ಫ್ಯಾಷನ್
Weekend Style: ವ್ಯೊಮಾ ಶರ್ಮಾ ವೀಕೆಂಡ್ ಸ್ಟೈಲ್‌ನಲ್ಲಿ ಪ್ರಯೋಗತ್ಮಾಕ ಫ್ಯಾಷನ್‌ವೇರ್ಸ್
ದಶಕಗಳಿಗೂ ಹೆಚ್ಚು ಕಾಲ ಮೀಡಿಯಾ ಜಗತ್ತಿನಲ್ಲಿ ಕಾರ್ಯನಿರ್ವಹಿಸಿ, ಇದೀಗ ಮಾಡೆಲಿಂಗ್ ಜಗಕ್ಕೆ ಕಾಲಿಟ್ಟು, ಪೇಜೆಂಟ್‌ವೊಂದರಲ್ಲಿ ಪಾಲ್ಗೊಂಡು ಸಬ್ ಟೈಟಲ್ ವಿಜೇತೆಯಾಗಿರುವ ವ್ಯೊಮಾ ಶರ್ಮಾಗೆ ಫ್ಯಾಷನ್ ಪ್ಯಾಷನ್ ಅಂತೆ. ಈ ಕುರಿತಂತೆ ಈ ಬಾರಿಯ ವಿಸ್ತಾರ ನ್ಯೂಸ್‌ನ ವೀಕೆಂಡ್ ಸ್ಟೈಲ್‌ನಲ್ಲಿ (Weekend Style) ಮಾತನಾಡಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಶಕಗಳ ಕಾಲ ಮೀಡಿಯಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯೊಮಾ ಶರ್ಮಾ ಇದೀಗ ಮಾಡೆಲಿಂಗ್ ಜಗತ್ತನ್ನು ಪ್ರವೇಶಿಸಿದ್ದಾರೆ. ಅಲ್ಲದೇ, ಇತ್ತೀಚೆಗೆ ನಡೆದ ವಿವಾಹಿತರ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ (Mrs. International Super Queen) ಪೇಜೆಂಟ್‌ನಲ್ಲಿ 3ನೇ ರನ್ನರ್ ಅಪ್ ಆಗುವುದರೊಂದಿಗೆ, ಮಿಸೆಸ್ ಫೋಟೋಜೆನಿಕ್ (Mrs. Photogenic) ಟೈಟಲ್‌ಗೂ ಭಾಜನರಾಗಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ (Weekend Style) ತಮ್ಮ ಫ್ಯಾಷನ್ ಮೋಹ ಹಾಗೂ ವೀಕೆಂಡ್ ಸ್ಟೈಲ್ (Weekend Style) ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಮೀಡಿಯಾದಲ್ಲಿ ವೃತ್ತಿ ಆರಂಭಿಸಿದ ನೀವು ಇದ್ದಕ್ಕಿದ್ದಂತೆ ಪೇಜೆಂಟ್‌ನಲ್ಲಿ ಭಾಗವಹಿಸಿದ್ದು ಯಾಕೆ?
ಮೊದಲಿನಿಂದಲೂ ಮೀಡಿಯಾದಲ್ಲಿದ್ದ ನನ್ನನ್ನು ಫ್ಯಾಷನ್ ರ್ಯಾಂಪ್ ಸೆಳೆಯುತ್ತಿತ್ತು. ನನಗೆ ಫ್ಯಾಷನ್ ಎಂಬುದು ಮೊದಲಿನಿಂದಲೂ ಪ್ಯಾಷನ್ ಆಗಿತ್ತು. ರ್ಯಾಂಪ್ ವಾಕ್ ಮಾಡುವ ಕನಸಿತ್ತು. ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್‌ನಲ್ಲಿ (Mrs. International Super Queen) ಪಾಲ್ಗೊಂಡು ವಿಜೇತಳಾಗುವ ಮೂಲಕ ಅದನ್ನು ನನಸಾಗಿಸಿಕೊಂಡೆ.
ಖುದ್ದು ರ್ಯಾಂಪ್ ವಾಕ್ ಮಾಡಿದಾಗ ಅನಿಸಿದ್ದೇನು?
ರ್ಯಾಂಪ್ ವಾಕ್ ಅಂದುಕೊಂಡಷ್ಟು ಸುಲಭವೇನಲ್ಲ! ಅದಕ್ಕೂ ಸಾಕಷ್ಟು ಪ್ರಾಕ್ಟೀಸ್ ಬೇಕಾಗುತ್ತದೆ. ಫ್ಯಾಷನ್ ಬಗ್ಗೆ ಒಲವಿರಬೇಕಾಗುತ್ತದೆ.
ನೋಡಲು ಸಖತ್ ಫ್ಯಾಷೆನಬಲ್ ಆಗಿರುವ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ಸ್ ಏನು?
ನಮ್ಮ ಐಡೆಂಟಿಟಿ ಜೊತೆಗೆ ಪರ್ಸನಾಲಿಟಿಯನ್ನು ಗುರುತಿಸಲು ಸಹಾಯ ಮಾಡುವುದೇ ಫ್ಯಾಷನ್. ಪವರ್ ಡ್ರೆಸ್ಸಿಂಗ್, ಸ್ಲಿಟ್ ಗೌನ್ಸ್, ಬ್ರೀಝಿ ಕಂಫರ್ಟಬಲ್ ಡ್ರೆಸ್, ಫ್ಯಾಷನ್ ಜ್ಯುವೆಲರಿ ಎಲ್ಲವೂ ನನ್ನ ಫ್ಯಾಷನ್ ಲಿಸ್ಟ್‌ನಲ್ಲಿದೆ.
