ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸಂಭ್ರಮ ಹೆಚ್ಚಿಸುವ ನಾನಾ ಡಿಸೈನ್‌ನ ಮೆಹಂದಿ ಚಿತ್ತಾರಗಳು ಇಂದು ಕಸ್ಟಮೈಸ್ಡ್ ಆಗಿದ್ದು, ಮದುಮಗಳ ಕೈಗಳ ಅಲಂಕಾರದ ಜತೆಗೆ ಇತರ ಹೆಣ್ಣುಮಕ್ಕಳ ಕೈಗಳನ್ನೂ ಸಿಂಗರಿಸುತ್ತಿವೆ.
ಬ್ರೈಡಲ್ ಮೆಹಂದಿ ಚಿತ್ತಾರ
ಎಲ್ಲಾ ಬಗೆಯ ಬ್ರೈಡಲ್ ಮೆಹಂದಿ ಚಿತ್ತಾರದಲ್ಲಿ ಆದಷ್ಟೂ ಗ್ರ್ಯಾಂಡ್ ಡಿಸೈನ್‌ನವು ಇರುತ್ತವೆ. ಕೈಗಳಿಗೆ ಮಾತ್ರವಲ್ಲ, ಅಂಗೈವರೆಗೂ, ಪಾದಗಳಿಂದ ಅರ್ಧ ಮಂಡಿ ಕೆಳಗಿನವರೆಗೂ ಬ್ರೈಡಲ್ ಮೆಹಂದಿ ಚಿತ್ತಾರಗಳನ್ನು ಚಿತ್ರಿಸಲಾಗುತ್ತದೆ. ಕೆಲವೊಮ್ಮೆ ಆಯಾ ಮದುಮಗಳ ಅಭಿಲಾಷೆಗೆ ತಕ್ಕಂತೆ ಇವನ್ನು ಬೇಕಾದಂತೆ ಕಸ್ಟಮೈಸ್ ಮಾಡಲಾಗುತ್ತದೆ. ಅಂದರೆ, ಮದುಮಗಳಿಗೆ ಇಷ್ಟವಾಗುವ ಯಾವುದೇ ವಿನ್ಯಾಸದ ಮಿಕ್ಸ್ ಮ್ಯಾಚ್, ಇಲ್ಲವೇ ಸ್ವಂತ ಕ್ರಿಯೇಟಿವಿಯ ಚಿತ್ತಾರಗಳು ಒಳಗೊಂಡಿರುತ್ತವೆ. ಉದಾಹರಣೆಗೆ, ಮದುವೆಯಾಗುವ ಹುಡುಗ-ಹುಡುಗಿಯ ಹೆಸರನ್ನೊಳಗೊಂಡ ಅಥವಾ ಅವರ ಮುಖದ ಚಿತ್ತಾರದ ಮೆಹಂದಿ, ಕ್ಯೂಟ್ ಲವ್ ಸ್ಟೋರಿ ಹೇಳುವ ಸ್ಟೋರಿ ಟೆಲ್ಲಿಂಗ್ ಮೆಹಂದಿ ಚಿತ್ತಾರ, ಅರೇಬಿಕ್ ಸ್ಟೈಲ್ ಹೀಗೆ ನಾನಾ ಬಗೆಯವು ಈ ಕೆಟಗರಿಯಲ್ಲಿ ಬರುತ್ತವೆ.
ಸದಾ ಟ್ರೆಂಡ್‌ನಲ್ಲಿರುವ ಮೆಹಂದಿ ಚಿತ್ತಾರ
ಹಿಂದಿನಿಂದ ಇಂದಿಗೂ ಸದಾ ಟ್ರೆಂಡಿಯಾಗಿರುವ ಬ್ರೈಡಲ್ ಮೆಹಂದಿ ಚಿತ್ತಾರಗಳಲ್ಲಿ ಅರೆಬಿಕ್, ಇಂಡಿಯನ್, ಕಾಫೀಫ್, ಮೊರೊಖ್ಖಾನ್, ಜ್ಯುವೆಲರಿ ಡಿಸೈನ್, ಟ್ಯಾಟೂ ಮೆಹಂದಿ ಡಿಸೈನ್, ಆಫ್ರಿಕನ್, ಇಂಡೋ-ವೆಸ್ಟರ್ನ್, ಪಾಕಿಸ್ತಾನಿ ಡಿಸೈನ್‌ಗಳು ಚಾಲ್ತಿಯಲ್ಲಿವೆ. ನ್ಯಾಚುರಲ್, ಬ್ಲ್ಯಾಕ್ ಹಾಗೂ ರೆಡ್ ಹೆನ್ನಾದಿಂದ ತಯಾರಿಸಲಾದ ಮೆಹಂದಿ ಕೋನ್‌ನಿಂದ ಚಿತ್ತಾರ ಮೂಡಿಸಲಾಗುತ್ತದೆ. ಹಾಗಾಗಿ ಈ ಬಗ್ಗೆ ಡಿಸೈನರ್‌ಗಳಿಂದ ಮೊದಲೇ ಚರ್ಚೆ ನಡೆಸಿ, ನಿಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವಂತಹ ಮೆಹಂದಿ ಕೋನ್‌ಗಳಿಂದಲೇ ಚಿತ್ತಾರ ಬಿಡಿಸಲು ಹೇಳಿ ಎನ್ನುತ್ತಾರೆ ಮೆಹಂದಿ ಡಿಸೈನರ್ಸ್.
ಬ್ರೈಡಲ್ ಮೆಹಂದಿ ಚಿತ್ತಾರಕ್ಕೂ ಮುನ್ನ
ಉತ್ತಮ ಗುಣಮಟ್ಟದ ಮೆಹಂದಿ ಕೋನ್ ಆಯ್ಕೆ ಮಾಡಿ.
ಮೊದಲೇ ಡಿಸೈನ್ ಆಯ್ಕೆ ಮಾಡಿಟ್ಟುಕೊಳ್ಳಿ.
ಕೆಮಿಕಲ್ ಡೈ ಫ್ರೀ ಇರುವ ಮೆಹಂದಿ ಚೂಸ್ ಮಾಡಿ.
ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ಡಿಸೈನ್‌ಗಳನ್ನು ಆಯ್ಕೆ ಮಾಡಿ.
ಮೆಹಂದಿ ಹಚ್ಚಿದ ತಕ್ಷಣ ಫೋಟೋಶೂಟ್ ಮಾಡಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Wedding Jewellery Fashion | ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗುತ್ತಿದೆ ಮದುಮಗಳ ಡಿಸೈನರ್ ಮೂಗುತಿ