ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಂಡೋ-ವೆಸ್ಟರ್ನ್ ಶೈಲಿಯ ಹೇರ್‌ಸ್ಟೈಲ್‌ಗಳು (Wedding Hairstyles) ಇದೀಗ ಕೊಂಚ ಎಥ್ನಿಕ್ ರೂಪ ಪಡೆದು ವೆಡ್ಡಿಂಗ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಹೌದು. ಉದ್ದನೆಯ ಜಡೆಯ ಅಲಂಕಾರ ಇದೀಗ ಕೇವಲ ಮಹೂರ್ತಕ್ಕೆ ಮಾತ್ರ ಸೀಮಿತವಾಗಿದ್ದು, ಇನ್ನುಳಿದ ಕಾರ್ಯಕ್ರಮಗಳಲ್ಲಿ ಇಂಡೋ-ವೆಸ್ಟರ್ನ್ ಶೈಲಿಯ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನ ಹೇರ್‌ಸ್ಟೈಲ್‌ಗಳು (Wedding Hairstyles) ಮದುಮಗಳನ್ನು ಅಲಂಕರಿಸುತ್ತಿವೆ.
ಮಹೂರ್ತಕ್ಕೆ ಸೀಮಿತವಾದ ಮೊಗ್ಗಿನ ಜಡೆ
ಯಾವುದೇ ಮದುವೆಯಾದರೂ ಸರಿಯೇ ವಧು-ವರರ ಮಹೂರ್ತ ಅಂದರೇ, ಮಾಂಗಲ್ಯ ಧಾರಣೆ ಸಮಯಕ್ಕೆ ಮಾತ್ರ ನಾನಾ ಬಗೆಯ ಮೊಗ್ಗಿನ ಜಡೆ, ಡಿಸೈನರ್ ಜಡೆ ಅಲಂಕಾರಗಳು ಸೀಮಿತವಾಗಿವೆ. ಇನ್ನುಳಿದಂತೆ, ರಿಸೆಪ್ಷನ್, ಸಂಗೀತ್, ಮೆಹಂದಿಯಂತಹ ಕಾರ್ಯಕ್ರಮಗಳಲ್ಲಿ ಇಂಡೋ-ವೆಸ್ಟರ್ನ್ ಶೈಲಿಗೆ ಕೊಂಚ ಎಥ್ನಿಕ್ ಟಚ್ ನೀಡುವ ಹೇರ್‌ಸ್ಟೈಲ್‌ಗಳು ಚಾಲ್ತಿಗೆ ಬಂದಿವೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ರಚಿತಾ. ಅವರ ಪ್ರಕಾರ, ಈ ಹೇರ್‌ಸ್ಟೈಲ್‌ಗಳು ಕಂಪ್ಲೀಟ್ ದೇಸಿ ಲುಕ್ ಹೊಂದಿರುವುದಿಲ್ಲ. ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲಿ ಎಥ್ನಿಕ್ ಟಚ್ ನೀಡಲಾಗಿರುತ್ತದೆ ಎನ್ನುತ್ತಾರೆ.
ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್
ತಲೆಯ ಮುಂಭಾಗದಲ್ಲಿ ಪಫ್, ನಂತರ ಸುರುಳಿ ಸುತ್ತಿದಂತಹ ಲೇಯರ್ ಲುಕ್, ಅದರ ನಂತರ ಪೋನಿಟೈಲ್ ರೀತಿ ಎತ್ತರದಲ್ಲಿ ಹಾಕಿದ ಹಾಫ್ ಬನ್, ಅದಕ್ಕೆ ಹೊಂದಿಕೊಂಡಂತೆ ರಿಂಗ್ಲೇಟ್ಸ್ ಹೀಗೆ ನಾನಾ ಬಗೆಯ ಮಿಕ್ಸ್ ಮ್ಯಾಚ್ ಹೇರ್ ಸ್ಟೈಲ್ ಇರುವ ಹಾಫ್ ಫ್ರೀ ಹೇರ್, ಲಾಂಗ್ ಹಾಫ್ ಪೋನಿಟೈಲ್ ಶೈಲಿಯ ರಿಂಗ್ಲೇಟ್ಸ್ ಹೇರ್‌ಸ್ಟೈಲ್ ಕಸ್ಟಮೈಸ್ ಮಾಡಿಸಿಕೊಂಡರೇ ಮತ್ತೆ ಕೆಲವರು ಅವರ ಇಚ್ಛೆಗೆ ಅನುಗುಣವಾಗಿ ವಿನ್ಯಾಸ ಮಾಡಿಸುತ್ತಾರೆ. ಇನ್ನು ಬನ್ ಹೇರ್‌ಸ್ಟೈಲ್‌ಗೆ ನಾನಾ ಬಗೆಯ ಹೇರ್ ಎಕ್ಸ್‌ಟೆನ್ಷನ್‌ಗಳನ್ನು ಬಳಸಿ, ಡಿಸೈನ್ ಮಾಡುವುದು ಕೂಡ ಟ್ರೆಂಡ್‌ನಲ್ಲಿದೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್.
ಗ್ರ್ಯಾಂಡ್ ಲುಕ್‌ಗೆ ಹೇರ್ ಎಕ್ಸ್‌ಟೆನ್ಷನ್
ಇನ್ನು ವೆಡ್ಡಿಂಗ್ ಹೇರ್‌ಸ್ಟೈಲ್‌ಗಳಲ್ಲಿ ಬಹುತೇಕ ಎಲ್ಲರೂ ಹೇರ್ ಎಕ್ಸ್‌ಟೆನ್ಷನ್‌ಗಳನ್ನು ಬಳಸಿ ಹೇರ್‌ಸ್ಟೈಲ್ ಮಾಡುತ್ತಾರೆ. ಅದರಲ್ಲೂ ಎಥ್ನಿಕ್ ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್‌ಗಳಲ್ಲಿ ಇವುಗಳ ಅಗತ್ಯತೆ ಹೆಚ್ಚು ಎನ್ನುತ್ತಾರೆ ಎಕ್ಸ್‌ಪಟ್ರ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Mehndi Fashion : ವೆಡ್ಡಿಂಗ್ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿದೆ ಕಥೆ ಹೇಳುವ ಬ್ರೈಡಲ್ ಮೆಹಂದಿ ಡಿಸೈನ್ಸ್