ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಜ್ಜಿ ಕಾಲದ ಜ್ಯುವೆಲರಿ ಲಿಸ್ಟ್‌ನಲ್ಲಿದ್ದ ಕಾಸಿನ ಸರ ಇದೀಗ ವೆಡ್ಡಿಂಗ್ ಆ್ಯಂಟಿಕ್ ಜ್ಯುವೆಲ್ ಫ್ಯಾಷನ್‌ಗೆ ಮರಳಿದೆ. ಈ ಜನರೇಷನ್‌ನ ಯುವತಿಯರನ್ನು ಸೆಳೆಯತೊಡಗಿದೆ. “ನಿಮ್ಮ ಮನೆಯಲ್ಲಿ ಅಜ್ಜಿಯ ಅಥವಾ ಅಮ್ಮನ ಕಾಸಿನ ಸರವಿದ್ದಲ್ಲಿಯಾವುದೇ ಕಾರಣಕ್ಕೂ ಮುರಿಸಿ, ಹೊಸ ಡಿಸೈನ್ ಮಾಡಿಸಿಕೊಳ್ಳಬೇಡಿ. ಯಾಕೆಂದರೆ, ಇಂದು ವೆಡ್ಡಿಂಗ್ ಜ್ಯುವೆಲರಿ ಫ್ಯಾಷನ್‌ಗೆ ಸೇರಿದೆ. ನಾನಾ ಬಗೆಯ ವಿನ್ಯಾಸದ ಕಾಸಿನ ಸರದ ಫ್ಯಾಷನ್ ಮರಳಿ ಬಂದಿದೆ. ಸದ್ಯಕ್ಕೆ ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿಕಾಣಿಸಿಕೊಳ್ಳುತ್ತಿರುವ ಈ ಕಾಸಿನ ಸರಗಳು, ಇದೀಗ ಸಾಮಾನ್ಯರ ಮದುವೆಯ ಜ್ಯುವೆಲ್ (Wedding Jewel Fashion)ಲಿಸ್ಟ್‌ಗೂ ಸೇರಿದೆ” ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್ ಛಾಯಾ.
ನೆಕ್ಲೇಸ್ ಶೈಲಿಯ ಕಾಸಿನ ಸರ
ನೆಕ್ಲೇಸ್ ಶೈಲಿಯ ಕಾಸಿನ ಸರವನ್ನು ಸೀರೆ ಹಾಗೂ ಸಲ್ವಾರ್ ಸೂಟ್ ಜತೆಗೂ ಧರಿಸಬಹುದು. ಉಡುಪಿನ ನೆಕ್‌ಲೈನ್ ಅಗಲವಾಗಿರಬೇಕಷ್ಟೇ! ಇದಕ್ಕೆ ಹೊಂದುವ ಶಾರ್ಟ್ ಕಾಸಿನ ಸರ ಧರಿಸಿದಾಗ ದೇಸಿ ಲುಕ್ ದೊರೆಯುತ್ತದೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್.
ಹಾರದ ಶೈಲಿಯ ಕಾಸಿನ ಸರ
ಹಾರದ ಶೈಲಿಯ ಕಾಸಿನ ಸರಗಳು ರಾಣಿ-ಮಹಾರಾಣಿಯರ ಕಾಲದಿಂದಲೂ ರಾಯಲ್ ಜ್ಯುವೆಲರಿ ಕೆಟಗರಿಯಲ್ಲಿವೆ. ಶ್ರೀಮಂತರು ಹೆಚ್ಚಾಗಿ ಇವನ್ನು ಧರಿಸುತ್ತಿದ್ದರು. ಕಾಲಬದಲಾದಂತೆ ಸಾಮಾನ್ಯರು ಕೂಡ ಇದೀಗ ತಮ್ಮದಾಗಿಸಿಕೊಂಡಿದ್ದಾರೆ ಎನ್ನಬಹುದು.
