ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾದ ನಂತರವೂ ಮಾಡೆಲಿಂಗ್‌ಅನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವವರ ಸಾಲಿನಲ್ಲಿ ನಂದಿತಾ ಸಂದೀಪ್ ಕೂಡ ಒಬ್ಬರು. ಇವರ ಮಗಳು ಕೂಡ ಕಿಡ್ ಮಾಡೆಲ್. ಇಬ್ಬರೂ ಜತೆಜತೆಯಾಗಿಯೇ ಸಾಕಷ್ಟು ಜಾಹೀರಾತಿನಲ್ಲಿ ಕಾಣಿಸಿಕೊಂಡವರು. ಮದುವೆ-ಮಕ್ಕಳಾದ ತಕ್ಷಣ ಮಾಡೆಲಿಂಗ್‌ನಿಂದ ದೂರಾಗುವ ಬದಲು ನಾನು ಹತ್ತಿರವಾದೆ ಎಂದು ಹೇಳುವ ನಂದಿತಾ, ಮಿಸೆಸ್ ಇಂಡಿಯಾ ಗ್ಯಾಲಕ್ಸಿ ಟಾಪ್ ೫ನಲ್ಲಿ ವಿಜೇತರ ಲಿಸ್ಟ್‌ನಲ್ಲಿದ್ದರು. ಏಷಿಯಾದ ಟಾಪ್ ೧೦೦ ಇನ್‌ಪ್ಲೂಯೆನ್ಶಿಯಲ್ ವುಮೆನ್ ಪಟ್ಟಿಯಲ್ಲೂ ಇದ್ದಾರೆ. ಲಿಮ್ಕಾ ರೆಕಾರ್ಡ್ ಹೋಲ್ಡರ್ ಕೂಡ. ಈ ಬಾರಿಯ ವಿಸ್ತಾರದ ವೀಕೆಂಡ್ ಸ್ಟೈಲ್‌ನಲ್ಲಿ ಫ್ಯಾಷನ್, ಸ್ಟೈಲ್ ಕುರಿತಂತೆ ಮಾತನಾಡಿದ್ದಾರೆ.
· ಸುಮಾರು ಹತ್ತು ವರ್ಷದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿರುವ ನೀವು ಬೆಂಗಳೂರು ಫ್ಯಾಷನ್ ಕ್ಷೇತ್ರದ ಬಗ್ಗೆ ಹೇಳುವುದೇನು?
ಬೆಂಗಳೂರು ಇದೀಗ ಫ್ಯಾಷನ್ ಹಬ್ ಆಗುತ್ತಿರುವುದು ಖುಷಿಯ ವಿಚಾರ. ಉದ್ಯಾನನಗರಿ ಪ್ರತಿ ಮಾಡೆಲ್‌ಗೂ ಉತ್ತಮ ಅವಕಾಶಗಳನ್ನು ಕಲ್ಪಿಸುತ್ತಿದೆ. ಸಾಕಷ್ಟು ಪೇಜೆಂಟ್‌ಗಳು ಮತ್ತು ಶೋಗಳು ನಡೆಯುತ್ತಿವೆ. ಇತ್ತೀಚೆಗೆ ಉದ್ಯಾನನಗರಿ ಫ್ಯಾಷನ್ ಡೆಸ್ಟಿನಿ ಆಗಿದೆಯೆಂದರೂ ತಪ್ಪಾಗಲಾರದು.
· ಖುದ್ದು ಮಾಡೆಲ್ ಹಾಗೂ ಕಿಡ್ ಮಾಡೆಲ್ ಅಮ್ಮನಾಗಿರುವ ನೀವು ಮಾಡೆಲಿಂಗ್ ಪ್ರವೇಶಿಸುವವರಿಗೆ ನೀಡುವ ಸಲಹೆಗಳೇನು?
