ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನಲ್ಲಿ ಮದುಮಗಳ ಅಂಗೈ ಅಲಂಕರಿಸುವ ಬ್ರೈಡಲ್ ಮೆಹಂದಿಯಲ್ಲಿ (Wedding Mehndi) Fashion ಇದೀಗ ಸ್ಟೋರಿ ಟೆಲ್ಲಿಂಗ್ ಅಂದರೆ, ಕಥೆ ಹೇಳುವ ಮೆಹಂದಿ ಡಿಸೈನ್‌ಗಳು ಟ್ರೆಂಡಿಯಾಗಿವೆ. ನೋಡಲು ಮನಮೋಹಕವಾಗಿ ಕಾಣುವುದರೊಂದಿಗೆ ಪೊಟ್ರೈಟ್ ಹಾಗೂ ಲೈಫ್ ಕ್ಯಾರೆಕ್ಟರ್ ಬಿಂಬಿಸುವ ಚಿತ್ತಾರಗಳು ಮದುಮಗಳ ಕೈಗಳನ್ನು ಸಿಂಗರಿಸುತ್ತವೆ.
ಸ್ಟೋರಿ ಟೆಲ್ಲಿಂಗ್ ಮೆಹಂದಿ
ಚಿಕ್ಕ ಪುಟ್ಟ ಚಿತ್ತಾರಗಳಲ್ಲೆ ಪ್ರೇಮ ಕಥಾನಕ ಬಿಂಬಿಸುವ ರಾಜ-ಮಹಾರಾಜರ, ರಾಣಿಯರ ಚಿತ್ತಾರಗಳು, ರಾಧಾ-ಕೃಷ್ಣಾ, ಸೀತಾ-ರಾಮ, ತಾಜ್‌ಮಹಲ್, ಲವ್‌ಬಡ್ರ್ಸ್, ಇಲ್ಲವೇ ವಧು-ವರನ ಪ್ರೇಮ ಸಲ್ಲಾಪದ ಚಿತ್ತಾರ, ಸಿಂಡ್ರೆಲ್ಲಾ ಹೀಗೆ ಮೋಹಕ ಪ್ರೇಮ ಕಥೆಗಳನ್ನು ಬಿಂಬಿಸುವ ಚಿತ್ರಗಳು ಈ ಸ್ಟೋರಿ ಟೆಲ್ಲಿಂಗ್ ಮೆಹಂದಿ ಡಿಸೈನ್‌ನಲ್ಲಿ ಸ್ಥಾನಪಡೆದಿವೆ. ಇನ್ನು ವಧುವಿನ ಇಚ್ಛೆಯನುಸಾರ ಬೇಕಾದ ಲವ್ ಸ್ಟೋರಿಗಳ ಮೆಹಂದಿ ಡಿಸೈನ್‌ಗಳನ್ನು ಹಾಕಲಾಗುತ್ತದೆ. ಕೇವಲ ಮೂರ್ನಾಲ್ಕು ಚಿತ್ರಗಳಿಂದಲೇ ಇದು ಇಂತಹದ್ದೇ ಕಥಾನಕ ಹೊಂದಿದೆ ಎಂಬುದನ್ನು ಕೂಡ ಇವುಗಳಿಂದ ಕಂಡು ಹಿಡಿಯಬಹುದು ಎನ್ನುತ್ತಾರೆ ಮೆಹಂದಿ ಆರ್ಟಿಸ್ಟ್ಸ್. ಇನ್ನು ಅರೇಬಿಕ್, ಸಿಂಗಲ್ ಲೈನ್, ಗ್ರ್ಯಾಂಡ್ ಫ್ಲೋರಲ್ ಹೀಗೆ ಸಾಕಷ್ಟು ಮೆಹಂದಿ ಡಿಸೈನ್‌ಗಳು ಬ್ರೈಡಲ್ ಮೆಹಂದಿ ಡಿಸೈನ್‌ನಲ್ಲಿ ಇಂದಿಗೂ ಪ್ರಚಲಿತದಲ್ಲಿವೆ. ಬಹಳಷ್ಟು ಸ್ಟೋರಿ ಟೆಲ್ಲಿಂಗ್ ಡಿಸೈನ್‌ಗಳು ಕಸ್ಟಮೈಸ್ಡ್ ಡಿಸೈನ್ ಹೊಂದಿರುತ್ತವೆ. ಹಾಗೆಂದು ಈ ಚಿತ್ತಾರದಲ್ಲಿ ಇಡೀ ಕಥೆಯನ್ನು ಹೇಳಲಾಗುವುದಿಲ್ಲ. ಬದಲಿಗೆ ಕೆಲವು ಸಣ್ಣಪುಟ್ಟ ಚಿತ್ತಾರದ ಮೂಲಕ ಕಥೆಯ ಸಾರಾಂಶವನ್ನು ಮೂಡಿಸಲಾಗುತ್ತದೆ ಎನ್ನುತ್ತಾರೆ ಮೆಹಂದಿ ಎಕ್ಸ್‌ಪರ್ಟ್ಸ್.
ವೆಡ್ಡಿಂಗ್ ಸೀಸನ್‌ನಲ್ಲಿ ಬೇಡಿಕೆ ಹೆಚ್ಚು
ಮೂಲತಃ ನಾರ್ತ್ ಇಂಡಿಯಾದಿಂದ ಬಂದ ಈ ಮೆಹಂದಿ ಡಿಸೈನ್ ಟ್ರೆಂಡ್ ಇದೀಗ ನಮ್ಮ ದಕ್ಷಿಣ ಭಾರತದಲ್ಲೂ ಕಾಮನ್ ಆಗತೊಡಗಿದೆ. ಅಚ್ಚರಿಯ ವಿಚಾರವೆಂದರೆ, ಕಂಟೆಂಪರರಿ ವಿನ್ಯಾಸಗಳಲ್ಲೂಕಾಣಿಸಿಕೊಳ್ಳತೊಡಗಿದ್ದು ಬೇಡಿಕೆ ಹೆಚ್ಚಿಸಿಕೊಂಡಿದೆ.
ಸ್ಟೋರಿ ಟೆಲ್ಲಿಂಗ್ ಮೆಹಂದಿ ಆಯ್ಕೆ ಹೀಗಿರಲಿ
- ಆದಷ್ಟೂ ಮೆಸ್ಸಿ ವಿನ್ಯಾಸ ಚೂಸ್ ಮಾಡಬೇಡಿ.
- ಸಿಂಪಲ್ ಹಾಗೂ ಅರ್ಥವಾಗುವಂತಿರಲಿ.
- ಮನಸ್ಸಿಗೆ ಬೇಸರವಾಗುವಂತಹ ಕಥೆಯ ಚಿತ್ತಾರ ಬೇಡ.
- ಕೈಗಳಿಗೆ ಸೂಕ್ತವಾದುವಂತದ್ದನ್ನೇ ಬಿಡಿಸಿ.
- ಗುಣಮಟ್ಟದ ಮೆಹಂದಿಯನ್ನೇ ಆಯ್ಕೆ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion : ಮದುವೆಯ ಹಳದಿ ಶಾಸ್ತ್ರದಲ್ಲಿ ಟ್ರೆಂಡಿಯಾದ ಮದುಮಗಳ ಫ್ಲವರ್ ಜ್ಯುವೆಲರಿಗಳು