ಕಾಸಿನ ಸರದ ಮ್ಯಾಚಿಂಗ್
ಲಾಂಗ್ ಇಲ್ಲವೇ ಹಾರದಂತಿರುವ ಕಾಸಿನ ಸರವನ್ನು ಮದುವೆ ಸಮಾರಂಭಗಳಿಗೆ ಧರಿಸುವುದು ಸೂಕ್ತ. ಗ್ರ್ಯಾಂಡ್ ಸಮಾರಂಭಕ್ಕೆ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ ಎನ್ನುತ್ತಾರೆ ಡಿಸೈನರ್ ರಾಗಾ.
ಬೇಡಿಕೆ ಹೆಚ್ಚಿಸಿಕೊಂಡ ಇಮಿಟೇಷನ್ ಕಾಸಿನ ಸರಗಳು
ಬಂಗಾರದ ಕಾಸಿನ ಸರಕ್ಕೆ ಸ್ಪರ್ಧೆ ಎಂಬಂತೆ ಇದೀಗ ವನ್ ಗ್ರಾಮ್ ಗೋಲ್ಡ್ ಹಾಗೂ ಇಮಿಟೇಷನ್ ಕಾಸಿನ ಸರಗಳು ಕೂಡ ಸಾಮಾನ್ಯ ಮಹಿಳೆಯರ ಕತ್ತನ್ನು ಅಲಂಕರಿಸುತ್ತಿವೆ. ಸಾಕಷ್ಟು ಚಾಲ್ತಿಯಲ್ಲಿವೆ ಕೂಡ. ಇನ್ನು ಕಾಸಿನ ಸರವನ್ನು ಧರಿಸಿದ ನಂತರ, ಪ್ರತ್ಯೇಕವಾಗಿ ಹತ್ತಿ ಬಟ್ಟೆಯಲ್ಲಿ ಕವರ್ ಮಾಡಿ ಬಾಕ್ಸ್‌ನಲ್ಲಿಡಿ. ವೆಲ್ವೆಟ್ ಬಟ್ಟೆಯಲ್ಲಿಟ್ಟಲ್ಲಿ ಅದರ ಶೈನಿಂಗ್ ಕಡಿಮೆಯಾಗದು. ಹೆಚ್ಚು ಪಾಲಿಶ್ ಮಾಡಿಸುವುದು ಬೇಡ. ಡಲ್ ಫಿನಿಶಿಂಗ್ ಇಂದು ಫ್ಯಾಷನ್‌ನಲ್ಲಿದೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಧಾ ಕೇಸರಿ.
ಕಾಸಿನ ಸರ ಸಂರಕ್ಷಣೆ
- ಇತರೆ ಜ್ಯುವೆಲ್ಗಳೊಂದಿಗೆ ಇರಿಸಬೇಡಿ. ಸ್ಕ್ರಾಚ್ ಆಗುವ ಸಾಧ್ಯತೆಗಳಿರುತ್ತವೆ.
- ಕಾಸಿನ ಸರದಲ್ಲಿರುವ ಕಾಸುಗಳ ಅಗಲಕ್ಕೆ ಹೊಂದುವಂತಹ ನೆಕ್‌ಲೈನ್ ಇರುವ ಉಡುಪು ಧರಿಸಿ.
- ಅಗಲ ಮುಖದವರು ಒಂದು ಕಾಸಿನ ಸರ ಧರಿಸಿದರೇ ಸಾಕು.
- ಆದಷ್ಟೂ ಪ್ಲೇನ್ ಸೀರೆ, ಸಲ್ವಾರ್ ಸೂಟ್ಗೆ ಇವು ಮ್ಯಾಚ್ ಆಗುತ್ತವೆ.
- ಕಾಸಿನಸರ ಧರಿಸಿದಾಗ ಹಣೆಗೆ ಬಿಂದಿ ಹಚ್ಚಿ.
- ಇದರೊಂದಿಗೆ ಇತರೇ ಆ್ಯಂಟಿಕ್ ಡಿಸೈನ ಆಭರಣಗಳನ್ನು ಕೂಡ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Couple Fashion: ಸ್ಯಾಂಡಲ್‌ವುಡ್ ಜೋಡಿ ರಿಶಿ-ಸ್ವಾತಿಯ ಟ್ರೆಡಿಷನಲ್ ಕಾಂಟ್ರಾಸ್ಟ್ ಟ್ವಿನ್ನಿಂಗ್ ಫ್ಯಾಷನ್