Weekend Style | ಫ್ಯಾಷನ್​​​ಗೆ ತಕ್ಕಂತೆ ಮೇಕಪ್‌ ಇರಲಿ ಎನ್ನುತ್ತಾರೆ ಅಹಲ್ಯಾ ರಾಜ್‌ - Vistara News

ಫ್ಯಾಷನ್

Weekend Style | ಫ್ಯಾಷನ್​​​ಗೆ ತಕ್ಕಂತೆ ಮೇಕಪ್‌ ಇರಲಿ ಎನ್ನುತ್ತಾರೆ ಅಹಲ್ಯಾ ರಾಜ್‌

ಫ್ಯಾಷನಬಲ್‌ ಮೇಕಪ್‌ ಟ್ರೇನರ್​ ಹಾಗೂ ಆರ್ಟಿಸ್ಟ್‌ ಆಗಿರುವ ಅಹಲ್ಯಾ ರಾಜ್‌, ಆಕರ್ಷಕ ಮೇಕಪ್‌ ಮಾಡುವುದರಲ್ಲಿ ಎತ್ತಿದ ಕೈ. ಈ ಬಾರಿಯ ವೀಕೆಂಡ್‌ ಸ್ಟೈಲ್‌ನಲ್ಲಿ ತಮ್ಮ ಮೇಕಪ್‌ ಗೂ ಫ್ಯಾಷನ್‌ಗೂ ಇರುವ ಸಂಬಂಧದ ಬಗ್ಗೆ ಹಾಗೂ ತಮ್ಮ ಸ್ಟೈಲ್‌ ಬಗ್ಗೆ ಮಾತನಾಡಿದ್ದಾರೆ.

VISTARANEWS.COM


on

Weekend Style
ಚಿತ್ರಗಳು : ಅಹಲ್ಯಾ ರಾಜ್‌, ಮಾಡೆಲ್, ಮೇಕಪ್‌ ಟ್ರೈನರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಹಲ್ಯಾ ರಾಜ್‌ ಈ ಕ್ಷೇತ್ರಕ್ಕೆ ಮೇಕಪ್‌ ಆರ್ಟಿಸ್ಟ್ ಆಗಿ ಎಂಟ್ರಿ ನೀಡಿದವರು. ಸದಾ ಸೋಷಿಯಲ್‌ ಮೀಡಿಯಾದಲ್ಲಿ ಸ್ಟೈಲಿಶ್‌ ಫೋಟೋಗಳೊಂದಿಗೆ ಸಕ್ರಿಯರಾಗಿರುವ ಅವರು ತಮ್ಮ ಕ್ಷೇತ್ರದ ಸ್ಪೆಷಲ್‌ ಫೋಟೋಗಳನ್ನು ಆಗಾಗ್ಗೆ ಅಪ್‌ಡೇಟ್‌ ಮಾಡುತ್ತಲೇ ಇರುತ್ತಾರೆ. ಮೇಕಪ್‌ನಲ್ಲೇ ಸಾಕಷ್ಟು ಪ್ರಯೋಗಾತ್ಮಕ ಲುಕ್‌ಗಳನ್ನು ಕ್ರಿಯೇಟ್‌ ಮಾಡಿದ್ದಾರೆ. ಒಂದೇ ಬಗೆಯ ಮೇಕಪ್‌ಗೆ ಸೀಮಿತವಾಗದೇ ನಾನಾ ಬಗೆಯ ಮೇಕಪ್‌ಗಳನ್ನು ಮಹಿಳೆಯರ ಮೇಲೆ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದಾರೆ. ಫ್ಯಾಷನ್‌ ಶೋಗಳಲ್ಲೂ ಅವರ ಕೈಗಳ ಜಾದೂ ತೋರಿಸಿದ್ದಾರೆ. ಈ ಬಾರಿಯ ವೀಕೆಂಡ್‌ ಸ್ಟೈಲ್‌ನಲ್ಲಿ ಫ್ಯಾಷನ್‌ ಹಾಗೂ ಮೇಕಪ್‌ ಬಗ್ಗೆ ವಿಸ್ತಾರದೊಂದಿಗೆ ಮಾತನಾಡಿದ್ದಾರೆ.

Weekend Style

ಮೇಕಪ್‌ ಟ್ರೇನರ್​ ಹಾಗೂ ಆರ್ಟಿಸ್ಟ್‌ ಆಗಿರುವ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು ?

ಆಯಾ ಸಮಾರಂಭ ಹಾಗೂ ಸಂದರ್ಭಕ್ಕೆ ತಕ್ಕಂತೆ ರೆಡಿಯಾಗುವುದೇ ನನ್ನ ಫ್ಯಾಷನ್‌. ಅದು ಮೊದಲಿಗೆ ಕಂಫರ್ಟ್ ಆಗಿರಬೇಕು. ಮೇಕಪ್‌ ಜೊತೆಗೆ ಸಮ್ಮಿಲನಗೊಂಡು ನೋಡಲು ಮತ್ತಷ್ಟು ಆಕರ್ಷಕವಾಗಿ ಕಾಣಿಸಬೇಕು. ನನ್ನ ಪ್ರಕಾರ, ಮೇಕಪ್‌ ಕೂಡ ಫ್ಯಾಷನ್‌ನ ಒಂದು ಭಾಗ, ಅದು ಚೆನ್ನಾಗಿದ್ದಾಗಷ್ಟೇ ಫ್ಯಾಷನಬಲ್‌ ಆಗಿ ಕಾಣಬಹುದು.

ಸ್ಟೈಲ್‌ ಸ್ಟೇಟ್‌ಮೆಂಟನ್ನು ಹೇಗೆ ವಿವರಿಸುತ್ತೀರಾ?