ನಿಮ್ಮ ಪ್ರಕಾರ ಫ್ಯಾಷನ್ ಅಂದ್ರೆ ಏನು?
ಫ್ಯಾಷನ್ ಎಂಬುದು ಯಾವತ್ತೂ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ! ಅದು ಬದಲಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ನಾವು ಬದಲಾಗುತ್ತಲೇ ಇರಬೇಕು.
ನಿಮ್ಮ ವೀಕೆಂಡ್ ಸ್ಟೈಲ್‌ಸ್ಟೇಟ್‌ಮೆಂಟ್ ಹೇಗಿದೆ?
ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳು ನನ್ನ ವೀಕೆಂಡ್ ಸ್ಟೈಲ್‌ನಲ್ಲಿವೆ (Weekend Style). ಇದಕ್ಕೆ ಸ್ಟೇಟ್‌ಮೆಂಟ್ ಶ್ರಗ್ಸ್ ಜೊತೆಯಾಗುತ್ತವೆ. ಶೂ ಹಾಗೂ ಇಯರಿಂಗ್ಸ್ ಸಾಥ್ ನೀಡುತ್ತವೆ. ಇನ್ನು ಮುಂಬರುವ ಸೀಸನ್‌ಗೆ ತಕ್ಕಂತೆ ನನ್ನ ಸ್ಟೈಲಿಂಗ್‌ನಲ್ಲಿ ಲೆನಿನ್ ಔಟ್‌ಫಿಟ್ಸ್ ಸೇರಲಿವೆ. ಕ್ರಾಪ್ ಟಾಪ್ಸ್ ಜೊತೆಗೆ ಹೈ ವೇಸ್ಟ್‌ನ ಪ್ಯಾಂಟ್, ಟೈಫೋಗ್ರಾಫಿಕ್ ಸ್ಟೈಲ್ ಬ್ಯಾಗ್‌ಗಳು ಭಾಗಿಯಾಗುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Weekend Style: ಔಟ್‌ಲುಕ್‌ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡುವ ಮಾಡೆಲ್ ರಾಜ್
ಫ್ಯಾಷನ್
Weekend Style: ಸೆಲೆಬ್ರೆಟಿ ಸ್ಟೈಲಿಸ್ಟ್ ನೈನಾಗೆ ಆತ್ಮವಿಶ್ವಾಸವೇ ಬಿಂದಾಸ್ ಫ್ಯಾಷನ್ ಮಂತ್ರ
ಸೆಲೆಬ್ರೆಟಿ ಡಿಸೈನರ್, ಸ್ಟೈಲಿಸ್ಟ್ ನೈನಾ ಇದೀಗ ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ ಪೇಜೆಂಟ್‌ನ ಸಬ್‌ಟೈಟಲ್ ವಿಜೇತರಾಗಿದ್ದಾರೆ. ಈ ಬಾರಿಯ ವೀಕೆಂಡ್ ಸ್ಟೈಲ್‌ನಲ್ಲಿ (Weekend Style) ತಮ್ಮ ಫ್ಯಾಷನ್ ಮತ್ತು ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಫ್ಯಾಷನ್ ಡಿಸೈನರ್, ಸ್ಟೈಲಿಸ್ಟ್ ಆಗಿರುವ ನೈನಾ ಕುಮಾರ್ ತಮ್ಮದೇ ಆದ ದೆವ್ನಾ ಸ್ಟಿಚಿಂಗ್ ಸ್ಟುಡಿಯೋ ಹೊಂದಿದ್ದಾರೆ. ಮೂಲತಃ ಪಂಜಾಬಿಯಾಗಿರುವ ನೈನಾ ದಶಕಗಳಿಗೂ ಹೆಚ್ಚು ಕಾಲದಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ನಂತರ ಕನ್ನಡಿಗನನ್ನು ಮದುವೆಯಾಗಿ, ಕನ್ನಡ ಕಲಿತು ಇದೀಗ ಕಂಪ್ಲೀಟ್ ಕನ್ನಡಿಗರೇ ಆಗಿ ಹೋಗಿದ್ದಾರೆ. ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರೆಯರಿಗೆ ಡಿಸೈನರ್‌ವೇರ್ ಕೂಡ ಡಿಸೈನ್ ಮಾಡಿದ್ದಾರೆ. ಈ ಬಾರಿಯ ವಿಸ್ತಾರ ನ್ಯೂಸ್‌ನ ವೀಕೆಂಡ್ ಸ್ಟೈಲ್ (Weekend Style) ಕಾಲಂನಲ್ಲಿ ತಮ್ಮ ಫ್ಯಾಷನ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ಯಾವ್ಯಾವ ಸ್ಯಾಂಡಲ್‌ವುಡ್ ತಾರೆಯರಿಗೆ ಡಿಸೈನರ್‌ವೇರ್ ಡಿಸೈನ್ ಮಾಡಿದ್ದೀರಾ?
