Site icon Vistara News

Wedding Fashion: ವೆಡ್ಡಿಂಗ್‌ ಹೇರ್‌ಸ್ಟೈಲ್‌ಗೆ ಎಂಟ್ರಿ ಕೊಟ್ಟ ಫ್ಯೂಶನ್‌ ವಿನ್ಯಾಸದ ಮಾತಾಪಟ್ಟಿ

Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮದುವೆಗೆ ಧರಿಸುತ್ತಿದ್ದ ಟ್ರೆಡಿಷನಲ್‌ (Wedding Fashion) ವಿನ್ಯಾಸದ ಮಾತಾಪಟ್ಟಿಗಳು ಇದೀಗ ರೂಪ ಬದಲಿಸಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ಇಂಡೋ-ವೆಸ್ಟರ್ನ್ ಹೆಡ್‌ಬ್ಯಾಂಡ್‌ ಶೈಲಿಯಲ್ಲಿ ಮದುಮಗಳ ಕೇಶವನ್ನು ಸಿಂಗರಿಸುತ್ತಿವೆ.

ವೆಡ್ಡಿಂಗ್‌ ಹೇರ್‌ಸ್ಟೈಲ್‌ಗೆ ಮಾತಾಪಟ್ಟಿ

ಮದುಮಗಳ ಟ್ರೆಡಿಷನಲ್‌ ಹೇರ್‌ಸ್ಟೈಲ್‌ಗೆ ಸಾಥ್‌ ನೀಡುವ ಮಾತಾಪಟ್ಟಿಗಳು, ರಾಣಿ-ಮಹಾರಾಣಿಯರ ಕಾಲದಿಂದಲೂ ಫ್ಯಾಷನ್‌ನಲ್ಲಿವೆ. ಮೊದಲೆಲ್ಲಾ ಕೇವಲ ಶ್ರೀಮಂತರು, ರಾಣಿ-ಮಹಾರಾಣಿಯರು ಮಾತ್ರ ಬಂಗಾರದ ಮಾತಾ ಪಟ್ಟಿಯನ್ನು ಕೂದಲ ಅಲಂಕಾರಕ್ಕಾಗಿ ಧರಿಸುತ್ತಿದ್ದರು. ಬರಬರುತ್ತಾ ಈ ಆಕ್ಸೆಸರೀಸ್‌ ಮದುವೆಗಳಲ್ಲಿ ಟ್ರೆಡಿಷನಲ್‌ ಹಾಗೂ ಗ್ರ್ಯಾಂಡ್‌ ಲುಕ್‌ ನೀಡುವ ಸಲುವಾಗಿ ಎಂಟ್ರಿ ನೀಡಿತು. ಇದೀಗ, ವೆಡ್ಡಿಂಗ್‌ ಟ್ರೆಂಡಿ ಟ್ರೆಡಿಷನಲ್‌ ಹೇರ್‌ಸ್ಟೈಲ್‌ ಆಕ್ಸೆಸರೀಸ್‌ ಪಟ್ಟಿಯಲ್ಲಿ ಇವು ಸೇರಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಈ ಮೂಲ ರೂಪದ ಮಾತಾಪಟ್ಟಿ ಕೊಂಚ ರೂಪ ಬದಲಿಸಿದ್ದು, ನೋಡಲು ಥೇಟ್‌ ಎಥ್ನಿಕ್‌ ಲುಕ್‌ ನೀಡುವ ಹೆಡ್‌ಬ್ಯಾಂಡ್‌ನಂತೆ ಕಾಣುತ್ತವೆ. ಮದುವೆ ಮಾತ್ರವಲ್ಲ, ಇತರೇ ಎಥ್ನಿಕ್‌ ಸಮಾರಂಭಗಳಲ್ಲೂ ಧರಿಸಬಹುದಾದ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.

ಫ್ಯೂಶನ್‌ ಡಿಸೈನರ್‌ ಮಾತಾಪಟ್ಟಿ

ಟಿಯಾರಾ ಲುಕ್‌ ನೀಡುವ ಇಲ್ಲವೇ ಹೆಡ್‌ ಬ್ಯಾಂಡ್‌ನಂತೆ ಧರಿಸಬಹುದಾದ ಕ್ರಿಸ್ಟಲ್‌ ಮಾತಾಪಟ್ಟಿಗಳು, ಕೇವಲ ಹೆಡ್‌ ಬ್ಯಾಂಡ್‌ನಂತೆ ಧರಿಸಿ, ಫ್ರೀ ಹೇರ್‌ಸ್ಟೈಲ್‌ ಮಾಡಬಹುದಾದ ಮಾತಾ ಪಟ್ಟಿ ಆಕ್ಸೆಸರೀಸ್‌ಗಳು, ಇದೀಗ ಟ್ರೆಂಡ್‌ನಲ್ಲಿವೆ. ಇನ್ನು, ಕ್ರಿಸ್ಟಲ್‌, ನವರತ್ನ, ಪರ್ಲ್, ಬೀಡ್ಸ್‌, ಗೋಲ್ಡನ್‌ ಹೀಗೆ ನಾನಾ ಬಗೆಯ ಫ್ಯೂಶನ್‌ ಡಿಸೈನ್‌ನವು ಇದೀಗ ಚಾಲ್ತಿಯಲ್ಲಿವೆ. ಇನ್ನು ಮದುವೆಯ ರಿಸೆಪ್ಷನ್‌ನಲ್ಲಿ ಲೆಹೆಂಗಾ ಹಾಗೂ ಭಾರಿ ಉಡುಪಿನೊಂದಿಗೆ ಧರಿಸಬಹುದಾದ ಇಂಡೋ-ವೆಸ್ಟರ್ನ್ ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ. ಇವು ಯುವರಾಣಿಯ ಲುಕ್‌ ನೀಡುತ್ತವೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್ಸ್.

ಫ್ಯೂಶನ್‌ ಡಿಸೈನ್‌ ಮಾತಾಪಟ್ಟಿ ಆಯ್ಕೆ ಹೀಗಿರಲಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Lehenga Fashion: ವೆಡ್ಡಿಂಗ್‌ ಸೀಸನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಆಫ್‌ ಶೋಲ್ಡರ್ ಬ್ಲೌಸ್‌ ಫ್ಲೋರಲ್‌ ಲೆಹೆಂಗಾ

Exit mobile version