ಸದಾ ಖುಷಿಯಾಗಿರುವ ಲುಕ್‌ ನನ್ನ ಸ್ಟೈಲನ್ನು ಬಿಂಬಿಸುತ್ತದೆ. ನಮ್ಮ ಅಟಿಟ್ಯೂಡ್‌ ಹಾಗೂ ಪರ್ಸನಾಲಿಟಿಯನ್ನು ಹೈ ಲೈಟ್‌ ಮಾಡುತ್ತದೆ. ನಾವು ಏನನ್ನು ಧರಿಸುತ್ತಿವೋ ಅದರ ಮೇಲೆ ಇಡೀ ಸ್ಟೈಲ್‌ ನಿರ್ಧರಿತವಾಗಿರುತ್ತದೆ. ಇದೇ ನನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌.

Weekend Style

ನಿಮ್ಮ ವಿಂಟರ್‌ ಫ್ಯಾಷನ್‌ನಲ್ಲಿ ಏನೇನಿದೆ ?

ಈ ಸೀಸನ್‌ಗೆ ಹೊಂದುವಂತಹ ಡಾರ್ಕ್ ಬಣ್ಣದ ಉಡುಪುಗಳು ವಾರ್ಡ್​​ರೋಬ್​​ನಲ್ಲಿವೆ. ಹೂಡಿ, ಫರ್‌ ಜಾಕೆಟ್‌, ಕೋಟ್‌ಗಳು ಹಾಗೂ ಸೂಟ್‌ಗಳು ನನ್ನ ಆಯ್ಕೆಯಲ್ಲಿವೆ. ಇವು ದೇಹವನ್ನು ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣುತ್ತವೆ.

Weekend Style

ಈ ಸೀಸನ್‌ಗೆ ಹೊಂದುವಂತ ಫ್ಯಾಷನ್‌ ಹಾಗೂ ಸ್ಟೈಲ್‌ಗೆ ಸೂಟ್‌ ಆಗುವಂತಹ ಮೇಕಪ್‌ ಟಿಪ್ಸ್‌ ನೀಡಿ?

ಮನೆಯಲ್ಲಿದ್ದರೂ ತ್ವಚೆಗೆ ಮಾಯಿಶ್ಚರೈಸರ್‌ ಲೇಪಿಸುವುದನ್ನು ಮರೆಯಬೇಡಿ. ಹೊರಗಡೆ ತಿರುಗುವಾಗ ದಿನಕ್ಕೆರಡು ಬಾರಿ ಸನ್‌ಸ್ಕ್ರೀನ್‌ ಹಚ್ಚಿ. ಸಿಲಿಕಾನ್‌ ಬೇಸ್ಡ್‌ ಬ್ಯೂಟಿ ಪ್ರಾಡಕ್ಟ್‌ ಎಲ್ಲಾ ಬಗೆಯ ತ್ವಚೆಗೂ ಮ್ಯಾಚ್‌ ಆಗುತ್ತವೆ. ಬ್ರಾಂಡೆಡ್‌ ಪ್ರಾಡಕ್ಟ್​​ಗಳನ್ನೇ ಬಳಸಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಫ್ಯಾಷನ್

Malaika Vasupal: ಟ್ರೆಡಿಷನಲ್‌ ಸೀರೆಗೆ ಹಾಲ್ಟರ್‌ ನೆಕ್‌ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ವಸುಪಾಲ್‌

Malaika Vasupal: ಟ್ರೆಡಿಷನಲ್‌ ಬಾರ್ಡರ್‌ ಸೀರೆಗೆ ವೆಸ್ಟರ್ನ್ ಲುಕ್‌ ನೀಡುವ ಹಾಲ್ಟರ್‌ ನೆಕ್‌ ಲೈನ್‌ ಡಿಸೈನ್‌ ಇರುವಂತಹ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ಟಿ. ವಸುಪಾಲ್‌, ಇಂಡೋ-ವೆಸ್ಟರ್ನ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಇವರಂತೆ ಇತರೇ ಮಾನಿನಿಯರು ಕೂಡ ಹೇಗೆಲ್ಲಾ ಹಾಲ್ಟರ್‌ ಬ್ಲೌಸ್‌ಗಳನ್ನು ಮಿಕ್ಸ್ ಮ್ಯಾಚ್ ಮಾಡಬಹುದು ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Malaika Vasupal experimented with a halter neck blouse for a traditional saree
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೆಂಗಳೂರು: ಟ್ರೆಡಿಷನಲ್‌ ಬಾರ್ಡರ್‌ ಸೀರೆಯನ್ನು ಹಾಲ್ಟರ್ ಬ್ಲೌಸ್‌ನೊಂದಿಗೆ ಧರಿಸಿ ಆಕರ್ಷಕವಾಗಿ ಕಾಣಿಸಬಹುದು ಎಂಬುದನ್ನು ಪ್ರೂವ್‌ ಮಾಡಿದ್ದಾರೆ ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆ ನಟಿ ಮಲೈಕಾ ಟಿ. ವಸುಪಾಲ್‌. ಹೌದು, ಟ್ರೆಡಿಷನಲ್‌ ಬಾರ್ಡರ್‌ ಸಿಲ್ಕ್‌ ಸೀರೆಗೆ ವೆಸ್ಟರ್ನ್ ಲುಕ್‌ ನೀಡುವ ಹಾಲ್ಟರ್‌ ನೆಕ್‌ ಲೈನ್‌ ಡಿಸೈನ್‌ ಇರುವಂತಹ ಗೋಲ್ಡನ್‌ ಶೇಡ್‌ನ ಬ್ಲೌಸ್‌ ಪ್ರಯೋಗಿಸಿರುವ ನಟಿ ಮಲೈಕಾ ವಸುಪಾಲ್‌, ಇಂಡೋ-ವೆಸ್ಟರ್ನ್ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಲಿವ್‌ಲೆಸ್‌ ಬ್ಲೌಸ್‌ ಬದಲು ಹಾಲ್ಟರ್ ಬ್ಲೌಸ್

