ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಭೂಮಿಕಾ ಕನ್ನಡ, ತುಳು ಹಾಗೂ ತಮಿಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯ ಕಲ್ಯಾಣಿ ಸೀರಿಯಲ್ ಮೂಲಕ ಮನೆಮಾತಾಗಿದ್ದಾರೆ. ಜತೆಗೆ ನಾನಾ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸಖತ್ ಫ್ಯಾಷೆನಬಲ್ ಆಗಿರುವ ಇವರು ಈ ಬಾರಿಯ ವಿಸ್ತಾರದ ವೀಕೆಂಡ್ಸ್ ನೈಟ್‌ನಲ್ಲಿ ಫ್ಯಾಷನ್ ಹಾಗೂ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ.
ಸಖತ್ ಫ್ಯಾಷೆನಬಲ್ ಎಂದೆನಿಸಿಕೊಂಡಿರುವ ನಿಮ್ಮ ಫ್ಯಾಷನ್ ಮಂತ್ರ ಏನು?
ನಾನು ಯಾವುದೇ ಫ್ಯಾಷನ್ ಮಂತ್ರದಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ! ನನಗೆ ಏನು ಇಷ್ಟವೋ ಅದನ್ನು ಧರಿಸಲು ಇಷ್ಟಪಡುತ್ತೇನೆ. ನನಗೆ ಸೂಟ್ ಆಗುವ ಕಲರ್‌ನ ಉಡುಪುಗಳನ್ನು ಧರಿಸುತ್ತೇನೆ. ನನ್ನ ಫ್ಯಾಷನ್‌ನ್‌ನಲ್ಲಿ ಹೈ ವೇಸ್ಟ್ ಜೀನ್ಸ್, ಕ್ರಾಪ್ ಟಾಪ್‌ಗಳಿವೆ. ಮಿಕ್ಸ್ ಮ್ಯಾಚ್ ನನ್ನ ಫೇವರೇಟ್ ಸ್ಟೈಲ್.
ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿವರಿಸಿ
ಆಯಾ ಸನ್ನಿವೇಶಕ್ಕೆ ತಕ್ಕಂತೆ ನಿರ್ಧರಿಸುವ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಿಂದ ನನ್ನ ಸ್ಟೈಲ್ ಸ್ಟೇಟ್‌ಮೆಂಟ್ ಕ್ರಿಯೆಟ್ ಆಗುತ್ತದೆ. ಫ್ಯಾಷನ್‌ಗೆ ತಕ್ಕಂತೆ ತನ್ನಿಂದ ತಾನೆ ಸ್ಟೈಲ್ ಸೃಷ್ಟಿಯಾಗುತ್ತದೆ.
ವಿಂಟರ್ ಫ್ಯಾಷನ್ ಫಾಲೋ ಮಾಡುತ್ತೀರಾ?
ಹೌದು. ಸ್ಟೈಲಿಶ್ ಆಗಿರುವ ಉಡುಪು ಧರಿಸುತ್ತೇನೆ. ದೇಹವನ್ನು ಬೆಚ್ಚಗಿಡುವ ಉಲ್ಲನ್ ಉಡುಪುಗಳ ಬಳಕೆ ಹೆಚ್ಚು ಮಾಡುತ್ತೇನೆ. ತುಂಬಾ ಕೋಲ್ಡ್ ಪ್ರದೇಶದಲ್ಲಿ ಥರ್ಮಲ್ ಧರಿಸುತ್ತೇನೆ. ಜೀನ್ಸ್ ಜೊತೆಗೆ ಜಾಕೆಟ್ ಹಾಗೂ ಕೋಟ್‌ಗಳನ್ನು ಹೆಚ್ಚು ಬಳಸುತ್ತೇನೆ.
ಯರ್ ಎಂಡ್ ಫ್ಯಾಷನ್‌ನಲ್ಲಿ ಏನೇನಿದೆ? ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಾ?
ಹೊರಗಡೆ ಚಳಿ ಇರುವುದರಿಂದ ಆದಷ್ಟೂ ಬೆಚ್ಚಗಿನ ಲೇಯರ್ ಲುಕ್ ಮಾಡುತ್ತೇನೆ. ಕಳೆದ ಬಾರಿ ಮನಾಲಿಗೆ ಹೋದಾಗ ಸಾಕಷ್ಟು ಜಾಕೆಟ್, ಕೋಟ್‌ಗಳನ್ನು ಖರೀದಿಸಿದ್ದೇನೆ. ಅವುಗಳನ್ನು ಈ ಸೀಸನ್‌ನಲ್ಲಿ ಬಳಕೆ ಮಾಡಲಿದ್ದೇನೆ. ಒಟ್ಟಿನಲ್ಲಿ, ಇಯರ್ ಎಂಡ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲಿದ್ದೇನೆ.
ನಿಮ್ಮ ಕ್ರಿಸ್ಮಸ್ ಫ್ಯಾಷನ್ ಹೇಗಿದೆ?
ಚರ್ಚ್‌ಗೆ ಹೋಗುತ್ತೇನೆ. ಆ ಸಂದರ್ಭಕ್ಕೆ ಸೂಟ್ ಆಗುವಂತಹ ಡಿಸೈನರ್ ಗೌನ್ ಧರಿಸುತ್ತೇನೆ. ಆದಷ್ಟೂ ಕ್ರಿಸ್ಮಸ್ ಸಮಯದಲ್ಲಿ ಮಾಡರ್ನ್ ಉಡುಪನ್ನು ಧರಿಸುತ್ತೇನೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Christmas Fashion | ಕ್ರಿಸ್ಮಸ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ನಾಲ್ಕು ಆಕರ್ಷಕ ವಿನ್ಯಾಸದ ಗೌನ್‌ಗಳು