ನಟಿಯರಾದ ಹರ್ಷಿಕಾ ಪೂಣಚ್ಚ, ನಿಮಿಕಾ ರತ್ನಾಕರ್, ಇತಿ ಆಚಾರ್ಯ, ಶುಭಾರಕ್ಷಾ, ರಾಗಿಣಿ ದ್ವಿವೇದಿ, ಕಾರುಣ್ಯ, ವೈನಿಧಿ, ಚಂದನಾ ಗೌಡ ಸೇರಿದಂತೆ ಸಾಕಷ್ಟು ತಾರೆಯರಿಗೆ ಡಿಸೈನರ್‌ವೇರ್ ಸಿದ್ಧಪಡಿಸಿದ್ದೇನೆ.
ತಾರೆಯರಿಗೆ ಸ್ಟೈಲಿಂಗ್ ಮಾಡುವಾಗ ಆಗುವ ಅನುಭವಗಳೇನು?
ತಾರೆಯರಿಗೆ ಸ್ಟೈಲಿಂಗ್ ಮಾಡುವುದು ಒಂದು ಟಾಸ್ಕ್ ಇದ್ದಂತೆ. ಲಾಸ್ಟ್ ಮಿನಿಟ್ ಬದಲಾವಣೆಗಳು ಸಾಕಷ್ಟು ಆಗುತ್ತವೆ. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿರುಚಿ. ಅವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಕ್ರಿಯೇಟ್ ಮಾಡಿದ್ದೇನೆ. ನನಗಂತೂ ಮೊದಲಿನಿಂದಲೂ ಕಂಫರ್ಟಬಲ್ ಡಿಸೈನರ್‌ವೇರ್ ಸಿದ್ಧಪಡಿಸುವುದರಲ್ಲಿ ಆಸಕ್ತಿ. ಇದರಲ್ಲೆ ನನಗೆ ಸಂತೃಪ್ತಿ.
ಡಿಸೈನರ್ ಹಾಗೂ ಸ್ಟೈಲಿಸ್ಟ್ ಆಗಿರುವ ನಿಮ್ಮ ಫ್ಯಾಷನ್ ಮಂತ್ರ ಏನು?
ಆಯಾ ವ್ಯಕ್ತಿಗೆ ಬದಲಾಗುವುದೇ ಫ್ಯಾಷನ್. ಇನ್ನು ನನ್ನ ಪ್ರಕಾರ, ಟ್ರೆಂಡ್‌ನಲ್ಲಿ ಏನಿದೆ ಅದನ್ನು ಫಾಲೋ ಮಾಡುವುದು ಬೆಸ್ಟ್. ಯಾವುದೇ ಫ್ಯಾಷನ್ ಮಾಡಿದರೂ ಅದು ನಮ್ಮ ಪರ್ಸನಾಲಿಟಿಯನ್ನು ಎತ್ತಿಹಿಡಿಯಬೇಕು. ಫ್ಯಾಷನ್ ಕಂಫರ್ಟಬಲ್ ಆಗಿದ್ದಾಗ ತಂತಾನೇ ಅದು ಜನಪ್ರಿಯಗೊಳ್ಳುತ್ತದೆ.
ಫ್ಯಾಷನ್‌ಗೂ ಸ್ಟೈಲ್‌ಗೂ ಏನು ವ್ಯತ್ಯಾಸ?
ಫ್ಯಾಷನ್ ಸ್ಟೈಲ್‌ನ ಪ್ರತಿಬಿಂಬ ಎನ್ನಬಹುದು.
ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್‌ನಲ್ಲಿ ಸಬ್‌ಟೈಟಲ್ ವಿಜೇತರಾದಿರಲ್ಲ? ಆ ಬಗ್ಗೆ ಹೇಳಿ?
ಖುಷಿಯಾಯಿತು. ನಾನು ಎಲ್ಲರಂತಿರಲಿಲ್ಲ! ಯಾಕೆಂದರೆ, ನನಗೆ ಚರ್ಮಕ್ಕೆ ಸಂಬಂಧಿಸಿದ ತೊನ್ನಿನ ಸಮಸ್ಯೆ ಇದ್ದರೂ, ಪೇಜೆಂಟ್‌ನಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿದೆ. ಕೇಳಿದ ಪ್ರಶ್ನೆಗೆ ಬಿಂದಾಸ್ ಆಗಿ ಉತ್ತರಿಸಿ, ನನ್ನ ನಿಜ ಸ್ಥಿತಿಯನ್ನು ಜ್ಯೂರಿ ಸದಸ್ಯರಿಗೆ ವಿವರಿಸಿದೆ. ಎಲ್ಲದಕ್ಕೂ ಸೌಂದರ್ಯವೇ ಮುಖ್ಯವಲ್ಲ ಎಂಬುದನ್ನು ಆತ್ಮವಿಶ್ವಾಸದಿಂದ ಸಾಬೀತುಪಡಿಸಿದೆ. ಪರಿಣಾಮ, ಮಿಸೆಸ್ ಕಾಂಜಿನಿಯಾಲಿಟಿ ಸಬ್‌ಟೈಟಲ್ ಗೆದ್ದೆ. ಅದಕ್ಕಿಂತ ಮತ್ತಿನೇನು ಬೇಕು! ಅಲ್ಲವೇ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Weekend Style: ವ್ಯೊಮಾ ಶರ್ಮಾ ವೀಕೆಂಡ್ ಸ್ಟೈಲ್‌ನಲ್ಲಿ ಪ್ರಯೋಗತ್ಮಾಕ ಫ್ಯಾಷನ್‌ವೇರ್ಸ್
