Site icon Vistara News

Weekend Style : ಆತ್ಮವಿಶ್ವಾಸ ಹೆಚ್ಚಿಸುವ ಫ್ಯಾಷನ್‌ ನನ್ನದು ಎನ್ನುವ ಪೂಜಾ ಸಾಲಿಮಠ್‌

Weekend Style

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಒಂದು ಮಾತಿಲ್ಲದೇ ನಮ್ಮನ್ನು ಗುರುತಿಸುವಂತೆ ಮಾಡುವುದೇ ಸ್ಟೈಲ್‌ ಎನ್ನುವ ಪೂಜಾ ಸಾಲಿಮಠ್‌, ೨೦೧೯ರ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಬ್ಯೂಟಿಫುಲ್‌ ಕಂಗಳು ಹಾಗೂ ಫೋಟೋಜೆನಿಕ್‌ ಸಬ್‌ಟೈಟಲ್‌ ಪಡೆದಿದ್ದಾರೆ. ಈ ಬಾರಿಯ ವೀಕೆಂಡ್‌ ಸ್ಟೈಲ್‌ನಲ್ಲಿ ತಮ್ಮ ಫ್ಯಾಷನ್‌ ಹಾಗೂ ಸೀಸನ್‌ ಸ್ಟೈಲ್‌ ಬಗ್ಗೆ ಮಾತನಾಡಿದ್ದಾರೆ.

ನಿಮ್ಮ ಪ್ರಕಾರ ಫ್ಯಾಷನ್‌ಗೂ ಸ್ಟೈಲ್‌ಗೂ ಇರುವ ವ್ಯತ್ಯಾಸವೇನು?

ನೋಡಿ, ಫ್ಯಾಷನ್‌ ಎಂಬುದು ನಾವು ಕೊಂಡು ತರುವಂಥದ್ದು. ಇನ್ನು ಸ್ಟೈಲ್‌ ಎಂಬುದು ಒಂದೂ ಮಾತನಾಡದೆ ನಮ್ಮತನವನ್ನು ತೋರಿಸುವಂಥದ್ದು. ನೀವೇನು ಖರೀದಿಸಿ ಧರಿಸುತ್ತಿರೋ ಅದು ಫ್ಯಾಷನ್‌ ಆಗಿ ಬದಲಾಗುತ್ತದೆ. ಧರಿಸಿದ ನಂತರ ನಿಮ್ಮ ಅಟಿಟ್ಯೂಡ್‌ನಲ್ಲಿ ಆಗುವ ಬದಲಾವಣೆಯೇ ಸ್ಟೈಲ್‌ ಎನ್ನಬಹುದು.

ನಿಮಗೆ ಹೆಚ್ಚು ಪ್ರಿಯವಾಗುವ ವಿಂಟರ್‌ ಡ್ರೆಸ್‌ಕೋಡ್‌ ಯಾವುದು?

ಆರಾಮ ಎಂದೆನಿಸುವ ಡೆನಿಮ್‌ ಜೀನ್ಸ್‌ ಅದಕ್ಕೊಪ್ಪುವ ಟೀ ಶರ್ಟ್. ಇನ್ನು ಅದರೊಂದಿಗೆ ಲೆದರ್‌ ಜಾಕೆಟ್‌ ಕಾಲಿಗೆ ಬೂಟ್ಸ್‌. ಎಲ್ಲವೂ ಹೇಳಿಮಾಡಿಸಿದಂತೆ ಕಾಣುತ್ತದೆ. ವಿಂಟರ್‌ಗೆ ಪರ್ಫೆಕ್ಟ್‌ ಮ್ಯಾಚ್‌ ಆಗುತ್ತದೆ.

ಪಾರ್ಟಿ ಫ್ಯಾಷನ್‌ಗೆ ೩ ಸಿಂಪಲ್‌ ಟಿಪ್ಸ್‌ ನೀಡಿ…

ಶಾರ್ಟ್ ಪಾರ್ಟಿ ಡ್ರೆಸ್‌ಗಳಿಗೆ ಸೂಟ್‌ ಆಗುವಂತೆ ಮಂಡಿವರೆಗೂ ಧರಿಸುವ ಬೂಟ್ಸ್‌ ನಿಮ್ಮ ವಾರ್ಡ್ರೋಬ್‌ನಲ್ಲಿರಲಿ. ಹೇರ್‌ಸ್ಟೈಲ್‌ ನಿಮ್ಮ ವಧನಕ್ಕೆ ಮ್ಯಾಚ್‌ ಆಗುವಂತಿರಲಿ. ಮಿನುಗುವ ಆಕ್ಸೆಸರೀಸ್‌ ಕೂಡ ಆಕರ್ಷಕವಾಗಿರಲಿ.

ಟ್ರೆಂಡ್‌ಗೆ ತಕ್ಕಂತೆ ಫ್ಯಾಷನ್‌ ಬದಲಿಸಿಕೊಳ್ಳುವುದು ಹೇಗೆ?

ಫ್ಯಾಷನ್‌ ಟ್ರೆಂಡ್‌ಗೆ ತಕ್ಕಂತೆ ಸೀಸನ್‌ವೇರ್‌ ಧರಿಸಿ, ತಂತಾನೇ ಟ್ರೆಂಡಿಯಾಗುತ್ತದೆ. ಟ್ರೆಂಡ್‌ ಕುರಿತಂತೆ ಓದಿ ತಿಳಿದುಕೊಳ್ಳಿ. ಬದಲಾಗಲು ಸಹಾಯವಾಗುತ್ತದೆ.

ನಿಮ್ಮ ಫ್ಯಾಷನ್‌ ರೆಸಲ್ಯೂಷನ್‌ ಏನು?

ಆತ್ಮವಿಶ್ವಾಸ ಮೂಡಿಸುವಂತಹ ಡಿಸೈನರ್‌ವೇರ್‌ಗಳನ್ನು ಧರಿಸುವುದು. ಆದಷ್ಟೂ ಡಲ್‌ ಹಾಗೂ ಕುಗ್ಗಿಸುವಂತಹ ಡಿಸೈನರ್‌ವೇರ್‌ಗಳ ಶೇಡ್‌ಗಳನ್ನು ತೊರೆಯುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star fashion | ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಮನಗೆದ್ದ ನಟಿ ಶ್ರುತಿ ಹಾಸನ್‌ ಇಂಡೋ – ವೆಸ್ಟರ್ನ್ ಸೀರೆ ಸ್ವಾಗ್‌

Exit mobile version