Site icon Vistara News

Weekend Fashion: ಔಟಿಂಗ್‌ಗೆ ಸ್ಟ್ರಾಪ್‌ ಡ್ರೆಸ್‌ ಬೆಸ್ಟ್

ಅಮ್ನಾ ಶರೀಫ್‌, ನಟಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಸ್ಟ್ರಾಪ್‌ ಟಾಪ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿದೆ. ಅವುಗಳಲ್ಲಿ ಸ್ಪೆಗೆಟಿ, ಶೋಲ್ಡರ್‌ ಸ್ಟ್ರಾಪ್‌, ಸ್ಟ್ರಾಪ್‌ ಟಾಪ್‌ಗಳು, ಸ್ಪೆಗೆಟಿ ಹಾಗೂ ಬಾರ್ಡಟ್‌ ಸ್ಟ್ರಾಪ್‌ ಟಾಪ್‌ಗಳು ಟಾಪ್‌ ಲಿಸ್ಟ್‌ನಲ್ಲಿವೆ.

ವೀಕೆಂಡ್‌ ಔಟಿಂಗ್‌ಗೆ ಸ್ಟ್ರಾಪ್‌ ಡ್ರೆಸ್‌

ಈ ಮೊದಲು ಹಾಲಿಡೇ ಫ್ಯಾಷನ್‌ನಲ್ಲಿದ್ದ ಈ ಉಡುಪು ಇದೀಗ ವೀಕೆಂಡ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೇರಿದ್ದು, ನೋಡಲು ಮಾಡರ್ನ್ ಲುಕ್‌ ನೀಡುತ್ತದೆ. ಕ್ಯಾಶುವಲ್‌ ಲುಕ್‌ ನೀಡುವ ಶೋಲ್ಡರ್‌ ಸ್ಟಾಪ್‌ ಡ್ರೆಸ್‌, ಲೇಸ್ಡ್‌ ವೇಯಿಸ್ಟ್‌ ಸ್ಟ್ರಾಪ್‌, ಡೆನೀಮ್‌, ಸ್ಟ್ರೈಪ್ಡ್‌, ಫಿಟ್ಟೆಡ್‌, ಪೆಪ್ಲಂ, ಸ್ಪೆಗೆಟಿ ಸೇರಿದಂತೆ ನಾನಾ ಬಗೆಯವು ಟೀನೇಜ್‌ ಹುಡುಗಿಯರನ್ನು ಸೆಳೆದಿವೆ. ಇನ್ನು ಲೆಯರ್ಡ್‌, ಬಾರ್ಡಟ್‌, ಎ ಲೈನ್‌, ಬ್ಯಾಕ್‌ ಟಾಪ್‌, ಪ್ರಿಂಟೆಡ್‌, ಸಾಲಿಡ್‌ ಟಾಪ್‌, ಕೋಲ್ಡ್‌ ಶೋಲ್ಡರ್‌, ಟ್ಯಾಂಕ್‌, ಎಂಪೈರ್ಡ್‌ ಟಾಪ್‌ಗಳು ಕಾರ್ಪೊರೇಟ್‌ ಕ್ಷೇತ್ರ ಹಾಗೂ ವರ್ಕಿಂಗ್‌ ಮಹಿಳೆಯರನ್ನು ಆಕರ್ಷಿಸಿವೆ. ಅದರಲ್ಲೂ ವೀಕೆಂಡ್‌ ಔಟಿಂಗ್‌ನಲ್ಲಿ ಧರಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ ಅಮಿತ್‌.