ಫ್ಯಾಷನ್
Summer Hair Style Trend : ಬೇಸಿಗೆಗೆ ತಕ್ಕಂತೆ ಬದಲಾಗುವ ಕೇಶ ವಿನ್ಯಾಸಕ್ಕೆ ಬಂತು ನಾನಾ ಹೇರ್‌ಶೇಡ್ಸ್
ಪ್ರತಿ ಬೇಸಿಗೆಗೆ ಹೇರ್‌ಕಲರ್ ಫ್ಯಾಷನ್‌ನಲ್ಲಿ (Summer Hair Style Trend) ಬೇಸಿಗೆಗೆ ತಕ್ಕಂತೆ ಬದಲಾಗುವ ಕೇಶ ವಿನ್ಯಾಸಕ್ಕೆ ಬಂತು ನಾನಾ ಹೇರ್‌ಶೇಡ್ಸ್ ಬದಲಾವಣೆ ಕಂಡು ಬರುತ್ತದೆ. ಈ ಬಾರಿ ಬದಲಾಗುವ ಕೇಶ ವಿನ್ಯಾಸದೊಂದಿಗೆ ನಾನಾ ಬಗೆಯ ಹೇರ್ ಕಲರಿಂಗ್ ಶೇಡ್‌ಗಳು ಲಗ್ಗೆ ಇಟ್ಟಿವೆ. ಬೇಸಿಗೆಯ ಬಿಸಿಲಿನ ಕಿರಣಗಳಿಗೆ ಹೊಳೆಯುತ್ತಿವೆ. ಈ ಬಗ್ಗೆ ಹೇರ್ ಸ್ಟೈಲಿಸ್ಟ್‌ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಬಿಸಿಲ ಬೇಗೆಗೆ ತಕ್ಕಂತೆ ನಾನಾ ಬಗೆಯ ಕೇಶವಿನ್ಯಾಸಗಳು (Summer Hair Style Trend) ಬೇಸಿಗೆಗೆ ತಕ್ಕಂತೆ ಬದಲಾಗುವ ಕೇಶ ವಿನ್ಯಾಸಕ್ಕೆ ಬಂತು ನಾನಾ ಹೇರ್ ಶೇಡ್ಸ್ ಲಗ್ಗೆ ಇಟ್ಟಿದ್ದು, ಇದಕ್ಕೆ ಹೊಂದುವಂತಹ ವೆರೈಟಿ ಹೇರ್ ಶೇಡ್‌ಗಳು ಆಗಮಿಸಿವೆ. ಇದಕ್ಕೆ ಪೂರಕ ಎಂಬಂತೆ, ನಾನಾ ಶೈಲಿಯ ಸ್ಪೈಕ್ ಹಾಗೂ ಶಾರ್ಟ್ ಕಟ್ ಕೇಶವಿನ್ಯಾಸಗಳು ಪುರುಷರನ್ನು ಸಮ್ಮೋಹನಗೊಳಿಸಿದ್ದರೆ, ಚಾಕೊಲೇಟ್, ತೈಲ ಕೆಂಪು ಮಿಶ್ರಿತ, ಬರ್ಗಂಡಿ ಶೇಡ್ ಜತೆಗೆ ಬಂಗಾರದ ವರ್ಣಗಳಿಂದ ಮಿನುಗುವ ಸ್ಟ್ರೀಕ್ಸ್ ಮಾನಿನಿಯರ ಕೇಶರಾಶಿಯನ್ನು ಬಿಸಿಲ ಕಿರಣಗಳಿಗೆ ಮಿನುಗುಸುತ್ತಿವೆ. ಇದಕ್ಕೆ ಕಾಲೇಜು ಕ್ಯಾಂಪಸ್‌ಗಳು ಹೊರತಾಗಿಲ್ಲ. ಟಿನೇಜ್ ಹುಡುಗ-ಹುಡುಗಿಯರನ್ನು ನಾನಾ ಶಾರ್ಟ್ ಹೇರ್‌ಕಟ್‌ಗಳು ಸವಾರಿ ಮಾಡತೊಡಗುತ್ತಿವೆ. ಕೆಲವರು ಗುಂಗುರು ಕೂದಲನ್ನು ಸ್ಪ್ರೇಟ್ ಮಾಡಿಸಿದರೇ, ಇನ್ನು ಕೆಲವರು ನೆಟ್ಟಗಿರುವುದನ್ನು ರೆಕ್ಕೆ-ಪುಕ್ಕದಂತೆ ಗುಂಗುರಾಗಿಸುತ್ತಿದ್ದಾರೆ.
ಸಮ್ಮರ್ ಹೇರ್‌ಸ್ಟೈಲ್
ಬೇಸಿಗೆ ಕಾಲದಲ್ಲಿ ಪ್ರತಿಬಾರಿಯೂ ಸಾಮಾನ್ಯವಾಗಿ ಗಿಡ್ಡನೆಯ ಕೇಶ ವಿನ್ಯಾಸ ಹಾಗೂ ಕಲರಿಂಗ್ ಮಾಡುವುದು ಚಾಲ್ತಿಗೆ ಬರುತ್ತವೆ. ಆದರೆ, ಈ ಬಾರಿ ತೀರಾ ಉದ್ದವಲ್ಲದ ಹಾಗೂ ಗಿಡ್ಡವಿರದ ಸ್ಟೆಪ್ಸ್, ಲೇಯರ್ ಅಥವಾ ಚಾಪ್ಡ್ ಹೇರ್‌ಕಟ್‌ಗಳು ಯುವತಿಯರನ್ನು ಸೆಳೆದಿವೆ. ಇನ್ನು ಜೆಲ್ ಬಳಸಿ ಆಕಾರ ನೀಡುವ ಡಿಫರೆಂಟ್ ಶಾರ್ಟ್ ಸ್ಪೈಕ್ ಕಟ್ ಹುಡುಗರನ್ನು ಸೆಳೆದಿವೆ ಎನ್ನುತ್ತಾರೆ ಗ್ರೂಮಿಂಗ್ ಸ್ಪೆಷಲಿಸ್ಟ್ ರಿಚರ್ಡ್.
