ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್ ಸೀಸನ್‌ನಲ್ಲಿ ಭಾರಿ ಹೆವಿ ಡಿಸೈನ್ ಹಾಗೂ ಜಗಮಗಿಸುವ ಶೈನಿಂಗ್ ಇರುವಂತಹ ರೇಷ್ಮೆ ಸೀರೆಗಳು ಟ್ರೆಂಡಿಯಾಗಿವೆ. ಸಾವಿರ ಜನರ ಮಧ್ಯೆಯೂ ಎದ್ದು ಕಾಣುವಂತಹ ಈ ಭಾರಿ ವಿನ್ಯಾಸದ ಮಿನುಗುವ ಈ ರೇಷ್ಮೆ ಸೀರೆಗಳು ನಾನಾ ಬ್ರಾಂಡ್‌ಗಳಲ್ಲಿ ಬಿಡುಗಡೆಯಾಗಿದ್ದು, ಸದ್ಯಕ್ಕೆ ವೆಡ್ಡಿಂಗ್ ಸೀರೆ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿವೆ.
ನಾನಾ ಬಗೆಯ ಬ್ರಾಂಡೆಡ್ ರೇಷ್ಮೆ ಸೀರೆಗಳು
ಸಾಮಾನ್ಯವಾಗಿ ಮದುಮಗಳು ಉಡುವ ಕಾಂಚಿಪುರಂನ ನಾನಾ ಬ್ರಾಂಡ್‌ನ ರೇಷ್ಮೆ ಸೀರೆಗಳಿಂದ ಹಿಡಿದು, ಜರಿ ವರ್ಕ್ ಇರುವಂತಹ ಬನಾರಸ್, ಧರ್ಮಾವರಂ, ರಾಯಲ್ ಚೆಟ್ಟಿನಾಡಿನ ಸಿಲ್ಕ್, ಸಾಫ್ಟ್ ಸಿಲ್ಕ್, ಪ್ರಿಂಟೆಡ್ ಟಿಶ್ಯೂ ಸಿಲ್ಕ್, ಪೋಚಂಪಲ್ಲಿಯ ರೇಷ್ಮೆ ಸೇರಿದಂತೆ ನಾನಾ ಬಗೆಯ ಗೋಲ್ಡನ್ ಝರಿ ಇರುವಂತಹ ಮಾನೋಕ್ರೋಮ್ ಶೇಡ್‌ನ ಇಲ್ಲವೇ ಪ್ರಿಂಟೆಡ್‌ನ ರೇಷ್ಮೆ ಸೀರೆಗಳು ಇಂದು ಟ್ರೆಂಡಿಯಾಗಿವೆ. ಇದಕ್ಕೆ ಕಾರಣವೂ ಇದೆ. ಸದಾ ನೆನಪಲ್ಲಿ ಉಳಿಯುವ ಫೋಟೋಶೂಟ್‌ಗಳಲ್ಲಿ ಈ ರೇಷ್ಮೆ ಸೀರೆಗಳು ಮನಮೋಹಕವಾಗಿ ಕಾಣುತ್ತವೆ ಎಂಬುದು. ಮತ್ತೊಂದು ರಾಯಲ್ ಲುಕ್ ನೀಡುತ್ತವೆ ಎಂಬುದು ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.