ಸಾರಾ ಅಲಿ ಖಾನ್‌, ನಟಿ

ಹಾಗೆಂದು ಈ ಉಡುಪು ಕಂಪ್ಲೀಟ್‌ ವೀಕೆಂಡ್‌ನಲ್ಲಿ ಧರಿಸುತ್ತಾರೆಂಬುದಲ್ಲ. ಸದಾ ಫುಲ್‌ ನೆಕ್‌ಲೈನ್‌ ಧರಿಸಿ ಬೋರಾದವರೂ ಸ್ಟ್ರಾಪ್‌ ಟಾಪ್‌ ಧರಿಸಿ ಕೊಂಚ ಬದಲಾದ ಲುಕ್‌ನಲ್ಲಿಕಾಣಿಸಿಕೊಳ್ಳಬಹುದು. ಅದರಲ್ಲೂ ಲೈಟ್‌ ಕಲರ್‌ನ ಪ್ರಿಂಟೆಡ್‌ ಸ್ಟ್ರಾಪ್‌ ಟಾಪ್‌ ಹಾಗೂ ಫ್ರಾಕ್‌ಗಳು ಇಂದು ಹೆಚ್ಚು ಬೇಡಿಕೆಯಲ್ಲಿವೆ. ಯಂಗ್‌ಲುಕ್‌ ನೀಡುವ ಈ ಸ್ಟ್ರಾಪ್‌ ಟಾಪ್‌ಗಳು ಎಲ್ಲಾ ವಯಸ್ಸಿನ ಮಾಡರ್ನ್‌ ಲುಕ್‌ ಬಯಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ. ಅದರಲ್ಲೂ ಫ್ಲೋಟಿ, ಟ್ಯಾಂಕ್‌ ಹಾಗೂ ಶೋಲ್ಡರ್‌ ಸ್ಟ್ರಾಪ್‌ ಟಾಪ್‌ಗಳಂತೆ ಕಾಣುವ ವಿನ್ಯಾಸದವು ನೋಡಲು ಮನಮೋಹಕವಾಗಿವೆ.

ಬಾಲಿವುಡ್‌ ತಾರೆಯರ ಸ್ಟ್ರಾಪ್‌ ಡ್ರೆಸ್‌ಕೋಡ್‌

ಬಾಲಿವುಡ್‌ ತಾರೆಯರು ಕೂಡ ಸ್ಟ್ರಾಪ್‌ ಟಾಪ್‌ ಹಾಗೂ ಡ್ರೆಸ್‌ಗಳ ಪ್ರೇಮಿಗಳು. ಅನನ್ಯಾ ಪಾಂಡೆ, ದಿಶಾ ಪಟಾನಿ, ರಾಧಿಕಾ ಆಪ್ಟೆ, ಕಿಯಾರಾ ಅಡ್ವಾನಿ, ಕರೀನಾ, ಅಲಿಯಾ ಭಟ್, ದೀಪಿಕಾ ಸೇರಿದಂತೆ ಜೂನಿಯರ್‌ ಹಾಗೂ ಸೀನಿಯರ್‌ ನಟಿಯರು ಅತಿ ಹೆಚ್ಚಾಗಿ ಸ್ಟ್ರಾಪ್‌ ಡ್ರೆಸ್‌ಗಳನ್ನು ಧರಿಸುತ್ತಾರೆ.

ನೆಕ್‌ಲೈನ್‌ ಇಲ್ಲದ ಡ್ರೆಸ್‌ಕೋಡ್‌

ಸ್ಟ್ರಾಪ್‌ ಉಡುಪುಗಳೀಗೆ ನೆಕ್‌ಲೈನ್‌ ಇಲ್ಲ ಎಂದರೂ ಅತಿಶಯೋಕ್ತಿಯಾಗದು. ಹಾಗಾಗಿ ಕೆಲವು ಫಿಟ್‌ ಆಗಿ ಕೂರುವುದಿಲ್ಲ ಎನ್ನುವ ಡಿಸೈನರ್‌ ವಿದ್ಯಾ ವಿವೇಕ್‌ ಪ್ರಕಾರ, ಸ್ಟ್ರಾಪ್‌ ಟಾಪ್‌ಗಳ ಸ್ಟಿಚ್ಚಿಂಗ್‌ ಹಾಗೂ ಕಟ್‌ ಇತರೇ ಟಾಪ್‌ಗಳಿಗಿಂತ ವಿಭಿನ್ನವಾಗಿರುತ್ತವಂತೆ.