ಈ ಮೊದಲು ಸ್ಲಿವ್‌ಲೆಸ್‌ ಸೀರೆ ಬ್ಲೌಸ್‌ಗಳು, ಬ್ಯಾಕ್‌ಲೆಸ್‌ ಬ್ಲೌಸ್‌ಗಳು ಮಾತ್ರ ಸೀರೆಗೆ ಗ್ಲಾಮರಸ್‌ ಲುಕ್‌ ನೀಡುತ್ತಿದ್ದವು. ಇದೀಗ, ಇವುಗಳ ಜಾಗಕ್ಕೆ ವೆಸ್ಟರ್ನ್‌ ಕ್ರಾಪ್‌ ಟಾಪ್‌ಗಳು ಬಂದಿವೆ. ಅವುಗಳ ಡಿಸೈನನ್ನು ಕಾಪಿ ಮಾಡಿದಂತಹ ಹಾಲ್ಟರ್‌ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಭುಜವನ್ನುಆಕರ್ಷಕವಾಗಿ ಬಿಂಬಿಸುವ ಈ ಬ್ಲೌಸ್‌ಗಳು ಇಂಡೋ-ವೆಸ್ಟರ್ನ್‌ ಸ್ಟೈಲ್‌ಗೆ ಸಾಥ್‌ ನೀಡುತ್ತಿವೆ. ಇದೀಗ ಇವುಗಳೊಂದಿಗೆ ರೇಷ್ಮೆ ಸೀರೆ, ಕಾಟನ್‌ ಸೀರೆ, ಹ್ಯಾಂಡ್‌ಲೂಮ್‌ ಸೀರೆಗಳನ್ನು ಉಟ್ಟು ಪ್ರಯೋಗಿಸುವುದರ ಮೂಲಕ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಇದನ್ನು ಮತ್ತಷ್ಟು ಟ್ರೆಂಡಿಯಾಗಿಸಿದ್ದಾರೆ ಎಂದಿದ್ದಾರೆ ಡಿಸೈನರ್‌ ದಿವಾ ರಾಮನ್‌.

ಇದನ್ನೂ ಓದಿ: Rakshit Shetty: ʻಏಕಂʼ ವೆಬ್ ಸಿರೀಸ್​ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ!

ಮಲೈಕಾ ವಸುಪಾಲ್‌ ಹಾಲ್ಟರ್‌ ಸೀರೆ ಲವ್‌

ಕನ್ನಡದ ಹಿಟ್ಲರ್‌ ಕಲ್ಯಾಣ ಸೀರಿಯಲ್‌ನಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸಿ, ಜನಪ್ರಿಯರಾದ ಮಲೈಕಾ, ಇತ್ತಿಚೆಗೆ ಸಿನಿಮಾವೊಂದರಲ್ಲೂ ನಾಯಕಿಯಾಗಿಯೂ ಕಾಣಿಸಿಕೊಂಡರು. ಫ್ಯಾಷೆನಬಲ್‌ ನಟಿ ಎಂದರೂ ತಪ್ಪಿಲ್ಲ! ಎಥ್ನಿಕ್‌ ಉಡುಗೆಗಳ ನಡುವೆ ಆಗಾಗ್ಗೆ ವೆಸ್ಟರ್ನ್‌ ಔಟ್‌ಫಿಟ್‌ಗಳಲ್ಲೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಗ್ಲಾಮರಸ್‌ ಲುಕ್‌ಗಾಗಿ ಹಾಲ್ಟರ್‌ ನೆಕ್‌ಲೈನ್‌ ಬ್ಲೌಸ್‌

  • ಗ್ಲಾಮರಸ್‌ ಲುಕ್‌ ಬಯಸುವವರು, ಸ್ಲಿವ್‌ಲೆಸ್‌ –ಬ್ಯಾಕ್‌ಲೆಸ್‌ ಬ್ಲೌಸ್‌ ಬದಲು ಈ ಹಾಲ್ಟರ್‌ನೆಕ್‌ಲೈನ್‌ ಬ್ಲೌಸ್‌ ಮಿಕ್ಸ್ ಮ್ಯಾಚ್ ಮಾಡಬಹುದು.
  • ಕಾಟನ್‌ ಸೀರೆಗಾದಲ್ಲಿ ವೆಸ್ಟರ್ನ್‌ ಲುಕ್‌ ನೀಡುವಂತಹ ಸ್ಟ್ರೆಚಬಲ್‌ ಹಾಲ್ಟರ್‌ ನೆಕ್‌ ಬ್ಲೌಸ್‌ಗಳನ್ನು ಧರಿಸಬಹುದು.
  • ಈ ಬ್ಲೌಸ್‌ನೊಂದಿಗೆ ಸೀರೆಯನ್ನು ಡಿಫರೆಂಟಾಗಿ ಡ್ರೇಪ್‌ ಮಾಡಬಹುದು.
  • ಭುಜಗಳು ಅಗಲವಾಗಿದ್ದಲ್ಲಿ, ಆದಷ್ಟೂ ಅಗಲವಾಗಿರುವ ನೆಕ್‌ಲೈನ್‌ ಇರುವಂತವನ್ನು ಚೂಸ್‌ ಮಾಡಿಕೊಳ್ಳಬೇಕು.
  • ಈ ನೆಕ್‌ಲೈನ್‌ನ ಬ್ಲೌಸ್‌ಗಳಿಗೆ ಆಕ್ಸೆಸರೀಸ್‌ ಧರಿಸುವ ಅಗತ್ಯವಿರುವುದಿಲ್ಲ.
  • ಕುತ್ತಿಗೆಯ ಭಾಗದಲ್ಲಿ ರಿಂಕಲ್ಸ್ ಇರುವವರು ಇದನ್ನು ಧರಿಸಬಹುದು.
  • ಹಾಲ್ಟರ್‌ ನೆಕ್‌ಲೈನ್‌ ಬ್ಯಾಕ್ಲೆಸ್‌ ಬ್ಲೌಸ್‌ ಆಗಿರುವುದರಿಂದ ಹೆಚ್ಚು ಎಕ್ಸ್ಪೋಸ್‌ ಆಗುವ ಸಾಧ್ಯತೆಗಳಿರುತ್ತವೆ. ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Model Fashion: ಸೀಸನ್‌ ಗೆ ತಕ್ಕಂತೆ ಫ್ಯಾಷನ್‌ ಬದಲಿಸುವ ಮಿಸೆಸ್‌ ಬೆಂಗಳೂರು ಟೈಟಲ್‌ ವಿಜೇತೆ ಪ್ರತಿಭಾ ನಟರಾಜ್‌

