವೇರ್ ರೂಲ್ಸ್ ತಿಳಿಸಿದ್ದಾರೆ.
ಥೀಮ್‌ಗೆ ತಕ್ಕಂತೆ ಇರಲಿ ಬ್ರೈಡಲ್‌ವೇರ್
ಆಯಾ ಮದುವೆ ಕಾನ್ಸೆಪ್ಟ್ ಅಥವಾ ಥೀಮ್‌ಗೆ ಹೊಂದುವಂತೆ ಮದುಮಗಳು ಡಿಸೈನರ್‌ವೇರ್ ಶಾಪಿಂಗ್ ಪ್ಲಾನ್ ಮಾಡಬೇಕಾಗುತ್ತದೆ. ಥೀಮ್‌ಗೆ ಅನುಗುಣವಾಗಿ ಕಲರ್ ಕೋಡ್ ಡಿಸೈನ್‌ಗಳನ್ನು ಸ್ಟೈಲಿಸ್ಟ್ ಇಲ್ಲವೇ ಡಿಸೈನರ್ ಬಳಿ ಚರ್ಚಿಸಿ ಪ್ಲಾನ್ ಮಾಡಬೇಕಾಗುತ್ತದೆ. ಆಗ ಕ್ಲಿಕ್ಕಿಸುವ ಫೋಟೋಗಳು, ವಿಡಿಯೋಗಳು ಎಲ್ಲವೂ ಸುಂದರವಾಗಿ ಕಾಣುತ್ತವೆ.
ಬೆಲೆಗಿಂತ ಗುಡ್‌ಲುಕಿಂಗ್‌ಗೆ ಆದ್ಯತೆ ನೀಡಿ
ಮದುವೆಗೆ ಧರಿಸಿದ ಡಿಸೈನರ್‌ವೇರ್‌ಗಳನ್ನು ಮತ್ತೊಮ್ಮೆ ಧರಿಸುವುದು ತೀರಾ ಅಪರೂಪ. ಅಂತಹವರ ಲಿಸ್ಟ್‌ನಲ್ಲಿ ನೀವಿದ್ದಲ್ಲಿ, ಹೆಚ್ಚು ಬೆಲೆ ತೆರಬೇಡಿ. ಸುಖಾಸುಮ್ಮನೇ ಬ್ರಾಂಡ್ ಹೆಸರಲ್ಲಿ ಹಣ ಸುರಿಯಬೇಡಿ. ಲೋಕಲ್ ಬೋಟಿಕ್‌ಗಳಲ್ಲಿ ನಿಮಗೆ ಬೇಕಾದ ಡಿಸೈನ್ಸ್ ತೋರಿಸಿ ವಿನ್ಯಾಸ ಮಾಡಿಸಿಕೊಳ್ಳಿ. ಹಣ ಉಳಿಸಬಹುದು.
ಬಿಎಂಐಗೆ ತಕ್ಕಂತಿರಲಿ ಬ್ರೈಡಲ್‌ವೇರ್ ಡಿಸೈನ್ಸ್
ಮದುವೆಯ ಸೀಸನ್‌ಗೆ ತಕ್ಕಂತೆ ಮದುಮಗಳು ವೆಡ್ಡಿಂಗ್ ಶಾಪಿಂಗ್ ಮಾಡುವುದು ಮಾತ್ರವಲ್ಲ, ಆಕೆಯ ಪರ್ಸನಾಲಿಟಿ ಹಾಗೂ ಬಿಎಂಐಗೆ ತಕ್ಕಂತೆ ಬ್ರೈಡಲ್‌ವೇರ್ ಸೆಲೆಕ್ಟ್ ಮಾಡಬೇಕು. ಡಿಸೈನ್ಸ್ ಆಕೆಯ ಸ್ಕಿನ್ ಟೋನ್‌ಗೆ ಹೊಂದಬೇಕು. ಮೊದಲು ಇದನ್ನು ಗಮನಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಬಾಡಿಟೈಪ್‌ಗೆ ಸೂಟ್ ಆಗುವಂತಿರಲಿ
ಪ್ರತಿ ಮದುಮಗಳು ತನ್ನ ಬಾಡಿ ಟೈಪ್‌ಗೆ ತಕ್ಕಂತೆ ಬ್ರೈಡಲ್‌ವೇರ್ ಆಯ್ಕೆ ಮಾಡಬೇಕಾಗುತ್ತದೆ. ಮದುಮಗಳು ಹವರ್ ಗ್ಲಾಸ್ ಶೇಪ್‌ನಲ್ಲಿದ್ದರೇ ಏನೂ ಕೂಡ ಯೋಚನೆಯೇ ಮಾಡಬೇಕಾಗಿಲ್ಲ. ಯಾವ ಬಗೆಯ ಡ್ರೆಸ್ ಆದರೂ ಸರಿಯೇ ಪರ್ಸನಾಲಿಟಿಗೆ ಸೂಟ್ ಆಗುತ್ತದೆ. ಹೊಂದುವ ವರ್ಣವನ್ನು ಚೂಸ್ ಮಾಡಿದರಾಯಿತು.
