ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್ ಸೌತ್ ಏಷಿಯಾ ಕೆನಡಾ ೨೦೧೯, ಮಾಡೆಲ್, ನಟಿ, ಕಲಾವಿದೆಯಾಗಿರುವ ಮಂಜುಳಾ ರಣೆ ಮೂಲತಃ ಬೆಂಗಳೂರಿನವರು. ಸದ್ಯಕ್ಕೆ ಕೆನಡಾದ ಉನ್ನತ ಹುದ್ದೆಯಲ್ಲಿದ್ದಾರೆ. ನಾನಾ ರಾಷ್ಟ್ರಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಬ್ರೇಕಿಂಗ್ ನ್ಯೂಸ್ ಸಿನಿಮಾ ಸೇರಿದಂತೆ ಮುಕ್ತ ಮುಕ್ತ, ಬಂಗಾರ ಸೇರಿದಂತೆ ನಾನಾ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಆಗಾಗ ಬೆಂಗಳೂರಿಗೂ ವಿಸಿಟ್ ಹಾಕುವ ಮಂಜುಳಾ, ಈ ಬಾರಿ ಉದ್ಯಾನನಗರಿಗೆ ಭೇಟಿ ನೀಡಿದಾಗ ವಿಸ್ತಾರದ ವೀಕೆಂಡ್ ಸ್ಟೈಲ್ ಕಾಲಂಗಾಗಿ ಮಾತನಾಡಿದರು. ಈ ಬಗ್ಗೆ ಇಲ್ಲಿದೆ ವಿವರ.
ಕೆನಡಾ ವಿಂಟರ್ ಫ್ಯಾಷನ್‌ಗೂ ಉದ್ಯಾನನಗರಿಯ ಚಳಿಗಾಲದ ಫ್ಯಾಷನ್‌ಗೂ ಕಂಡು ಬರುವ ಪ್ರಮುಖ ವ್ಯತ್ಯಾಸವೇನು?
ಒಂದಲ್ಲ, ಎರಡಲ್ಲ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿನ ವಾತಾವರಣಕ್ಕೂ ಇಲ್ಲಿನ ಹವಾಮಾನಕ್ಕೂ ಅಜಗಜಾಂತರ. ಅಲ್ಲಿನ ಮೈನಸ್ ಡಿಗ್ರಿಗೆ ಧರಿಸುವ ವಿಂಟರ್ ಫ್ಯಾಷನ್ನೇ ಬೇರೇ! ಇಲ್ಲಿಯದ್ದೇ ಬೇರೇ! ಹಾಗಾಗಿ ಅಲ್ಲಿನ ಉಡುಪುಗಳನ್ನು ಇಲ್ಲಿ ಧರಿಸಲಾಗದು.
ನಿಮ್ಮ ರೆಗ್ಯುಲರ್ ಫ್ಯಾಷನ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿ?
ನನ್ನ ಎಟಿಟ್ಯೂಡ್ ನನ್ನ ಫ್ಯಾಷನ್ ಐಡೆಂಟಿಟಿ. ಒಬ್ಬರಿಗಿಂತ ಭಿನ್ನ ಹಾಗೂ ವಿಭಿನ್ನವಾಗಿ ಕಾಣಿಸುವ ಫ್ಯಾಷನ್ ನನ್ನದು. ಒಂದು ಉಡುಪನ್ನು ಕಾಮನ್ ಆಗಿ ಧರಿಸುವುದಕ್ಕಿಂತ, ಸುತ್ತಮುತ್ತಲಿನವರು ಆಕರ್ಷಿಸುವಂತೆ ಧರಿಸುವುದೇ ನನ್ನ ಫ್ಯಾಷನ್.
ಅಮೆರಿಕದಲ್ಲಿ ಉಲ್ಲನ್ ಫ್ಯಾಷನ್ ಟ್ರೆಂಡಿಯಾಗಿರುವುದರ ಬಗ್ಗೆ ತಿಳಿಸಿ…
ಹೌದು. ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಉಲ್ಲನ್ ಫ್ಯಾಷನ್ ವಿಂಟರ್‌ನಲ್ಲಿ ಟ್ರೆಂಡಿಯಾಗಿರುತ್ತದೆ. ಉಲ್ಲನ್ ಸ್ಕಟ್ರ್ಸ್, ಪ್ಯಾಂಟ್, ಕೋಟ್, ಜಾಕೆಟ್ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಉಲ್ಲನ್‌ನ ನಾನಾ ವೇರ್‌ಗಳನ್ನು ಅಲ್ಲಿ ಧರಿಸುವುದು ಕಾಮನ್. ಆದರೆ, ಇಲ್ಲಿ ಹಾಗಿಲ್ಲ! ಬೆಳಗ್ಗೆ ಚಳಿಯಿದ್ದರೇ, ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಾಗಿರುತ್ತದೆ. ಉಲ್ಲನ್ ಹೆಚ್ಚು ಧರಿಸಲು ಸಾಧ್ಯವಿಲ್ಲ!
ನಮ್ಮಲ್ಲಿ ಎಲ್ಲಾ ಸೀಸನ್‌ನ ಲೇಯರ್ ಲುಕ್ ಮಿಕ್ಸ್ ಮಾಡುವಂತೆ ಅಲ್ಲಿ ಫಾಲೋ ಮಾಡಲು ಯಾಕೆ ಸಾಧ್ಯವಿಲ್ಲ!
ಯಾಕೆಂದರೆ, ಅಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಸಾಕಷ್ಟು ಬದಲಾವಣೆಯಾಗುತ್ತಿರುತ್ತದೆ. ಒಂದು ಸೀಸನ್ ಬದಲಾದ ತಕ್ಷಣ ನಾವು ವಾರ್ಡ್ರೋಬ್‌ನಿಂದ ಆಯಾ ಸೀಸನ್ ಮುಗಿದ ತಕ್ಷಣ ಖಾಲಿ ಮಾಡಿ ಎತ್ತಿಡುತ್ತೇವೆ. ಪ್ರಸ್ತುತ ಸೀಸನ್‌ಗೆ ತಕ್ಕಂತೆ ಬದಲಾಗುತ್ತೇವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion News : ಮನಗೆದ್ದ ಸ್ಮೃತಿ ಸಾಧನಾ ವರ್ಷದ ಮೊದಲ ಫ್ಯಾಷನ್ ಶೋ