ಬದಲಾದ ಹೇರ್ ಕಲರ್ ಕಾನ್ಸೆಪ್ಟ್
ಇಂದು ಬಿಳಿ ಕೂದಲಾದಲ್ಲಿ ಮಾತ್ರ ಹೇರ್ ಕಲರ್ ಹಾಕಬೇಕು ಎಂಬ ಕಾನ್ಸೆಪ್ಟ್ ಮಾಯವಾಗಿದೆ. ಇದೀಗ ಎಲ್ಲಾ ವಯಸ್ಸಿನವರು ಹೇರ್ ಕಲರ್ ಪ್ರಯೋಗಿಸುತ್ತಿರುವುದು ಕಾಮನ್ ಆಗಿದೆ. ಕಾಲೇಜು ಹುಡುಗ-ಹುಡುಗಿಯರು ಮಾತ್ರವಲ್ಲ, ಮಧ್ಯ ವಯಸ್ಕ ಪುರುಷರು, ಮಹಿಳೆಯರೂ ಕೂಡ ಕೂದಲಿಗೆ ಕೇವಲ ಕಪ್ಪು ಕಲರ್ ಮಾತ್ರವಲ್ಲದೇ ಇತರೇ ಡಾರ್ಕ್ ರೆಡ್ ಶೇಡ್ಸ್ ಕೇಶ ರಂಗಿಗೆ ಮೊರೆ ಹೋಗುತ್ತಿದ್ದಾರೆ.
ಹೀಗಿರಲಿ ಕೇಶ ವಿನ್ಯಾಸ
ಉದ್ದ ಮುಖದವರಿಗೆ ಗಿಡ್ಡನೆಯ ಕೇಶ ವಿನ್ಯಾಸ ಹೊಂದದು. ದುಂಡಗಿರುವವರಿಗೆ ಚಾಪ್ಡ್ ಇಲ್ಲವೇ ಅಲೆಗಳಂತೇ ನಿಲ್ಲುವಂತದ್ದು ಹೊಂದುತ್ತದೆ. ಹೃದಯಾಕಾರದ ಮುಖದವರಿಗೆ ಗಿಡ್ಡನೆಯ ಕೇಶ ವಿನ್ಯಾಸ ಓಕೆ. ಚತುರ್ಭುಜ ಮುಖದ ಆಕಾರ ಇರುವವರಿಗೆ ಸ್ಟ್ರೇಟ್ ಕಟ್ ಮ್ಯಾಚ್ ಆಗುತ್ತದೆ. ಎರಡು ಕಿವಿಗಳನ್ನು ಆದಷ್ಟು ಮುಚ್ಚುವ ವಿನ್ಯಾಸವೂ ಓಕೆ. ಇನ್ನು ಮೊಟ್ಟೆಯಾಕಾರದ ಅಥವಾ ಚಿಕ್ಕ ಮುಖದವರಿಗೆ ಕರ್ಲಿ ಹೇರ್ ಕಟ್ ಹಾಗೂ ವೆವ್ವಿ ಹೇರ್‌ಕಟ್ ಆಕರ್ಷಕವಾಗಿ ಕಾಣುತ್ತದೆ. ಇನ್ನು ಕಲರ್ ಹಾಕಿಸುವಾಗ ಆದಷ್ಟೂ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಿ ಎನ್ನುತ್ತಾರೆ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್ ಸಪ್ನಾ.
ಬೇಸಿಗೆಯ ಹೇರ್‌ಸ್ಟೈಲ್ ಬದಲಿಸುವವರಿಗೆ 4 ಸಲಹೆಗಳು
- ಕೂದಲಿಗೆ ತಕ್ಕ ಹೇರ್‌ಸ್ಟೈಲ್ ಇರಲಿ.
- ಕಲರ್-ಶೇಡ್ಸ್ ಬಳಸುವಾಗ ಮೊದಲು ಟ್ರಯಲ್ ನೋಡಿ.
- ಶಾರ್ಟ್ ಕಟ್ ಸಮ್ಮರ್‌ಗೆ ಸೂಕ್ತ.
- ಅಮೋನಿಯಾ ಫ್ರೀ ಹೇರ್ ಕಲರ್ ಬಳಸಿ.
- ಮುಖದ ಬೀಳುವಂತಹ ಕಟ್‌ಗೆ ಟಾಟಾ ಹೇಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಫ್ಯಾಷನ್
Wedding Fashion: ಮದುವೆಯ ಟ್ರೆಂಡಿ ಆಕರ್ಷಕ ಬ್ರೈಡಲ್‌ವೇರ್ ಆಯ್ಕೆಗೆ ಪಾಲಿಸಬೇಕಾದ 7 ರೂಲ್ಸ್ ಯಾವವು?
