Site icon Vistara News

Wedding Mehandi Designs : ಮದುಮಗಳ ಮನಮೋಹಕ ಪಾದಗಳಿಗೆ 5 ಟ್ರೆಂಡಿ ಮೆಹೆಂದಿ ವಿನ್ಯಾಸ

Wedding Mehandi Designs

Wedding Mehandi Designs

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಮೆಹೆಂದಿ ಡಿಸೈನ್‌ನಲ್ಲಿ ಇದೀಗ ಪಾದಗಳಿಗೂ ಮನಮೋಹಕ ವಿನ್ಯಾಸ ಮಾಡುವ ಟ್ರೆಂಡ್ ಚಾಲ್ತಿಯಲ್ಲಿದೆ. ನಾನಾ ಬಗೆಯ ಡಿಸೈನನ್‌ಗಳು ಎಂಟ್ರಿ ನೀಡಿದ್ದು, ಅವುಗಳಲ್ಲಿ ೫ ಬಗೆಯವು ಸಖತ್ ಪಾಪ್ಯುಲರ್ ಆಗಿವೆ. ಅವು ಯಾವವು ಎಂಬುದರ ಬಗ್ಗೆ ವೆಡ್ಡಿಂಗ್ ಮೆಹೆಂದಿ ವಿನ್ಯಾಸಕಾರರು ಇಲ್ಲಿ ವಿವರಿಸಿದ್ದಾರೆ.


ಜೆಮೆಟ್ರಿಕ್ ಮೆಹೆಂದಿ ವಿನ್ಯಾಸ
ಕೈಗಳಿಗೆ ಹಾಕುವ ಜೆಮಿಟ್ರಿಕ್ ವಿನ್ಯಾಸದಲ್ಲೆ ಕೊಂಚ ಅಗಲವಾಗಿ ಹಾಕುವ ಡಿಸೈನ್‌ಗಳು ಪಾದಗಳ ಮೆಹೆಂದಿ ವಿನ್ಯಾಸದಲ್ಲಿ ಕಂಡು ಬರುತ್ತವೆ. ಕಾಲಿನ ಆಕಾರಕ್ಕೆ ತಕ್ಕಂತೆ, ಸ್ಕಿನ್ ಟೋನ್‌ಗೆ ತಕ್ಕಂತೆ ಜೆಮೆಟ್ರಿಕಲ್ ಡಿಸೈನ್‌ಗಳು ಆಯ್ಕೆ ಮಾಡಬಹುದು. ಉದಾಹರಣೆಗೆ ಕ್ರಿಸ್ಕ್ರಾಸ್ ಡಿಸೈನ್ಸ್, ಬಾಕ್ಸ್ ಡಿಸೈನ್ಸ್, ಸರ್ಕಲ್, ಸೆಮಿ ಸರ್ಕಲ್, ಓವಲ್ ಹೀಗೆ ನಾನಾ ಶೇಪ್‌ಗಳನ್ನು ವಿಸ್ತರಿಸಿ ವಿನ್ಯಾಸ ಮಾಡುವುದು ರಿವಾಜಿನಲ್ಲಿದೆ.

ಜಾಲಿ ಮತ್ತು ಫ್ಲೋರಲ್ ವಿನ್ಯಾಸ
ಜಾಲರಿಯಂತಹ ವಿನ್ಯಾಸದಲ್ಲಿ ಊಹೆಗೂ ಮೀರಿದ ಡಿಸೈನ್ ಮಾಡಬಹುದು. ಇನ್ನು ಇದಕ್ಕೆ ಹೊಂದಿಕೊಂಡಂತಹ ಫ್ಲೋರಲ್ ವಿನ್ಯಾಸದವು ಅಷ್ಟೇ! ನಾನಾ ಬಗೆಯ ಹೂ –ಬಳ್ಳಿಗಳ ಚಿತ್ತಾರವನ್ನೂ ಎಷ್ಟು ಉದ್ದ ಅಗತ್ಯವಿದೆಯೋ ಅಷ್ಟಕ್ಕೆ ಮೂಡಿಸಬಹುದು. ಬಗೆಬಗೆಯ ಸುಂದರ ಹೂ ಚಿತ್ತಾರವನ್ನು ಪಾದದಿಂದ ಮಂಡಿಯವರೆಗೂ ವಿಸ್ತರಿಸಬಹುದು.


