ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ವೆಡ್ಡಿಂಗ್ ಫ್ಯಾಷನ್ (Wedding Jewel Fashion) ಜ್ಯುವೆಲರಿಗಳಲ್ಲಿ ಗ್ರ್ಯಾಂಡ್ ಲುಕ್ ನೀಡುವ ಫಿಂಗರ್ ಚೈನ್ ರಿಂಗ್‌ಗಳು ಕೂಡ ಸ್ಥಾನ ಪಡೆದಿವೆ. ಮದುಮಗಳ ಮೆಹಂದಿ ಚಿತ್ತಾರದ ಕೈಗಳನ್ನು ಮತ್ತಷ್ಟು ಅಲಂಕರಿಸುತ್ತಿವೆ.
ಏನಿದು ಫಿಂಗರ್ ಚೈನ್ ರಿಂಗ್?
ಮದುವೆಯ ಫ್ಯಾಷನ್ ಜ್ಯುವೆಲರಿಗಳಲ್ಲಿ ಫಿಂಗರ್ ಚೈನ್ ರಿಂಗ್ ಸೇರಿರುವುದು ನಿನ್ನೆ ಮೊನ್ನೆಯಲ್ಲ! ಆದರೆ, ದಕ್ಷಿಣ ಭಾರತದ ಮದುವೆಗಳಲ್ಲಿ ಇದು ಅಪರೂಪವಾಗಿತ್ತು. ಮೊಘಲರ ಕಾಲದಿಂದಲೂ ಪ್ರಚಲಿತದಲ್ಲಿದ್ದ , ಈ ಆಭರಣ ಅಂದಿನ ರಾಣಿ-ಮಹಾರಾಣಿಯರು ರಾಯಲ್ ಲುಕ್‌ಗಾಗಿ ಧರಿಸುತ್ತಿದ್ದರೆನ್ನಲಾಗಿದೆ. ಉತ್ತರ ಭಾರತದಲ್ಲಿನ ರಾಯಲ್ ಫ್ಯಾಮಿಲಿಯ ಹೆಂಗಸರು ಈಗಲೂ ಕೂಡ ಈ ಆಭರಣಗಳನ್ನು ಮನೆಯ ಫಂಕ್ಷನ್‌ಗಳಲ್ಲಿ ಧರಿಸುತ್ತಾರೆ. ಅಲ್ಲಿನ ಮನೆಯ ಸಮಾರಂಭಗಳಲ್ಲಿ ಕೈಗಳಿಗೆ ಧರಿಸುವುದು ತೀರಾ ಸಾಮಾನ್ಯ ಎನ್ನುವ ಜ್ಯುವೆಲ್ ಡಿಸೈನರ್ ರೇಷ್ಮಾ ಪ್ರಕಾರ, ಫಿಂಗರ್ ಚೈನ್ ರಿಂಗ್ ಕೈ ಉಂಗುರ ಅಂಗೈನಿಂದ ಬಳೆಯ ತನಕ ಕನೆಕ್ಷನ್ ನೀಡುವ ಆಭರಣವಾಗಿದೆ. ಕೈ ಉಂಗುರಗಳು ಕೈ ಬಳೆಗಳು ಅಥವಾ ಬ್ರೆಸ್‌ಲೇಟ್‌ನಂತಹ ಚೈನ್‌ಗಳಿಗೆ ಇವು ಹೊಂದಿಕೊಂಡಂತಿರುತ್ತವೆ. ಧರಿಸಿದಾಗ ನೋಡಲು ಅಂದವಾಗಿ ಕಾಣುತ್ತವೆ ಎನ್ನುತ್ತಾರೆ.
ವೈವಿಧ್ಯಮಯ ಡಿಸೈನ್ಸ್
ಡಬ್ಬಲ್ ರಿಂಗ್ ಚೈನ್ಸ್, ಅಡ್ಜಸ್ಟಬಲ್ ಡುಯಲ್ ಫಿಂಗರ್ ರಿಂಗ್ ಚೈನ್, ಯೂನಿಸೆಕ್ಸ್ ಕ್ಯಾಶುವಲ್ ಡಿಸೈನ್ಸ್, ಹ್ಯಾಂಡ್ ಚೈನ್ ರಿಂಗ್ಸ್, ಹ್ಯಾಂಡ್‌ಬ್ರೇಸ್‌ಲೇಟ್ ವಿತ್ ರಿಂಗ್ಸ್, ಕ್ರಿಸ್ಟಲ್ ಎಥ್ನಿಕ್ ಡಿಸೈನ್ ಫಿಂಗರ್ ಚೈನ್ ರಿಂಗ್, ಕುಂದನ್ ಫಿಂಗರ್ ಚೈನ್ಸ್, ಸ್ಟೇಟ್‌ಮೆಂಟ್ಸ್ ಫಿಂಗರ್ ರಿಂಗ್ಸ್ ಸೇರಿದಂತೆ ನಾನಾ ವಿನ್ಯಾಸದವು ಟ್ರೆಂಡ್‌ನಲ್ಲಿವೆ. ಮದುವೆಗಳಲ್ಲಿ ಮೆಹಂದಿ ಹಚ್ಚಿದ ಕೈಗಳನ್ನು ಸಿಂಗರಿಸುತ್ತಿರುವ ಇವು ಫೋಟೋಶೂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್ನಿ.
ಕ್ಯಾಶುವಲ್ ಲುಕ್‌ಗೂ ಫಿಂಗರ್ ಚೈನ್ ರಿಂಗ್
ವೆಡ್ಡಿಂಗ್ ಡಿಸೈನ್‌ನವು ಮಾತ್ರವಲ್ಲ, ಕ್ಯಾಶುವಲ್ ಉಡುಗೆಗೂ ಧರಿಸಬಹುದಾದ ಸಿಂಪಲ್ ಡಿಸೈನ್ನ ಫಿಂಗರ್ ಚೈನ್ ರಿಂಗ್‌ಗಳು ಕಾಲಿಟ್ಟಿವೆ. ಇವು ವೈಟ್ ಹಾಗೂ ಬ್ಲಾಕ್ ಮೆಟಲ್‌ನಲ್ಲೂ ಲಭ್ಯ. ಯಾವುದೇ ವೆಸ್ಟರ್ನ್ ಔಟ್‌ಫಿಟ್‌ಗೂ ಇವು ಧರಿಸಬಹುದಾಗಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
- ಕೈಗಳ ಆಕಾರಕ್ಕೆ ಹೊಂದುವಂತಹ ವಿನ್ಯಾಸದ್ದನ್ನು ಆಯ್ಕೆ ಮಾಡಿ.
- ಅಗಲವಾಗಿರುವ ಕೈಗಳಿಗೆ ಕುಂದನ್ ವಿನ್ಯಾಸದ್ದು ಓಕೆ.
- ಪುಟ್ಟ ಕೈ ಬೆರಳಿಗೆ ಆದಷ್ಟೂ ಸಿಂಪಲ್ ಚೈನ್ ವಿನ್ಯಾಸದವು ಬೆಸ್ಟ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Season Fashion: ಸೆಲೆಬ್ರೆಟಿ ಲುಕ್‌ಗಾಗಿ ಹೈ ಫ್ಯಾಷನ್ ಲೋಕಕ್ಕೆ ಬಂತು ಒನ್ ಶೋಲ್ಡರ್ ಡ್ರೆಸ್!