Model Fashion: ಒಂದು ಕಾಲದಲ್ಲಿ ಮಿಸ್‌ ದಾವಣಗೆರೆ ಆಗಿದ್ದ ಪ್ರತಿಭಾ ನಟರಾಜ್, ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಮಿಸೆಸ್‌ ಬೆಂಗಳೂರು- 2023 ಟೈಟಲ್‌ ಗೆದ್ದ ಮಹಿಳೆ. ಸದಾ ಚಟುವಟಿಕೆಯಿಂದಿರುವ ಇವರು ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಾಂಶ ಇಲ್ಲಿದೆ.

VISTARANEWS.COM


on

Model Fashion pratibha nataraj
ಚಿತ್ರಗಳು: ಪ್ರತಿಭಾ ನಟರಾಜ್‌, ಮಿಸೆಸ್ ಬೆಂಗಳೂರು
Koo

ಶೀಲಾ ಸಿ. ಶೆಟ್ಟಿ

ಆತ್ಮ ವಿಶ್ವಾಸದಿಂದ ಮುನ್ನಡೆದಲ್ಲಿ ಪ್ರತಿಯೊಂದು ಹೆಜ್ಜೆಯು ಯಶಸ್ಸಿನ ಮೆಟ್ಟಿಲಾಗುತ್ತದೆ ಎನ್ನುವ ಮಾಡೆಲ್‌ ಪ್ರತಿಭಾ ನಟರಾಜ್‌, ಈ ಮೊದಲು ಮಿಸ್‌ ದಾವಣಗೆರೆ ಆಗಿದ್ದವರು. ಪ್ರತಿಷ್ಠಿತ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲೂ ಪಾಲ್ಗೊಂಡು ಮಿಸೆಸ್‌ ಬೆಂಗಳೂರು ಟೈಟಲ್‌ ಗೆದ್ದವರು. ಕಾಲೇಜು ದಿನಗಳಿಂದಲೇ ನಿರೂಪಣೆ ಮಾಡುವುದರೊಂದಿಗೆ ಲೇಖನ, ಕಥೆ, ಕವನ-ಕವಿತೆ ಬರೆಯುವುದು ಸೇರಿದಂತೆ, ಒಂದಲ್ಲ ಒಂದು ಸಾಹಿತ್ಯ ಕುರಿತಂತಹ ಹವ್ಯಾಸದೊಂದಿಗೆ ಫ್ಯಾಷನ್‌ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಬಾರಿಯ ಮಾಡೆಲ್‌ ಲೈಫ್‌ ಕಾಲಂನಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ ಲೈಫ್‌ ಕುರಿತಂತೆ ಮಾತನಾಡಿದ್ದಾರೆ. ಜೊತೆಗೆ ಓದುಗರಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ.

ವಿಸ್ತಾರ : ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡಿದ್ದ ನಿಮಗೆ ಫ್ಯಾಷನ್‌ ಕ್ಷೇತ್ರ ಆಕರ್ಷಿಸಿದ್ದು ಹೇಗೆ?

ಪ್ರತಿಭಾ ನಟರಾಜ್‌ : ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಬ್ಯುಸಿಯಾಗಿರುತ್ತಿದ್ದ, ನನಗೆ ಎರಡು ಮಕ್ಕಳಾದ ನಂತರ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಿತು. ಕುಟುಂಬದವರ ಪ್ರೋತ್ಸಾಹ ಕೂಡ ಇತ್ತು. ಭಾಗವಹಿಸಿದೆ. ಮಿಸೆಸ್‌ ಬೆಂಗಳೂರು ಟೈಟಲ್‌ ಹಾಗೂ ಮಿಸೆಸ್‌ ಕಂಜೆನಿಯಾಲಿಟಿ ಸಬ್‌ಟೈಟಲ್‌ ವಿಜೇತಳಾದೆ

ವಿಸ್ತಾರ ನ್ಯೂಸ್: ಫ್ಯಾಷನ್‌ ಕ್ಷೇತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರತಿಭಾ ನಟರಾಜ್‌ : ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಫ್ಯಾಷನ್‌ ಕ್ಷೇತ್ರವನ್ನು ವಿಸ್ತರಿಸುತ್ತಿದೆ. ಮೊದಲಿನಂತೆ ಕೇವಲ ಅವಿವಾಹಿತರಿಗೆ ಮಾತ್ರ ಈ ಕ್ಷೇತ್ರ ಮೀಸಲು ಎಂಬ ಕಾನ್ಸೆಪ್ಟ್ ಬದಲಾಗಿದೆ. ವಿವಾಹಿತರನ್ನು ಈ ಕ್ಷೇತ್ರ ಸ್ವಾಗತಿಸುತ್ತಿದೆ.

ವಿಸ್ತಾರ ನ್ಯೂಸ್‌: ಫ್ಯಾಷನ್‌ ಕ್ಷೇತ್ರಕ್ಕೆ ಹೆಜ್ಜೆ ಇಡಲು ಬಯಸುವ ವಿವಾಹಿತರಿಗೆ ನೀವು ನೀಡುವ ಸಂದೇಶವೇನು?

ಪ್ರತಿಭಾ ನಟರಾಜ್‌ : ಆದಷ್ಟೂ ಕುಟುಂಬದವರ ಬೆಂಬಲದೊಂದಿಗೆ ಫ್ಯಾಷನ್‌ ಕ್ಷೇತ್ರ ಪ್ರವೇಶಿಸಿ. ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ. ಮದುವೆಯಾದ ನಂತರವೂ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಸದುಪಯೋಗಪಡಿಸಿಕೊಳ್ಳಿ.

