ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಹಲ್ಯಾ ರಾಜ್ ಈ ಕ್ಷೇತ್ರಕ್ಕೆ ಮೇಕಪ್ ಆರ್ಟಿಸ್ಟ್ ಆಗಿ ಎಂಟ್ರಿ ನೀಡಿದವರು. ಸದಾ ಸೋಷಿಯಲ್ ಮೀಡಿಯಾದಲ್ಲಿ ಸ್ಟೈಲಿಶ್ ಫೋಟೋಗಳೊಂದಿಗೆ ಸಕ್ರಿಯರಾಗಿರುವ ಅವರು ತಮ್ಮ ಕ್ಷೇತ್ರದ ಸ್ಪೆಷಲ್ ಫೋಟೋಗಳನ್ನು ಆಗಾಗ್ಗೆ ಅಪ್‌ಡೇಟ್ ಮಾಡುತ್ತಲೇ ಇರುತ್ತಾರೆ. ಮೇಕಪ್‌ನಲ್ಲೇ ಸಾಕಷ್ಟು ಪ್ರಯೋಗಾತ್ಮಕ ಲುಕ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಒಂದೇ ಬಗೆಯ ಮೇಕಪ್‌ಗೆ ಸೀಮಿತವಾಗದೇ ನಾನಾ ಬಗೆಯ ಮೇಕಪ್‌ಗಳನ್ನು ಮಹಿಳೆಯರ ಮೇಲೆ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ. ಫ್ಯಾಷನ್ ಶೋಗಳಲ್ಲೂ ಅವರ ಕೈಗಳ ಜಾದೂ ತೋರಿಸಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ ಫ್ಯಾಷನ್ ಹಾಗೂ ಮೇಕಪ್ ಬಗ್ಗೆ ವಿಸ್ತಾರದೊಂದಿಗೆ ಮಾತನಾಡಿದ್ದಾರೆ.
ಮೇಕಪ್ ಟ್ರೇನರ್ ಹಾಗೂ ಆರ್ಟಿಸ್ಟ್ ಆಗಿರುವ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು ?
ಆಯಾ ಸಮಾರಂಭ ಹಾಗೂ ಸಂದರ್ಭಕ್ಕೆ ತಕ್ಕಂತೆ ರೆಡಿಯಾಗುವುದೇ ನನ್ನ ಫ್ಯಾಷನ್. ಅದು ಮೊದಲಿಗೆ ಕಂಫರ್ಟ್ ಆಗಿರಬೇಕು. ಮೇಕಪ್ ಜೊತೆಗೆ ಸಮ್ಮಿಲನಗೊಂಡು ನೋಡಲು ಮತ್ತಷ್ಟು ಆಕರ್ಷಕವಾಗಿ ಕಾಣಿಸಬೇಕು. ನನ್ನ ಪ್ರಕಾರ, ಮೇಕಪ್ ಕೂಡ ಫ್ಯಾಷನ್‌ನ ಒಂದು ಭಾಗ, ಅದು ಚೆನ್ನಾಗಿದ್ದಾಗಷ್ಟೇ ಫ್ಯಾಷನಬಲ್ ಆಗಿ ಕಾಣಬಹುದು.
ಸ್ಟೈಲ್ ಸ್ಟೇಟ್‌ಮೆಂಟನ್ನು ಹೇಗೆ ವಿವರಿಸುತ್ತೀರಾ?
ಸದಾ ಖುಷಿಯಾಗಿರುವ ಲುಕ್ ನನ್ನ ಸ್ಟೈಲನ್ನು ಬಿಂಬಿಸುತ್ತದೆ. ನಮ್ಮ ಅಟಿಟ್ಯೂಡ್ ಹಾಗೂ ಪರ್ಸನಾಲಿಟಿಯನ್ನು ಹೈ ಲೈಟ್ ಮಾಡುತ್ತದೆ. ನಾವು ಏನನ್ನು ಧರಿಸುತ್ತಿವೋ ಅದರ ಮೇಲೆ ಇಡೀ ಸ್ಟೈಲ್ ನಿರ್ಧರಿತವಾಗಿರುತ್ತದೆ. ಇದೇ ನನ್ನ ಸ್ಟೈಲ್ ಸ್ಟೇಟ್‌ಮೆಂಟ್.
ನಿಮ್ಮ ವಿಂಟರ್ ಫ್ಯಾಷನ್‌ನಲ್ಲಿ ಏನೇನಿದೆ ?
ಈ ಸೀಸನ್‌ಗೆ ಹೊಂದುವಂತಹ ಡಾರ್ಕ್ ಬಣ್ಣದ ಉಡುಪುಗಳು ವಾರ್ಡ್ರೋಬ್ನಲ್ಲಿವೆ. ಹೂಡಿ, ಫರ್ ಜಾಕೆಟ್, ಕೋಟ್‌ಗಳು ಹಾಗೂ ಸೂಟ್‌ಗಳು ನನ್ನ ಆಯ್ಕೆಯಲ್ಲಿವೆ. ಇವು ದೇಹವನ್ನು ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣುತ್ತವೆ.
ಈ ಸೀಸನ್‌ಗೆ ಹೊಂದುವಂತ ಫ್ಯಾಷನ್ ಹಾಗೂ ಸ್ಟೈಲ್‌ಗೆ ಸೂಟ್ ಆಗುವಂತಹ ಮೇಕಪ್ ಟಿಪ್ಸ್ ನೀಡಿ?
ಮನೆಯಲ್ಲಿದ್ದರೂ ತ್ವಚೆಗೆ ಮಾಯಿಶ್ಚರೈಸರ್ ಲೇಪಿಸುವುದನ್ನು ಮರೆಯಬೇಡಿ. ಹೊರಗಡೆ ತಿರುಗುವಾಗ ದಿನಕ್ಕೆರಡು ಬಾರಿ ಸನ್‌ಸ್ಕ್ರೀನ್ ಹಚ್ಚಿ. ಸಿಲಿಕಾನ್ ಬೇಸ್ಡ್ ಬ್ಯೂಟಿ ಪ್ರಾಡಕ್ಟ್ ಎಲ್ಲಾ ಬಗೆಯ ತ್ವಚೆಗೂ ಮ್ಯಾಚ್ ಆಗುತ್ತವೆ. ಬ್ರಾಂಡೆಡ್ ಪ್ರಾಡಕ್ಟ್ಗಳನ್ನೇ ಬಳಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