ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗಾಯತ್ರಿ ಸಂದೀಪ್ ಮಿಸೆಸ್ ಇಂಡಿಯಾ ಗ್ಲೋಬ್ 2017 ವಿಜೇತೆ. ಎಚ್ ಆರ್ ಪ್ರೊಫೆಷನಲ್, ಮಾಡೆಲ್, ಫ್ಯಾಷನಿಸ್ಟ್, ಇನ್‌ಫ್ಲೂಯೆನ್ಸರ್ ಹೀಗೆ ನಾನಾ ಬಗೆಯಲ್ಲಿ ಸದಾ ಸಕ್ರಿಯವಾಗಿರುವ ಇವರು ಈ ಬಾರಿಯ ವೀಕೆಂಡ್ ಸ್ಟೈಲ್ ಕಾಲಂನಲ್ಲಿ ವಿಸ್ತಾರದೊಂದಿಗೆ ಮಾತನಾಡಿದ್ದಾರೆ.
ಸದಾ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಮ್ಮ ಫ್ಯಾಷನ್ ಮಂತ್ರ ಏನು?
ನಮ್ಮ ಬಾಡಿ ಟೈಪ್‌ಗೆ ತಕ್ಕಂತೆ ಉಡುಪನ್ನು ಧರಿಸುವುದು, ಕಲರ್ಸ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡುವುದು, ಅದಕ್ಕೆ ಮ್ಯಾಚ್ ಆಗುವಂತಹ ಆಕ್ಸೆಸರೀಸ್‌ಗಳನ್ನು ಧರಿಸುವುದು. ಇಷ್ಟು ಮಾತ್ರವಲ್ಲ, ಫುಟ್‌ವೇರ್‌ಗೂ ಪ್ರಾಮುಖ್ಯತೆ ನೀಡುವುದು ನನ್ನ ಫ್ಯಾಷನ್ ಮಂತ್ರದಲ್ಲಿ ಸೇರಿದೆ.
ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು?
ಬೇರೆಯವರಂತೆ ಕಾಣಬೇಕು ಎಂಬುದಲ್ಲ. ಬದಲಿಗೆ ನಮ್ಮ ಐಡೆಂಟಿಟಿಗೆ ತಕ್ಕನಾಗಿ ಸ್ಟೈಲಿಶ್ ಹಾಗೂ ಕೂಲ್ ಆಗಿರುವ ಸ್ಟೈಲ್‌ಸ್ಟೇಟ್‌ಮೆಂಟ್ ಅಳವಡಿಸಿಕೊಳ್ಳುವುದು. ಇದು ಎಂದಿಗೂ ನನ್ನ ಎಂದು ಬದಲಾಗದ ಸ್ಟೈಲ್‌ಸ್ಟೇಟ್‌ಮೆಂಟ್ ಎನ್ನಬಹುದು.
ನಿಮ್ಮ ಪ್ರಕಾರ, ಕೋವಿಡ್ ನಂತರದ ದಿನಗಳಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ಆದ ಬದಲಾವಣೆಗಳೇನು?
ಮೊದಲ ಬದಲಾವಣೆ ಎಂದರೆ ಕಂಟೆಂಪರರಿ ಫ್ಯಾಷನ್ ಚಾಲ್ತಿಗೆ ಬಂತು. ಅಲ್ಲದೇ, ಫ್ಯಾಷನ್ ಪ್ರಿಯರು ಆಯಾ ಲೈಫ್‌ಸ್ಟೈಲ್‌ಗೆ ತಕ್ಕಂತೆ ತಮ್ಮತಮ್ಮ ಫ್ಯಾಷನ್ ಅಳವಡಿಸಿಕೊಳ್ಳುವುದು ಹೆಚ್ಚಾಯಿತು. ಅಲ್ಲದೇ, ಮೊದಲಿಗಿಂತ ಫ್ಯಾಷನ್ ಬಗ್ಗೆ ಆಸಕ್ತಿ ಹೊಂದುವವರ ಸಂಖ್ಯೆ ಹೆಚ್ಚಾಯಿತು. ಫ್ಯಾಷನ್ ಎಂಬುದು ಪಾರ್ಟ್ ಆಫ್ ಲೈಫ್ ಎಂಬಂತಾಯಿತು.
ಪೇಜ್‌೩ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಫ್ಯಾಷನ್ ಬಗ್ಗೆ ಹೇಳಿ? ಪಾರ್ಟಿ ಲುಕ್ ಬಯಸುವವರಿಗೆ ಟಿಪ್ಸ್ ನೀಡುವೀರಾ?
ಅಲ್ಲಿ ಏನಿದ್ದರೂ ಟ್ರೆಂಡಿ ಹಾಗೂ ಫಿಟ್ ಮತ್ತು ಫೈನ್ ಇರುವಂತಹ ಉಡುಗೆಗಳಿಗೆ ಪ್ರಾಧಾನ್ಯತೆ. ನೀವು ಆ ಪಾರ್ಟಿ ಲುಕ್ ಪಡೆಯಬೇಕಾದಲ್ಲಿ ಒಂದೆರೆಡು ಟಿಪ್ಸ್ ಫಾಲೋ ಮಾಡಿ. ಮೊದಲು ಫಿಟ್ಟಿಂಗ್ ಪಾರ್ಟಿವೇರ್ ಧರಿಸಿ, ಪಾರ್ಟಿಯ ಥೀಮ್‌ಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳಿ. ಆಕ್ಸೆಸರೀಸ್ ಧರಿಸಿ. ಯಾವತ್ತೂ ಅತಿಯಾಗಿ ಸಿಂಗರಿಸಿಕೊಳ್ಳಬೇಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Mens Fashion | ಫಾರ್ಮಲ್ ಔಟ್‌ಫಿಟ್ ರೂಲ್ಸ್ ಬ್ರೇಕ್ ಮಾಡಿದ ನಟ ಪ್ರತೀಕ್ ಬಬ್ಬರ್