ಇದನ್ನೂ ಓದಿ: Father’s Day Fashion: ಅಪ್ಪಂದಿರ ದಿನಕ್ಕೂ ಉಂಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್!

ವಿಸ್ತಾರ ನ್ಯೂಸ್‌ : ಸೀಸನ್‌ಗೆ ತಕ್ಕಂತೆ ನಿಮ್ಮಲ್ಲಿ ಬದಲಾಗುವ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳೇನು?

ಪ್ರತಿಭಾ ನಟರಾಜ್‌ : ಸೀಸನ್‌ಗೆ ತಕ್ಕಂತೆ ಫ್ಯಾಷನ್‌ ಫಾಲೋ ಮಾಡುವುದು ಮಾತ್ರವಲ್ಲ, ದೇಸಿ ಹಾಗೂ ವೆಸ್ಟರ್ನ್ ಎರಡೂ ಬಗೆಯ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೂ ಸೈ ಹೇಳುತ್ತೇನೆ.

ವಿಸ್ತಾರ ನ್ಯೂಸ್‌: ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಬದಲಾಗುವುದು ಹೇಗೆ? 3 ಸಿಂಪಲ್‌ ಸಲಹೆ ನೀಡಿ?

ಪ್ರತಿಭಾ ನಟರಾಜ್‌ : ಬೇಸಿಗೆ ಮುಗಿದು ಈಗಾಗಲೇ ಮಾನ್ಸೂನ್‌ಗೆ ಕಾಲಿಟ್ಟಾಗಿದೆ. ಹಾಗಾಗಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ.

  1. ಬ್ಯೂಟಿಗಾಗಿ ಕ್ಲೆನ್ಸಿಂಗ್‌, ಟೊನಿಂಗ್‌ ಹಾಗೂ ಮಾಯಿಶ್ಚರೈಸಿಂಗ್‌ ಮಾಡುವುದು ಅಗತ್ಯ.
  2. ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ ಈ ಸೀಸನ್‌ಗೆ ಬೆಸ್ಟ್ ಅಪ್ಷನ್‌.
  3. ಸ್ಟೈಲಿಶ್ ಆಗಿ ಕಾಣಿಸಲು ಲೈಟ್‌ವೈಟ್‌ ಉಡುಗೆಗಳ ಲೇಯರಿಂಗ್‌ ಮಾಡಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Father’s Day Fashion: ಅಪ್ಪಂದಿರ ದಿನಕ್ಕೂ ಉಂಟು ಫ್ಯಾಷನ್‌ ಸ್ಟೇಟ್‌ಮೆಂಟ್ಸ್!

ಜೂನ್‌ 16, ಭಾನುವಾರ ಅಪ್ಪಂದಿರ ದಿನ. ಆ ದಿನಕ್ಕೂ ಉಂಟು, ಫ್ಯಾಷನ್‌ ಸ್ಟೇಟ್‌ಮೆಂಟ್ಸ್ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಈ ದಿನಕ್ಕೆ (father’s day 2024) ಹೊಂದುವಂತೆ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ. ಫಾದರ್ಸ್ ಡೇಯಂದು ಕೂಡ ಅಪ್ಪ-ಮಕ್ಕಳು ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳಬಹುದು. ಅದು ಹೇಗೆ? ಇದಕ್ಕಾಗಿ ಏನೆಲ್ಲಾ ಪಾಲಿಸಬೇಕು? ಸ್ಟೈಲಿಂಗ್‌ ಟಿಪ್ಸ್ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ತಕ್ಕಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

Father's Day Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಾದರ್ಸ್ ಡೇ ಫ್ಯಾಷನ್‌ಗೆ (Father’s day Fashion) ಸಿದ್ಧರಾಗಿದ್ದೀರಾ? ಜೂನ್‌ 16 ರಂದು ಭಾನುವಾರ ಅಪ್ಪಂದಿರ ದಿನ. ಆ ದಿನದಂದು (father’s day 2024) ತಮ್ಮ ಮಕ್ಕಳೊಂದಿಗೆ ಸಂಭ್ರಮಿಸುವ ಅಪ್ಪಂದಿರಿಗೆ ಅಥವಾ ತಂದೆಯೊಂದಿಗೆ ಸೆಲೆಬ್ರೆಟ್‌ ಮಾಡುವ ಮಕ್ಕಳಿಗೆ ಪೂರಕವಾಗುವಂತೆ ಫಾದರ್ಸ್ ಡೇ ಫ್ಯಾಷನ್‌ ಸ್ಟೇಟ್‌ಮೆಂಟ್ಸ್ ಕಾಲಿಟ್ಟಿವೆ. ಹೌದು. ಫಾದರ್ಸ್ ಡೇ ಯಂದು ಕೂಡ ಅಪ್ಪ-ಮಕ್ಕಳು ಫ್ಯಾಷೆನಬಲ್‌ ಆಗಿ ಕಾಣಿಸಿಕೊಳ್ಳಬಹುದು. ಅದು ಹೇಗೆ? ಇದಕ್ಕಾಗಿ ಏನೆಲ್ಲಾ ಪಾಲಿಸಬೇಕು? ಸ್ಟೈಲಿಂಗ್‌ ಟಿಪ್ಸ್ ಏನು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇದಕ್ಕೆ ತಕ್ಕಂತೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

