ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಫ್ಯಾಷನ್ ಡಿಸೈನರ್, ಸ್ಟೈಲಿಸ್ಟ್ ಆಗಿರುವ ನೈನಾ ಕುಮಾರ್ ತಮ್ಮದೇ ಆದ ದೆವ್ನಾ ಸ್ಟಿಚಿಂಗ್ ಸ್ಟುಡಿಯೋ ಹೊಂದಿದ್ದಾರೆ. ಮೂಲತಃ ಪಂಜಾಬಿಯಾಗಿರುವ ನೈನಾ ದಶಕಗಳಿಗೂ ಹೆಚ್ಚು ಕಾಲದಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ನಂತರ ಕನ್ನಡಿಗನನ್ನು ಮದುವೆಯಾಗಿ, ಕನ್ನಡ ಕಲಿತು ಇದೀಗ ಕಂಪ್ಲೀಟ್ ಕನ್ನಡಿಗರೇ ಆಗಿ ಹೋಗಿದ್ದಾರೆ. ಸ್ಯಾಂಡಲ್‌ವುಡ್‌ನ ಸಾಕಷ್ಟು ತಾರೆಯರಿಗೆ ಡಿಸೈನರ್‌ವೇರ್ ಕೂಡ ಡಿಸೈನ್ ಮಾಡಿದ್ದಾರೆ. ಈ ಬಾರಿಯ ವಿಸ್ತಾರ ನ್ಯೂಸ್‌ನ ವೀಕೆಂಡ್ ಸ್ಟೈಲ್ (Weekend Style) ಕಾಲಂನಲ್ಲಿ ತಮ್ಮ ಫ್ಯಾಷನ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ಯಾವ್ಯಾವ ಸ್ಯಾಂಡಲ್‌ವುಡ್ ತಾರೆಯರಿಗೆ ಡಿಸೈನರ್‌ವೇರ್ ಡಿಸೈನ್ ಮಾಡಿದ್ದೀರಾ?
ನಟಿಯರಾದ ಹರ್ಷಿಕಾ ಪೂಣಚ್ಚ, ನಿಮಿಕಾ ರತ್ನಾಕರ್, ಇತಿ ಆಚಾರ್ಯ, ಶುಭಾರಕ್ಷಾ, ರಾಗಿಣಿ ದ್ವಿವೇದಿ, ಕಾರುಣ್ಯ, ವೈನಿಧಿ, ಚಂದನಾ ಗೌಡ ಸೇರಿದಂತೆ ಸಾಕಷ್ಟು ತಾರೆಯರಿಗೆ ಡಿಸೈನರ್‌ವೇರ್ ಸಿದ್ಧಪಡಿಸಿದ್ದೇನೆ.
ತಾರೆಯರಿಗೆ ಸ್ಟೈಲಿಂಗ್ ಮಾಡುವಾಗ ಆಗುವ ಅನುಭವಗಳೇನು?
ತಾರೆಯರಿಗೆ ಸ್ಟೈಲಿಂಗ್ ಮಾಡುವುದು ಒಂದು ಟಾಸ್ಕ್ ಇದ್ದಂತೆ. ಲಾಸ್ಟ್ ಮಿನಿಟ್ ಬದಲಾವಣೆಗಳು ಸಾಕಷ್ಟು ಆಗುತ್ತವೆ. ಒಬ್ಬೊಬ್ಬರದು ಒಂದೊಂದು ಬಗೆಯ ಅಭಿರುಚಿ. ಅವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಕ್ರಿಯೇಟ್ ಮಾಡಿದ್ದೇನೆ. ನನಗಂತೂ ಮೊದಲಿನಿಂದಲೂ ಕಂಫರ್ಟಬಲ್ ಡಿಸೈನರ್‌ವೇರ್ ಸಿದ್ಧಪಡಿಸುವುದರಲ್ಲಿ ಆಸಕ್ತಿ. ಇದರಲ್ಲೆ ನನಗೆ ಸಂತೃಪ್ತಿ.
ಡಿಸೈನರ್ ಹಾಗೂ ಸ್ಟೈಲಿಸ್ಟ್ ಆಗಿರುವ ನಿಮ್ಮ ಫ್ಯಾಷನ್ ಮಂತ್ರ ಏನು?
ಆಯಾ ವ್ಯಕ್ತಿಗೆ ಬದಲಾಗುವುದೇ ಫ್ಯಾಷನ್. ಇನ್ನು ನನ್ನ ಪ್ರಕಾರ, ಟ್ರೆಂಡ್‌ನಲ್ಲಿ ಏನಿದೆ ಅದನ್ನು ಫಾಲೋ ಮಾಡುವುದು ಬೆಸ್ಟ್. ಯಾವುದೇ ಫ್ಯಾಷನ್ ಮಾಡಿದರೂ ಅದು ನಮ್ಮ ಪರ್ಸನಾಲಿಟಿಯನ್ನು ಎತ್ತಿಹಿಡಿಯಬೇಕು. ಫ್ಯಾಷನ್ ಕಂಫರ್ಟಬಲ್ ಆಗಿದ್ದಾಗ ತಂತಾನೇ ಅದು ಜನಪ್ರಿಯಗೊಳ್ಳುತ್ತದೆ.
ಫ್ಯಾಷನ್‌ಗೂ ಸ್ಟೈಲ್‌ಗೂ ಏನು ವ್ಯತ್ಯಾಸ?
ಫ್ಯಾಷನ್ ಸ್ಟೈಲ್‌ನ ಪ್ರತಿಬಿಂಬ ಎನ್ನಬಹುದು.
ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್‌ನಲ್ಲಿ ಸಬ್‌ಟೈಟಲ್ ವಿಜೇತರಾದಿರಲ್ಲ? ಆ ಬಗ್ಗೆ ಹೇಳಿ?
ಖುಷಿಯಾಯಿತು. ನಾನು ಎಲ್ಲರಂತಿರಲಿಲ್ಲ! ಯಾಕೆಂದರೆ, ನನಗೆ ಚರ್ಮಕ್ಕೆ ಸಂಬಂಧಿಸಿದ ತೊನ್ನಿನ ಸಮಸ್ಯೆ ಇದ್ದರೂ, ಪೇಜೆಂಟ್‌ನಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸಿದೆ. ಕೇಳಿದ ಪ್ರಶ್ನೆಗೆ ಬಿಂದಾಸ್ ಆಗಿ ಉತ್ತರಿಸಿ, ನನ್ನ ನಿಜ ಸ್ಥಿತಿಯನ್ನು ಜ್ಯೂರಿ ಸದಸ್ಯರಿಗೆ ವಿವರಿಸಿದೆ. ಎಲ್ಲದಕ್ಕೂ ಸೌಂದರ್ಯವೇ ಮುಖ್ಯವಲ್ಲ ಎಂಬುದನ್ನು ಆತ್ಮವಿಶ್ವಾಸದಿಂದ ಸಾಬೀತುಪಡಿಸಿದೆ. ಪರಿಣಾಮ, ಮಿಸೆಸ್ ಕಾಂಜಿನಿಯಾಲಿಟಿ ಸಬ್‌ಟೈಟಲ್ ಗೆದ್ದೆ. ಅದಕ್ಕಿಂತ ಮತ್ತಿನೇನು ಬೇಕು! ಅಲ್ಲವೇ!
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Weekend Style: ವ್ಯೊಮಾ ಶರ್ಮಾ ವೀಕೆಂಡ್ ಸ್ಟೈಲ್‌ನಲ್ಲಿ ಪ್ರಯೋಗತ್ಮಾಕ ಫ್ಯಾಷನ್‌ವೇರ್ಸ್