ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ವೆಡ್ಡಿಂಗ್ ಹೇರ್‌ಸ್ಟೈಲ್ ಟ್ರೆಂಡ್‌ನಲ್ಲಿ ನಾನಾ ಹೇರ್‌ಸ್ಟೈಲ್‌ಗಳು ಟ್ರೆಂಡಿಯಾಗಿವೆ. ಅವುಗಳ ಆಯ್ಕೆಗೂ ಮುನ್ನ ಒಂದೈದು ರೂಲ್ಸ್ ಫಾಲೋ ಮಾಡಬೇಕಾಗುತ್ತದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು. ಇಲ್ಲವಾದಲ್ಲಿ ಧರಿಸುವ ಎಥ್ನಿಕ್ ಡಿಸೈನರ್‌ವೇರ್ ಅಥವಾ ಟ್ರೆಡಿಷನಲ್ ಔಟ್‌ಫಿಟ್‌ಗೆ ಮ್ಯಾಚ್ ಆಗದೇ ಮುಜುಗರ ಎದುರಿಸುವ ಸಂದರ್ಭ ಎದುರಾಗಬಹುದು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು.
- ವೆಡ್ಡಿಂಗ್ ಹೇರ್‌ಸ್ಟೈಲ್ಸ್ ಮೊದಲೇ ಪ್ಲಾನ್ ಮಾಡಿ
ವೆಡ್ಡಿಂಗ್ ದಿನ ಯಾವುದೇ ಕಾರಣಕ್ಕೂ ಇನ್‌ಸ್ಟಂಟ್ ಹೇರ್‌ಸ್ಟೈಲ್‌ಗೆ ಮೊರೆ ಹೋಗಕೂಡದು. ಮದುವೆಗೆ ಕೆಲವು ದಿನ ಮೊದಲೇ ಹೇರ್‌ಸ್ಟೈಲ್ ಆಯ್ಕೆ ಮಾಡಬೇಕು. ಇದಕ್ಕಾಗಿ ಮೊದಲೇ ಬ್ಯೂಟಿ ತಜ್ಞರ ಬಳಿ ಮಾತುಕತೆ ನಡೆಸಿ, ಆಯ್ಕೆ ಮಾಡಬೇಕು. ಟ್ರಯಲ್ ಮಾಡಿದರೇ ಮತ್ತಷ್ಟು ಉತ್ತಮ ಎನ್ನುತ್ತಾರೆ. ಆ ಸಂದರ್ಭದಲ್ಲಿ ಹೇರ್‌ಸ್ಟೈಲ್ ಮುಖಕ್ಕೆ ಹೊಂದದಿದ್ದಲ್ಲಿ ಬದಲಿಸಬಹುದು. ಸಮಯಾವಕಾಶವಿರುತ್ತದೆ.
- ಡಿಸೈನರ್‌ಗಳಿಗೆ ತಕ್ಕಂತಿರಲಿ ಹೇರ್‌ಸ್ಟೈಲ್
ಮದುಮಗಳು ಧರಿಸುವ ಡಿಸೈನರ್‌ವೇರ್ ಅಥವಾ ಸೀರೆಗೆ ಮಾಡುವ ಹೇರ್‌ಸ್ಟೈಲ್ ಮ್ಯಾಚ್ ಆಗುವಂತಿರಬೇಕು. ಮದುವೆಯ ದಿನ ಅಭಾಸ ಮೂಡಿಸುವಂತಿರಬಾರದು. ಉಡುಪಿನ ಡಿಸೈನ್‌ಗಳು ಕೆಲವೊಮ್ಮೆ ಗ್ರ್ಯಾಂಡ್ ಆಗಿದ್ದಾಗ ಹೇರ್‌ಸ್ಟೈಲ್ ಸಿಂಪಲ್ ಆಗಿರಬೇಕಾಗುತ್ತದೆ. ಎರಡೂ ಗ್ರ್ಯಾಂಡ್ ಆಗಿದ್ದಲ್ಲಿ ಮೆಸ್ಸಿಯಾಗಿ ಕಾಣಿಸುತ್ತದೆ. ಹಾಗಾಗಿ ಯೋಚಿಸಿ, ಡಿಸೈಡ್ ಮಾಡಿ.