Father's Day Fashion

ಕ್ಯಾಶುವಲ್ಸ್ ಔಟ್‌ಫಿಟ್ಸ್

ಪ್ರತಿದಿನ ಸೀರಿಯಸ್‌ ಆಗಿ ಫಾರ್ಮಲ್‌ ಧರಿಸುವ ಅಪ್ಪ, ನೀವಾದಲ್ಲಿ ಆದಷ್ಟೂ ಈ ವಿಶೇಷ ದಿನದಂದು ಕೂಲಾಗಿ ಕಾಣಿಸುವ ಕ್ಯಾಶುವಲ್‌ ಔಟ್‌ಫಿಟ್ಸ್‌ಗೆ ಸೈ ಹೇಳಿ. ಇನ್ನು ಮಕ್ಕಳಿಗೆ ಇಷ್ಟವಾಗುವಂತಹ ಕಲರ್ಸ್ ಹಾಗೂ ಔಟ್‌ಫಿಟ್‌ಗಳನ್ನು ಧರಿಸಿ. ಇನ್ನು ದೊಡ್ಡ ಮಕ್ಕಳೊಂದಿಗೆ ಸೆಲೆಬ್ರೆಟ್‌ ಮಾಡುವುದಾದಲ್ಲಿ ಆ ಮಕ್ಕಳ ಚಾಯ್ಸ್‌ಗೆ ತಕ್ಕಂತೆ ಧರಿಸಿ, ಮಕ್ಕಳ ಜೊತೆ ಮಕ್ಕಳಾಗಿ ಆಚರಿಸಿ.

Father's Day Fashion

ಅಪ್ಪನೊಂದಿಗೆ ಟ್ವಿನ್ನಿಂಗ್‌

ಮಕ್ಕಳು ಅಪ್ಪನೊಂದಿಗೆ ಟ್ವಿನ್ನಿಂಗ್‌ ಮಾಡಬಹುದು. ಅದು ಹೇಗೆ? ಅಂತಿರಾ! ತೀರಾ ಸಿಂಪಲ್‌. ಶಾಪಿಂಗ್‌ ಮಾಡಿ ಖರೀದಿಸುವುದಾದಲ್ಲಿ ಆದಷ್ಟೂ ಒಂದೇ ಬಗೆಯ ಔಟ್‌ಫಿಟ್ಸ್ ಖರೀದಿಸಿ, ಧರಿಸಿ. ಇಲ್ಲವಾದಲ್ಲಿ ವಾರ್ಡ್ರೋಬ್‌ನಲ್ಲಿರುವ ಸೇಮ್‌ ಟು ಸೇಮ್‌ ಔಟ್‌ಫಿಟ್‌ಗಳನ್ನು ಧರಿಸಿ. ಧರಿಸುವ ಎಲ್ಲಾ ಉಡುಗೆ ಹಾಗೂ ಆಕ್ಸೆಸರೀಸ್‌ ಒಂದೇ ಬಗೆಯದ್ದಾಗಿರಬೇಕು.

Father's Day Fashion

ಹೆಣ್ಣುಮಕ್ಕಳ ತಂದೆಯಾದಲ್ಲಿ…

ಗಂಡು ಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವುದು ಸುಲಭ. ಹೆಣ್ಣುಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವುದು ತುಸು ಅಸಾಧ್ಯ ಎಂದು ಯೋಚಿಸುತ್ತಾರೆ. ಆದರೆ, ಇದು ಕೂಡ ಸುಲಭ ಎಂದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಇದಕ್ಕೆ ಮಾಡಬೇಕಾಗಿದ್ದಿಷ್ಟೇ! ಮಕ್ಕಳ ಔಟ್‌ಫಿಟ್‌ ಶೇಡ್ಸ್‌ನ ಕಾಪಿ ಮಾಡಿದರಾಯಿತು ಅಷ್ಟೇ! ಟ್ವಿನ್ನಿಂಗ್‌ಗೆ ಡ್ರೆಸ್‌ಗಳು ಥೇಟ್‌ ಒಂದೇ ಬಗೆಯದ್ದಾಗಿರಬೇಕೆಂಬ ರೂಲ್ಸ್ ಎಲ್ಲೂ ಇಲ್ಲ! ಒಟ್ಟಿನಲ್ಲಿ ಧರಿಸುವ ಉಡುಗೆ ಒಂದೇ ಕಲರ್‌ ಇದ್ದರೂ ಸಾಕು! ಎನ್ನುತ್ತಾರೆ ಸ್ಟೈಲಿಸ್ಟ್ಸ್.

Father's Day Fashion

ಮನೋಲ್ಲಾಸ ನೀಡುವಂತಹ ಉಡುಗೆಗಳ ಆಯ್ಕೆ

ಈ ದಿನದಂದು ಮನಸ್ಸಿಗೆ ಖುಷಿ ನೀಡುವಂತಹ ಬಣ್ಣಗಳ ಆಯ್ಕೆಯ ಔಟ್‌ಫಿಟ್ಟನ್ನು ಅಪ್ಪ-ಮಕ್ಕಳು ಧರಿಸಿದಲ್ಲಿ, ಸಂಭ್ರಮ ಹೆಚ್ಚುವುದು. ಟ್ವಿನ್ನಿಂಗ್‌ ಮಾಡಲು ಇಷ್ಟವಿಲ್ಲದಿದ್ದಲ್ಲಿ, ಒಬ್ಬರಿಗೊಬ್ಬರು ಇಷ್ಟಪಡುವಂತಹ ಔಟ್‌ಫಿಟ್ಸ್ ಧರಿಸಿ, ಸಂಭ್ರಮಿಸಿ ಆಚರಿಸಿದರಾಯಿತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Celebrity Ethnic Fashion: ನಟ ಧನುಷ್‌ ಗೌಡರ ಗ್ರ್ಯಾಂಡ್‌ ಎಥ್ನಿಕ್‌ ಜಾಕೆಟ್‌ ವಿಶೇಷತೆ ಏನು?

Continue Reading

ಫ್ಯಾಷನ್

New Fashion: ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ನಲ್ಲಿ ಟ್ರೆಂಡಿಯಾದ ಜಿಪ್ಪರ್‌ ಸ್ಟೈಲ್‌

ಇದೀಗ ಬ್ಲ್ಯೂ ಡೆನಿಮ್‌ ಔಟ್‌ಫಿಟ್‌ಗಳ ಜಾಗವನ್ನು ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು (New Fashion) ಆಕ್ರಮಿಸಿಕೊಳ್ಳತೊಡಗಿವೆ. ಜಿಪ್ಪರ್‌ ಸ್ಟೈಲ್‌ನವು ಟ್ರೆಂಡಿಯಾಗಿವೆ. ಇದ್ಯಾವ ವಿನ್ಯಾಸದ ಔಟ್‌ಫಿಟ್‌? ಮೇಕೋವರ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ವಿವರಿಸಿದ್ದಾರೆ.