ರಾಯಲ್ ಲುಕ್‌ಗಾಗಿ ರೇಷ್ಮೆ ಸೀರೆಗಳ ಆಯ್ಕೆ
ಮದುವೆಯ ಮುಹೂರ್ತ ಹಾಗೂ ಇನ್ನಿತರೆ ಟ್ರೆಡಿಷನಲ್ ಸಮಾರಂಭಗಳಲ್ಲಿ ನೋಡಲು ಆಕರ್ಷಕವಾಗಿ ಕಾಣಲು ಹಾಗೂ ರಾಯಲ್ ಲುಕ್ ಇಮೇಜ್‌ಗಾಗಿ ಜಗಮಗಿಸುವ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡುವವರು ಹೆಚ್ಚಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ದೊಡ್ಡ ಝರಿ ಬಾರ್ಡರ್ ಇರುವಂಥವು ಹಾಗೂ ಗೋಲ್ಡನ್ ಬೂಟಾ, ಫ್ಲೋರಲ್ ಪ್ರಿಂಟ್ಸ್ ಅಥವಾ ಜರಿಯಿಂದ ಮಾಡಿದ ಬಾಕ್ಸ್-ಚೆಕ್ಸ್ ಇರುವಂತವನ್ನು ಚೂಸ್ ಮಾಡುವವರು ಹೆಚ್ಚಾಗಿದ್ದಾರೆ. ಬ್ರಾಂಡ್‌ಗಿಂತ ಹೆಚ್ಚಾಗಿ ಸೀರೆಗಳ ಡಿಸೈನ್ ಆಧಾರಿತ ನೋಡಿ ಖರೀದಿಸುವವರು ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಮಾರಾಟಗಾರರು.
ಮದುಮಗಳ ರೇಷ್ಮೆ ಸೀರೆ ಪ್ರೀತಿ
ಮದುವೆ ಯಾವುದಾದರೂ ಆಗಲಿ, ಮದುವೆಯಾಗುವ ಹೆಣ್ಣುಮಗಳು ಉಡುವುದು ರೇಷ್ಮೆ ಸೀರೆಯನ್ನೇ. ಅದು ಕಡಿಮೆ ಬೆಲೆಯಾದ್ದದರೂ ಆಗಬಹುದು . ಹೆಚ್ಚಿನ ಬೆಲೆಯದ್ದಾದರೂ ಆಗಬಹುದು. ರೇಷ್ಮೆ ಸೀರೆ ಇಲ್ಲದೇ ಮದುವೆಯ ಮುಹೂರ್ತ ಸಾಗುವುದೇ ಇಲ್ಲ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಮದುಮಗಳು ಟ್ರೆಡಿಷನಲ್ ಆಗಿ ರೇಷ್ಮೆ ಸೀರೆ ಉಟ್ಟು ರೆಡಿಯಾಗುತ್ತಾಳೆ. ಆಯಾ ಧರ್ಮಕ್ಕೆ ಅನುಸಾರವಾಗಿ ಕಲರ್ ಹಾಗೂ ಶೇಡ್‌ನ ಸೀರೆಗಳನ್ನು ಧರಿಸುತ್ತಾಳೆ. ಇದಕ್ಕೆ ಪೂರಕ ಎಂಬಂತೆ, ರೇಷ್ಮೆ ಸೀರೆ ಉತ್ಪಾದಕರು ಕೂಡ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಈ ಜರಿ ರೇಷ್ಮೆ ಸೀರೆಗಳನ್ನು ಬಿಡುಗಡೆಮಾಡಿದ್ದಾರೆ ಎನ್ನುತ್ತಾರೆ ಸೀರೆ ಡಿಸೈನರ್ಸ್.
ವೆಡ್ಡಿಂಗ್ ರೇಷ್ಮೆ ಸೀರೆ ಆಯ್ಕೆ ಮಾಡುವವರ ಗಮನಕ್ಕೆ
ಖರೀದಿಸುವಾಗ ಗುಣಮಟ್ಟ ನೋಡಿ, ಪರಿಶೀಲಿಸಿ.
ಟ್ರೆಂಡಿ ಶೇಡ್‌ಗಳನ್ನು ಆಯ್ಕೆ ಮಾಡಿ.
ಮನೆಯವರೆಲ್ಲರೂ ಒಂದೇ ರೀತಿಯ ಕಲರ್ ಚೂಸ್ ಮಾಡಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Jewel Fashion : ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾದ 7 ಗ್ರ್ಯಾಂಡ್ ಚೋಕರ್ ನೆಕ್ಲೇಸ್