ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಶಕಗಳ ಕಾಲ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯೊಮಾ ಶರ್ಮಾ ಇದೀಗ ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದ್ದಾರೆ. ಅಲ್ಲದೇ, ಇತ್ತೀಚೆಗೆ ನಡೆದ ವಿವಾಹಿತರ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ (Mrs. International Super Queen) ಪೇಜೆಂಟ್‌ನಲ್ಲಿ 3ನೇ ರನ್ನರ್ ಅಪ್ ಆಗುವುದರೊಂದಿಗೆ, ಮಿಸೆಸ್ ಫೋಟೋಜೆನಿಕ್ (Mrs. Photogenic) ಟೈಟಲ್‌ಗೂ ಭಾಜನರಾಗಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ (Weekend Style) ತಮ್ಮ ಫ್ಯಾಷನ್ ಮೋಹ ಹಾಗೂ ವೀಕೆಂಡ್ ಸ್ಟೈಲ್ (Weekend Style) ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಮೀಡಿಯಾದಲ್ಲಿ ವೃತ್ತಿ ಆರಂಭಿಸಿದ ನೀವು ಇದ್ದಕ್ಕಿದ್ದಂತೆ ಪೇಜೆಂಟ್‌ನಲ್ಲಿ ಭಾಗವಹಿಸಿದ್ದು ಯಾಕೆ?
ಮೊದಲಿನಿಂದಲೂ ಮೀಡಿಯಾದಲ್ಲಿದ್ದ ನನ್ನನ್ನು ಫ್ಯಾಷನ್ ರ್ಯಾಂಪ್ ಸೆಳೆಯುತ್ತಿತ್ತು. ನನಗೆ ಫ್ಯಾಷನ್ ಎಂಬುದು ಮೊದಲಿನಿಂದಲೂ ಪ್ಯಾಷನ್ ಆಗಿತ್ತು. ರ್ಯಾಂಪ್ ವಾಕ್ ಮಾಡುವ ಕನಸಿತ್ತು. ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್‌ನಲ್ಲಿ (Mrs. International Super Queen) ಪಾಲ್ಗೊಂಡು ವಿಜೇತಳಾಗುವ ಮೂಲಕ ಅದನ್ನು ನನಸಾಗಿಸಿಕೊಂಡೆ.
ಖುದ್ದು ರ್ಯಾಂಪ್ ವಾಕ್ ಮಾಡಿದಾಗ ಅನಿಸಿದ್ದೇನು?
ರ್ಯಾಂಪ್ ವಾಕ್ ಅಂದುಕೊಂಡಷ್ಟು ಸುಲಭವೇನಲ್ಲ! ಅದಕ್ಕೂ ಸಾಕಷ್ಟು ಪ್ರಾಕ್ಟೀಸ್ ಬೇಕಾಗುತ್ತದೆ. ಫ್ಯಾಷನ್ ಬಗ್ಗೆ ಒಲವಿರಬೇಕಾಗುತ್ತದೆ.
ನೋಡಲು ಸಖತ್ ಫ್ಯಾಷೆನಬಲ್ ಆಗಿರುವ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ಸ್ ಏನು?
ನಮ್ಮ ಐಡೆಂಟಿಟಿ ಜೊತೆಗೆ ಪರ್ಸನಾಲಿಟಿಯನ್ನು ಗುರುತಿಸಲು ಸಹಾಯ ಮಾಡುವುದೇ ಫ್ಯಾಷನ್. ಪವರ್ ಡ್ರೆಸ್ಸಿಂಗ್, ಸ್ಲಿಟ್ ಗೌನ್ಸ್, ಬ್ರೀಝಿ ಕಂಫರ್ಟಬಲ್ ಡ್ರೆಸ್, ಫ್ಯಾಷನ್ ಜ್ಯುವೆಲರಿ ಎಲ್ಲವೂ ನನ್ನ ಫ್ಯಾಷನ್ ಲಿಸ್ಟ್‌ನಲ್ಲಿದೆ.
ನಿಮ್ಮ ಪ್ರಕಾರ ಫ್ಯಾಷನ್ ಅಂದ್ರೆ ಏನು?
ಫ್ಯಾಷನ್ ಎಂಬುದು ಯಾವತ್ತೂ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ! ಅದು ಬದಲಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ನಾವು ಬದಲಾಗುತ್ತಲೇ ಇರಬೇಕು.
ನಿಮ್ಮ ವೀಕೆಂಡ್ ಸ್ಟೈಲ್‌ಸ್ಟೇಟ್‌ಮೆಂಟ್ ಹೇಗಿದೆ?
ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳು ನನ್ನ ವೀಕೆಂಡ್ ಸ್ಟೈಲ್‌ನಲ್ಲಿವೆ (Weekend Style). ಇದಕ್ಕೆ ಸ್ಟೇಟ್‌ಮೆಂಟ್ ಶ್ರಗ್ಸ್ ಜೊತೆಯಾಗುತ್ತವೆ. ಶೂ ಹಾಗೂ ಇಯರಿಂಗ್ಸ್ ಸಾಥ್ ನೀಡುತ್ತವೆ. ಇನ್ನು ಮುಂಬರುವ ಸೀಸನ್‌ಗೆ ತಕ್ಕಂತೆ ನನ್ನ ಸ್ಟೈಲಿಂಗ್‌ನಲ್ಲಿ ಲೆನಿನ್ ಔಟ್‌ಫಿಟ್ಸ್ ಸೇರಲಿವೆ. ಕ್ರಾಪ್ ಟಾಪ್ಸ್ ಜೊತೆಗೆ ಹೈ ವೇಸ್ಟ್‌ನ ಪ್ಯಾಂಟ್, ಟೈಫೋಗ್ರಾಫಿಕ್ ಸ್ಟೈಲ್ ಬ್ಯಾಗ್‌ಗಳು ಭಾಗಿಯಾಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Weekend Style: ಔಟ್‌ಲುಕ್‌ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡುವ ಮಾಡೆಲ್ ರಾಜ್