VISTARANEWS.COM


on

New Fashion
ಚಿತ್ರಗಳು: ಪಾರುಲ್‌ ಗುಲಾಟಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು ಇದೀಗ ಜಿಪ್ಪರ್‌ ಸ್ಟೈಲ್‌ನಲ್ಲಿ ಡಿಫರೆಂಟ್‌ ಕ್ರಾಪ್‌ ಟಾಪ್‌ (New Fashion) ಡಿಸೈನ್‌ಗಳಲ್ಲಿ ಟ್ರೆಂಡಿಯಾಗಿವೆ. ಹೌದು, ಇದೀಗ ಬ್ಲ್ಯೂ ಡೆನಿಮ್‌ ಔಟ್‌ಫಿಟ್‌ಗಳ ಜಾಗವನ್ನು ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ಗಳು ಆಕ್ರಮಿಸಿಕೊಳ್ಳತೊಡಗಿದ್ದು, ಅದರಲ್ಲೂ ಹಾಲ್ಟರ್‌ ನೆಕ್‌ ಕ್ರಾಪ್‌ ಟಾಪ್‌, ಟ್ಯಾಂಕ್‌ ಟಾಪ್‌, ಟ್ಯೂಬ್‌ ಟಾಪ್‌ನಂತಹ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಪ್ರಚಲಿತದಲ್ಲಿವೆ.

New Fashion

ಚಿತ್ರ-ವಿಚಿತ್ರ ಬ್ಲ್ಯಾಕ್‌ ಕೋ ಆರ್ಡ್ ಸೆಟ್‌

“ಡೆನಿಮ್‌ನಲ್ಲಿ ಇದೀಗ ಕೇವಲ ಪ್ಯಾಂಟ್‌, ಟಾಪ್‌ ಅಥವಾ ಜಾಕೆಟ್‌ಗಳು ಮಾತ್ರ ಚಾಲ್ತಿಯಲ್ಲಿಲ್ಲ. ಈ ಸೀಸನ್‌ಗೆ ಹೊಂದುವಂತಹ ವೆರೈಟಿ ಕೋ ಆರ್ಡ್ ಸೆಟ್‌ಗಳು ಕಾಲಿಟ್ಟಿದ್ದು, ಅವುಗಳಲ್ಲೂ ಡಿಫರೆಂಟ್‌ ವಿನ್ಯಾಸದವು ಹಾಗೂ ಚಿತ್ರ-ವಿಚಿತ್ರ ಡಿಸೈನ್‌ನವು ಬಂದಿವೆ. ಜೆನ್‌ ಜಿ ಹುಡುಗಿಯರಿಗೆ ಇಷ್ಟವಾಗುವಂತಹ ರಾಕಿಂಗ್‌ ಜಿಪ್ಪರ್‌ ಸ್ಟೈಲ್‌ನವು ಫ್ಯಾಷನ್‌ನಲ್ಲಿ ಲಗ್ಗೆ ಇಟ್ಟಿವೆ. ಅಷ್ಟೇಕೆ? ಇವುಗಳಲ್ಲಿ ಇದೀಗ ಕೋ ಆರ್ಡ್ ಸೆಟ್‌ಗಳು ಬ್ಲ್ಯಾಕ್‌ ಶೇಡ್‌ನಲ್ಲಿ ಬರುತ್ತಿರುವುದು ಡೆನಿಮ್‌ ಪ್ರೇಮಿಗಳಿಗೆ ಡಿಫರೆಂಟ್‌ ಇಮೇಜ್‌ ನೀಡುತ್ತಿವೆ. ಇದೇ ಕಾರಣದಿಂದಾಗಿ ಹೊಸ ಲುಕ್‌ ಬಯಸುವ ರಾಕಿಂಗ್‌ ಹುಡುಗಿಯರು ಇವುಗಳನ್ನು ಆಯ್ಕೆ ಮಾಡತೊಡಗಿದ್ದಾರೆ.

New Fashion

ಟ್ರೆಂಡಿಯಾಗಿರುವ ಬ್ಲ್ಯಾಕ್‌ ಡೆನಿಮ್‌ ಕೋ ಆರ್ಡ್ ಸೆಟ್‌ ಡಿಸೈನ್ಸ್

ಬ್ಲ್ಯಾಕ್‌ ಡೆನಿಮ್‌ ಫ್ಯಾಬ್ರಿಕ್‌ನ ಕೋ ಆರ್ಡ್ ಸೆಟ್‌ಗಳು ಸಾಮಾನ್ಯ ಡಿಸೈನ್‌ನಲ್ಲಿ ಅಲ್ಲ, ಕಂಪ್ಲೀಟ್‌ ವಿಭಿನ್ನ ವಿನ್ಯಾಸದಲ್ಲಿ ದೊರೆಯುತ್ತಿವೆ. ಉದಾಹರಣೆಗೆ, ಜಿಪ್ಪರ್‌ ಲೈನ್‌ ಇರುವಂತಹ ಕೋ ಆರ್ಡ್ ಸೆಟ್‌ಗಳು, ಜಿಪ್ಪರ್‌ ಲೈನ್‌ ಇರುವಂತಹ ನೆಕ್‌ಲೈನ್‌ ಇರುವಂತಹ ಹಾಲ್ಟರ್‌ನೆಕ್‌ನಂತವು, ಗೋಥಿಕ್‌ ಸ್ಟೈಲ್‌ನವು, ಟ್ಯೂಬ್‌ ವಿನ್ಯಾಸದಂತೆ ಕಾಣುವ ಜಿಪ್ಪರ್‌ ಟಾಪ್‌ಗಳನ್ನು ಹೊಂದಿರುವಂತವು, ಟ್ಯಾಂಕ್‌ ಟಾಪ್‌ನಂತೆ ಕಂಡರೂ ಅದರ ಮೇಲೊಂದು ಲೇಯರ್‌ ಲುಕ್‌ನಂತೆ ಕಾಣುವಂತಹ ಡಿಸೈನ್‌ ಇರುವಂತವು ಪ್ಯಾಂಟ್‌ಗೆ ಹೊಂದಿಕೊಂಡಂತಹ ಕೋ ಆರ್ಡ್ ಫ್ಯಾಷನ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