ಎತ್ತರಕ್ಕೆ ತಕ್ಕಂತಿರಲಿ ಬ್ರೈಡಲ್‌ವೇರ್
ಉದ್ದಗಿರುವವರು ಅಷ್ಟೇ ಲಾಂಗ್ ಲೆಂತ್‌ನದ್ದನ್ನು ಚೂಸ್ ಮಾಡಬಹುದು. ಲೆಹೆಂಗಾ, ಗಾಗ್ರ ಎಲ್ಲವೂ ಸೂಟ್ ಆಗ್ತುತವೆ. ಫ್ಯಾಬ್ರಿಕ್ ದಪ್ಪನಾಗಿದ್ದರೂ ಓಕೆ. ಹೆವ್ವಿ ಡಿಸೈನ್‌ಗಳು ಕೂಡ ಮ್ಯಾಚ್ ಆಗುತ್ತವೆ.
ಪ್ಲಂಪಿ ವಧುವಿಗಾದಲ್ಲಿ
ಕುಳ್ಳಗೆ ಅಥವಾ ಪ್ಲಂಪಿಯಾಗಿರುವವರು ಡಿಸೈನರ್‌ವೇರ್ ಚೂಸ್ ಮಾಡುವಾಗ ಆದಷ್ಟೂ ಜಾಗ್ರತೆವಹಿಸಬೇಕು. ಹೆವ್ವಿ ಪ್ರಿಂಟ್ ಇಲ್ಲವೇ ಹೆವ್ವಿ ಡಿಸೈನ್ ಹಾಗೂ ದಪ್ಪ ಫ್ಯಾಬ್ರಿಕ್‌ನದ್ದನ್ನು ಅವಾಯ್ಡ್ ಮಾಡಿ. ಆದಷ್ಟೂ ಸ್ಮಾಲ್ ಬಾರ್ಡರ್‌ನ ಕಾಂಟ್ರಸ್ಟ್ ದುಪಟ್ಟಾ ಹೊಂದಿರುವ ಲೆಹೆಂಗಾ, ಗಾಗ್ರಾ ಚೂಸ್ ಮಾಡಬೇಕಾಗುತ್ತದೆ. ಫ್ಲೋಟ್ ಆಗುವಂತಹ ಫ್ಯಾಬ್ರಿಕ್‌ನ ಡಿಸೈನರ್ವೇರ್ ಉತ್ತಮ. ಎಲ್ಬೋ, ಲಾಂಗ್ ಬ್ಲೌಸ್ ಆಯ್ಕೆ ಮಾಡಿಕೊಳ್ಳಬೇಕು.
ಟ್ರಯಲ್ ಮಾಡಿ ನೋಡಿ ನಿರ್ಧರಿಸಿ
ಪರ್ಫೆಕ್ಟ್ ಶೆಪ್ ಇಲ್ಲದಾಗ ಯೋಚಿಸಬೇಡಿ. ಟ್ರಯಲ್ ನೋಡಿ, ಖರೀದಿಸಿ. ಟ್ರಯಲ್ ಡಿಸೈನರ್‌ವೇರ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ಇತರರ ಅಭಿಪ್ರಾಯ ಪಡೆದು ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಮಹಿಳೆಯರ ಸೆಲೆಬ್ರೇಷನ್‌ಗೆ ಫ್ಯಾಷನ್ ಶೋ ಸಾಥ್