ಶೀಲಾ ಸಿ. ಶೆಟ್ಟಿ. ಬೆಂಗಳೂರು
ಗೋಲ್ಡನ್ ಶೇಡ್ ಸೀರೆಗಳು ಈ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಮನಮೋಹಕವಾಗಿ ಕಾಣುವ ಈ ಸೀರೆಗಳು ಕೇವಲ ಮದುವೆಯಾಗುವ ವಧುವಲ್ಲ, ಬದಲಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಹೆಣ್ಣುಮಕ್ಕಳ ಫೇವರೇಟ್ ಸೀರೆಯಾಗಿದೆ. ಪರಿಣಾಮ, ಈ ಸೀಸನ್‌ನ ಸೀರೆ ಫ್ಯಾಷನ್‌ನಲ್ಲಿ ಮೊದಲ ಸ್ಥಾನದಲ್ಲಿವೆ.
ಯಾವ್ಯಾವ ಫ್ಯಾಬ್ರಿಕ್‌ನಲ್ಲಿ ಲಭ್ಯ
ಬನಾರಸಿ, ಸಿಲ್ಕ್, ಕಾಂಚಿವರಂ, ಧರ್ಮಾವರಂ ರೇಷ್ಮೆಸೀರೆಗಳು, ಕಾಟನ್, ಸೆಮಿ ಕಾಟನ್, ಕಾಟನ್ ಸಿಲಕ್, ಟಿಶ್ಶೂ, ಜಮದಾನಿ, ಇಳಕಲ್ ಸೇರಿದಂತೆ ಎಲ್ಲಾ ಬಗೆಯ ಬ್ರಾಂಡ್‌ಗಳಲ್ಲೂ ಈ ಶೇಡ್‌ನವು ನಾನಾ ಬ್ರಾಂಡ್‌ನ ಫ್ಯಾಬ್ರಿಕ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ರಾಯಲ್ ಲುಕ್ ನೀಡುವ ಇವು ಇಡೀ ಲುಕ್ಕನ್ನು ಬದಲಿಸುತ್ತವೆ. ಜೊತೆಗೆ ಸೆಲೆಬ್ರಿಟಿ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗೋಲ್ಡನ್ ಸೀರೆಗೂ ಡಿಸೈನ್ಸ್
ಇನ್ನು ಗೋಲ್ಡನ್ ವರ್ಣದ ಸೀರೆಗಳಲ್ಲೂ ಡಿಸೈನ್‌ನವು ಚಾಲ್ತಿಯಲ್ಲಿವೆ. ಅವುಗಳಲ್ಲಿ ವೈವಿಧ್ಯಮಯ ಶೇಡ್ಸ್‌ನ ಜರತಾರಿ ಬಾರ್ಡರ್, ಕುಂದನ್-ಕಲಾಂಕಾರಿಯ ಕುಸುರಿ, ಹ್ಯಾಂಡ್ ಎಂಬ್ರಾಯ್ಡರಿ ಕೂಡ ಈ ವೆಡ್ಡಿಂಗ್ ಸೀಸನ್‌ನ ಗ್ರ್ಯಾಂಡ್ ಲುಕ್ ಟ್ರೆಂಡ್‌ನಲ್ಲಿ ಬಂದಿವೆ.
ರಾಯಲ್ ಲುಕ್ ಗ್ಯಾರಂಟಿ
ಗೋಲ್ಡನ್ ಬಣ್ಣದ ಸೀರೆಗಳು ರಾಯಲ್ ಲುಕ್ ನೀಡುತ್ತವೆ. ಸಾಮಾನ್ಯ ಹುಡುಗಿಯು ಸೆಲೆಬ್ರೆಟಿಯಂತೆ ಕಂಗೊಳಿಸುತ್ತಾಳೆ. ಇದು ಮುಖದ ಬಣ್ಣವನ್ನು ರಿಫ್ಲೆಕ್ಟ್ ಮಾಡುತ್ತದೆ ಮಾತ್ರವಲ್ಲ, ಕಾಂತಿ ಹೆಚ್ಚುವಂತೆ ಮಾಡುತ್ತದೆ ಎನ್ನುತ್ತಾರೆ ಮಾಡೆಲ್ ದೀಪ್ತಿ, ಇನ್ನು ಫ್ಯಾಷನ್‌ಲೋಕದಲ್ಲಿ ಗೋಲ್ಡ್ ಅತ್ಯುತ್ತಮ ಶೇಡ್ಸ್. ಇದರಲ್ಲೆನೂರಾರು ಶೆಡ್ಸ್ ಲಭ್ಯ. ಅದರಲ್ಲೂ ಬ್ರೈಟ್ ಹಾಗೂ ಲೈಟ್ ಗೋಲ್ಡನ್, ರೋಸ್ ಗೋಲ್ಡ್ ವರ್ಣದ ಸೀರೆಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಡಿಸೈನರ್ಸ್. ಮೊದಲೆಲ್ಲಾಗೋಲ್ಡನ್ ಬಣ್ಣ ಎಂದಾಕ್ಷಣ ಅದು ಸೀಮಿತ ವರ್ಗಕ್ಕೆ ಎಂಬುದಾಗಿ ತಿಳಿಯಲಾಗುತ್ತಿತ್ತು. ರಾಜ ಮನೆತನದವರು ಮಾತ್ರ ಬಳಸುವ ಶೇಡ್ ಗಳು ಎನ್ನಲಾಗುತ್ತಿತ್ತು. ಬರಬರುತ್ತಾ ಸೆಲೆಬ್ರೆಟಿಗಳು, ನಂತರ ಮದುವೆ ಮನೆಯ ಕುಟುಂಬದವರು ಉಡಲಾರಂಭಿಸಿದರು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗೋಲ್ಡನ್ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ಗಾಗಿ ಹೀಗೆ ಮಾಡಿ
ಸ್ಕಿನ್ ಟೋನ್‌ಗೆ ಹೊಂದುವಂತೆ ಶೇಡ್ಸ್‌ನ ಸೀರೆ ಸೆಲೆಕ್ಟ್ ಮಾಡಬೇಕು
ರಾಯಲ್ ಲುಕ್ ಗ್ಯಾರಂಟಿ.
ಫಂಕಿ ಆಕ್ಸೆಸರೀಸ್ ಸೂಟ್ ಆಗದು.
ಮೇಕಪ್ ಕೂಡ ಮ್ಯಾಚ್ ಆಗಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New York Fashion Week: ಬೆರಗು ಮೂಡಿಸಿದ ನ್ಯೂಯಾರ್ಕ್ ಫ್ಯಾಷನ್ ವೀಕ್ 2023