New Fashion

ಬ್ಲ್ಯಾಕ್‌ ಡೆನಿಮ್‌ ಜಿಪ್ಪರ್‌ ಕೋ ಆರ್ಡ್ ಸೆಟ್‌ ಸ್ಟೈಲಿಂಗ್‌ ಹೀಗೆ

  • ಇದು ಅಲ್ಟ್ರಾ ಮಾಡರ್ನ್‌ ಹುಡುಗಿಯರಿಗೆ ಪರ್ಫೆಕ್ಟ್ ಔಟ್‌ಫಿಟ್‌.
  • ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ!
  • ಹೈ ಪೋನಿಟೈಲ್‌ ಅಥವಾ ಫ್ರೀ ಹೇರ್‌ಸ್ಟೈಲ್‌ ಈ ಔಟ್‌ಫಿಟ್‌ಗೆ ಸಖತ್‌ ಮ್ಯಾಚ್‌ ಆಗುತ್ತದೆ.
  • ಕತ್ತಿಗೆ ಸಿಂಪಲ್‌ ನೆಕ್‌ಚೈನ್‌ ಧರಿಸಿದರೇ ಸಾಕು.
  • ಮೇಕಪ್‌ ಸಿಂಪಲ್‌ ಆಗಿರುವುದು ಅಗತ್ಯ.
  • ಫಿಟ್ಟಿಂಗ್‌ ಇರುವಂತವು ಆಕರ್ಷಕವಾಗಿ ಕಾಣಿಸುತ್ತವೆ.
  • ಫ್ಯಾಬ್ರಿಕ್‌ ಲೈಟ್‌ವೈಟ್‌ ಇರುವಂತವನ್ನು ಖರೀದಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Saree Fashion: ರೇಷ್ಮೆ ಸೀರೆಯಲ್ಲಿ ನಟಿ ಕೀರ್ತಿ ಸುರೇಶ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಬೇಕೆ? 5 ಟಿಪ್ಸ್ ಫಾಲೋ ಮಾಡಿ!

Continue Reading
Advertisement
NEET UG 2024
Latest14 mins ago

NEET UG 2024: ಮಗಳ ಜೊತೆ ಸೇರಿ ನೀಟ್ ಯುಜಿ ಪರೀಕ್ಷೆ ಬರೆದು ಪಾಸಾದ ಅಪ್ಪ!

Sidhartha Mallya
ಸಿನಿಮಾ19 mins ago

Sidhartha Mallya: ಹಸೆಮಣೆಗೇರಲು ಸಜ್ಜಾದ ದೀಪಿಕಾ ಪಡುಕೋಣೆ ಮಾಜಿ ಪ್ರೇಮಿ ಸಿದ್ಧಾರ್ಥ್‌ ಮಲ್ಯ

murder case
ಕ್ರೈಂ35 mins ago

Murder case : ರಸ್ತೆಯಲ್ಲಿ ಅಡ್ಡಗಟ್ಟಿ ಚಿಕ್ಕಮ್ಮನನ್ನು ಹೊಡೆದು ಕೊಂದ ದುಷ್ಟ

How Much Salt Is Too Much
ಆರೋಗ್ಯ52 mins ago

How Much Salt Is Too Much: ಉಪ್ಪು ಅತಿಯಾಗದಿರಲಿ; ದಿನಕ್ಕೆ ನಾವೆಷ್ಟು ಉಪ್ಪು ತಿನ್ನುತ್ತಿದ್ದೇವೆ ಗೊತ್ತಿರಲಿ

T20 World Cup 2024
ಕ್ರೀಡೆ54 mins ago

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್​ ಆಟಗಾರನಿಗೆ ಗಾಯ

Narendra Modi
ದೇಶ1 hour ago

Narendra Modi: ಮೂರನೇ ಬಾರಿ ಪ್ರಧಾನಿ ಪಟ್ಟಕ್ಕೇರಿದ ಬಳಿಕ ಇಂದು ಸ್ವಕ್ಷೇತ್ರ ವಾರಾಣಸಿಗೆ ಮೋದಿ ಮೊದಲ ಭೇಟಿ

Prajwal revanna case
ಪ್ರಮುಖ ಸುದ್ದಿ1 hour ago

Prajwal Revanna Case: ಇಂದು ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯ, ಮತ್ತೊಂದು ಕೇಸ್‌ನಲ್ಲಿ ಅಂದರ್!‌

Team India Coach
ಕ್ರೀಡೆ2 hours ago

Team India Coach: ಜಾಂಟಿ ರೋಡ್ಸ್ ಟೀಮ್​ ಇಂಡಿಯಾದ ಮುಂದಿನ ಫೀಲ್ಡಿಂಗ್​ ಕೋಚ್​

pattanagere shed actor darshan renuka swamy murder
ಕ್ರೈಂ2 hours ago

Actor Darshan: ಆ ಭೀಕರ ಶೆಡ್‌ನಲ್ಲಿ ಇನ್ನೂ ಹಲವರ ರಕ್ತದ ಕಲೆ ಪತ್ತೆ! ಏನ್‌ ನಡೆದಿತ್ತು ಇಲ್ಲಿ?

Beer Side Effect
ಆರೋಗ್ಯ2 hours ago

Beer Side Effect: ಬಿಯರ್‌ ಕುಡಿದರೆ ತೂಕ ಹೆಚ್ಚುತ್ತದೆ ಎನ್ನುವುದು ನಿಜವೇ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು22 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು23 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