ಎಲ್ಲದಕ್ಕಿಂತ ಮೊದಲು ಆತ್ಮವಿಶ್ವಾಸ ಅಗತ್ಯ. ಮಾಡೆಲಿಂಗ್‌ನಲ್ಲಿ ಆಯಾ ವಯಸ್ಸಿಗೆ ತಕ್ಕಂತೆ ಅವಕಾಶಗಳು ಲಭ್ಯವಿರುತ್ತವೆ. ಸೂಕ್ತವಾದುದ್ದನ್ನು ಆಯ್ಕೆ ಮಾಡಬೇಕು. ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಉತ್ತಮ ಸಂವಹನ ಹೊಂದಬೇಕು. ಇನ್ನು ಮಕ್ಕಳನ್ನು ಮಾಡೆಲ್ ಮಾಡುವವರು ಆದಷ್ಟೂ ಮಕ್ಕಳಿಗೆ ಜನರೊಂದಿಗೆ ಬೆರೆಯುವುದನ್ನು ಹಾಗೂ ರ್ಯಾಂಪ್ ರೂಲ್ಸ್ ಹೇಳಿಕೊಡಬೇಕು. ಸದಾ ಸಕ್ರಿಯರಾಗಿರಬೇಕು. ಒಂದು ಶೋನಲ್ಲಿ ಭಾಗವಹಿಸಿದ ನಂತರ ಮರೆಯಾಗಕೂಡದು. ಇದಕ್ಕೆ ಹಾರ್ಡ್ವರ್ಕ್ ಮಾಡಬೇಕು.
· ಮುಂಬರುವ ಫೆಸ್ಟೀವ್ ಫ್ಯಾಷನ್‌ಗೆ ನಿಮ್ಮ ಫ್ಯಾಷನ್-ಸ್ಟೈಲ್ ಸ್ಟೇಟ್‌ಮೆಂಟ್ ಏನು?
ನಾನಾ ಹಬ್ಬ ಹಾಗೂ ಸಂಸ್ಕೃತಿ ಹೊಂದಿರುವ ರಾಷ್ಟ್ರ ನಮ್ಮದು. ಪ್ರತಿ ಹಬ್ಬಕ್ಕೂ ಒಂದೊಂದು ಎಥ್ನಿಕ್ ಔಟ್‌ಫಿಟ್‌ಗಳನ್ನು ಧರಿಸಬಹುದು. ಕಲರ್‌ಫುಲ್ ಡಿಸೈನರ್‌ವೇರ್ ಜೊತೆಗೆ ಹೆವ್ವಿ ಜುವೆಲರಿ ಧರಿಸುವುದು ನನಗಿಷ್ಟ. ಅದರಲ್ಲೂ ಚೋಕರ್ ಹಾಗೂ ಭಾರಿ ಇಯರಿಂಗ್‌ಗಳು ನನ್ನ ಸ್ಟೈಲ್ ಸ್ಟೇಟ್‌ಮೆಂಟ್ ಹೈಲೈಟ್ ಮಾಡುತ್ತವೆ.
· ಹಬ್ಬದ ಎಥ್ನಿಕ್ ಫ್ಯಾಷನ್‌ಗೆ ಯಾವ ಬಗೆಯ ಟಿಪ್ಸ್ ನೀಡುವಿರಿ?
ಫೆಸ್ಟೀವ್ ಸೀಸನ್ ಎಂದರೇ ಹಾಗೆ. ಪ್ರತಿಯೊಬ್ಬರು “ಫ್ಯಾಷನ್ ದಿವಾʼರಂತೆ ಸಿಂಗರಿಸಿಕೊಳ್ಳಬಹುದು. ಹಬ್ಬಕ್ಕೆ ರೇಷ್ಮೆ ಸೀರೆ ಧರಿಸಿ. ಗ್ರ್ಯಾಂಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು. ಸೀರೆ ಹೊರತುಪಡಿಸಿದಲ್ಲಿ ಅನಾರ್ಕಲಿ ಸೂಟ್ ಅಥವಾ ಲೆಹೆಂಗಾ ಧರಿಸಿ, ಮ್ಯಾಚಿಂಗ್ ಜುವೆಲರಿ ಧರಿಸಿದಲ್ಲಿ ನೋಡಲು ಆಕರ್ಷಕವಾಗಿ ಕಾಣುವಿರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Deepawali Jewels Shopping | ಧನ್‌ತೇರಾಸ್‌ಗೆ ಟ್ರೆಂಡಿ ಆಭರಣ ಖರೀದಿಸುವಾಗ ಗಮನಿಸಬೇಕಾದ 5 ಸಂಗತಿಗಳಿವು