ಸಂದರ್ಶನ : ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪ್ತಿ ಮೋಹನ್ ಮಾಡೆಲಿಂಗ್ ಹಾಗೂ ಫ್ಯಾಷನ್ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವ ಹೆಸರು. ೧೬ನೇ ವಯಸ್ಸಿನಲ್ಲಿಯೇ ಈ ಕ್ಷೇತ್ರಕ್ಕೆ ಕಾಲಿಟ್ಟವರು. ಮಾಡೆಲಿಂಗ್‌ನಲ್ಲಿ ಬಿಝಿಯಾಗಿದ್ದಾಗ ಸ್ಯಾಂಡಲ್‌ವುಡ್‌ನಲ್ಲಿ ನಟಿಯಾಗಿಯೂ ಕಾಣಿಸಿಕೊಂಡವರು. ಸದಾ ಸ್ಟೈಲಿಶ್ ಆಗಿರುವ ದೀಪ್ತಿ ಅಪ್ಪಟ ಕನ್ನಡದ ಹುಡುಗಿ. ಈ ಬಾರಿಯ ವಿಸ್ತಾರದ ವೀಕೆಂಡ್ ಸ್ಟೈಲ್ ಕಾಲಂನಲ್ಲಿ ತಮ್ಮ ಫ್ಯಾಷನ್ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಬಯಸುವ ಹೆಣ್ಣುಮಕ್ಕಳಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.
ವಿಸ್ತಾರ : ನಿಮ್ಮ ವೀಕೆಂಡ್ ಫ್ಯಾಷನ್ ಬಗ್ಗೆ ಹೇಳಿ ?
ನನ್ನ ಫ್ಯಾಷನ್ ಸ್ಟೇಟ್ಮೆಂಟ್ ಸದಾ ಟ್ರೆಂಡ್ ಮೇಲೆ ನಿರ್ಧರಿತವಾಗಿರುತ್ತದೆ. ಇತ್ತೀಚೆಗೆ ಪ್ರಚಲಿತದಲ್ಲಿರುವ ಪಾಸ್ಟೆಲ್ ಶೇಡ್ಸ್ ಬಗ್ಗೆ ಮೋಹ ಉಂಟಾಗಿದೆ. ಇನ್ನು ಕ್ರಾಪ್ ಟಾಪ್ಸ್, ಜಾಗರ್ಸ್ ಹಾಗೂ ಸ್ನೀಕರ್ಸ್ ಸದ್ಯ ನನ್ನ ಫ್ಯಾಷನ್ನಲ್ಲಿದೆ.
ವಿಸ್ತಾರ : ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿವರಿಸಿ
ಒಂದು ಮಾತನಾಡದೇ ನಮ್ಮ ಐಡೆಂಟಿಟಿ ಬಿಂಬಿಸುವುದೇ ನನ್ನ ಸ್ಟೈಲ್ ಸ್ಟೇಟ್ಮೆಂಟ್. ಕೆಲವೊಮ್ಮೆ ನಮ್ಮ ಡ್ರೆಸ್‌ಗಳು ಮಾತನಾಡುತ್ತವೆ. ಅಂದರೆ, ಅವು ನಮ್ಮ ಸ್ಟೈಲ್ ಬಿಂಬಿಸುತ್ತವೆ ಎಂದರ್ಥ. ನನ್ನ ಫ್ಯಾಷನ್-ಸ್ಟೈಲ್ ಎರಡು ನನ್ನ ಅಭಿರುಚಿ ಪ್ರತಿಬಿಂಬಿಸುತ್ತವೆ.
ವಿಸ್ತಾರ: ದೇಸಿ ಫ್ಯಾಷನ್ ಬಗ್ಗೆ ಒಲವಿದೆಯಾ?
ಯಾಕಿಲ್ಲ! ಖಂಡಿತಾ. ಆಯಾ ಸಮಾರಂಭಕ್ಕೆ ಹಬ್ಬಕ್ಕೆ ತಕ್ಕಂತೆ ದೇಶಿ ಫ್ಯಾಷನ್ ಮೊರೆ ಹೋಗುತ್ತೇನೆ. ಟ್ರೆಡಿಷನಲ್ ಲುಕ್ ನೀಡುವ ಸಿಲ್ಕ್ ಸೀರೆ, ಲಂಗ-ದಾವಣಿ ನನಗಿಷ್ಟ. ಮದುವೆಗಳಲ್ಲಿ ಲೆಹೆಂಗಾಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ. ಇದರೊಂದಿಗೆ ಮಾಂಗ್ ಟೀಕಾ, ಜುಮ್ಕಾ ಧರಿಸುವುದು ನನಗಿಷ್ಟ.
ವಿಸ್ತಾರ : ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುವವರಿಗೆ ಯಾವ ಟಿಪ್ಸ್ ನೀಡುತ್ತೀರಾ?
ಮಾಡೆಲಿಂಗ್ ಕ್ಷೇತ್ರದಲ್ಲಿರುವವರಿಗೆ ಮೊದಲು ಸೌಂದರ್ಯದ ಕಾಳಜಿ ಬೇಕು. ಕ್ಲಿಯರ್ ಸ್ಕಿನ್ ಇರುವುದು ಮಸ್ಟ್. ಸದಾ ನೀಟಾಗಿ ಸ್ಟೈಲಾಗಿ ಕಾಣಿಸಿಕೊಳ್ಳುವುದು ಅಗತ್ಯ. ತನ್ನತನ ಬಿಟ್ಟುಕೊಡದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಫೋಟೋಗಳಿಗೆ ಪೋಸ್ ಕೊಡುವುದ ಕರಗತವಾಗಿರಬೇಕು.
ಇದನ್ನೂ ಓದಿ| Celebrity Style | ಅಭಿರುಚಿಗೆ ತಕ್ಕಂತೆ ಸ್ಟೈಲಿಂಗ್ ಎನ್ನುವ ಶಿಲ್ಪಾ ಹೆಗಡೆ