ಮದುವೆ ವಧುವಿನ ಟ್ರೆಂಡಿ ಬ್ರೈಡಲ್‌ವೇರ್ ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ರೂಲ್ಸ್ ಫಾಲೋ ಮಾಡಬೇಕು. ಆಗಷ್ಟೇ ಆಕರ್ಷಕವಾಗಿ ಕಾಣಲು ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ (Wedding Fashion) ಫಾಲೋ ಮಾಡಬೇಕಾದ 7 ರೂಲ್ಸ್ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆ ಸೀಸನ್‌ನಲ್ಲಿ ಮದುಮಗಳ ಟ್ರೆಂಡಿ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರು ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ಟ್ರೆಂಡಿಯಾಗಿರುವ ಡಿಸೈನರ್‌ವೇರ್ ಆಯ್ಕೆ ಮಾಡುವುದು ಮಾತ್ರವಲ್ಲ, ಇನ್ನಿತರೇ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಒಂದಿಷ್ಟು ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಆಗಷ್ಟೇ, ಖರೀದಿಸಿದ ಡಿಸೈನರ್‌ವೇರ್ ಎಲ್ಲರ ಪ್ರೀತಿಗೆ ಪಾತ್ರವಾಗುವುದಲ್ಲದೇ, ಮದುವೆಯಲ್ಲಿ ಧರಿಸಿದಾಗ ಖುಷಿಯಾಗುತ್ತದೆ. ಮದುವೆಯ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್. ಈ ಕುರಿತಂತೆ ಮದುಮಗಳು ಖರೀದಿಸುವಾಗ (Wedding Fashion) ಪಾಲಿಸಬೇಕಾದ 7 ಬ್ರೈಡಲ್‌ವೇರ್ ರೂಲ್ಸ್ ತಿಳಿಸಿದ್ದಾರೆ.
ಥೀಮ್‌ಗೆ ತಕ್ಕಂತೆ ಇರಲಿ ಬ್ರೈಡಲ್‌ವೇರ್
ಆಯಾ ಮದುವೆ ಕಾನ್ಸೆಪ್ಟ್ ಅಥವಾ ಥೀಮ್‌ಗೆ ಹೊಂದುವಂತೆ ಮದುಮಗಳು ಡಿಸೈನರ್‌ವೇರ್ ಶಾಪಿಂಗ್ ಪ್ಲಾನ್ ಮಾಡಬೇಕಾಗುತ್ತದೆ. ಥೀಮ್‌ಗೆ ಅನುಗುಣವಾಗಿ ಕಲರ್ ಕೋಡ್ ಡಿಸೈನ್‌ಗಳನ್ನು ಸ್ಟೈಲಿಸ್ಟ್ ಇಲ್ಲವೇ ಡಿಸೈನರ್ ಬಳಿ ಚರ್ಚಿಸಿ ಪ್ಲಾನ್ ಮಾಡಬೇಕಾಗುತ್ತದೆ. ಆಗ ಕ್ಲಿಕ್ಕಿಸುವ ಫೋಟೋಗಳು, ವಿಡಿಯೋಗಳು ಎಲ್ಲವೂ ಸುಂದರವಾಗಿ ಕಾಣುತ್ತವೆ.
ಬೆಲೆಗಿಂತ ಗುಡ್‌ಲುಕಿಂಗ್‌ಗೆ ಆದ್ಯತೆ ನೀಡಿ
ಮದುವೆಗೆ ಧರಿಸಿದ ಡಿಸೈನರ್‌ವೇರ್‌ಗಳನ್ನು ಮತ್ತೊಮ್ಮೆ ಧರಿಸುವುದು ತೀರಾ ಅಪರೂಪ. ಅಂತಹವರ ಲಿಸ್ಟ್‌ನಲ್ಲಿ ನೀವಿದ್ದಲ್ಲಿ, ಹೆಚ್ಚು ಬೆಲೆ ತೆರಬೇಡಿ. ಸುಖಾಸುಮ್ಮನೇ ಬ್ರಾಂಡ್ ಹೆಸರಲ್ಲಿ ಹಣ ಸುರಿಯಬೇಡಿ. ಲೋಕಲ್ ಬೋಟಿಕ್‌ಗಳಲ್ಲಿ ನಿಮಗೆ ಬೇಕಾದ ಡಿಸೈನ್ಸ್ ತೋರಿಸಿ ವಿನ್ಯಾಸ ಮಾಡಿಸಿಕೊಳ್ಳಿ. ಹಣ ಉಳಿಸಬಹುದು.