ಸ್ಟ್ರಾಪ್‌ ಟಾಪ್‌ ಸೀಕ್ರೆಟ್ಸ್‌

ಸ್ಟ್ರಾಪ್‌ ಟಾಪ್‌ಗಳಿಗೆ ತಕ್ಕಂತೆ ಪ್ಯಾಂಟ್‌, ಸ್ಕರ್ಟ್ ಹಾಗೂ ಕೇಪ್ರೀಸ್‌ಗಳ ಆಯ್ಕೆ ಕೂಡ ಮ್ಯಾಚ್‌ ಆಗುವಂತಿರಬೇಕು. ಇಲ್ಲವಾದಲ್ಲಿ ನೋಡುವವರಿಗೆ ಆಭಾಸವಾಗಬಹುದು. ಆದಷ್ಟೂ ಸಿಂಪಲ್‌ ಶೇಡ್ಸ್‌ ಇರುವ ಸ್ಟ್ರಾಪ್‌ ಟಾಪ್‌ ಆಯ್ಕೆ ಮಾಡಿಕೊಳ್ಳಿ. ಸ್ಟ್ರಾಪ್‌ ಟಾಪ್‌ ಧರಿಸಿದಾಗ ಆಕ್ಸೆಸರೀಸ್‌ ಧರಿಸುವುದು ಆಕರ್ಷಕವಾಗಿ ಬಿಂಬಿಸುತ್ತದೆ.

ಸ್ಟ್ರಾಪ್‌ ಟಾಪ್‌ ಸಲಹೆಗಳು

ಫಿಟ್ಟಿಂಗ್‌, ಡಿಸೈನ್‌ ಹಾಗೂ ಫ್ಯಾಬ್ರಿಕ್‌ ವಿನ್ಯಾಸ ನೋಡಿ ಖರೀದಿಸಿ. ದೊಗಲೆಯಾದಲ್ಲಿ ನೆಕ್‌ಲೈನ್‌ ಇಲ್ಲದ ಕಾರಣ ಎಕ್ಸ್‌ಪೋಸ್‌ ಆಗುವ ಸಂಭವವಿರುತ್ತದೆ. ನಿಮ್ಮ ಪರ್ಸನಾಲಿಟಿಗೆ ಸೂಟ್‌ ಆಗುವಂತದ್ದು ಅಯ್ಕೆ ಮಾಡಿ. ಸ್ಟ್ರೈಫ್ಸ್‌ ಸ್ಟ್ರಾಪ್‌ ಹಾಗೂ ಇತರೇ ಪ್ರಿಂಟೆಡ್‌ನವು ಮತ್ತೊಮ್ಮೆ ಫ್ಯಾಷನ್‌ನಲ್ಲಿದೆ. ಶೋಲ್ಡರ್‌ ಎಕ್ಸ್‌ಪೋಸ್‌ ಮಾಡುವ ಸ್ಟ್ರಾಪ್‌ ಟಾಪ್‌ಗಳು ಸ್ಲಿಮ್‌ ಆಗಿರುವವರಿಗೆ ಸೂಕ್ತ. ಪ್ಲಂಪಿಯಾಗಿರುವವರು ಮೊದಲೇ ಟ್ರಯಲ್‌ ನೋಡಿ ಬಿಎಂಐಗೆ ಸೂಟ್‌ ಆದಲ್ಲಿಧರಿಸಬಹುದು.

ಇದನ್ನೂ ಓದಿ| Celebrity Fashion Corner: ಫ್ಯಾಷನ್‌ ಎಂಬುದು ಹರಿಯುವ ನೀರಿನಂತೆ!

Exit mobile version