ವಿಭಿನ್ನ ಮಂಡಲ ಆರ್ಟ್
ಮಂಡಲ ಆರ್ಟ್ ಕಲಾವಿದರ ಕೈಗಳಲ್ಲಿ ಮೂಡುವ ಒಂದು ಸುಂದರ ಕಲೆ. ಇದೀಗ ಅದು ಮೆಹೆಂದಿ ವಿನ್ಯಾಸದಲ್ಲೂ ಭಾಗವಾಗಿದೆ. ಕಲಾವಿದರ ಊಹೆಗೆ ತಕ್ಕಂತೆ ಚಿತ್ರಿಸಬಹುದಾದ ಮಂಡಲ ಆರ್ಟ್, ಪಾದಗಳಿಗೆ ಡಿಫರೆಂಟ್ ಲುಕ್ ನೀಡುತ್ತದೆ. ನಾನಾ ಬಗೆಯವು ಈ ಡಿಸೈನ್‌ನಲ್ಲೂ ಕಾಣಬಹುದು.

ಟ್ರೆಡಿಷನಲ್ ಮೋಟಿಫ್ ಡಿಸೈನ್
ಡಿಸೈನರ್‌ವೇರ್‌ಗಳಲ್ಲಿ ಕಾಣಬಹುದಾದ ಮೋಟಿಫ್‌ಗಳನ್ನು ಇದೀಗ ಪಾದಗಳ ಮೆಹೆಂದಿಯಲ್ಲೂ ಚಿತ್ರಿಸಬಹುದು. ನೋಡಲು ಆಕರ್ಷಕವಾಗಿ ಕಾಣುವ ಇವು ಕೊಂಚ ತಿಳಿ ಸ್ಕಿನ್ ಟೋನ್ ಇರುವವರಿಗೆ ಮಾತ್ರ ಮ್ಯಾಚ್ ಆಗುತ್ತವೆ. ಡಿಫರೆಂಟ್ ಆಕಾರದಲ್ಲೂ ಇವನ್ನು ಮೂಡಿಸಬಹುದು. ಉದಾಹರಣೆಗೆ., ಯಾವುದಾದರೂ ಗ್ರ್ಯಾಂಡ್ ಡಿಸೈನರ್ ಲೆಹೆಂಗಾದ ಮೋಟಿಫ್ ಡಿಸೈನ್ ಕೂಡ ಮೂಡಿಸಬಹುದು.


ಕಾಲಿಗೂ ಅರೆಬಿಕ್ ವಿನ್ಯಾಸ
ಎವರ್‌ಗ್ರೀನ್‌ ಮೆಹೆಂದಿ ವಿನ್ಯಾಸವಾದ ಅರೆಬಿಕ್ ಡಿಸೈನ್‌ನಲ್ಲಿ ಇಂದು ಸಾಕಷ್ಟು ಪ್ರಯೋಗಾತ್ಮಕ ಡಿಸೈನ್‌ಗಳು ಕಾಲಿಟ್ಟಿವೆ. ಅವುಗಳಲ್ಲಿ ಬಹಳಷ್ಟು ಬ್ರೈಡಲ್ ಮೆಹೆಂದಿ ವಿನ್ಯಾಸದಲ್ಲಿ ಸೇರಿದ್ದು, ಪಾದಗಳ ಮೇಲೆ ಆಕರ್ಷಕವಾಗಿ ಕಾಣುತ್ತವೆ.
ಪಾದಗಳಿಗೆ ಮೆಹೆಂದಿ ಮೂಡಿಸುವ ಮುನ್ನ
ಪೆಡಿಕ್ಯೂರ್ ಮಾಡಿಸಿರುವುದು ಅಗತ್ಯ.
ಮೆಹೆಂದಿ ಹಚ್ಚಿದ ನಂತರ ನೇಲ್ವ‌ ಪಾಲಿಶ್‌ ಬಳಸಿ.
ಮೆಹೆಂದಿ ವಿನ್ಯಾಸದ ನಂತರ ಕೆಲವು ಗಂಟೆಗಳ ಕಾಲ ಓಡಾಡಬೇಡಿ.
ಪಾದಗಳ ಆಕರ್ಷಕ ಮೆಹೆಂದಿ ಡಿಸೈನ್ ಆನ್‌ಲೈನ್‌ನಲ್ಲೂ ಲಭ್ಯ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Fashion News : ಮನಗೆದ್ದ ಸ್ಮೃತಿ ಸಾಧನಾ ವರ್ಷದ ಮೊದಲ ಫ್ಯಾಷನ್‌ ಶೋ

Exit mobile version