ಬಿಎಂಐಗೆ ತಕ್ಕಂತಿರಲಿ ಬ್ರೈಡಲ್‌ವೇರ್ ಡಿಸೈನ್ಸ್
ಮದುವೆಯ ಸೀಸನ್‌ಗೆ ತಕ್ಕಂತೆ ಮದುಮಗಳು ವೆಡ್ಡಿಂಗ್ ಶಾಪಿಂಗ್ ಮಾಡುವುದು ಮಾತ್ರವಲ್ಲ, ಆಕೆಯ ಪರ್ಸನಾಲಿಟಿ ಹಾಗೂ ಬಿಎಂಐಗೆ ತಕ್ಕಂತೆ ಬ್ರೈಡಲ್‌ವೇರ್ ಸೆಲೆಕ್ಟ್ ಮಾಡಬೇಕು. ಡಿಸೈನ್ಸ್ ಆಕೆಯ ಸ್ಕಿನ್ ಟೋನ್‌ಗೆ ಹೊಂದಬೇಕು. ಮೊದಲು ಇದನ್ನು ಗಮನಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಬಾಡಿಟೈಪ್‌ಗೆ ಸೂಟ್ ಆಗುವಂತಿರಲಿ
ಪ್ರತಿ ಮದುಮಗಳು ತನ್ನ ಬಾಡಿ ಟೈಪ್‌ಗೆ ತಕ್ಕಂತೆ ಬ್ರೈಡಲ್‌ವೇರ್ ಆಯ್ಕೆ ಮಾಡಬೇಕಾಗುತ್ತದೆ. ಮದುಮಗಳು ಹವರ್ ಗ್ಲಾಸ್ ಶೇಪ್‌ನಲ್ಲಿದ್ದರೇ ಏನೂ ಕೂಡ ಯೋಚನೆಯೇ ಮಾಡಬೇಕಾಗಿಲ್ಲ. ಯಾವ ಬಗೆಯ ಡ್ರೆಸ್ ಆದರೂ ಸರಿಯೇ ಪರ್ಸನಾಲಿಟಿಗೆ ಸೂಟ್ ಆಗುತ್ತದೆ. ಹೊಂದುವ ವರ್ಣವನ್ನು ಚೂಸ್ ಮಾಡಿದರಾಯಿತು.
ಎತ್ತರಕ್ಕೆ ತಕ್ಕಂತಿರಲಿ ಬ್ರೈಡಲ್‌ವೇರ್
ಉದ್ದಗಿರುವವರು ಅಷ್ಟೇ ಲಾಂಗ್ ಲೆಂತ್‌ನದ್ದನ್ನು ಚೂಸ್ ಮಾಡಬಹುದು. ಲೆಹೆಂಗಾ, ಗಾಗ್ರ ಎಲ್ಲವೂ ಸೂಟ್ ಆಗ್ತುತವೆ. ಫ್ಯಾಬ್ರಿಕ್ ದಪ್ಪನಾಗಿದ್ದರೂ ಓಕೆ. ಹೆವ್ವಿ ಡಿಸೈನ್‌ಗಳು ಕೂಡ ಮ್ಯಾಚ್ ಆಗುತ್ತವೆ.
ಪ್ಲಂಪಿ ವಧುವಿಗಾದಲ್ಲಿ
ಕುಳ್ಳಗೆ ಅಥವಾ ಪ್ಲಂಪಿಯಾಗಿರುವವರು ಡಿಸೈನರ್‌ವೇರ್ ಚೂಸ್ ಮಾಡುವಾಗ ಆದಷ್ಟೂ ಜಾಗ್ರತೆವಹಿಸಬೇಕು. ಹೆವ್ವಿ ಪ್ರಿಂಟ್ ಇಲ್ಲವೇ ಹೆವ್ವಿ ಡಿಸೈನ್ ಹಾಗೂ ದಪ್ಪ ಫ್ಯಾಬ್ರಿಕ್‌ನದ್ದನ್ನು ಅವಾಯ್ಡ್ ಮಾಡಿ. ಆದಷ್ಟೂ ಸ್ಮಾಲ್ ಬಾರ್ಡರ್‌ನ ಕಾಂಟ್ರಸ್ಟ್ ದುಪಟ್ಟಾ ಹೊಂದಿರುವ ಲೆಹೆಂಗಾ, ಗಾಗ್ರಾ ಚೂಸ್ ಮಾಡಬೇಕಾಗುತ್ತದೆ. ಫ್ಲೋಟ್ ಆಗುವಂತಹ ಫ್ಯಾಬ್ರಿಕ್‌ನ ಡಿಸೈನರ್ವೇರ್ ಉತ್ತಮ. ಎಲ್ಬೋ, ಲಾಂಗ್ ಬ್ಲೌಸ್ ಆಯ್ಕೆ ಮಾಡಿಕೊಳ್ಳಬೇಕು.
ಟ್ರಯಲ್ ಮಾಡಿ ನೋಡಿ ನಿರ್ಧರಿಸಿ
ಪರ್ಫೆಕ್ಟ್ ಶೆಪ್ ಇಲ್ಲದಾಗ ಯೋಚಿಸಬೇಡಿ. ಟ್ರಯಲ್ ನೋಡಿ, ಖರೀದಿಸಿ. ಟ್ರಯಲ್ ಡಿಸೈನರ್‌ವೇರ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ಇತರರ ಅಭಿಪ್ರಾಯ ಪಡೆದು ಖರೀದಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಮಹಿಳೆಯರ ಸೆಲೆಬ್ರೇಷನ್‌ಗೆ ಫ್ಯಾಷನ್ ಶೋ ಸಾಥ್
ಫ್ಯಾಷನ್
Fashion Show News: ಮಹಿಳೆಯರ ಸೆಲೆಬ್ರೇಷನ್‌ಗೆ ಫ್ಯಾಷನ್ ಶೋ ಸಾಥ್
ಮಹಿಳಾ ದಿನಾಚಾರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಫ್ಯಾಷನ್ ಶೋ (Fashion Show News) ನೋಡುಗರ ಮನ ಸೆಳೆಯಿತು. ಈ ಬಗ್ಗೆ ಇಲ್ಲಿದೆ ವರದಿ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ನಡೆದ ಫ್ಯಾಷನ್ ಶೋನಲ್ಲಿ (Fashion Show News) ವಿವಾಹಿತ ಮಹಿಳೆಯರ ಟ್ರೆಡಿಷನಲ್ ರ್ಯಾಂಪ್ ವಾಕ್ ನೆರೆದಿದ್ದವರ ಮನ ಸೆಳೆಯಿತು. ಸಾಧನೆಗೈದ ಮಹಿಳೆಯರನ್ನು ಗುರುತಿಸುವುದರ ಜೊತೆಗೆ ನಡೆದ ಈ ಫ್ಯಾಷನ್ ಶೋ (Fashion Show) ಮಾನಿನಿಯರ ಸಂತಸಕ್ಕೆ ಕಾರಣವಾಯಿತು.
ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಯನ ಸಂಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ಮಹಿಳಾ ರತ್ನಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದೊಂದಿಗೆ ಟ್ರೆಡಿಷನಲ್ ಅಟೈರ್ ಫ್ಯಾಷನ್ ಶೋ (Fashion Show) ಕೂಡ ಯಶಸ್ವಿಯಾಗಿ ನಡೆಯಿತು.
ಮಾಡೆಲ್ ಪ್ರಿಯಾ ಪ್ರಶಾಂತ್ ಶೋ ಸ್ಟಾಪರ್
ಮಾಡೆಲ್ ಪ್ರಿಯಾ ಪ್ರಶಾಂತ್ ನೇತೃತ್ವದಲ್ಲಿ ಹಾಗೂ ಕೊರಿಯಾಗ್ರಾಫಿಯಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ (Fashion Show) ಸಾಂಪ್ರದಾಯಿಕ ಉಡುಗೆ-ತೊಡುಗೆ ಧರಿಸಿದ ಮಾಡೆಲ್‌ಗಳು ಕ್ಯಾಟ್ ವಾಕ್ ಮಾಡಿದರು. ಕೆಲವರು ಲಂಗ-ದಾವಣಿ ಶೈಲಿಯ ಸೀರೆಗಳಲ್ಲಿ ಮಿಂಚಿದರೇ, ಇನ್ನು ಕೆಲವರು ಲೆಹೆಂಗಾ ಹಾಗೂ ವಿಭಿನ್ನವಾಗಿ ಸೀರೆ ಡ್ರೆಪಿಂಗ್ ಮಾಡಿ, ರ್ಯಾಂಪ್ ವಾಕ್ ಮಾಡಿದರು. ಗ್ರ್ಯಾಂಡ್ ಟ್ರೆಡಿಷನಲ್ ಮೇಕಪ್‌ನಲ್ಲಿ ಕಾಣಿಸಿಕೊಂಡ ಮಹಿಳೆಯರು ಟ್ರೆಡಿಷನಲ್‌ವೇರ್‌ಗಳಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.
ಮಾಡೆಲ್ ಪ್ರಿಯಾ ಪ್ರಶಾಂತ್ ಈ ಶೋನಲ್ಲಿ ಶೋಸ್ಟಾಪರ್ ಆಗಿ ವಾಕ್ ಮಾಡಿ ನೋಡುಗರ ಕಣ್ಮನ ಸೆಳೆದರು. ಇವರೊಂದಿಗೆ ಮಾಡೆಲ್ ನಂದಿತಾ ಸಂದೀಪ್ ಕೂಡ ಪಾಲ್ಗೊಂಡಿದ್ದರು. ಇನ್ನುಳಿದಂತೆ ಸಂಸ್ಥೆಯ ಸದಸ್ಯರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೆಲೆಬ್ರೇಟ್ ಮಾಡಿದರು.
ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳು
“ಮಹಿಳೆಯರಿಂದ ಮಹಿಳೆಯರಿಗಾಗಿ ನಡೆದ ಈ ಕಾರ್ಯಕ್ರಮದಲ್ಲಿ ಫ್ಯಾಷನ್ ಶೋ (Fashion Show) ಹೈಲೈಟ್ ಆಗಿತ್ತು. ಮಾತ್ರವಲ್ಲ, ಸೆಲೆಬ್ರೇಷನ್‌ಗೆ ನಾಂದಿ ಹಾಡಿತು. ಕೆಲಕಾಲ ಮಹಿಳೆಯರನ್ನು ಸೆಳೆದು ಹಿಡಿದಿಟ್ಟಿತ್ತು. ಮಹಿಳೆಯರು ನಾನಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಹೊಸತನವನ್ನು ರೂಡಿಸಿಕೊಳ್ಳಬೇಕು. ಆಗಷ್ಟೇ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಾಧ್ಯ” ಎಂದು ಮಾಡೆಲ್ ಪ್ರಿಯಾ ಪ್ರಶಾಂತ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ವಿಕ್ರಂ ಅಯ್ಯಗಾರ್ ಹಾಗೂ ರೇಖಾ ಶ್ರೀನಿವಾಸ್ ಸೇರಿದಂತೆ ನಾನಾ ಗಣ್ಯರು ಭಾಗವಹಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಪ್ರೈಮ್ ಫ್ಯಾಷನ್ ವೀಕ್‌ನಲ್ಲಿ ಶ್ವೇತಾ ನಂದಕುಮಾರ್ ಚೀತಾ ಪ್ರಿಂಟ್ಸ್ ಡಿಸೈನರ್‌ವೇರ್ಸ್
-
ಸುವಚನ52 mins ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಅಂಕಣ22 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ22 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ22 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ23 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ20 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ16 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಕರ್ನಾಟಕ20 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