Site icon Vistara News

Wedding Footwear Fashion: ವೆಡ್ಡಿಂಗ್‌ ಸೀಸನ್‌ ಟ್ರೆಂಡ್; ಜಗಮಗಿಸುವ ಶಿಮ್ಮರ್‌ ಫುಟ್‌ವೇರ್ಸ್‌

Wedding Footwear Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಮ್ಮರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಜಗಮಗಿಸುವ ಶಿಮ್ಮರ್‌ ಫುಟ್‌ವೇರ್‌ಗಳು (Wedding Footwear Fashion) ಟ್ರೆಂಡಿಯಾಗಿವೆ. ಧರಿಸುವ ಗ್ರ್ಯಾಂಡ್‌ ಉಡುಪಿಗೆ ಸಾಥ್‌ ನೀಡುವುದರೊಂದಿಗೆ ಮತ್ತಷ್ಟು ಆಕರ್ಷಕವಾಗಿಸುವ ಈ ಫುಟ್‌ವೇರ್‌ಗಳು ಇದೀಗ ಮದುಮಗಳ ಕಾಲನ್ನು ಮಾತ್ರವಲ್ಲ, ಈ ಸಮಾರಂಭಗಳಲ್ಲಿ ಭಾಗವಹಿಸುವ ಮಾನಿನಿಯರ ಪಾದಗಳನ್ನು ಸಿಂಗರಿಸುತ್ತಿವೆ.

ಯಾವ ಶೈಲಿಯವು ಟ್ರೆಂಡಿಯಾಗಿವೆ?

ಮದುವೆಯ ಹಿಂದಿನ ದಿನ ನಡೆಯುವ ಸಾಕಷ್ಟು ರಿಸೆಪ್ಷನ್‌ ಕಾರ್ಯಕ್ರಮಗಳಿಗೆ ಧರಿಸುವ ಲೆಹೆಂಗಾ, ಗಾಗ್ರಾ ಹಾಗೂ ಗ್ರ್ಯಾಂಡ್‌ ಗೌನ್‌ಗಳಿಗೆ ಜಗಮಗಿಸುವ ನೋಡಲು ರಾಜಕುಮಾರಿಯ ಪಾದಗಳಂತೆ ಸುಂದರವಾಗಿ ಬಿಂಬಿಸುವ ಶಿಮ್ಮರ್‌ ಗೋಲ್ಡನ್‌, ಸಿಲ್ವರ್‌, ರೆಡ್‌, ವೈನ್‌ ಕಲರ್‌, ಹಾಫ್‌ ವೈಟ್‌, ಮರೂನ್‌ ಸೇರಿದಂತೆ ನಾನಾ ಮ್ಯಾಚಿಂಗ್‌ ಶೇಡ್‌ಗಳ ಹಾಫ್‌ ಶೂಗಳು ಇದೀಗ ಚಾಲ್ತಿಯಲ್ಲಿವೆ. ಇನ್ನು ಟ್ರೆಡಿಷನಲ್‌ ಲುಕ್‌ ನೀಡುವ ಜೂತಾಗಳು ಕೂಡ ನಾನಾ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ.

ವೆರೈಟಿ ಡಿಸೈನರ್‌ ಶಿಮ್ಮರ್‌ ಹಾಫ್‌ ಶೂಗಳು

ಚಿಕ್ಕ ಚಿಕ್ಕ ಮಿರರ್‌ನಂತೆ ಕಾಣುವ ಮೈಕಾದಿಂದ ಅಲಂಕರಿಸಲಾದ ಹಾಫ್‌ ಶೂಗಳು, ನಾನಾ ಶೇಡ್‌ಗಳ ಕ್ರಿಸ್ಟಲ್ಸ್‌ನಿಂದ ಸಿಂಗರಿಸಿದ ಹಾಫ್‌ ಶೂಗಳು, ಹಾಫ್‌ ಶೂ ಕಮ್‌ ಬೆಲ್ಟ್‌ ಇರುವಂತಹ ಶೈನಿಂಗ್‌ ಲೆದರ್‌ ಅಥವಾ ಫ್ಯಾಬ್ರಿಕ್‌ನಿಂದ ಮಾಡಿರುವಂತಹ ಶೂಗಳು ಪ್ರಚಲಿತದಲ್ಲಿವೆ.

ಇನ್ನು ದೇಸಿ ಡಿಸೈನ್‌ನ ಸಾಕಷ್ಟು ಟ್ರೆಡಿಷನಲ್‌ ವರ್ಕ್ ಇರುವಂತಹ ಜೂತಾಗಳು, ಮಿಕ್ಸ್‌ ಮ್ಯಾಚ್‌ ಫ್ಲ್ಯಾಟ್‌ ಹಾಫ್‌ ಶೂಗಳು ಕೂಡ ಅತಿ ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಘವ್‌. ಅವರ ಪ್ರಕಾರ, ಕೆಲವನ್ನು ವೆಡ್ಡಿಂಗ್‌ ಸೀಸನ್‌ನಲ್ಲಿ ಮಾತ್ರವಲ್ಲ, ನಂತರವೂ ಸಾಕಷ್ಟು ಕಾರ್ಯಕ್ರಮಗಳಲ್ಲಿ ಧರಿಸಬಹುದು ಎನ್ನುತ್ತಾರೆ.

ಸೀರೆಗೆ ಜಗಮಗಿಸುವ ಸ್ಯಾಂಡಲ್‌ಗಳು

ಇನ್ನು ಸೀರೆಗೆ ಜಗಮಗಿಸುವ ಸ್ಯಾಂಡಲ್‌ಗಳು ಕೂಡ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಕಾಲಿಟ್ಟಿವೆ. ಸೀರೆಗೆ ಎತ್ತರವಾಗಿ ಬಿಂಬಿಸುವ ವೆಡ್ಜೆಸ್‌, ಹೈ ಹೀಲ್ಸ್, ವೀ ಶೇಪ್‌ ಸ್ಯಾಂಡಲ್ಸ್‌ ಮ್ಯಾಚಿಂಗ್‌ ಕಾನ್ಸೆಪ್ಟ್‌ನಲ್ಲೂ ಲಭ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ವೆಡ್ಡಿಂಗ್‌ ಶಿಮ್ಮರ್‌ ಫುಟ್‌ವೇರ್‌ ಆಯ್ಕೆ ಹೀಗಿರಲಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Wedding Jewellery Fashion: ಮದುವೆಯಲ್ಲಿ ಮದುಮಗಳ ಸೌಂದರ್ಯ ಹೆಚ್ಚಿಸುವ ಸೊಂಟಪಟ್ಟಿ

Exit mobile version