- ಮದುವೆ ಕಾರ್ಯಕ್ರಮಗಳಿಗೆ ತಕ್ಕಂತಿರಲಿ ಹೇರ್‌ಸ್ಟೈಲ್
ಮದುವೆಯಲ್ಲಿ ಅರಿಶಿನ ಶಾಸ್ತ್ರ, ಮೆಹೆಂದಿ, ಸಂಗೀತ್, ಆರತಕ್ಷತೆ ಹಾಗೂ ಮಹೂರ್ತ ಹೀಗೆ ನಾನಾ ಕಾರ್ಯಕ್ರಮಗಳಿರುತ್ತವೆ. ಒಂದೊಂದಕ್ಕೂ ಒಂದೊಂದು ಬಗೆಯ ಹೇರ್‌ಸ್ಟೈಲ್ ಮಾಡಬೇಕಾಗುತ್ತದೆ. ಆಯಾ ಕಾರ್ಯಕ್ರಮಗಳಿಗೆ ಸೂಟ್ ಆಗುವಂತೆ ಮೊದಲೇ ಪ್ಲ್ಯಾನ್ ಮಾಡಿ. ಹೇರ್‌ಸ್ಟೈಲ್ ಮಾಡಿಸಿಕೊಳ್ಳಿ. ಉದಾಹರಣೆಗೆ, ಮಹೂರ್ತಕ್ಕೆ ಮೊಗ್ಗಿನ ಜಡೆ, ಆರತಕ್ಷತೆಗೆ ಜ್ಯುವೆಲ್ ಹೇರ್‌ಸ್ಟೈಲ್, ಅರಿಶಿಣ ಶಾಸ್ತ್ರಕ್ಕೆ ಜಡೆ ಹೀಗೆ ಯಾವುದು ಬೇಕು ಎಂಬುದನ್ನು ನಿರ್ಧರಿಸಿ.
- ಆದಷ್ಟೂ ಲೈಟ್‌ವೈಟಾಗಿರಲಿ ಹೇರ್‌ಸ್ಟೈಲ್
ಮದುವೆಯ ದಿನ ಭಾರಿ ರೇಷ್ಮೆ ಸೀರೆ ಆಕ್ಸೆಸರೀಸ್‌ಗಳನ್ನು ಧರಿಸುವುದರಿಂದ ಆದಷ್ಟೂ ಲೈಟ್‌ವೈಟ್ ಹೇರ್‌ಸ್ಟೈಲ್ ಪ್ರಿಫರ್ ಮಾಡಿ. ಇಲ್ಲವಾದಲ್ಲಿ ಹೇರ್‌ಸ್ಟೈಲ್‌ಗೆಂದು ಧರಿಸುವ ಹೇರ್ ಎಕ್ಸ್‌ಟೆನ್ಷನ್, ಮೊಗ್ಗಿನ ಜಡೆ ಹಾಗೂ ಹೇರ್ ಜ್ಯುವೆಲರಿಗಳು ಭಾರವಾಗಿ ಬಿಚ್ಚಿಕೊಳ್ಳಬಹುದು. ಇಲ್ಲವಾದಲ್ಲಿ ತಲೆ ನೋವು ಬರಬಹುದು.
- ಯೂನಿಕ್ ಹೇರ್‌ಸ್ಟೈಲ್ ನಿಮ್ಮದಾಗಿರಲಿ
ನೋಡಲು ಆಕರ್ಷಕವಾಗಿ ಕಾಣುವಂತಹ ಟ್ರೆಂಡಿಯಾಗಿರುವ ಹೇರ್‌ಸ್ಟೈಲ್ ಚೂಸ್ ಮಾಡಿ. ಕೊಂಚ ನಿಮ್ಮ ಚಾಯ್ಸ್‌ಗೆ ತಕ್ಕಂತೆ ಬದಲಿಸಿ. ಯೂನಿಕ್ ಆಗಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion News : ಮನಗೆದ್ದ ಸ್ಮೃತಿ ಸಾಧನಾ ವರ್ಷದ ಮೊದಲ ಫ್ಯಾಷನ್ ಶೋ